AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Niharika Konidela: ‘ನಿಹಾರಿಕಾಗೂ ಡ್ರಗ್ಸ್ ಪ್ರಕರಣಕ್ಕೂ ಸಂಬಂಧವಿಲ್ಲ’; ಚಿರು ಸಹೋದರ ನಾಗಬಾಬು ಹೇಳಿಕೆ

Naga Babu | Banjara Hills: ನಿಹಾರಿಕಾ ಕೊನಿಡೇಲಾ ಅವರನ್ನು ಹೈದರಾಬಾದ್ ಪೊಲೀಸರು ಬಂಧಿಸಿರುವ ಬಗ್ಗೆ ಅಧಿಕೃತ ವಿಡಿಯೋ ಹೇಳಿಕೆಯನ್ನು ನಾಗಬಾಬು ಬಿಡುಗಡೆ ಮಾಡಿದ್ದಾರೆ. ನಿಹಾರಿಕಾ ಪಬ್​ನಲ್ಲಿದ್ದುದನ್ನು ಖಚಿತಪಡಿಸಿರುವ ನಾಗಬಾಬು ಅಲ್ಲಿ ಅವರು ತೆರಳಿದ್ದು ಕೇವಲ ಕಾಕತಾಳೀಯ ಎಂದಿದ್ದಾರೆ.

Niharika Konidela: ‘ನಿಹಾರಿಕಾಗೂ ಡ್ರಗ್ಸ್ ಪ್ರಕರಣಕ್ಕೂ ಸಂಬಂಧವಿಲ್ಲ’; ಚಿರು ಸಹೋದರ ನಾಗಬಾಬು ಹೇಳಿಕೆ
ನಾಗಬಾಬು (ಎಡ ಚಿತ್ರ), ನಿಹಾರಿಕಾ ಕೊನಿಡೇಲಾ (ಬಲ ಚಿತ್ರ)
TV9 Web
| Edited By: |

Updated on: Apr 03, 2022 | 5:04 PM

Share

ಆಂಧ್ರಪ್ರದೇಶದ ಚಿತ್ರರಂಗದ ತಾರಾ ವಲಯದಲ್ಲಿ ಡ್ರಗ್ಸ್ ಪ್ರಕರಣ ಮತ್ತೆ ಸುದ್ದಿಯಾಗಿದ್ದು, ತೀವ್ರ ಸಂಚಲನ ಸೃಷ್ಟಿಸಿದೆ. ಹೈದರಾಬಾದ್ ನಗರದ ಬಂಜಾರಾ ಹಿಲ್ಸ್​​ನಲ್ಲಿ ಖಾಸಗಿ ಹೋಟೆಲ್​ನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿಗೆ ಪೊಲೀಸರು ದಾಳಿ ನಡೆಸಿದ್ದು, ಹಲವರನ್ನು ವಶಕ್ಕೆ ಪಡೆದಿದ್ದಾರೆ. ಇದರಲ್ಲಿ ನಟ, ನಿರ್ಮಾಪಕ ನಾಗಬಾಬು (Naga Babu) ಅವರ ಪುತ್ರಿ ನಿಹಾರಿಕಾ ಕೊನಿಡೇಲಾ (Niharika Konidela) ಕೂಡ ಇದ್ದರು. ಆದರೆ ಈ ಪ್ರಕರಣದ ಬಗ್ಗೆ ಹಲವು ಮಾಹಿತಿಗಳು ಹೊರಬರುತ್ತಿರುವ ಹಿನ್ನೆಲೆಯಲ್ಲಿ ತಮ್ಮ ಕಡೆಯಿಂದ ಪುತ್ರಿಯ ಕುರಿತು ನಾಗಬಾಬು ಸ್ಪಷ್ಟನೆ ನೀಡಿದ್ದಾರೆ. ನಿಹಾರಿಕಾ ಕೊನಿಡೇಲಾ ಅವರನ್ನು ಹೈದರಾಬಾದ್ ಪೊಲೀಸರು ಬಂಧಿಸಿರುವ ಬಗ್ಗೆ ಅಧಿಕೃತ ವಿಡಿಯೋ ಹೇಳಿಕೆಯನ್ನು ನಾಗಬಾಬು ಬಿಡುಗಡೆ ಮಾಡಿದ್ದಾರೆ. ನಿಹಾರಿಕಾ ಪಬ್​ನಲ್ಲಿದ್ದುದನ್ನು ಖಚಿತಪಡಿಸಿರುವ ನಾಗಬಾಬು, ಆದರೆ ನಿಹಾರಿಕಾ ಈ ಪ್ರಕರಣದಲ್ಲಿಲ್ಲ. ಅವರು ಕ್ಲೀನ್​ ಹ್ಯಾಂಡ್. ನಿಹಾರಿಕಾ ಅಲ್ಲಿ ತೆರಳಿದ್ದುದು ಕೇವಲ ಕಾಕತಾಳೀಯ ಎಂದಿದ್ದಾರೆ.

ನಾಗಬಾಬು ವಿಡಿಯೋ ಸಂದೇಶದಲ್ಲೇನಿದೆ?

ವಿಡಿಯೋ ಹೇಳಿಕೆಯಲ್ಲಿ ನಾಗಬಾಬು, “ನನ್ನ ಮಗಳು ನಿಹಾರಿಕಾ ನಿನ್ನೆ ರಾತ್ರಿ ಪಂಚತಾರಾ ಹೋಟೆಲ್‌ನ ಪಬ್‌ನಲ್ಲಿದ್ದರು. ಬಂದ್​ ಮಾಡುವ ಸಮಯದ ನಂತರವೂ ಕಾರ್ಯನಿರ್ವಹಿಸುತ್ತಿದ್ದ ಕಾರಣ, ಪಬ್ ನಡೆಸುತ್ತಿದ್ದ ಆಡಳಿತ ಮಂಡಳಿಯನ್ನು ಪೊಲೀಸರು ಬಂಧಿಸಿದ್ದಾರೆ. ನಿಹಾರಿಕಾ ಡ್ರಗ್ಸ್ ಪ್ರಕರಣದಲ್ಲಿ ಭಾಗಿಯಾಗಿಲ್ಲ, ವಶಪಡಿಸಿಕೊಂಡ ಡ್ರಗ್ಸ್​ಗೂ ಆಕೆಗೂ ಸಂಬಂಧವಿಲ್ಲ ಎಂದು ಪೊಲೀಸರು ಖಚಿತಪಡಿಸಿದ್ದಾರೆ’’ ಎಂದು ಹೇಳಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬುತ್ತಿರುವ ವದಂತಿಗಳಿಗೆ ಕಿವಿಗೊಡಬೇಡಿ ಎಂದು ಮನವಿ ಮಾಡಿರುವ ನಾಗಬಾಬು, ಅಂತಹ ಸುದ್ದಿಗಳನ್ನು ಹಬ್ಬಿಸಬೇಡಿ ಎಂದೂ ಹೇಳಿದ್ದಾರೆ. ಭಾನುವಾರ ಮುಂಜಾನೆ, ಬಂಜಾರಾ ಹಿಲ್ಸ್‌ನ ಖಾಸಗಿ ಪಬ್‌ನಲ್ಲಿ ಅವಧಿ ಮೀರಿದರೂ ಪಾರ್ಟಿ ಮಾಡುತ್ತಿದ್ದ ಸುಮಾರು 150 ಜನರನ್ನು ಬಂಧಿಸಲಾಗಿತ್ತು. ಈ ವೇಳೆ ಅಲ್ಲಿ ನಿಷೇಧಿತ ವಸ್ತುಗಳು ಪತ್ತೆಯಾಗಿರುವುದಾಗಿ ಪೊಲೀಸ್ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಎಲ್ಲರನ್ನೂ ಟೆಸ್ಟ್​ಗೆ ಒಳಪಡಿಸಲಾಗಿದ್ದು, ನಿಹಾರಿಕಾರ ಫಲಿತಾಂಶದ ಬಗ್ಗೆ ಇನ್ನಷ್ಟೇ ಮಾಹಿತಿ ಬರಬೇಕಿದೆ.

ನಾಗಬಾಬು ವಿಡಿಯೋ ಹೇಳಿಕೆ:

ಪ್ರಕರಣದ ಬಗ್ಗೆ ಗಂಭೀರ ನಿಲುವು ತಳೆದ ತೆಲಂಗಾಣ ಸರ್ಕಾರ:

ಸೆಲೆಬ್ರಿಟಿ ಮಕ್ಕಳು ಸೇರಿದಂತೆ ಹಲವರು ರೇವ್ ಪಾರ್ಟಿಯಲ್ಲಿ ಭಾಗಿಯಾಗಿದ್ದಾರೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಪ್ರಕರಣವನ್ನು ತೆಲಂಗಾಣ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಬಂಜಾರ ಹಿಲ್ಸ್ ಪೊಲೀಸ್ ಠಾಣೆಯಿಂದ ಸ್ವಲ್ಪ ದೂರದಲ್ಲಿರುವ ಪಬ್ ಬಗ್ಗೆ ಈ ಹಿಂದೆ ದೂರು ನೀಡಿದ್ದರೂ ಕ್ರಮ ಕೈಗೊಳ್ಳದಿರುವ ಬಗ್ಗೆ ಅಧಿಕಾರಿಗಳು ಗಂಭೀರವಾಗಿದ್ದಾರೆ. ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದ ಬಂಜಾರಾ ಹಿಲ್ಸ್ ಎಸಿಪಿ, ಸಿಐ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಪೊಲೀಸ್ ಠಾಣೆ ಸಿಐ ಶಿವಚಂದ್ರ ಅವರನ್ನು ಅಮಾನತುಗೊಳಿಸಲಾಗಿದೆ. ಡ್ರಗ್ಸ್ ಅವ್ಯವಹಾರದ ಬಗ್ಗೆ ವಿವರಣೆ ನೀಡುವಂತೆ ಎಸಿಪಿಗೆ ಸಿಪಿ ಸಿ.ವಿ.ಆನಂದ್ ಸೂಚಿಸಿದ್ದಾರೆ. ಪ್ರಕರಣದ ಬಗ್ಗೆ ಮತ್ತಷ್ಟು ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಇದನ್ನೂ ಓದಿ: Niharika Konidela: ರೇವ್​ ಪಾರ್ಟಿ ಮೇಲೆ ಪೊಲೀಸ್​ ದಾಳಿ; ಚಿರಂಜೀವಿ ಕುಟುಂಬದ ಮನೆ ಮಗಳು ನಿಹಾರಿಕಾ ಕೊನಿಡೆಲಾ ವಶಕ್ಕೆ​

ರಸೆಲ್ ಸಿಕ್ಸರ್​ಗಳಿಗಿಂತ ಹೆಚ್ಚು ಸದ್ದು ಮಾಡಿದ ಶಾರುಖ್ ಫ್ಯಾಮಿಲಿ!

ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!