AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಕ್ರಮಗಳಿಗೆ ಬಿದ್ದಿಲ್ಲ ಬ್ರೇಕ್; ಕೈದಿಗಳ ಕಳ್ಳಾಟಕ್ಕೆ ಪೋಲೀಸರೇ ಸಾಥ್

ಜೈಲಿನಲ್ಲಿ ನಡೆಯುವ ಅಕ್ರಮಗಳಿಗೆ ಇನ್ನೂ ಬ್ರೇಕ್ ಬಿದ್ದಿಲ್ಲ. ಕೈದಿಗಳ ಕಳ್ಳಾಟಕ್ಕೆ ಪೋಲೀಸರೇ ಸಾಥ್​ ನೀಡುತ್ತಿದ್ದಾರೆ. ಹೌದು ಪರಪ್ಪನ ಅಗ್ರಹಾರದಲ್ಲಿ ಮಾದಕ ವಸ್ತು ಹಾಗೂ ಮೊಬೈಲ್ ಸಾಗಿಸಲು ಪೊಲೀಸರೇ ಬೆಂಬಲ ನೀಡುತ್ತಿದ್ದಾರೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಕ್ರಮಗಳಿಗೆ ಬಿದ್ದಿಲ್ಲ ಬ್ರೇಕ್; ಕೈದಿಗಳ ಕಳ್ಳಾಟಕ್ಕೆ ಪೋಲೀಸರೇ ಸಾಥ್
ಪರಪ್ಪನ ಅಗ್ರಹಾರ
ಸೈಯ್ಯದ್​ ನಿಜಾಮುದ್ದೀನ್​, ರಾಮನಗರ
| Updated By: ಕಿರಣ್ ಹನುಮಂತ್​ ಮಾದಾರ್|

Updated on: Jul 06, 2023 | 2:10 PM

Share

ಬೆಂಗಳೂರು: ಜೈಲಿನಲ್ಲಿ ನಡೆಯುವ ಅಕ್ರಮಗಳಿಗೆ ಇನ್ನೂ ಬ್ರೇಕ್ ಬಿದ್ದಿಲ್ಲ. ಕೈದಿಗಳ ಕಳ್ಳಾಟಕ್ಕೆ ಪೋಲೀಸರೇ ಸಾಥ್​ ನೀಡುತ್ತಿದ್ದಾರೆ. ಹೌದು ಪರಪ್ಪನ ಅಗ್ರಹಾರ(Parappana Agrahara)ದಲ್ಲಿ ಮಾದಕ ವಸ್ತು ಹಾಗೂ ಮೊಬೈಲ್ ಸಾಗಿಸಲು ಪೊಲೀಸರೇ ಬೆಂಬಲ ನೀಡುತ್ತಿದ್ದಾರೆ. ಕೈದಿಗಳಾದ ಗಿರೀಶ್ ಮತ್ತು ರಾಮ್ ಭವನ್​ರನ್ನ ಪೋಲೀಸರು ಕೋರ್ಟ್​ಗೆ ಕರೆದುಕೊಂಡು ಹೋಗಿದ್ದರು. ಬಳಿಕ ಕೋರ್ಟ್​ನಿಂದ ಮರಳಿ ಜೈಲಿಗೆ ವಾಪಸ್ ಬಂದಿದ್ದ ಆರೋಪಿಗಳನ್ನ ಜೈಲಿನ ಸಿಬ್ಬಂದಿಯವರು ತಪಾಸಣೆ ಮಾಡಿದ್ದು, ಈ ವೇಳೆ ಎಂಟು ಮೊಬೈಲ್ ಹಾಗೂ 57 ಗ್ರಾಂ ಬ್ರೌನ್ ಶುಗರ್ ಜಪ್ತಿ ಮಾಡಲಾಗಿದೆ.

ತೊಡೆ ಭಾಗದಲ್ಲಿ ಬಚ್ಚಿಟ್ಟಿದ್ದ ಮೊಬೈಲ್ ಹಾಗೂ ಬ್ರೌನ್ ಶುಗರ್ ಬೆಳಕಿಗೆ

ಜೈಲಿನಿಂದ ಬಂದ ಖೈದಿಗಳನ್ನ ತಪಾಸಣೆ ಸಂದರ್ಭದಲ್ಲಿ ತೊಡೆ ಭಾಗದಲ್ಲಿ ಕಪ್ಪು ಬಣ್ಣದ ಟೇಪ್​ನಿಂದ ಸುತ್ತಿಕೊಂಡು ಮೊಬೈಲ್ ಮತ್ತು ಮಾದಕ ವಸ್ತುವನ್ನ ಬಚ್ಚಿಟ್ಟಿದ್ದು ಬೆಳಕಿಗೆ ಬಂದಿದೆ. ಗಿರೀಶ್ ಮತ್ತು ರಾಮ್ ಭವಾನ್​ನ್ನು ವಶಕ್ಕೆ ಪಡೆದು ಪೋಲೀಸರು ವಿಚಾರಣೆ ನಡೆಸಿದ ವೇಳೆ ಎಸ್ಕಾರ್ಟ್ ನೀಡಿದ್ದ ಪೊಲೀಸರ ಕಳ್ಳಾಟ ಬಯಲಾಗಿದೆ. ಕೋರ್ಟ್ ಗೆ ಹೋಗಿ ವಾಪಸ್ ಬರುವಾಗ ಆರೋಪಿ ಗಿರೀಶ್ ಸ್ನೇಹಿತರನ್ನು ಸಂಪರ್ಕ ಮಾಡಿದ್ದ. ಇದಕ್ಕೆ ಜೊತೆಗಿದ್ದ ಪೊಲೀಸ್ ಸಿಬ್ಬಂದಿಗಳಾದ ಸಾಥ್ ನೀಡಿದ್ದರು.

ಇದನ್ನೂ ಓದಿ:KP Chowdary: ಡ್ರಗ್ಸ್​ ಮಾರಾಟ ಮಾಡುತ್ತಿದ್ದ ‘ಕಬಾಲಿ’ ಸಿನಿಮಾ ನಿರ್ಮಾಪಕ ಕೆ.ಪಿ. ಚೌದರಿ ಬಂಧನ; 90 ಪಾಕೆಟ್​ ಮಾದಕ ವಸ್ತು ವಶ

ಕೈದಿಗಳ ಜೊತೆ ಶಾಮೀಲಾಗಿದ್ದ ಪೋಲೀಸ್ ಸಿಬ್ಬಂದಿ

ಕೊಲೆ ಹಾಗೂ ಇನ್ನಿತರ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಗಿರೀಶ್ ಹಾಗೂ ಪೋಕ್ಸೋ ಕೇಸ್​ನಲ್ಲಿ ಜೈಲು ಪಾಲಾಗಿದ್ದ ರಾಮ್ ಭವನ್​ನ್ನ ಕೋರ್ಟ್​ಗೆ ಕರೆದುಕೊಂಡು ವಾಪಾಸ್​ ಬರುವಾಗ ಪೊಲೀಸ್ ಸಿಬ್ಬಂದಿ ಉಮೇಶ್ ಎಂಬಾತ ಕೈದಿಗಳ ಜೊತೆ ಶಾಮೀಲಾಗಿದ್ದ. ಕೋರ್ಟ್ ಬಳಿ ಕೈದಿ ಗಿರೀಶ್​ಗೆ ಆತನ ಸ್ನೇಹಿತರು ಮೊಬೈಲ್ ಹಾಗೂ ಮಾದಕ ವಸ್ತುಗಳನ್ನ ಕೊಟ್ಟರೇ, ಮತ್ತೋರ್ವ ಖೈದಿ ರಾಮ್ ಭವನ್​ಗೆ ಆತನ ಪ್ರೇಯಸಿ ಮೊಬೈಲ್ ನೀಡಿದ್ದಳು. ಇನ್ನು ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಮುಂದುವರೆಸಿರುವ ಪರಪ್ಪನ ಅಗ್ರಹಾರ ಪೊಲೀಸರು, ಕೋರ್ಟ್​ಗೆ ಹಾಜರಾಗಿದ್ದಾಗ ಕೈದಿಗಳಿಗೆ ಮೊಬೈಲ್, ಮಾದಕ ವಸ್ತು ನೀಡಿದ್ದವರಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

ಬೆಂಗಳೂರು ನಗರದಲ್ಲಿ ಹೊಸ ಡ್ರಗ್​ ರಾಕೆಟ್ ಪತ್ತೆ ಪ್ರಕರಣ; ಪ್ರಮುಖ ಆರೋಪಿ ಅರೆಸ್ಟ್​

ಬೆಂಗಳೂರು: ಮಹಾನಗರದಲ್ಲಿ ಹೊಸ ಡ್ರಗ್​ ರಾಕೆಟ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಗುಲಾಂ ಸಿಂಗ್​ನ್ನು ಪೊಲೀಸರು ಬಂಧಿಸಿದ್ದಾರೆ. ಮಾದಕವಸ್ತು ನೆನಸಿಟ್ಟು, ನೀರು ಸರಬರಾಜು ಮಾಡುತ್ತಿದ್ದ ಆರೋಪಿ. ರಾಜಸ್ಥಾನದಿಂದ ಮಾದಕವಸ್ತು ಒಪಿಎಂ, ಪಪ್ಪಿ ಎಂಬ ಹೊಸ ಮಾದರಿ ಡ್ರಗ್ಸ್ ತರಿಸುತ್ತಿದ್ದ. ಬಳಿಕ ಮಿಕ್ಸರ್​ನಲ್ಲಿ ಒಪಿಎಂ, ಪಪ್ಪಿ ಎರಡನ್ನೂ ಪುಡಿ ಮಾಡಿ, ಪೌಡರ್​ನ್ನು ಪುನಃ ನೀರಿಗೆ ಹಾಕಿ ನೆನಸಿಡುತ್ತಿದ್ದ. 1 ಲೀಟರ್ ಡ್ರಗ್ಸ್ ನೀರು 100 ಲೀಟರ್ ನೀರಿಗೆ ಬೆರೆಸಿ, ಆಯ್ದ ಪಾರ್ಟಿಗಳಲ್ಲಿ ನೀರಿನ ರೂಪದಲ್ಲೇ ಸರಬರಾಜು ಮಾಡುತ್ತಿದ್ದ ಆರೋಪಿಯನ್ನ ಬಂಧಿಸಿದ್ದು, ಆರೋಪಿ ಬಳಿಯಿದ್ದ 55 ಕೆಜಿ‌ ಡ್ರಗ್ಸ್​ನ್ನು​ ಜಪ್ತಿ ಮಾಡಿದ್ದಾರೆ.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಧಾನಸೌಧದ ವಿದ್ಯುತ್ ದೀಪಾಲಂಕಾರ ನೋಡಲು ತಂಡೋಪತಂಡವಾಗಿ ಬಂದ ಜನ
ವಿಧಾನಸೌಧದ ವಿದ್ಯುತ್ ದೀಪಾಲಂಕಾರ ನೋಡಲು ತಂಡೋಪತಂಡವಾಗಿ ಬಂದ ಜನ
ಬೆಂಗಳೂರಿನಲ್ಲಿ ಸಂಭವಿಸಿದ ನಿಗೂಢ ಸ್ಫೋಟಕ್ಕೆ ಕಾರಣವೇನು? DCM ಹೇಳಿದ್ದಿಷ್ಟು
ಬೆಂಗಳೂರಿನಲ್ಲಿ ಸಂಭವಿಸಿದ ನಿಗೂಢ ಸ್ಫೋಟಕ್ಕೆ ಕಾರಣವೇನು? DCM ಹೇಳಿದ್ದಿಷ್ಟು
ದರ್ಶನ್ ಬಿಡುಗಡೆ ಆಗದಿದ್ದರೆ ಸರ್ಕಾರಕ್ಕೆ ನಷ್ಟ: ಲಾಜಿಕ್ ಮುಂದಿಟ್ಟ ಉಮೇಶ್
ದರ್ಶನ್ ಬಿಡುಗಡೆ ಆಗದಿದ್ದರೆ ಸರ್ಕಾರಕ್ಕೆ ನಷ್ಟ: ಲಾಜಿಕ್ ಮುಂದಿಟ್ಟ ಉಮೇಶ್
ಎಕ್ಸ್​​ಪ್ರೆಸ್​ವೇನಲ್ಲಿ ಬೈಕ್​ ಸ್ಟಂಟ್, ಎರಡೂ ಬೈಕ್​ ಮುಖಾಮುಖಿ ಡಿಕ್ಕಿ
ಎಕ್ಸ್​​ಪ್ರೆಸ್​ವೇನಲ್ಲಿ ಬೈಕ್​ ಸ್ಟಂಟ್, ಎರಡೂ ಬೈಕ್​ ಮುಖಾಮುಖಿ ಡಿಕ್ಕಿ
ರಾಜಣ್ಣ ಪರ ಸಿದ್ದರಾಮಯ್ಯ ಮನವೊಲಿಸಿದ್ರೂ ಕೇಳಿಲ್ವಂತೆ ಹೈಕಮಾಂಡ್!
ರಾಜಣ್ಣ ಪರ ಸಿದ್ದರಾಮಯ್ಯ ಮನವೊಲಿಸಿದ್ರೂ ಕೇಳಿಲ್ವಂತೆ ಹೈಕಮಾಂಡ್!
ಮಕ್ಕಳನ್ನು ಕಚ್ಚಿದ್ದಕ್ಕೆ, ನಾಯಿಯ ಬೈಕ್​​ಗೆ ಕಟ್ಟಿ ಎಳೆದೊಯ್ದ ವ್ಯಕ್ತಿ
ಮಕ್ಕಳನ್ನು ಕಚ್ಚಿದ್ದಕ್ಕೆ, ನಾಯಿಯ ಬೈಕ್​​ಗೆ ಕಟ್ಟಿ ಎಳೆದೊಯ್ದ ವ್ಯಕ್ತಿ
ಚಿನ್ನಯ್ಯನಪಾಳ್ಯ ನಿಗೂಢ ಸ್ಫೋಟ: ಭಯಾನಕ ದೃಶ್ಯದ ಸಿಸಿಟಿವಿ ವಿಡಿಯೋ ಇಲ್ಲಿದೆ
ಚಿನ್ನಯ್ಯನಪಾಳ್ಯ ನಿಗೂಢ ಸ್ಫೋಟ: ಭಯಾನಕ ದೃಶ್ಯದ ಸಿಸಿಟಿವಿ ವಿಡಿಯೋ ಇಲ್ಲಿದೆ
ಇದ್ದಕ್ಕಿದ್ದಂತೆ ದೊಡ್ಡ ಸ್ಫೋಟವಾಯ್ತು ಎಂದ ಸ್ಥಳೀಯರು: ವಿಡಿಯೋ ನೋಡಿ
ಇದ್ದಕ್ಕಿದ್ದಂತೆ ದೊಡ್ಡ ಸ್ಫೋಟವಾಯ್ತು ಎಂದ ಸ್ಥಳೀಯರು: ವಿಡಿಯೋ ನೋಡಿ
ಅನುಮಾನಾಸ್ಪದ ಸ್ಫೋಟದ ಬಗ್ಗೆ ಪ್ರತ್ಯಕ್ಷದರ್ಶಿಗಳು ಹೇಳೋದೇನು ನೋಡಿ
ಅನುಮಾನಾಸ್ಪದ ಸ್ಫೋಟದ ಬಗ್ಗೆ ಪ್ರತ್ಯಕ್ಷದರ್ಶಿಗಳು ಹೇಳೋದೇನು ನೋಡಿ
ಒಬ್ಬರದ್ದು ಕಣ್ಣೀರು, ಇನ್ನೊಬ್ಬರದ್ದು ಹರಟೆ; ಒಂದೇ ಬ್ಯಾರಕ್​ನಲ್ಲಿ ಗ್ಯಾಂಗ
ಒಬ್ಬರದ್ದು ಕಣ್ಣೀರು, ಇನ್ನೊಬ್ಬರದ್ದು ಹರಟೆ; ಒಂದೇ ಬ್ಯಾರಕ್​ನಲ್ಲಿ ಗ್ಯಾಂಗ