SRH vs LSG IPL 2022 Match Prediction: ಹೈದರಾಬಾದ್‌ಗೆ ಲಕ್ನೋ ಸವಾಲು! ಯಾರಿಗೆ ಒಲಿಯಲಿದೆ ಗೆಲುವು?
SRH vs LSG IPL 2022 Match Prediction: ನಾಯಕ ಕೆಎಲ್ ರಾಹುಲ್ ಮತ್ತು ಕ್ವಿಂಟನ್ ಡಿ ಕಾಕ್ ಅವರ ರೂಪದಲ್ಲಿ ಲಕ್ನೋ ಪ್ರಬಲ ಆರಂಭಿಕ ಜೋಡಿಯನ್ನು ಹೊಂದಿದೆ. ಈ ಇಬ್ಬರು ಚೆನ್ನೈ ವಿರುದ್ಧ ಮೊದಲ ವಿಕೆಟ್‌ಗೆ 99 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡರು.
ಸೋಮವಾರ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್-2022 ( IPL 2022) ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಮಣಿಸಿ ಗೆಲುವಿನ ಟ್ರ್ಯಾಕ್‌ಗೆ ಬಂದ ಲಕ್ನೋ ಸೂಪರ್ ಜೈಂಟ್ಸ್, ಸೋಲಿನ ಸುಳಿಯಲ್ಲಿರುವ ಹೈದರಬಾದ್ ತಂಡವನ್ನು ಎದುರಿಸಲಿದೆ. ಹೊಸ ಐಪಿಎಲ್ ತಂಡ ಲಕ್ನೋ ತನ್ನ ಚೊಚ್ಚಲ ಪಂದ್ಯವನ್ನು ಗುಜರಾತ್ ಟೈಟಾನ್ಸ್ ವಿರುದ್ಧ ಸೋತಿತು. ಆದರೆ ತನ್ನ ಎರಡನೇ ಪಂದ್ಯದಲ್ಲಿ ಬಿಗ್ ಸ್ಕೋರಿಂಗ್ ನಡುವೆಯೂ ಚೆನ್ನೈ ತಂಡವನ್ನು ಸೋಲಿಸುವಲ್ಲಿ ಯಶಸ್ವಿಯಾಯಿತು. ಇದು ಖಂಡಿತವಾಗಿಯೂ ಅವರ ನೈತಿಕತೆಯನ್ನು ಹೆಚ್ಚಿಸಿರಬೇಕು.
ನಾಯಕ ಕೆಎಲ್ ರಾಹುಲ್ ಮತ್ತು ಕ್ವಿಂಟನ್ ಡಿ ಕಾಕ್ ಅವರ ರೂಪದಲ್ಲಿ ಲಕ್ನೋ ಪ್ರಬಲ ಆರಂಭಿಕ ಜೋಡಿಯನ್ನು ಹೊಂದಿದೆ. ಈ ಇಬ್ಬರು ಚೆನ್ನೈ ವಿರುದ್ಧ ಮೊದಲ ವಿಕೆಟ್‌ಗೆ 99 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡರು. ವೆಸ್ಟ್ ಇಂಡೀಸ್‌ನ ಎವಿನ್ ಲೂಯಿಸ್ 23 ಎಸೆತಗಳಲ್ಲಿ 55 ರನ್ ಗಳಿಸಿ ಲಕ್ನೋ 211 ರನ್‌ಗಳ ಗುರಿಯನ್ನು ಸಾಧಿಸುವ ಮೂಲಕ ಚೆನ್ನೈ ತಂಡವನ್ನು ಸೋಲಿಸುವಲ್ಲಿ ನೆರವಾದರು. ಜೊತೆಗೆ ಮಧ್ಯಮ ಕ್ರಮಾಂಕದಲ್ಲಿ ದೀಪಕ್ ಹೂಡಾ ರೂಪದಲ್ಲಿ ವಿಶ್ವಾಸಾರ್ಹ ಬ್ಯಾಟ್ಸ್‌ಮನ್‌ಗಳನ್ನು ತಂಡ ಹೊಂದಿದೆ.
ಬದೋನಿ ಮೇಲೆ ಎಲ್ಲರ ಕಣ್ಣು ಯುವ ಆಟಗಾರ ಆಯುಷ್ ಬದೋನಿ ಈ ಬಾರಿಯ ಐಪಿಎಲ್‌ನಲ್ಲಿ ಸಿಕ್ಸರ್ ಬಾರಿಸುವ ಸಾಮರ್ಥ್ಯದಿಂದ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ.ಲಕ್ನೋದಲ್ಲಿ ಕೃನಾಲ್ ಪಾಂಡ್ಯ ಮತ್ತು ಜೇಸನ್ ಹೋಲ್ಡರ್ ಅವರಂತಹ ಅತ್ಯುತ್ತಮ ಆಲ್‌ರೌಂಡರ್‌ಗಳಿದ್ದಾರೆ ಆದರೆ ಮನೀಶ್ ಪಾಂಡೆ ಅವರ ಫಾರ್ಮ್ ತಂಡಕ್ಕೆ ಆತಂಕದ ವಿಷಯವಾಗಿದೆ.
ಬೌಲಿಂಗ್‌ನಲ್ಲಿ ಲಕ್ನೋದ ಆಧಾರ ಸ್ತಂಭ ಅವೇಶ್ ಖಾನ್, ಶ್ರೀಲಂಕಾದ ದುಷ್ಮಂತ ಚಮೀರಾ, ಆಂಡ್ರ್ಯೂ ಟೈ ಮತ್ತು ರವಿ ಬಿಷ್ಣೋಯ್ ಮೇಲೆ ನಿಂತಿದೆ. ರನ್ ಹರಿವನ್ನು ಕಡಿಮೆ ಮಾಡಲು ಅವರೆಲ್ಲರೂ ಹೆಚ್ಚು ಶಿಸ್ತುಬದ್ಧವಾಗಿ ಬೌಲಿಂಗ್ ಮಾಡಬೇಕಾಗುತ್ತದೆ.
ಹೈದರಾಬಾದ್ ಸುಧಾರಿಸಬೇಕು ಸನ್‌ರೈಸರ್ಸ್ ತನ್ನ ಕೊನೆಯ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ 61 ರನ್‌ಗಳ ಹೀನಾಯ ಸೋಲನ್ನು ಎದುರಿಸಬೇಕಾಯಿತು. ತಂಡದಲ್ಲಿ ಸ್ಟಾರ್ ಆಟಗಾರರ ಕೊರತೆಯಿದ್ದು, ಇಂತಹ ಪರಿಸ್ಥಿತಿಯಲ್ಲಿ ತಂಡದ ಇತರ ಆಟಗಾರರು ಉತ್ತಮ ಪ್ರದರ್ಶನ ನೀಡಬೇಕಿದೆ. ಅನುಭವಿ ಬೌಲರ್ ಭುವನೇಶ್ವರ್ ಕುಮಾರ್ ಕಳೆದ ಪಂದ್ಯದಲ್ಲಿ ಮಿತವ್ಯಯದಿಂದ ಬೌಲಿಂಗ್ ಮಾಡಿದರು. ಆದರೆ ರೊಮೆರಿಯೊ ಶೆಫರ್ಡ್, ಉಮ್ರಾನ್ ಮಲಿಕ್, ಟಿ ನಟರಾಜನ್ ಮತ್ತು ವಾಷಿಂಗ್ಟನ್ ಸುಂದರ್ ಅವರಂತಹ ಬೌಲರ್‌ಗಳು ಕಳೆದ ಪಂದ್ಯದಲ್ಲಿ ಹೆಚ್ಚು ರನ್ ಬಿಟ್ಟುಕೊಟ್ಟರು.
ಸನ್‌ರೈಸರ್ಸ್ ತನ್ನ ಎದುರಾಳಿ ತಂಡಕ್ಕೆ ಸವಾಲನ್ನು ನೀಡಬೇಕಾದರೆ, ಅದರ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡಬೇಕಾಗುತ್ತದೆ. ಬ್ಯಾಟಿಂಗ್‌ನಲ್ಲಿ ಅವರ ಜವಾಬ್ದಾರಿಯು ನಾಯಕ ಕೇನ್ ವಿಲಿಯಮ್ಸನ್, ರಾಹುಲ್ ತ್ರಿಪಾಠಿ, ನಿಕೋಲಸ್ ಪೂರನ್, ಐಡೆನ್ ಮಾರ್ಕ್ರಾಮ್, ಅಬ್ದುಲ್ ಸಮದ್ ಮತ್ತು ಅಭಿಷೇಕ್ ಶರ್ಮಾ ಅವರ ಮೇಲಿದೆ. ಕಳೆದ ಪಂದ್ಯದಲ್ಲಿ 14 ಎಸೆತಗಳಲ್ಲಿ 40 ರನ್ ಗಳಿಸಿದ ಸುಂದರ್ ಅವರ ಇನ್ನಿಂಗ್ಸ್ ತಂಡಕ್ಕೆ ಧನಾತ್ಮಕ ಅಂಶವಾಗಿದ್ದರೆ ಮಾರ್ಕ್ರಾಮ್ ಮಾತ್ರ ಇವರೊಂದಿಗೆ ಕೊಂಚ ಅಬ್ಬರಿಸಿದ್ದರು.
ಅಂಕಿಅಂಶಗಳು ಏನು ಹೇಳುತ್ತವೆ ಈ ಎರಡು ತಂಡಗಳು ಮೊದಲ ಬಾರಿಗೆ ಮುಖಾಮುಖಿಯಾಗುತ್ತಿವೆ ಆದರೆ ಈ ಎರಡು ತಂಡಗಳ ಆಟಗಾರರು ಈ ಹಿಂದೆಯೂ ಪರಸ್ಪರ ವಿರುದ್ಧ ಆಡಿದ್ದಾರೆ. ಲಕ್ನೋ ಆರಂಭಿಕ ಆಟಗಾರ ಕ್ವಿಂಟನ್ ಡಿ ಕಾಕ್ ಹೈದರಾಬಾದ್ ವಿರುದ್ಧ 10 ಇನ್ನಿಂಗ್ಸ್‌ಗಳಲ್ಲಿ 371 ರನ್ ಗಳಿಸಿದ್ದಾರೆ. ಹೈದರಾಬಾದ್ ವಿರುದ್ಧ ಕೆಎಲ್ ರಾಹುಲ್ 10 ಇನ್ನಿಂಗ್ಸ್‌ಗಳಲ್ಲಿ 265 ರನ್ ಗಳಿಸಿದ್ದಾರೆ.
ತಂಡಗಳು ಈ ಕೆಳಗಿನಂತಿವೆ: ಲಕ್ನೋ ಸೂಪರ್ ಜೈಂಟ್ಸ್: ಕೆಎಲ್ ರಾಹುಲ್ (ನಾಯಕ), ಮನನ್ ವೋಹ್ರಾ, ಎವಿನ್ ಲೂಯಿಸ್, ಮನೀಶ್ ಪಾಂಡೆ, ಕ್ವಿಂಟನ್ ಡಿ ಕಾಕ್, ರವಿ ಬಿಷ್ಣೋಯ್, ದುಷ್ಮಂತ್ ಚಮೀರಾ, ಶಹಬಾಜ್ ನದೀಮ್, ಮೊಹ್ಸಿನ್ ಖಾನ್, ಮಯಾಂಕ್ ಯಾದವ್, ಅಂಕಿತ್ ರಜಪೂತ್, ಅವೇಶ್ ಖಾನ್, ಆಂಡ್ರ್ಯೂ ಟೈ, ಮಾರ್ಕಸ್ ಸ್ಟೋನಿಸ್ ಕೈಲ್ ಮೇಯರ್ಸ್, ಕರಣ್ ಶರ್ಮಾ, ಕೃಷ್ಣಪ್ಪ ಗೌತಮ್, ಆಯುಷ್ ಬದೋನಿ, ದೀಪಕ್ ಹೂಡಾ, ಕೃನಾಲ್ ಪಾಂಡ್ಯ, ಜೇಸನ್ ಹೋಲ್ಡರ್.
ಸನ್‌ರೈಸರ್ಸ್ ಹೈದರಾಬಾದ್: ಕೇನ್ ವಿಲಿಯಮ್ಸನ್ (ನಾಯಕ), ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಐಡೆನ್ ಮಾರ್ಕ್ರಾಮ್, ನಿಕೋಲಸ್ ಪೂರನ್, ಅಬ್ದುಲ್ ಸಮದ್, ಪ್ರಿಯಮ್ ಗಾರ್ಗ್, ವಿಷ್ಣು ವಿನೋದ್, ಗ್ಲೆನ್ ಫಿಲಿಪ್ಸ್, ಆರ್ ಸಮರ್ಥ್, ಶಶಾಂಕ್ ಸಿಂಗ್, ವಾಷಿಂಗ್ಟನ್ ಸುಂದರ್, ರೊಮೆರೊ ಶೆಫರ್ಡ್, ಮಾರ್ಕೊ ಯಾನ್ಸನ್, ಜೆ ಸುಚಿತ್ , ಶ್ರೇಯಸ್ ಗೋಪಾಲ್, ಭುವನೇಶ್ವರ್ ಕುಮಾರ್, ಸೀನ್ ಅಬಾಟ್, ಕಾರ್ತಿಕ್ ತ್ಯಾಗಿ, ಸೌರಭ್ ತಿವಾರಿ, ಫಜಲ್ಹಾಕ್ ಫಾರೂಕಿ, ಉಮ್ರಾನ್ ಮಲಿಕ್, ಟಿ ನಟರಾಜನ್.
ಇದನ್ನೂ ಓದಿ:IPL 2022: ಐಪಿಎಲ್ 2022 ಪಾಯಿಂಟ್ ಟೇಬಲ್ನಲ್ಲಿ ದೊಡ್ಡ ಬದಲಾವಣೆ: ಆರೆಂಜ್, ಪರ್ಪಲ್ ಕ್ಯಾಪ್ ಯಾರ ಕೈಯಲ್ಲಿದೆ?