ಕೊರೊನಾ ಕಾಲದಲ್ಲಿಯೂ ಕಳ್ಳರ ಭಂಡತನ: ನಾಗಲಿಂಗೇಶ್ವರ ದೇಗುಲ ಹುಂಡಿ ಕಳ್ಳತನ

ಕೊರೊನಾ ಕಾಲದಲ್ಲಿಯೂ ಕಳ್ಳರ ಭಂಡತನ: ನಾಗಲಿಂಗೇಶ್ವರ ದೇಗುಲ ಹುಂಡಿ ಕಳ್ಳತನ

ಬೆಂಗಳೂರು: ಕೊರೊನಾ ಕಾಲದಲ್ಲಿಯೂ ಕಳ್ಳರು ಭಂಡತನ ತೋರಿದ್ದಾರೆ. ಬೆಂಗಳೂರಿನ ಹೆಗಡೆ ನಗರದಲ್ಲಿರುವ ನಾಗಲಿಂಗೇಶ್ವರ ದೇವಾಲಯದ ಹುಂಡಿ ಕಳ್ಳತನ ಮಾಡಿದ್ದಾರೆ. ದೇವಸ್ಥಾನದ ಹಿಂಬದಿ‌ ಬಾಗಿಲಿನಿಂದ ನುಗ್ಗಿ ಕಳ್ಳತನ ಮಾಡಲಾಗಿದೆ. ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

ಅರ್ಚಕರ ಮನೆ ಲಾಕ್‌ ಮಾಡಿ ಕುಕೃತ್ಯ! ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಕಳ್ಳರು ಈ ಕೈಚಳಕ ತೋರಿದ್ದು, ನಿನ್ನೆ ತಡರಾತ್ರಿ ದೇವಸ್ಥಾನದ ಹಿಂಬದಿ‌ ಬೀಗ ಒಡೆದು ಒಳನುಸುಳಿದ್ದಾರೆ. ಪಕ್ಕದಲ್ಲಿಯೇ ಇದ್ದ ಅರ್ಚಕರ ಮನೆ ಹೊರಗಿನಿಂದ ಲಾಕ್‌ ಮಾಡಿ ಕೃತ್ಯ ಎಸಗಿದ್ದಾರೆ  ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

Published On - 2:03 pm, Thu, 23 April 20

Click on your DTH Provider to Add TV9 Kannada