ಧನುಶ್-ಐಶ್ವರ್ಯಾ ವಿಚ್ಛೇದನದ ಬಗ್ಗೆ ಮೌನ ಮುರಿದ ನಟಿ ಶ್ರುತಿ ಹಾಸನ್

Dhanush-Aishwarya: ಧನುಶ್ ಹಾಗೂ ರಜನೀಕಾಂತ್ ಪುತ್ರಿ ಐಶ್ವರ್ಯಾ ವಿಚ್ಛೇದನ ಪಡೆದು ದೂರಾಗಲು ನಟಿ ಶ್ರುತಿ ಹಾಸನ್ ಕಾರಣ ಎನ್ನಲಾಗಿತ್ತು. ಈ ಬಗ್ಗೆ ಶ್ರುತಿ ಹಾಸನ್ ಸ್ಪಷ್ಟನೆ ನೀಡಿದ್ದಾರೆ.

ಧನುಶ್-ಐಶ್ವರ್ಯಾ ವಿಚ್ಛೇದನದ ಬಗ್ಗೆ ಮೌನ ಮುರಿದ ನಟಿ ಶ್ರುತಿ ಹಾಸನ್
ಐಶ್ವರ್ಯಾ-ಧನುಶ್
Follow us
ಮಂಜುನಾಥ ಸಿ.
|

Updated on: Apr 21, 2023 | 8:03 PM

ರಜನೀಕಾಂತ್ (Rajinikanth) ಪುತ್ರಿ ಐಶ್ವರ್ಯಾ (Aishwarya Rajinikanth) ಅವರನ್ನು ವಿವಾಹವಾಗಿದ್ದ ನಟ ಧನುಶ್ (Dhanush) 19 ವರ್ಷಗಳ ದಾಂಪತ್ಯದ ಬಳಿಕ ಕಳೆದ ವರ್ಷವಷ್ಟೆ ವಿಚ್ಛೇದನ ಘೋಷಿಸಿದ್ದರು. ಈ ಹಠಾತ್ ನಿರ್ಣಯ ಧನುಶ್ ಹಾಗೂ ರಜನೀಕಾಂತ್ ಅಭಿಮಾನಿಗಳಿಗೆ ಆಘಾತ ತಂದಿತು. ಇತ್ತೀಚೆಗಷ್ಟೆ ಐಶಾರಾಮಿ ಮನೆ ಕಟ್ಟಿದ್ದ ದಂಪತಿ ಹೀಗೆ ಹಠಾತ್ತನೆ ದೂರವಾಗಲು ಕಾರಣವೇನು ಎಂದು ಅಭಿಮಾನಿಗಳು ಪ್ರಶ್ನಿಸಿದ್ದರು. ಆದರೆ ಧನುಶ್ ಆಗಲಿ ಐಶ್ವರ್ಯಾ ಅವರಾಗಲಿ ಈ ಬಗ್ಗೆ ಬಹಿರಂಗವಾಗಿ ಮಾತನಾಡಿರಲಿಲ್ಲ. ಹಾಗಾಗಿ ಸಹಜವಾಗಿಯೇ ಹಲವು ಗಾಳಿ ಸುದ್ದಿಗಳು ಈ ಬಗ್ಗೆ ಹರಿದಾಡಿದ್ದವು, ಅದರಲ್ಲೊಂದು ನಟಿ ಶ್ರುತಿ ಹಾಸನ್ (Shruti Haasan) ಕಾರಣದಿಂದಲೇ ಧನುಶ್ ಹಾಗೂ ಐಶ್ವರ್ಯಾ ದೂರಾಗಿದ್ದಾರೆ ಎಂಬುದು. ಆದರೆ ಈ ಬಗ್ಗೆ ಇದೀಗ ನಟಿ ಶ್ರುತಿ ಹಾಸನ್ ಮಾತನಾಡಿದ್ದಾರೆ.

ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿರುವ ನಟಿ ಶ್ರುತಿ ಹಾಸನ್, ”ಧನುಶ್ ನನ್ನ ಆತ್ಮೀಯ ಗೆಳೆಯ. ನಾನು ಕಷ್ಟದಲ್ಲಿದ್ದ ಹಲವು ಸಂದರ್ಭದಲ್ಲಿ ಅವರು ನನಗೆ ಸಹಾಯ ಮಾಡಿದ್ದಾರೆ. ಗೆಳೆತನಕ್ಕೆ ಹೊರತಾಗಿ ನಮ್ಮಿಬ್ಬರ ನಡುವೆ ಇನ್ನೇನೂ ಇಲ್ಲ. ಐಶ್ವರ್ಯಾ ಹಾಗೂ ಧನುಶ್ ದೂರಾಗಲು ನಾನು ಕಾರಣವಲ್ಲ. ಹರಿದಾಡುತ್ತಿರುವ ಗಾಳಿಸುದ್ದಿಗಳಿಗೆ ಸ್ಪಷ್ಟನೆ ನೀಡುತ್ತಾ ಇರಲು ಸಾಧ್ಯವಿಲ್ಲ. ಈ ಬಗ್ಗೆ ಮಾತನಾಡುವ ಪ್ರತಿಯೊಬ್ಬರಿಗೂ ನನ್ನ ನಿಲುವನ್ನು ಹೇಳಲಾಗುವುದಿಲ್ಲ. ಅನವಶ್ಯಕವಾಗಿ ನನ್ನ ಹೆಸರನ್ನು ಎಳೆದು ತರಲಾಗಿದೆ” ಎಂದಿದ್ದಾರೆ ಶ್ರುತಿ ಹಾಸನ್.

ಇನ್ನು ಶ್ರುತಿ ಹಾಸನ್ ಹಾಗೂ ಧನುಶ್ ಒಟ್ಟಿಗೆ ನಟಿಸಿದ್ದ 2012 ರಲ್ಲಿ ಬಿಡುಗಡೆ ಆಗಿದ್ದ ‘3’ ಸಿನಿಮಾವನ್ನು ಸ್ವತಃ ಐಶ್ವರ್ಯಾ ಅವರೇ ನಿರ್ದೇಶನ ಮಾಡಿದ್ದರು. ಮೂವರು ಸಹ ಆಗ ಒಳ್ಳೆಯ ಗೆಳೆಯರಾಗಿಯೇ ಇದ್ದರು. ಆದರೆ ಈಗ ಈ ಜೋಡಿ ಬೇರಾಗಲು ಶ್ರುತಿ ಹಾಸನ್ ಕಾರಣ ಎಂಬ ಗುಲ್ಲು ಹರಿದಾಡಿತ್ತು. ಅಸಲಿಗೆ ಶ್ರುತಿ ಹಾಸನ್ ತಮ್ಮ ವಿದೇಶಿ ಬಾಯ್​ಫ್ರೆಂಡ್ ಜೊತೆ ಲಿವಿನ್ ರಿಲೇಶನ್​ಶಿಪ್​ನಲ್ಲಿದ್ದು ಆರಾಮವಾಗಿ ಕಾಲ ಕಳೆಯುತ್ತಿದ್ದಾರೆ.

ಧನುಶ್ ಹಾಗೂ ಐಶ್ವರ್ಯಾ ರಜನೀಕಾಂತ್ 2004 ರಲ್ಲಿ ಪ್ರೇಮಿಸಿ ಮದುವೆಯಾಗಿದ್ದರು. ಇವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಇತ್ತೀಚೆಗಿನ ವರೆಗೆ ಇಬ್ಬರ ಸಂಬಂಧ ಚೆನ್ನಾಗಿಯೇ ಇತ್ತು. ಕೋವಿಡ್ ಸಮಯದಲ್ಲಿ ಇಬ್ಬರೂ ಸೇರಿ ಅದ್ಧೂರಿಯಾಗಿ ಮನೆ ಕಟ್ಟಿದ್ದರು. ಮನೆ ನಿರ್ಮಾಣ ಪ್ರಾರಂಭದ ದಿನ ಸ್ವತಃ ರಜನೀಕಾಂತ್ ಬಂದು ಆಶೀರ್ವಾದ ಮಾಡಿದ್ದರು. ಆದರೆ ಹಠಾತ್ತನೆ ಇಬ್ಬರೂ ಬೇರಾದರು.

ಇದನ್ನೂ ಓದಿ:Shruti Haasan: ಶ್ರುತಿ ಹಾಸನ್ ಎಷ್ಟು ಮದ್ಯ ಸೇವನೆ ಮಾಡುತ್ತಾರೆ? ಓಪನ್ ಆಗಿ ಹೇಳಿದ ನಟಿ

ಧನುಶ್ ಪ್ರಸ್ತುತ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪ್ಯಾನ್ ಇಂಡಿಯಾ ಮಾತ್ರವಲ್ಲ ಹಾಲಿವುಡ್ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ. ಇದೀಗ ಕ್ಯಾಪ್ಟನ್ ಮಿಲ್ಲರ್ ಹೆಸರಿನ ಸಿನಿಮಾದಲ್ಲಿ ಧನುಶ್ ನಟಿಸುತ್ತಿದ್ದು ಈ ಸಿನಿಮಾದಲ್ಲಿ ಧನುಶ್ ಜೊತೆಗೆ ಶಿವರಾಜ್ ಕುಮಾರ್ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ನಾಯಕಿ ಸಹ ಬೆಂಗಳೂರಿನವರೇ ಆಗಿರುವ ಪ್ರಿಯಾಂಕಾ ಅರುಲ್ ಮೋಹನ್. ಇದರ ಹೊರತಾಗಿ ತೆಲುಗಿನ ಜನಪ್ರಿಯ ನಿರ್ದೇಶಕ ಶೇಖರ್ ಕಮ್ಮುಲ ನಿರ್ದೇಶನದ ಸಿನಿಮಾದಲ್ಲಿ ಧನುಶ್ ನಟಿಸುತ್ತಿದ್ದಾರೆ. ಅದರ ಬಳಿಕ ತಮ್ಮ ಸಹೋದರ ಸೆಲ್ವರಾಘವನ್ ನಿರ್ದೇಶಿಸಲಿರುವ ಹೊಸ ಸಿನಿಮಾದಲ್ಲಿ ನಟಿಸಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ