ಸೇಲ್ಸ್ ಮ್ಯಾನ್ ಕುತ್ತಿಗೆಗೆ ಲಾಂಗ್ ಇಟ್ಟು, ಹಣದ ಜೊತೆ ಚೆಕ್ ಕಿತ್ತು ಕ್ಷಣಾರ್ಧದಲ್ಲಿ ಪರಾರಿಯಾದ ಖದೀಮರು

| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 08, 2023 | 10:36 AM

ಸೇಲ್ಸ್ ಮ್ಯಾನ್ ಕುತ್ತಿಗೆಗೆ ಲಾಂಗ್ ಇಟ್ಟು, ಹಣದ ಜೊತೆ ಚೆಕ್ ಕಿತ್ತು ಕ್ಷಣಾರ್ಧದಲ್ಲಿ ಪರಾರಿಯಾದ ಘಟನೆ ಜಿಲ್ಲೆಯ ನೆಲಮಂಗಲ ತಾಲೂಕಿನ ಇಸ್ಲಾಂಪುರ ಕ್ರಾಸ್ ಬಳಿ ನಡೆದಿದೆ.

ಸೇಲ್ಸ್ ಮ್ಯಾನ್ ಕುತ್ತಿಗೆಗೆ ಲಾಂಗ್ ಇಟ್ಟು, ಹಣದ ಜೊತೆ ಚೆಕ್ ಕಿತ್ತು ಕ್ಷಣಾರ್ಧದಲ್ಲಿ ಪರಾರಿಯಾದ ಖದೀಮರು
ಸೆಲ್ಸ್​ಮ್ಯಾನ್​
Follow us on

ಬೆಂಗಳೂರು ಗ್ರಾಮಾಂತರ: ಸೇಲ್ಸ್ ಮ್ಯಾನ್ ಕುತ್ತಿಗೆಗೆ ಲಾಂಗ್ ಇಟ್ಟು, ಹಣದ ಜೊತೆ ಚೆಕ್ ಕಿತ್ತು ಕ್ಷಣಾರ್ಧದಲ್ಲಿ ಪರಾರಿಯಾದ ಘಟನೆ ಜಿಲ್ಲೆಯ ನೆಲಮಂಗಲ(Nelamangala) ತಾಲೂಕಿನ ಇಸ್ಲಾಂಪುರ ಕ್ರಾಸ್ ಬಳಿ ನಡೆದಿದೆ. SMS ಏಜೆನ್ಸಿ ಹಿಂದೂಸ್ಥಾನ್ ಯೂನಿವರ್ಸ್ ಸೇಲ್ಸ್ ಮ್ಯಾನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಕುಮಾರ್ ಎಂಬಾತನ ಬಳಿ ಪ್ರತ್ಯೇಕ ಎರಡು ಬೈಕ್​ನಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು, ಕುತ್ತಿಗೆಗೆ ಲಾಂಗ್ ಇಟ್ಟು, 10ಸಾವಿರ ನಗದು 20ಸಾವಿರದ ಚೆಕ್ ಕಿತ್ತುಕೊಂಡು ಕ್ಷಣಾರ್ಧದಲ್ಲಿ ಪರಾರಿಯಾಗಿದ್ದಾರೆ. ಸ್ಥಳಕ್ಕೆ ನೆಲಮಂಗಲ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ದೇವಸ್ಥಾನದ ಹುಂಡಿ ಹಣ ಹಾಗೂ ಚಿನ್ನ ,ಬೆಳ್ಳಿ ಆಭರಣ ಕಳ್ಳತನ

ರಾಯಚೂರು: ಜಿಲ್ಲೆಯ ಸಿರವಾರ ತಾಲ್ಲೂಕಿನ ಕುರಕುಂದ ಗ್ರಾಮದಲ್ಲಿ ದೇವಸ್ಥಾದ ಹುಂಡಿ ಹಣ ಹಾಗೂ ಚಿನ್ನ ,ಬೆಳ್ಳಿ ಆಭರಣ ಕಳ್ಳತನ ಮಾಡಿದ ಘಟನೆ ನಿನ್ನೆ(ಜು.7) ತಡರಾತ್ರಿ ನಡೆದಿದೆ. ಕುರುಕುಂದ ಗ್ರಾಮದಲ್ಲಿನ ಯಲ್ಲಮ್ಮ ದೇವಿ ದೇವಸ್ಥಾನದ ಗರ್ಭಗುಡಿ ಹೊರಭಾಗದಲ್ಲಿರುವ ಹುಂಡಿಯನ್ನ ರಾಡ್​ನಿಂದ ಒಡೆದು ಸಾವಿರಾರು ರೂಪಾಯಿಯ ಜೊತೆ ಗರ್ಭಗುಡಿಯಲ್ಲಿನ ದೇವರ ಮೂರ್ತಿಯ ಮೇಲಿದ್ದ ಚಿನ್ನಾಭರಣ ಹಾಗೂ ಬೆಳ್ಳಿ ಆಭರಣಗಳನ್ನು ಕಳ್ಳತನ ಮಾಡಿದ್ದು, ಸ್ಥಳೀಯರೇ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ಸಿರವಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:Tomato theft: ಟೊಮೆಟೊ ಬೆಲೆ ಗಗನಕ್ಕೆ.. ತೋಟಕ್ಕೆ ನುಗ್ಗಿ ನೂರಾರು ಕೆಜಿ ಟೊಮೆಟೊ ಕಳ್ಳತನ

ಮಾದಕ ವಸ್ತು ಸಾಗಿಸುತ್ತಿದ್ದ ಇಬ್ಬರ ಬಂಧನ

ಬೀದರ್: ಮಾದಕ ವಸ್ತು ಅಕ್ರಮವಾಗಿ ಸಾಗಿಸುತ್ತಿದ್ದ ಗ್ಯಾಂಗ್ ಮೇಲೆ ದಾಳಿ ಬೀದರ್​ ಪೊಲೀಸರು ಕಾರ್ಯಾಚರಣೆ ಮಾಡಿದ್ದು, 49 ಲಕ್ಷ 90 ಸಾವಿರ ಮೌಲ್ಯದ 499 ಗ್ರಾಂ ನಷ್ಟು ಸೈಕೋಟ್ರೋಪಿಕ್ ಸಬ್​ಸ್ಟ್ಯಾನ್ಸ್​ ಎಂಡಿ ಮೆಥಾಂಫೆಟಮೈನ್ ಪೌಡರ್​ನ್ನು ಜಪ್ತಿ ಮಾಡಲಾಗಿದೆ. ಇದು ಮುಂಬೈನಿಂದ ಬೀದರ್ ಮಾರ್ಗವಾಗಿ ಹೈದ್ರಾಬಾದ್ ಗೆ ಸಾಗಾಟವಾಗುತ್ತಿದ್ದು, ಖಚಿತ ಮಾಹಿತಿ ಮೇರೆಗೆ ಹುಮ್ನಾಬಾದ್​ನ ರಾಷ್ಟ್ರೀಯ ಹೆದ್ದಾರಿ 65 ರ ಬಳಿ ಪೋಲಿಸರು ಜಪ್ತಿ ಮಾಡಿದ್ದಾರೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ