IPL 2022: ಎಂಎಸ್ಡಿ ಮುಂದಿದೆ ಹಲವು ದಾಖಲೆ: ಅಬ್ಬರಿಸಲಿದ್ದಾರಾ ಧೋನಿ
IPL 2022: ನಾಯಕತ್ವ ತೊರೆದ ಬೆನ್ನಲ್ಲೇ ಮಾಹೀ ಬ್ಯಾಟ್ ಮೂಲಕ ಮಿಂಚಲಾರಂಭಿಸಿದ್ದಾರೆ. ಇದೀಗ ಪಂಜಾಬ್ ಕಿಂಗ್ಸ್ ವಿರುದ್ದದ ಪಂದ್ಯದಲ್ಲಿ ಮಿಂಚಿದರೆ ಧೋನಿ ಹೆಸರಿಗೆ ಕೆಲ ದಾಖಲೆಗಳು ಸೇರ್ಪಡೆಯಾಗಲಿದೆ. ಹಾಗಿದ್ರೆ ಆ ದಾಖಲೆಗಳಾವುವು ನೋಡೋಣ...
ಐಪಿಎಲ್ ಸೀಸನ್ 15 ನಲ್ಲಿ (IPL 2022) ಮಹೇಂದ್ರ ಸಿಂಗ್ ಧೋನಿ (MS Dhoni) ಭರ್ಜರಿ ಪ್ರದರ್ಶನ ನೀಡಿದ್ದಾರೆ. ಮೊದಲ ಪಂದ್ಯದಲ್ಲೇ ಅರ್ಧಶತಕ ಬಾರಿಸಿ ಮಿಂಚಿದ್ದ ಧೋನಿ, 2ನೇ ಪಂದ್ಯದಲ್ಲಿ ಅಂತಿಮ ಹಂತದಲ್ಲಿ ಅಬ್ಬರಿಸಿದ್ದರು. ಇದೀಗ 3ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ದ ಕಣಕ್ಕಿಳಿಯಲು ಚೆನ್ನೈ ಸೂಪರ್ ಕಿಂಗ್ಸ್ ಸಜ್ಜಾಗಿದೆ. ಬ್ರಬೋರ್ನ್ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಅಬ್ಬರಿಸಿದ್ರೆ ಹಲವು ದಾಖಲೆಗಳು ನಿರ್ಮಾಣವಾಗಲಿದೆ. 41 ವರ್ಷದ ಧೋನಿ ಈಗಾಗಲೇ ಉತ್ತಮ ಫಾರ್ಮ್ನಲ್ಲಿರುವುದನ್ನು ತೋರಿಸಿದ್ದು, ಹೀಗಾಗಿ ಪಂಜಾಬ್ ಕಿಂಗ್ಸ್ ವಿರುದ್ದ ಕೂಡ ಕಮಾಲ್ ಮಾಡುವ ವಿಶ್ವಾಸದಲ್ಲಿದ್ದಾರೆ.
ಕೋಲ್ಕತ್ತಾ ನೈಗ್ಟ್ ರೈಡರ್ಸ್ (ಕೆಕೆಆರ್) ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ 38 ಎಸೆತಗಳಲ್ಲಿ 50 ರನ್ ಗಳಿಸಿ ಅಜೇಯರಾಗಿ ಉಳಿದಿದ್ದರು. ನಂತರ ಲಕ್ನೋ ಸೂಪರ್ ಜೈಂಟ್ಸ್ ವಿರುದ್ದ ಕೇವಲ 6 ಎಸೆತಗಳಲ್ಲಿ ಅಜೇಯ 16 ರನ್ ಗಳಿಸಿ ಮಿಂಚಿದ್ದರು. ನಾಯಕತ್ವ ತೊರೆದ ಬೆನ್ನಲ್ಲೇ ಮಾಹೀ ಬ್ಯಾಟ್ ಮೂಲಕ ಮಿಂಚಲಾರಂಭಿಸಿದ್ದಾರೆ. ಇದೀಗ ಪಂಜಾಬ್ ಕಿಂಗ್ಸ್ ವಿರುದ್ದದ ಪಂದ್ಯದಲ್ಲಿ ಮಿಂಚಿದರೆ ಧೋನಿ ಹೆಸರಿಗೆ ಕೆಲ ದಾಖಲೆಗಳು ಸೇರ್ಪಡೆಯಾಗಲಿದೆ. ಹಾಗಿದ್ರೆ ಆ ದಾಖಲೆಗಳಾವುವು ನೋಡೋಣ…
350ನೇ ಪಂದ್ಯ: ಎಂಎಸ್ ಧೋನಿ ಇಂದು ಪಂಜಾಬ್ ಕಿಂಗ್ಸ್ ವಿರುದ್ಧ ಕಣಕ್ಕಿಳಿಯುವ ಮೂಲಕ ಟಿ20 ಕ್ರಿಕೆಟ್‌ನಲ್ಲಿ 350 ಪಂದ್ಯವಾಡಿದ ಆಟಗಾರರ ಪಟ್ಟಿಗೆ ಸೇರ್ಪಡೆಯಾಗಲಿದ್ದಾರೆ. ತಮ್ಮ 350 ನೇ ಟಿ20 ಪಂದ್ಯವನ್ನು ಆಡಲಿದ್ದಾರೆ.
2ನೇ ಭಾರತೀಯ: T20 ಕ್ರಿಕೆಟ್‌ನಲ್ಲಿ 350 ಪಂದ್ಯಗಳನ್ನು ಆಡಿದ ಎರಡನೇ ಭಾರತೀಯ ಆಟಗಾರ ಎಂಬ ದಾಖಲೆ ಕೂಡ ಧೋನಿ ಪಾಲಾಗಲಿದೆ. ಇದಕ್ಕೂ ಮುನ್ನ ರೋಹಿತ್ ಶರ್ಮಾ ಟಿ20 ಕ್ರಿಕೆಟ್‌ನಲ್ಲಿ 350 ಪಂದ್ಯವಾಡಿದ್ದರು. ಅಷ್ಟೇ ಅಲ್ಲದೆ ಈ ಪಂದ್ಯದೊಂದಿಗೆ ಧೋನಿ 350 ಪಂದ್ಯವಾಡಿದ ವಿಶ್ವದ 19 ನೇ ಆಟಗಾರ ಎನಿಸಿಕೊಳ್ಳಲಿದ್ದಾರೆ.
ಸಿಕ್ಸರ್ ಕಿಂಗ್: ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳ ಟಾಪ್ 5 ಪಟ್ಟಿಯಲ್ಲಿ ಪ್ರವೇಶಿಸಲು ಎಂಎಸ್ ಧೋನಿಗೆ 3 ಸಿಕ್ಸರ್‌ಗಳ ಅಗತ್ಯವಿದೆ. ಪಂಜಾಬ್ ಕಿಂಗ್ಸ್ ವಿರುದ್ದದ ಪಂದ್ಯದಲ್ಲಿ ಧೋನಿ 3 ಸಿಕ್ಸ್ ಬಾರಿಸಿದರೆ ಚುಟುಕು ಕ್ರಿಕೆಟ್‌ನಲ್ಲಿ 350 ಸಿಕ್ಸ್ ಬಾರಿಸಿದ ಸಿಕ್ಸರ್ ಕಿಂಗ್ಗಳ ಪಟ್ಟಿಗೆ ಸೇರ್ಪಡೆಯಾಗಲಿದ್ದಾರೆ.
ಇದನ್ನೂ ಓದಿ: IPL ಆಡಿದ್ದ 11 ಪಾಕಿಸ್ತಾನಿ ಆಟಗಾರರು ಯಾರು ಗೊತ್ತಾ?
ಇದನ್ನೂ ಓದಿ: IPL 2022: ಇವರೇ RCB ಪರ ಹ್ಯಾಟ್ರಿಕ್ ವಿಕೆಟ್ ಪಡೆದ ಮೂವರು ಬೌಲರುಗಳು