ಸ್ಯಾಂಕಿ ಕೆರೆಯಲ್ಲಿ ಪತ್ತೆಯಾಗಿದ್ದ ಶವ ಗುರುತು ಪತ್ತೆ ಮಾಡಿದ ಪೊಲೀಸ್​: ಮಾನಸಿಕವಾಗಿ ಕುಗ್ಗಿ ಆತ್ಮಹತ್ಯೆಗೆ ಶರಣು

| Updated By: ಗಂಗಾಧರ​ ಬ. ಸಾಬೋಜಿ

Updated on: Feb 15, 2024 | 5:56 PM

ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸ್ಯಾಂಕಿ ಕೆರೆಯಲ್ಲಿ ಸುಮಾರು 50 ವರ್ಷದ ಅಪರಿಚಿತ ವ್ಯಕ್ತಿಯ ಶವ ನಿನ್ನೆ ಪತ್ತೆಯಾಗಿದ್ದು, ಇಂದು ಪೊಲೀಸರು ಶವ ಗುರುತು ಪತ್ತೆ ಹಚ್ಚಿದ್ದಾರೆ. 3 ದಿನದ ಹಿಂದೆ ಮಿಸ್ಸಿಂಗ್ ಆಗಿದ್ದ ನಾರಾಯಣ ಸ್ವಾಮಿ ಈ ಬಗ್ಗೆ ನಾರಾಯಣಸ್ವಾಮಿ ಕುಟುಂಬಸ್ಥರು ಬಸವೇಶ್ವರ ನಗರ ಠಾಣೆಯಲ್ಲಿ ಕೇಸ್ ದಾಖಲಿಸಿದ್ದರು.

ಸ್ಯಾಂಕಿ ಕೆರೆಯಲ್ಲಿ ಪತ್ತೆಯಾಗಿದ್ದ ಶವ ಗುರುತು ಪತ್ತೆ ಮಾಡಿದ ಪೊಲೀಸ್​: ಮಾನಸಿಕವಾಗಿ ಕುಗ್ಗಿ ಆತ್ಮಹತ್ಯೆಗೆ ಶರಣು
ಮೃತ ವ್ಯಕ್ತಿ ನಾರಾಯಣಸ್ವಾಮಿ
Follow us on

ಬೆಂಗಳೂರು, ಫೆಬ್ರವರಿ 15: ಕಳೆದ ಮೂರು ದಿನದ ಹಿಂದೆ ಮಿಸ್ಸಿಂಗ್ ಆಗಿದ್ದ ವ್ಯಕ್ತಿ ನಿನ್ನೆ ಸ್ಯಾಂಕಿ ಕೆರೆಯಲ್ಲಿ ಶವವಾಗಿ (dead body) ಪತ್ತೆಯಾಗಿ ಆಗಿದ್ದರು. ಸದ್ಯ ಸದಾಶಿವನಗರ ಠಾಣೆ ಪೊಲೀಸರು ಶವ ಗುರುತು ಪತ್ತೆ ಹಚ್ಚಿದ್ದಾರೆ. ನಾರಾಯಣಸ್ವಾಮಿ(60) ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ. 3 ದಿನದ ಹಿಂದೆ ಮಿಸ್ಸಿಂಗ್ ಆಗಿದ್ದ ನಾರಾಯಣ ಸ್ವಾಮಿ ಈ ಬಗ್ಗೆ ನಾರಾಯಣಸ್ವಾಮಿ ಕುಟುಂಬಸ್ಥರು ಬಸವೇಶ್ವರ ನಗರ ಠಾಣೆಯಲ್ಲಿ ಕೇಸ್ ದಾಖಲಿಸಿದ್ದರು. ತಂದೆ ಮಗನ ನಡುವೆ ಹಣಕಾಸಿನ ವಿಚಾರಕ್ಕೆ ವೈಮನಸ್ಸಿತ್ತು. ಜೊತೆಗೆ ನಾರಾಯಣ ಸ್ವಾಮಿ ಖಾಯಿಲೆಯಿಂದ ಬಳಲುತ್ತಿದ್ದರು. ಈ ವಿಚಾರಗಳಿಂದ ಮಾನಸಿಕವಾಗಿ ಕುಗ್ಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ನಡೆದಿದೆ.

ಮಹಿಳಾ ಪೊಲೀಸ್ ಸಿಬ್ಬಂದಿ ಮೊಬೈಲ್ ಕಸಿದು ಎಸ್ಕೇಪ್ ಆಗುತಿದ್ದವನ ಬೆನ್ನತ್ತಿ ಹಿಡಿದ ಹೊಯ್ಸಳ ಸಿಬ್ಬಂದಿ 

ನಗರದಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿಯ ಮೊಬೈಲ್ ಕಸಿದು ಎಸ್ಕೇಪ್ ಆಗುತಿದ್ದವನನ್ನು ಬೆನ್ನತ್ತಿ  ಹೊಯ್ಸಳ ಸಿಬ್ಬಂದಿ ಹಿಡಿದಿರುವಂತಹ ಘಟನೆ ಕ್ಯಾಷ್ ಪಾರ್ಮಸಿಯಲ್ಲಿ ಫೆ. 13 ರಂದು ನಡೆದಿದೆ. ಸಂಜೆ 5:15ರ ಸುಮಾರಿಗೆ ಅಶೋಕನಗರ ಸಂಚಾರಿ ಠಾಣೆಯ ಮಹಿಳಾ ಪೇದೆ ಷಾಜಿಯಾ ತಬಸುಂ ಜಂಕ್ಷನ್​ನಲ್ಲಿ ಮಹಿಳಾ ಸಿಬ್ಬಂದಿ ಕರ್ತವ್ಯ ನಿರ್ವಹಿಸುತಿದ್ದರು.

ಇದನ್ನೂ ಓದಿ: ʻಕರಿಮಣಿ ಮಾಲೀಕ ನೀನಲ್ಲʼ ಎಂದ ಪತ್ನಿ, ಮನನೊಂದು ಆತ್ಮಹತ್ಯೆಗೆ ಶರಣಾದ ಪತಿ

ಈ ವೇಳೆ ದುಷ್ಕರ್ಮಿ ಅವರ ಮೊಬೈಲ್ ಕಸಿದು ಎಸ್ಕೇಪ್ ಆಗುತಿದ್ದ. ಸ್ಥಳದಲ್ಲೇ ಇದ್ದ ಹೋಯ್ಸಳ ಸಿಬ್ಬಂದಿ ಅಲರ್ಟ್ ಆಗಿ ಚೇಸ್ ಮಾಡಿದ್ದು, ಸುಮಾರು ದೂರು ಹಿಂಬಾಲಿಸಿ ಹಿಡಿದಿದ್ದಾರೆ. ಮೊಬೈಲ್ ಕಳ್ಳನ ಚೇಸ್ ಮಾಡಿ ಹಿಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಆಗಿದೆ. ಹೊಯ್ಸಳ ಸಿಬ್ಬಂದಿಯ ಕೆಲಸಕ್ಕೆ ಹಿರಿಯ ಅಧಿಕಾರಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಕ್ಷುಲ್ಲಕ ಕಾರಣಕ್ಕೆ ಮಾರಣಾಂತಿಕ ಹಲ್ಲೆ

ಆನೇಕಲ್​: ಕ್ಷುಲ್ಲಕ ಕಾರಣಕ್ಕೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವಂತಹ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ಪಟ್ಟಣದ ಬಹದ್ದೂರ್ ಪುರದಲ್ಲಿ ನಡೆದಿದೆ. ಬಹದ್ದೂರ್ ಪುರ ವಾಸಿ ಶ್ರೀನಿವಾಸ್ ಹಲ್ಲೆಗೊಳಗಾದ ವ್ಯಕ್ತಿ. ಗ್ಯಾಂಗ್ ನಾಗ ಅಂಡ್ ಟೀಮ್​ನಿಂದ ಹಲ್ಲೆ ಮಾಡಲಾಗಿದೆ.

ಇದನ್ನೂ ಓದಿ: ಪತ್ನಿ ಕೊಲೆ ಮಾಡಿದ್ದ ಪತಿ 31 ವರ್ಷಗಳ ನಂತರ ಅರೆಸ್ಟ್; ಹೆಸರು ಬದಲಾಯಿಸಿ ಮಸೀದಿಯಲ್ಲಿ ಆಶ್ರಯ!

ನಾಗ ರಸ್ತೆಗೆ ಅಡ್ಡಲಾಗಿ ಎಂ ಸ್ಯಾಂಡ್, ಜಲ್ಲಿ ಹಾಕಿದ್ದನ್ನು ಪ್ರಶ್ನಿಸಿದ್ದಕ್ಕೆ ಹುಡುಗರನ್ನು ಕರೆಸಿ ಹಲ್ಲೆ ಆರೋಪ ಮಾಡಲಾಗಿದೆ. ಗ್ಯಾಂಗ್ ನಾಗನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆನೇಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.