ಎನ್​ಸಿಬಿ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ: ಮೂವರು ಅಂತಾರಾಷ್ಟ್ರೀಯ ಲೇಡಿ ಡ್ರಗ್​ ಪೆಡ್ಲರ್​ಗಳ ಸೆರೆ

ಎನ್​ಸಿಬಿ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ: ಮೂವರು ಅಂತಾರಾಷ್ಟ್ರೀಯ ಲೇಡಿ ಡ್ರಗ್​ ಪೆಡ್ಲರ್​ಗಳ ಸೆರೆ
ವಶ ಪಡಿಸಿಕೊಂಡ ಡ್ರಗ್ಸ್​

ಮಹಿಳೆಯರ ವಿಚಾರಣೆಯಿಂದ ನೈಜೀರಿಯಾದ ಕಿಂಗ್ ಪಿನ್ ಮತ್ತು ದೆಹಲಿಯ ಆತನ ಜಾಲದ ಬಗ್ಗೆ ಮಾಹಿತಿ ಸಂಗ್ರಹ ಮಾಡಿದ್ದು, ನೈಜೀರಿಯಾ ಮೂಲದ ಮಹಿಳೆ ಸೇರಿ ಒಂಭತ್ತು ಜನರನ್ನ ಎಸ್​ಸಿಬಿ ಬಂಧಿಸಿದೆ. 

TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

May 27, 2022 | 6:21 PM

ಬೆಂಗಳೂರು: ಎನ್​ಸಿಬಿ ಅಧಿಕಾರಿಗಳ ಭರ್ಜರಿ ಕಾರ್ಯಚರಣೆಯಿಂದ ಮೂವರು ಇಂಟರ್ ನ್ಯಾಷನಲ್ ಲೇಡಿ ಡ್ರಗ್ ಪೆಡ್ಲರ್​ಗಳ ಬಂಧನ ಮಾಡಿದ್ದು, ಬರೋಬ್ಬರಿ 34.89 ಕೆ.ಜಿಯ 52 ಕೋಟಿ ಬೆಲೆಬಾಳುವ ಹೆರಾಯಿನ್ ವಶಕ್ಕೆ ಪಡೆದಿದ್ದಾರೆ. ಸೂಟ್ ಕೇಸ್ ತಳಭಾಗದಲ್ಲಿ ಹೆರಾಯಿನ್​ ಸಂಗ್ರಹಿಸಿ ಸಾಗಟ ಮಾಡಲು ಯತ್ನಿಸಿದ್ದಾರೆ. ಮೊದಲಿಗೆ ಜಿಂಬಾಬ್ವೆಯಿಂದ 7 ಕೆ.ಜಿ. ಹೆರಾಹಿನ್ ಬೆಂಗಳೂರು ಕೆಐಎಎಲ್ ತಂದಿದ್ದ ಓರ್ವ ಡ್ರಗ್ ಪೆಡ್ಲರ್, ಆ‌ ಮೂಲಕ ಮಾಹಿತಿ ಆಧರಿಸಿ ಮತ್ತಿಬ್ಬರು ಲೇಡಿ ಪೆಡ್ಲರ್​ಗಳ ಬಂಧನ ಮಾಡಲಾಗಿದೆ. ಲೇಡಿ ಪೆಡ್ಲರ್​ಗಳು ತಂಗಿದ್ದ ಲಾಡ್ಜ್​ನಲ್ಲಿ ಎನ್​ಸಿಬಿ ಅಧಿಕಾರಿಗಳು ಪರಿಶೀಲನೆ ಮಾಡಿದ್ದು, ಈ ವೇಳೆ ಅದೇ ಮಾದರಿಯ ಬ್ಯಾಗ್ ನಲ್ಲಿ 6.890 ಕೆಜಿ ಹೆರಾಯಿನ್ ಪತ್ತೆಯಾಗಿದೆ. ಕೂಡಲೇ ಟೆಕ್ನಿಕಲ್ ಅನಾಲಿಸಿಸ್ ಮಾಡಿ ಆರೋಪಿಗಳ ಬಂಧನ ಮಾಡಲಾಗಿದೆ.

ಇದನ್ನೂ ಓದಿ: ಕರುಳಿನ ಉರಿಯೂತಕ್ಕೆ ಕಾರಣವಾಗುವ ಅನಾರೋಗ್ಯಕರ ಅಂಶಗಳಾವವು? ಇಲ್ಲಿದೆ ಮಾಹಿತಿ

ಈ ವೇಳೆ ಇನ್ನೂ ಮೂವರ ಬಗ್ಗೆ ಮಾಹಿತಿ ಪತ್ತೆ ಮಾಡಿದ್ದು, ರಾಜಧಾನಿ ಎಕ್ಸ್‌ಪ್ರೆಸ್​ನಲ್ಲಿ ರೈಲಿನ ಮೂಲಕ ಬೆಂಗಳೂರಿಂದ ದೆಹಲಿಗೆ ತೆರಳಿರುವ ಮಾಹಿತಿ ಸಂಗ್ರಹವಾಗಿದೆ. ಕೂಡಲೇ ಇಂದೋರ್ NCB ಟೀಂಗೆ ಮಾಹಿತಿ ರವಾನೆ ಮಾಡಿದ್ದು, ಇಟಾರ್ಸಿಯ ಲಾಡ್ಹ್ ನಲ್ಲಿ 21 ಕೆ.ಜಿ ಹೆರಾಯಿನ್ ವಶಕ್ಕೆ ಪಡೆಯಲಾಗಿದೆ. ಇಟಾರ್ಸಿಯಲ್ಲಿ ಮೂವರು ಮಹಿಳೆಯರ ಬಂಧನ ಮಾಡಿದ್ದು, ಮಹಿಳೆಯರ ವಿಚಾರಣೆಯಿಂದ ನೈಜೀರಿಯಾದ ಕಿಂಗ್ ಪಿನ್ ಮತ್ತು ದೆಹಲಿಯ ಆತನ ಜಾಲದ ಬಗ್ಗೆ ಮಾಹಿತಿ ಸಂಗ್ರಹ ಮಾಡಿದ್ದು, ನೈಜೀರಿಯಾ ಮೂಲದ ಮಹಿಳೆ ಸೇರಿ ಒಂಭತ್ತು ಜನರನ್ನ ಎಸ್​ಸಿಬಿ ಬಂಧಿಸಿದೆ.

ಹೆಜ್ಜೇನು ದಾಳಿ: ಓರ್ವ ಸಾವು, ಮೂವರಿಗೆ ಗಂಭೀರ ಗಾಯ;

ತುಮಕೂರು: ಹೆಜ್ಜೇನು ದಾಳಿಯಿಂದ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವಂತಹ ಘಟನೆ ಜಿಲ್ಲೆಯ ಕೊರಟಗೆರೆ ತಾಲೂಕಿನ ಇರಕಸಂದ್ರ ಕಾಲೋನಿಯ ಎಸ್ಸಾರ್ ಪೇಟ್ರೋಲ್ ಬಂಕ್ ಬಳಿ ನಡೆದಿದೆ. ಹುಲವಂಗಲ ಗ್ರಾಮದ ಗ್ರಾಪಂ ನಿವೃತ್ತ ಕಾರ್ಯದರ್ಶಿ ಕೃಷ್ಣಮೂರ್ತಿ (65) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪುಟ್ಟಸಂದ್ರದ ರೈ ಸೋಮಣ್ಣ ಗಂಭೀರವಾಗಿದ್ದು, ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಸಂಕೇನಹಳ್ಳಿ ಗ್ರಾಮದ ಜಯಪ್ರಕಾಶ ಮತ್ತು ಶರತ್​ಗೆ ಗಾಯವಾಗಿದ್ದು, ಕೊರಟಗೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಎಸ್ಸಾರ್ ಪೆಟ್ರೋಲ್ ಬಂಕಿನ ಸಮೀಪದ ಆಲದಮರದಲ್ಲಿದ್ದ ನಾಲ್ಕು ಹೆಜ್ಜೇನು ಗೂಡಿದ್ದು, ಇತ್ತೀಚೆಗೆ ಸಾಕಷ್ಟು‌ ಜನರ ಮೇಲೆ ದಾಳಿ ನಡೆದಿದೆ. ಸ್ಥಳಕ್ಕೆ ಕೊರಟಗೆರೆ ತಹಶೀಲ್ದಾರ್ ನಹೀದಾ, ಕೋಳಾಲ ಪಿಎಸೈ ಮಹಾಲಕ್ಷ್ಮಿ ಭೇಟಿ ನೀಡಿದ್ದಾರೆ. ಕೋಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Follow us on

Related Stories

Most Read Stories

Click on your DTH Provider to Add TV9 Kannada