ದ್ವೇಷದಿಂದ ಪಾಯಲ್ ಕೊಲೆ: ಜಿಮ್ ಟ್ರೈನರ್ ಜೇಮ್ಸ್​ಗೆ ಜೀವಾವಧಿ ಜೈಲು

ಬೆಂಗಳೂರು: ಗಂಡನ ಮೇಲಿನ ದ್ವೇಷಕ್ಕೆ ಟಿಕ್ಕಿ ಪತ್ನಿ ಪಾಯಲ್ ಸುರೇಖಾ ಅವರನ್ನು ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೇಮ್ಸ್ ಕುಮಾರ್ ರಾಯ್ ಅಪರಾಧಿ ಎಂದು ಬೆಂಗಳೂರಿನ ಸಿಬಿಐ ಕೋರ್ಟ್ ತೀರ್ಪು ನೀಡಿದೆ. ಅಪರಾಧಿ ಜೇಮ್ಸ್​ಗೆ ಜೀವಾವಧಿ ಜೈಲು ಶಿಕ್ಷೆ ಮತ್ತು 1 ಲಕ್ಷ ರೂಪಾಯಿ ಜುಲ್ಮಾನೆ ವಿಧಿಸಿದೆ. ಜೆ.ಪಿ. ನಗರದಲ್ಲಿ 2010 ರ ಡಿಸೆಂಬರ್ ನಲ್ಲಿ ಅಸ್ಸಾಂ ಮೂಲದ ಪಾಯಲ್ ಸುರೇಖಾ ಅವರ ಹತ್ಯೆ ನಡೆದಿತ್ತು. ಜಿಮ್ ಟ್ರೈನರ್ ಜೇಮ್ಸ್ ಕುಮಾರ್ ರಾಯ್ ಮೇಲೆ ಕೊಲೆ ಆರೋಪ […]

ದ್ವೇಷದಿಂದ ಪಾಯಲ್ ಕೊಲೆ: ಜಿಮ್ ಟ್ರೈನರ್ ಜೇಮ್ಸ್​ಗೆ ಜೀವಾವಧಿ ಜೈಲು
Follow us
ಸಾಧು ಶ್ರೀನಾಥ್​
|

Updated on:Nov 11, 2019 | 1:08 PM

ಬೆಂಗಳೂರು: ಗಂಡನ ಮೇಲಿನ ದ್ವೇಷಕ್ಕೆ ಟಿಕ್ಕಿ ಪತ್ನಿ ಪಾಯಲ್ ಸುರೇಖಾ ಅವರನ್ನು ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೇಮ್ಸ್ ಕುಮಾರ್ ರಾಯ್ ಅಪರಾಧಿ ಎಂದು ಬೆಂಗಳೂರಿನ ಸಿಬಿಐ ಕೋರ್ಟ್ ತೀರ್ಪು ನೀಡಿದೆ. ಅಪರಾಧಿ ಜೇಮ್ಸ್​ಗೆ ಜೀವಾವಧಿ ಜೈಲು ಶಿಕ್ಷೆ ಮತ್ತು 1 ಲಕ್ಷ ರೂಪಾಯಿ ಜುಲ್ಮಾನೆ ವಿಧಿಸಿದೆ.

ಜೆ.ಪಿ. ನಗರದಲ್ಲಿ 2010 ರ ಡಿಸೆಂಬರ್ ನಲ್ಲಿ ಅಸ್ಸಾಂ ಮೂಲದ ಪಾಯಲ್ ಸುರೇಖಾ ಅವರ ಹತ್ಯೆ ನಡೆದಿತ್ತು. ಜಿಮ್ ಟ್ರೈನರ್ ಜೇಮ್ಸ್ ಕುಮಾರ್ ರಾಯ್ ಮೇಲೆ ಕೊಲೆ ಆರೋಪ ಕೇಳಿಬಂದಿತ್ತು. ಪ್ರಕರಣದ ಕುರಿತು ಬೆಂಗಳೂರಿನ ಸಿಬಿಐ ಕೋರ್ಟ್ ಇಂದು ತೀರ್ಪು ನೀಡಿದೆ. ಇಡೀ ಬೆಂಗಳೂರನ್ನೇ ತಲ್ಲಣಗೊಳಿಸಿತ್ತು.

ಪತಿ ಮೇಲಿನ ದ್ವೇಷಕ್ಕೆ ಪಾಯಲ್ ಸುರೇಖಾ ಅವರನ್ನ ಜಿಮ್ ಟ್ರೈನರ್ ಜೇಮ್ಸ್ ಕೊಲೆ ಮಾಡಿದ್ದ ಎಂಬ ಆರೋಪದ ಮೇಲೆ ಅಂದಿನ ಇನ್ಸ್ ಪೆಕ್ಟರ್ ಕೆ. ಉಮೇಶ್ ನೇತೃತ್ವದ ತಂಡ ಆರೋಪಿಯನ್ನ ಬಂಧಿಸಿತ್ತು.

ಆರೋಪಿಯೇ ಸಿಬಿಐ ತನಿಖೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದ. ಕೋರ್ಟ್ ಸಿಬಿಐ ತನಿಖೆಗೆ ಆದೇಶಿಸಿತ್ತು. ಸಿಬಿಐ ಕೂಡಾ ಜೇಮ್ಸ್ ವಿರುದ್ಧವೇ ಆರೋಪಪಟ್ಟಿ ದಾಖಲಿಸಿತ್ತು. ಸಿಬಿಐ ಪರ ಎಸ್ ಪಿಪಿ ಶಿವಾನಂದ ಪೆರ್ಲ ವಾದಿಸಿದ್ದರು. ಪ್ರಕರಣದ ವೃತ್ತಾಂತ: ಜೆಪಿ ನಗರದಲ್ಲಿ 2010ರ ಡಿಸೆಂಬರ್ ನಲ್ಲಿ ನಡೆದಿದ್ದ ಕೊಲೆ ಇಡೀ ಬೆಂಗಳೂರನ್ನೇ ತಲ್ಲಣಗೊಳಿಸಿದ್ದ ಕೊಲೆ ಪ್ರಕರಣಬೆಂಗಳೂರು ಪೊಲೀಸರಿಂದ ಆರೋಪಿ ಜೆಮ್ಸ್​ನ ಬಂಧನಅಂದಿನ ಇನ್ಸ್​ಪೆಕ್ಟರ್​ ಎಸ್​.ಕೆ.ಉಮೇಶ್​ ಬಂಧಿಸಿದ್ದರು. ಆದ್ರೆ ಆರೋಪಿ ಆತ ಅಲ್ಲ ಎಂದು ಕೊಲೆಯಾದ ಸುರೇಖಾ ತಂದೆ ಆರೋಪ ಮಾಡಿದ್ದರು. ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಲು ತಂದೆ ದೀನ್​ದಯಾಳ್​ ಸುಪ್ರೀಂ ಕೋರ್ಟ್​ಗೆ ಮನವಿ ಮಾಡಿದ್ದರು. ಬೆಂಗಳೂರು ಪೊಲೀಸರ ತನಿಖೆ ಸರಿ ಇಲ್ಲವೆಂದೂ, ಸುರೇಖಾಳ ಗಂಡನೇ ಕೊಲೆ ಮಾಡಿದ್ದಾನೆ ಎಂದು ಸುರೇಖಾ ಪೋಷಕರು ಆರೋಪಿಸಿದ್ದರು. ಪೋಷಕರ ಒತ್ತಡದಿಂದ ತನಿಖೆಯನ್ನ ಸಿಬಿಐಗೆ ಒಪ್ಪಿಸಲಾಗಿತ್ತು. ಇದೀಗ ಸಿಬಿಐ ತನಿಖೆಯಿಂದ ಜೇಮ್ಸ್​ ಆರೋಪಿ ಎಂದು ಸಾಬೀತಾಗಿದ್ದು, ಈ ಮೂಲಕ ಬೆಂಗಳೂರು ಪೊಲೀಸರ ತನಿಖೆ ಸರಿ ಎಂಬುದೂ ಇದೀಗ ಸಾಬೀತಾಗಿದೆ.

Published On - 2:29 pm, Wed, 6 November 19

‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?