Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾದಕ ವಸ್ತು ಸೇವೀಸುತ್ತೀರ ಎಂದವನಿಗೆ ಉತ್ತರ ಕೊಟ್ಟ ನಟಿ ಶ್ರುತಿ ಹಾಸನ್

Shruti Haasan: ನೀವು ಮಾದಕ ವಸ್ತು ಸೇವಿಸುತ್ತೀರ ತಾನೆ? ಎಂದು ಪ್ರಶ್ನಿಸಿದ ವ್ಯಕ್ತಿಗೆ ಉತ್ತರಿಸಿದ್ದಾರೆ ನಟಿ ಶ್ರುತಿ ಹಾಸನ್.

ಮಾದಕ ವಸ್ತು ಸೇವೀಸುತ್ತೀರ ಎಂದವನಿಗೆ ಉತ್ತರ ಕೊಟ್ಟ ನಟಿ ಶ್ರುತಿ ಹಾಸನ್
ಶ್ರುತಿ ಹಾಸನ್
Follow us
ಮಂಜುನಾಥ ಸಿ.
|

Updated on: Jun 22, 2023 | 8:06 PM

ಕಮಲ್ ಹಾಸನ್ (Kamal Haasan) ಪುತ್ರಿ ಶ್ರುತಿ ಹಾಸನ್ (Shruti Haasan) ಅಪ್ಪನ ನೆರಳು ದಾಟಿ ಚಿತ್ರರಂಗದಲ್ಲಿ ತಮ್ಮದೇ ಆದ ಹೆಜ್ಜೆ ಗುರುತು ಮೂಡಿಸುತ್ತಿದ್ದಾರೆ. ಈಗಾಗಲೇ ಹಲವು ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲಿ ನಟಿಸಿರುವ ಶ್ರುತಿ ಹಾಸನ್ ಸಹವರ್ತಿ ನಟಿಯರಂತಲ್ಲದೆ, ಖಾಸಗಿ ಬದುಕಿನ ಬಗ್ಗೆ ಅತಿಯಾದ ಮಡಿವಂತಿಕೆ ಇಟ್ಟುಕೊಳ್ಳದೆ ಸಾಮಾಜಿಕ ಜಾಲತಾಣಗಳಲ್ಲಿ ಪರ್ಸನಲ್ ವಿಷಯಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಬಾಯ್​ಫ್ರೆಂಡ್ (Boyfriend)​ ಜೊತೆಗಿನ ಚಿತ್ರಗಳು, ತಮ್ಮ ಸಂಗೀತದ ವಿಡಿಯೋ ತಮ್ಮ ಟ್ಯಾಟೂ ಹೀಗೆ. ಇತ್ತೀಚೆಗೆ ಅಭಿಮಾನಿಗಳೊಟ್ಟಿಗೆ ಇನ್​ಸ್ಟಾಗ್ರಾಂನಲ್ಲಿ ಸಂವಾದ ಮಾಡಿದ ಶ್ರುತಿ ಹಾಸನ್​ಗೆ ಮಾದಕ ವಸ್ತು ಸೇವನೆ ಬಗ್ಗೆ ಪ್ರಶ್ನೆ ಎದುರಾಗಿದೆ.

ಶ್ರುತಿ ಹಾಸನ್ ಅನ್ನು ವ್ಯಕ್ತಿಯೊಬ್ಬ ನೀನು ಖಂಡಿತ ಗಾಂಜಾ ಸೇವನೆ ಮಾಡುತ್ತೀಯ ಅಲ್ಲವೆ? ಎಂದು ಪ್ರಶ್ನೆ ಮಾಡಿದ್ದಾನೆ. ಆ ವ್ಯಕ್ತಿಗೆ ಸಮಾಧಾನವಾಗಿಯೇ ಉತ್ತರಿಸಿರುವ ಶ್ರುತಿ ಹಾಸನ್, ”ಇಲ್ಲ ನಾನು ಗಾಂಜಾ ಸೇದುವುದಿಲ್ಲ. ಮದ್ಯ ಸಹ ಸೇವಿಸುವುದಿಲ್ಲ. ಯಾವುದೇ ರೀತಿಯ ಮಾದಕ ವಸ್ತುಗಳನ್ನು ಸಹ ಸೇವಿಸುವುದಿಲ್ಲ. ನಾನು ಮಾದಕ ವಸ್ತು ರಹಿತ ಬದುಕು ಬದುಕುತ್ತಿದ್ದೇನೆ. ಆ ಬಗ್ಗೆ ನನಗೆ ಬಹಳ ಸಂತೋಷವಿದೆ” ಎಂದಿದ್ದಾರೆ.

ಶ್ರುತಿ ಹಾಸನ್ ಕುಡಿತ, ಸಿಗರೇಟು ಅಥವಾ ಯಾವುದೇ ರೀತಿಯ ಮಾದಕ ವಸ್ತುವಿನಿಂದ ಈಗ ದೂರ ಇದ್ದಾರೆ. ಆದರೆ ಹಿಂದೊಮ್ಮೆ ಕುಡಿತದ ಚಟ ಅಂಟಿಸಿಕೊಂಡಿದ್ದರು. ಸ್ವತಃ ಅವರೇ ಒಮ್ಮೆ ಹೇಳಿಕೊಂಡಿದ್ದಂತೆ ಶ್ರುತಿ ಹಾಸನ್​ಗೆ ಕುಡಿತದ ಚಟ ವಿಪರೀತವಾಗಿ ಅಂಟಿಕೊಂಡಿತ್ತಂತೆ. ಪ್ರತಿದಿನವೂ ಕುಡಿಯುತ್ತಿದ್ದರಂತೆ. ಶೂಟಿಂಗ್ ಇಲ್ಲದ ಸಮಯದಲ್ಲಂತೂ ಇಡೀ ರಾತ್ರಿ ಕುಡಿಯುತ್ತಾ ಪಾರ್ಟಿ ಮಾಡುತ್ತಿದ್ದರಂತೆ ಆದರೆ ಆರೋಗ್ಯ ಸಮಸ್ಯೆ ಉಲ್ಬಣಿಸಿದ ಕಾರಣ ಶ್ರುತಿ ಹಾಸನ್ ಕುಡಿತಕ್ಕೆ ಗುಡ್ ಬೈ ಹೇಳಿ ಆರೋಗ್ಯ ಕಾಳಜಿ ಕಡೆ ಹೆಚ್ಚು ಗಮನ ವಹಿಸಿದ್ದಾರೆ.

ಇದನ್ನೂ ಓದಿ:ಧನುಶ್-ಐಶ್ವರ್ಯಾ ವಿಚ್ಛೇದನದ ಬಗ್ಗೆ ಮೌನ ಮುರಿದ ನಟಿ ಶ್ರುತಿ ಹಾಸನ್

ಪ್ರಭಾಸ್ ಜೊತೆಗೆ ಸಲಾರ್ ಸೇರಿದಂತೆ ಇನ್ನೂ ಕೆಲವು ಸಿನಿಮಾಗಳಲ್ಲಿ ಶ್ರುತಿ ಹಾಸನ್ ನಟಿಸುತ್ತಿದ್ದಾರೆ. ಗಾಯಕಿಯೂ ಆಗಿರುವ ಶ್ರುತಿ ಹಾಸನ್ ತಾವೇ ಇಂಗ್ಲೀಷ್ ಹಾಡುಗಳನ್ನು ಬರೆದು ರಾಗ ಸಂಯೋಜಿಸಿ ರೆಕಾರ್ಡ್ ಸಹ ಮಾಡುತ್ತಿದ್ದಾರೆ. ಬಾಯ್​ಫ್ರೆಂಡ್ ಜೊತೆಗೆ ಲಿವ್ ಇನ್ ರಿಲೇಷನ್​ಶಿಪ್​ನಲ್ಲಿರುವ ಶ್ರುತಿ ಹಾಸನ್ ಆಗಾಗ್ಗೆ ತಮ್ಮ ಬಾಯ್​ಫ್ರೆಂಡ್ ಜೊತೆಗಿನ ಚಿತ್ರಗಳನ್ನು ಸಹ ಹಂಚಿಕೊಳ್ಳುತ್ತಿರುತ್ತಾರೆ. ಸಾಮಾನ್ಯ ನಟಿಯರಿಗಿಂತಲೂ ಭಿನ್ನವಾದ ತುಸು ವೈಲ್ಡ್ ಆದ ಚಿತ್ರಗಳನ್ನು ಶ್ರುತಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ ಹಾಗಾಗಿಯೇ ಅವರು ಮಾದಕ ವ್ಯಸನಿ ಆಗಿರಬಹುದು ಎಂಬ ಅನುಮಾನ ಕೆಲವರಿಗೆ ಬಂದಿರಬಹುದು.

ಶ್ರುತಿ ಹಾಸನ್ ಬಹಳ ಎಳೆಯ ವಯಸ್ಸಿನಲ್ಲಿಯೇ ಸಿನಿಮಾಗಳತ್ತ ಬಂದವರು. ತಂದೆ ಕಮಲ್ ಹಾಸನ್​ರ ಕೆಲವು ಸಿನಿಮಾಗಳಲ್ಲಿ ಹಾಡಿದ್ದ ಶ್ರುತಿ ಹಾಸನ್, ಹೇ ರಾಮ್ ಸಿನಿಮಾದಲ್ಲಿ ಬಾಲ ಕಲಾವಿದೆಯಾಗಿಯೂ ಕಾಣಿಸಿಕೊಂಡಿದ್ದಾರೆ. ಅದಾದ ಬಳಿಕ ಹಿಂದಿ ಸಿನಿಮಾ ಲಕ್​ ಮೂಲಕ ನಾಯಕಿಯಾಗಿ ಚಿತ್ರರಂಗ ಪ್ರವೇಶಿಸಿದ ಶ್ರುತಿಗೆ ಆರಂಭದಲ್ಲಿ ಯಶಸ್ಸು ಸಿಗಲಿಲ್ಲ ಬದಲಿಗೆ ಅವರ ನಟನೆಗೆ ಋಣಾತ್ಮಕ ವಿಮರ್ಶೆಗಳು ದೊರಕಿದವು. ಆದರೆ ಸಮಯ ಕಳೆದಂತೆ ತಮಿಳು ವಿಶೇಷವಾಗಿ ತಮಿಳು ಚಿತ್ರರಂಗದಲ್ಲಿ ಒಳ್ಳೆಯ ಅವಕಾಶಗಳು ಶ್ರುತಿಗೆ ದೊರಕಿದವು. ತಮಿಳಿನ ಸ್ಟಾರ್ ನಟ ಸೂರ್ಯ, ಧನುಶ್, ಅಜಿತ್, ವಿಜಯ್ ತೆಲುಗಿನ ಪವನ್ ಕಲ್ಯಾಣ್, ಸಿದ್ಧಾರ್ಥ್, ಅಲ್ಲು ಅರ್ಜುನ್, ರಾಮ್ ಚರಣ್, ಜೂ ಎನ್​ಟಿಆರ್, ರವಿತೇಜ, ಪ್ರಭಾಸ್, ಬಾಲಕೃಷ್ಣ, ಚಿರಂಜೀವಿ ಇನ್ನೂ ಹಲವು ಸ್ಟಾರ್ ನಟರೊಟ್ಟಿಗೆ ತೆರೆ ಹಂಚಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು