AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನ ಈ ಚೆಲುವೆ ಪವನ್ ಕಲ್ಯಾಣ್​ ಹೊಸ ಸಿನಿಮಾಕ್ಕೆ ನಾಯಕಿ

Pawan Kalyan: ಕನ್ನಡ ಸಿನಿಮಾದಿಂದ ನಟನೆ ಆರಂಭಿಸಿದ ಬೆಂಗಳೂರಿನ ಈ ಚೆಲುವೆ ಈಗ ಪವನ್ ಕಲ್ಯಾಣ್ ಹೊಸ ಸಿನಿಮಾಕ್ಕೆ ನಾಯಕಿ!

ಬೆಂಗಳೂರಿನ ಈ ಚೆಲುವೆ ಪವನ್ ಕಲ್ಯಾಣ್​ ಹೊಸ ಸಿನಿಮಾಕ್ಕೆ ನಾಯಕಿ
ಪ್ರಿಯಾಂಕಾ ಅರುಲ್ ಮೋಹನ್
ಮಂಜುನಾಥ ಸಿ.
|

Updated on: Apr 21, 2023 | 6:56 PM

Share

ಕನ್ನಡ ಚಿತ್ರರಂಗದ (Sandalwood) ಮೂಲಕ ನಟನೆಗೆ ಪದಾರ್ಪಣೆ ಮಾಡಿ ಪರಭಾಷೆಗಳಲ್ಲಿ ಮಿಂಚುತ್ತಿರುವ ನಟಿಯರ ಸಂಖ್ಯೆ ದೊಡ್ಡದಿದೆ. ರಶ್ಮಿಕಾ ಮಂದಣ್ಣ (Rashmika Mandanna), ಶ್ರೀಲೀಲಾ (Shri Leela), ಶ್ರದ್ಧಾ ಶ್ರೀನಾಥ್ ಇನ್ನೂ ಹಲವು ಕರ್ನಾಟಕ ಮೂಲದ ನಟಿಯರು ವಿವಿಧ ಸಿನಿಮಾ ರಂಗಗಳಲ್ಲಿ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಇದೇ ಪಟ್ಟಿಗೆ ಸೇರುತ್ತಾರೆ ನಟಿ ಪ್ರಿಯಾಂಕಾ ಅರುಲ್ ಮೋಹನ್. 2019 ರಲ್ಲಿ ಬಿಡುಗಡೆ ಆದ ‘ಒಂದ್ ಕತೆ ಹೇಳ್ಲಾ’ ಸಿನಿಮಾದ ಮೂಲಕ ನಟನೆಗೆ ಪದಾರ್ಪಣೆ ಮಾಡಿದ ಬೆಂಗಳೂರಿನ ಈ ಚೆಲುವೆ ಈಗ ಪವನ್ ಕಲ್ಯಾಣ್ ಸಿನಿಮಾಕ್ಕೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ.

ಹಾರರ್ ಅಂಥಾಲಜಿ ಸಿನಿಮಾ ಆಗಿದ್ದ ಒಂದ್ ಕತೆ ಹೇಳ್ಲಾ ಸಿನಿಮಾದಲ್ಲಿ ಪಾತ್ರ ನಿರ್ವಹಿಸಿದ್ದ ನಟಿ ಪ್ರಿಯಾಂಕಾ, ಆ ಬಳಿಕ ತೆಲುಗು, ತಮಿಳಿನ ಕೆಲವು ಸಿನಿಮಾಗಳಲ್ಲಿ ನಟಿಸಿ ಇದೀಗ ಪವನ್ ಕಲ್ಯಾಣ್​ರ ಭಾರಿ ಬಜೆಟ್ ಸಿನಿಮಾ ಓಜಿಗೆ ನಾಯಕಿಯಾಗಿದ್ದಾರೆ. ಪ್ರಭಾಸ್ ನಟನೆಯ ಸಾಹೊ ಅದಕ್ಕೂ ಮುನ್ನ ರನ್ ರಾಜ ರನ್ ಸಿನಿಮಾಗಳನ್ನು ನಿರ್ದೇಶಿಸಿರುವ ಸುಜಿತ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ.

ಪ್ರಿಯಾಂಕಾ ಅರುಲ್ ಮೋಹನ್ ಅವರ ತಂದೆ ತಮಿಳುನಾಡಿನವರು ತಾಯಿ ಕನ್ನಡತಿ. ಪ್ರಿಯಾಂಕಾರ ಜನನ, ಶಾಲೆ, ಕಾಲೇಜು ಶಿಕ್ಷಣಗಳೆಲ್ಲವೂ ಆಗಿರುವುದು ಬೆಂಗಳೂರಿನಲ್ಲಿಯೇ ಅವರ ಕುಟುಂಬ ನೆಲೆಸಿರುವುದು ಸಹ ಬೆಂಗಳೂರಿನಲ್ಲಿಯೇ, ನಟನೆಗೆ ಪದಾರ್ಪಣೆ ಮಾಡಿದ್ದು ಸಹ ಕನ್ನಡದ ಮೂಲಕವೇ ಆದರೆ ಮಿಂಚುತ್ತಿರುವುದು ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ.

2019 ರಲ್ಲಿ ಕನ್ನಡದ ಸಿನಿಮಾ ಮೂಲಕ ಪದಾರ್ಪಣೆ ಮಾಡಿದ ಪ್ರಿಯಾಂಕಾ, ಅದೇ ವರ್ಷ ತೆಲುಗಿನ ಜನಪ್ರಿಯ ನಟ ನಾನಿಯ ‘ನಾನಿ ಗ್ಯಾಂಗ್​ಲೀಡರ್’ ಸಿನಿಮಾದ ಮೂಲಕ ತೆಲುಗಿಗೆ ಪದಾರ್ಪಣೆ ಮಾಡಿದರು. ಅದಾದ ಬಳಿಕ ತಮಿಳಿನ ಸೂಪರ್ ಹಿಟ್ ಸಿನಿಮಾ ಡಾಕ್ಟರ್, ಡಾನ್ ಇನ್ನಿತರೆಗಳಲ್ಲಿ ನಟಿಸಿದ್ದು ಪ್ರಸ್ತುತ ಧನುಶ್​ ಜೊತೆ ಕ್ಯಾಪ್ಟನ್ ಮಿಲ್ಲರ್ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಶಿವಣ್ಣ ಸಹ ಪ್ರಮುಖ ಪಾತ್ರದಲ್ಲಿದ್ದಾರೆ. ಅದರ ಜೊತೆಗೆ ಖ್ಯಾತ ನಿರ್ದೇಶಕ ರಾಜೇಶ್ ನಿರ್ದೇಶನದ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ಇವುಗಳ ನಡುವೆಯೇ ಪವನ್ ಕಲ್ಯಾಣ್​ಗೆ ನಾಯಕಿಯಾಗುವ ಅದೃಷ್ಟ ನಟಿಗೆ ಒಲಿದು ಬಂದಿದೆ. ಒಂದ್ ಕತೆ ಹೇಳ್ಲಾ ಸೇರಿದಂತೆ ಪ್ರಿಯಾಂಕಾ ನಟಿಸಿರುವ ಆರು ಸಿನಿಮಾಗಳಷ್ಟೆ ಈವರೆಗೆ ಬಿಡುಗಡೆ ಆಗಿವೆ.

ಇದನ್ನೂ ಓದಿ:Renu Desai: “ಆಕೆ ಒಂದು ಹೇಳಿಕೆ ನೀಡಿದ್ದರೆ ಪವನ್ ಕಲ್ಯಾಣ್ ಜೈಲು ಪಾಲಾಗುತ್ತಿದ್ದ”;

ಆರ್​ಆರ್​ಆರ್ ಸಿನಿಮಾ ನಿರ್ಮಾಣ ಮಾಡಿದ್ದ ಡಿವಿವಿ ಪ್ರೊಡಕ್ಷನ್​ನವರೇ ಓಜಿ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಡಿವಿವಿ ಪ್ರೊಡಕ್ಷನ್ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯ ಮೂಲಕ ಪ್ರಿಯಾಂಕಾ ಮೋಹನ್ ಅವರನ್ನು ತಮ್ಮ ಓಜಿ ತಂಡಕ್ಕೆ ಸ್ವಾಗತಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಪ್ರಿಯಾಂಕಾ ಸಹ, ಓಜಿ ತಂಡದ ಭಾಗವಾಗಿರುವುದಕ್ಕೆ ಬಹಳ ಸಂತಸವಾಗಿದೆ. ಪವರ್ ಪ್ಯಾಕ್ಡ್ ಸಿನಿಮಾ ಒಂದು ನಿಮಗಾಗಿ ಬರುತ್ತಿದೆ. ಈ ಅವಕಾಶ ನೀಡಿದ್ದಕ್ಕೆ ಸುಜಿತ್, ಪವನ್ ಕಲ್ಯಾಣ್ ಹಾಗೂ ಡಿವಿವಿ ದಾನಯ್ಯ ಅವರಿಗೆ ಧನ್ಯವಾದ ಎಂದಿದ್ದಾರೆ.

ಓಜಿ ಸಿನಿಮಾದ ಚಿತ್ರೀಕರಣ ಈಗಾಗಲೇ ಮುಂಬೈನಲ್ಲಿ ಶುರುವಾಗಿದೆ. ಪವನ್ ಕಲ್ಯಾಣ್ ಸಹ ಶೂಟಿಂಗ್ ಸೆಟ್ ಅನ್ನು ಸೇರಿಕೊಂಡಿದ್ದು ಈಗಾಗಲೇ ಚಿತ್ರೀಕರಣ ಶುರು ಮಾಡಿದ್ದಾರೆ. ಸಿನಿಮಾದಲ್ಲಿ ಪ್ರಿಯಾಂಕಾ ಮೋಹನ್ ಜೊತೆ ಇನ್ನೊಬ್ಬ ನಟಿಯೂ ಇರಲಿದ್ದಾರೆ ಎನ್ನಲಾಗುತ್ತಿದ್ದು ಆ ಬಗ್ಗೆ ಇನ್ನಷ್ಟೆ ಮಾಹಿತಿ ಹೊರ ಬೀಳಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಇಂದು ಈ ರಾಶಿಯವರಿಗೆ ಧನಯೋಗ!
ಇಂದು ಈ ರಾಶಿಯವರಿಗೆ ಧನಯೋಗ!
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ