ಪಬ್​ಜಿ ಆಟಕ್ಕಾಗಿ ಹುಸಿ ಬಾಂಬ್ ಕರೆ ಮಾಡಿದ ಅಪ್ರಾಪ್ತ ಬಾಲಕ; ಪ್ರಕರಣ ದಾಖಲಿಸದೇ ಬುದ್ಧಿವಾದ ಹೇಳಿದ ಪೊಲೀಸ್

| Updated By: ಗಂಗಾಧರ​ ಬ. ಸಾಬೋಜಿ

Updated on: Apr 03, 2022 | 5:44 PM

ಪ್ರಯಾಣಿಕರನ್ನ ಇಳಿಸಿ ಪೊಲೀಸರು 90 ನಿಮಿಷ ಪರಿಶೀಲಿಸಿದ್ದಾರೆ. ಸುಳ್ಳೆಂದು ತಿಳಿದ ಮೇಲೆ ಹುಸಿ ಕರೆಯ ಮೂಲ ಹುಡುಕಾಡಿದ್ದರು. ಬಳಿಕ ಅಪ್ರಾಪ್ತ ಬಾಲಕ ಹೇಳಿದ ಅಸಲಿ ಸುಳ್ಳಿನ ಕಹಾನಿ ಬಯಲಾಗಿದೆ.

ಪಬ್​ಜಿ ಆಟಕ್ಕಾಗಿ ಹುಸಿ ಬಾಂಬ್ ಕರೆ ಮಾಡಿದ ಅಪ್ರಾಪ್ತ ಬಾಲಕ; ಪ್ರಕರಣ ದಾಖಲಿಸದೇ ಬುದ್ಧಿವಾದ ಹೇಳಿದ ಪೊಲೀಸ್
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಪಬ್​ಜಿ (Pub G game) ಆಟಕ್ಕಾಗಿ ಹುಸಿ ಬಾಂಬ್​ನ್ನು ಅಪ್ರಾಪ್ತ ಬಾಲಕ ಕರೆ ಮಾಡಿರುವಂತಹ ಘಟನೆ ನಡೆದಿದೆ. ಮಾರ್ಚ್ 30ರಂದು ಯಲಹಂಕ ರೈಲ್ವೇ ನಿಲ್ದಾಣದಲ್ಲಿ ಘಟನೆ ನಡೆದಿದ್ದು, ಬಾಲಕನ ಸುಳ್ಳಿಗೆ ಪೊಲೀಸರು 90 ನಿಮಿಷ ರೈಲನ್ನ ತಡಕಾಡಿದ್ದಾರೆ. ಬಾಲಕನ ಸ್ನೇಹಿತ 2ಗಂಟೆಗೆ ಯಲಹಂಕದಿಂದ ಕಾಚಿಗುಡ್ಡ ಎಕ್ಸ್‌ಪ್ರೆಸ್‌ನಲ್ಲಿ ತೆರಳಬೇಕಿತ್ತು. ಸ್ನೇಹಿತ ಹೋದರೆ ತನಗೆ ಪಾರ್ಟ್ನರ್ ಇರಲ್ಲವೆಂದು ಬಾಲಕ ಹುಸಿ ಕರೆ ಮಾಡಿದ್ದಾನೆ. ರೈಲ್ವೇ ಸಹಾಯವಾಣಿಗೆ ಕರೆ ಮಾಡಿ ಕಾಚಿಗುಡ್ಡ ಎಕ್ಸ್‌ಪ್ರೆಸ್‌ನಲ್ಲಿ ಬಾಂಬ್ ಇದೆ ಎಂದು ಬಾಲಕ ಹೇಳಿದ್ದಾನೆ. ಪ್ರಯಾಣಿಕರನ್ನ ಇಳಿಸಿ ಪೊಲೀಸರು 90 ನಿಮಿಷ ಪರಿಶೀಲಿಸಿದ್ದಾರೆ. ಸುಳ್ಳೆಂದು ತಿಳಿದ ಮೇಲೆ ಹುಸಿ ಕರೆಯ ಮೂಲ ಹುಡುಕಾಡಿದ್ದರು. ಬಳಿಕ ಅಪ್ರಾಪ್ತ ಬಾಲಕ ಹೇಳಿದ ಅಸಲಿ ಸುಳ್ಳಿನ ಕಹಾನಿ ಬಯಲಾಗಿದೆ. ಅಪ್ರಾಪ್ತ ಬಾಲಕನಾದ್ದರಿಂದ ಪೊಲೀಸರು ಪ್ರಕರಣ ದಾಖಲಿಸದೇ ಬುದ್ಧಿವಾದ ಹೇಳಿದ್ದಾರೆ.

ಬೈಕ್ ಹಾಗೂ ಲಾರಿ ನಡುವೆ ಭೀಕರ ಅಪಘಾತ:

ವಿಜಯಪುರ: ಬೈಕ್ ಹಾಗೂ ಲಾರಿ ಮುಖಾಮುಖಿ ಡಿಕ್ಕಿ ಹೊಡೆದಿರುವಂತಹ ಘಟನೆ ನಡೆದಿದೆ. ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಘಟನೆ ನಡೆದಿದ್ದು,  ಅಪಘಾತದಲ್ಲಿ ಬೈಕ್ ಸವಾರನಿಗೆ ಗಂಭೀರ ಗಾಯವಾಗಿದ್ದು ಎರಡು ಕಾಲು ಕಟ್ ಆಗಿದೆ. ಹುಚ್ಚಪ್ಪ ಗಂಭೀರವಾಗಿ ಗಾಯಗೊಂಡ ಬೈಕ್ ಸವಾರ. ಹುಚ್ಚಪ್ಪ ಇಂಡಿ ತಾಲೂಕಿನ ರೋಡಗಿ ಗ್ರಾಮದವಾರಗಿದ್ದು, ಅಪಘಾತವಾದ ತಕ್ಷಣ ಲಾರಿ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಗಾಯಾಳು ಹುಚ್ಚಪ್ಪ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಇಂಡಿ ಶಹರ ಪೊಲೀಸ ಠಾಣಾ ವ್ಯಾಪ್ತಿ ಪ್ರಕರಣ ದಾಖಲಾಗಿದೆ.

ಮೂರು ಮದುವೆಯಾಗಿದ್ದವನ ಅಸ್ತಿಪಂಜರ ದಟ್ಟಾರಣ್ಯದ ಬಾವಿಯಲ್ಲಿ ಪತ್ತೆ:

ಜಾರ್ಖಂಡ್​​ನಲ್ಲಿ ನಕ್ಸಲ್​ ಪೀಡಿತ ಪ್ರದೇಶವೆನಿಸಿಕೊಂಡಿರುವ ಪೂರ್ವ ಸಿಂಗ್​ಭೂಮ್​​ ಜಿಲ್ಲೆಯ ಹಳ್ಳಿಯೊಂದರ ಬಾವಿಯಲ್ಲಿ ಅಸ್ತಿಪಂಜರವೊಂದು ಪತ್ತೆಯಾಗಿತ್ತು. ಈ ಘಟನೆಯ ಜಾಡು ಹಿಡಿದ ಪೊಲೀಸರು ಕೇಸ್​ ಬೇಧಿಸಿದ್ದಾರೆ. ಈ ಅಸ್ತಿಪಂಜರ 35 ವರ್ಷದ ವ್ಯಕ್ತಿಯೊಬ್ಬನದ್ದು, ಈತನ ಅತ್ತೆಯ ಮನೆಯವರೇ (ಪತ್ನಿಯ ತವರು ಮನೆ) ಸೇರಿ ಹತ್ಯೆಗೈದಿದ್ದಾರೆ ಎಂಬ ಭಯಾನಕ ಸತ್ಯ ಬೆಳಕಿಗೆ ಬಂದಿದೆ. ಮೃತನನ್ನು ಲಾಡು ಹೈಬುರು ಎಂದು ಗುರುತಿಸಲಾಗಿದ್ದು, ಇವನು ಮೂರು ಮದುವೆ ಮಾಡಿಕೊಂಡಿದ್ದೇ ಹತ್ಯೆಗೆ ಕಾರಣ ಎಂದು ಹೇಳಲಾಗಿದೆ.

ಇದನ್ನೂ ಓದಿ:

Niharika Konidela: ‘ನಿಹಾರಿಕಾಗೂ ಡ್ರಗ್ಸ್ ಪ್ರಕರಣಕ್ಕೂ ಸಂಬಂಧವಿಲ್ಲ’; ಚಿರು ಸಹೋದರ ನಾಗಬಾಬು ಹೇಳಿಕೆ

Published On - 5:23 pm, Sun, 3 April 22