AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Renu Desai: ‘ಆಕೆ ಒಂದು ಹೇಳಿಕೆ ನೀಡಿದ್ದರೆ ಪವನ್ ಕಲ್ಯಾಣ್ ಜೈಲು ಪಾಲಾಗುತ್ತಿದ್ದ’

Renu Desai: ಪವನ್ ಕಲ್ಯಾಣ್ ಪತ್ನಿ ರೇಣು ದೇಸಾಯಿ, ಒಂದು ಹೇಳಿಕೆ ನೀಡಿದಿದ್ದರೆ ಪವನ್ ಕಲ್ಯಾಣ್ ಇಂದು ಜೈಲಿನಲ್ಲಿರಬೇಕಿತ್ತು.

Renu Desai: 'ಆಕೆ ಒಂದು ಹೇಳಿಕೆ ನೀಡಿದ್ದರೆ ಪವನ್ ಕಲ್ಯಾಣ್ ಜೈಲು ಪಾಲಾಗುತ್ತಿದ್ದ'
ಪವನ್-ರೇಣು
ಮಂಜುನಾಥ ಸಿ.
|

Updated on:Apr 14, 2023 | 3:56 PM

Share

ಪವನ್ ಕಲ್ಯಾಣ್​ಗೆ (Pawan Kalyan) ದೊಡ್ಡ ಸಂಖ್ಯೆಯ ಅಭಿಮಾನಿ ವರ್ಗವಿದೆ. ಪವನ್ ಕಲ್ಯಾಣ್ ರೀತಿಯಲ್ಲಿಯೇ ಅವರು ಸಹ ತುಸು ವರಟು ಸ್ವಭಾವದವರೆ. ಸಾಮಾಜಿಕ ಜಾಲತಾಣಗಳಲ್ಲಿ (Social Media) ರಾಜಕಾರಣಿಗಳನ್ನು, ಪವನ್ ಬಗ್ಗೆ ಭಿನ್ನಾಭಿಪ್ರಾಯವುಳ್ಳ ಇತರೆ ನಟರನ್ನು ಕೆಟ್ಟದಾಗಿ ಟ್ರೋಲ್ ಮಾಡುತ್ತಿರುತ್ತಾರೆ. ಇವರ ಕಾಟಕ್ಕೆ ಅತಿಯಾಗಿ ನೊಂದಿರುವುದು ಪವನ್ ಕಲ್ಯಾಣ್ ಎರಡನೇ ಪತ್ನಿ ರೇಣು ದೇಸಾಯಿ (Renu Desai). ಸಾಮಾಜಿಕ ಜಾಲತಾಣದಲ್ಲಿ ಪವನ್ ಅಭಿಮಾನಿಗಳಿಂದ ವಿಪರೀತ ನಿಂದನೆ, ಟೀಕೆ, ಬೆದರಿಕೆಗಳನ್ನು ಹಲವು ವರ್ಷಗಳಿಂದಲೂ ಎದುರಿಸುತ್ತಲೇ ಬರುತ್ತಿದ್ದಾರೆ ಈಕೆ.

ಇದೀಗ ಸಾಮಾಜಿಕ ಜಾಲತಾಣದಲ್ಲಿ ಆಸಕ್ತಿಕರ ವಿಡಿಯೋ ಒಂದನ್ನು ಹಂಚಿಕೊಂಡಿರುವ ರೇಣು ದೇಸಾಯಿ, ಈ ವಿಡಿಯೋ ನೋಡಿ ನಾನು ಭಾವುಕಳಾದೆ. ನಾನು ಏನೇ ಮಾತನಾಡಿದರು, ನಾನು ಬೇರೆ ಪಕ್ಷಕ್ಕೆ ಮಾರಿಕೊಂಡಿದ್ದೇನೆಂದು ಹೇಳುತ್ತಾರೆ, ಆದರೆ ಎಷ್ಟೋ ವರ್ಷಗಳ ಬಳಿಕ ನನ್ನ ಪರವಾಗಿ ಮಾತನಾಡುವವರೂ ಇದ್ದಾರೆ ಎಂಬುದು ನನಗೆ ಈ ವಿಡಿಯೋ ನೋಡಿದ ಬಳಿಕವಷ್ಟೆ ಗೊತ್ತಾಯಿತು. ಈ ವಿಡಿಯೋ ನೋಡಿ ನಾನು ಅತ್ತುಬಿಟ್ಟಿ ಎಂದಿದ್ದಾರೆ ಮಾತ್ರವಲ್ಲದೆ, ಆ ವಿಡಿಯೋವನ್ನು ಸಹ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಧನ್ಯವಾದ ಹೇಳಿದ್ದಾರೆ.

ರೇಣು ದೇಸಾಯಿ ಹಂಚಿಕೊಂಡಿರುವುದು ಸಾಮಾಜಿಕ ಹೋರಾಟಗಾರ್ತಿ ಕೃಷ್ಣ ಕುಮಾರ್ ಅವರು ವಿಡಿಯೋ ಆಗಿದ್ದು, ವಿಡಿಯೋದಲ್ಲಿ ಹೇಗೆ ವಿಚ್ಛೇದಿತ ನಟಿಯರು ಸಮಾಜದಲ್ಲಿ ಟೀಕೆಗೆ ನಿಂದನೆಗೆ ಗುರಿಯಾಗುತ್ತಿದ್ದಾರೆ ಎಂಬ ಬಗ್ಗೆ ಅವರು ವ್ಯಥೆ ಮತ್ತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೇಣು ದೇಸಾಯಿ ಬಗ್ಗೆ ಮಾತನಾಡುತ್ತಾ, ಆಕೆ ಪವನ್ ಕಲ್ಯಾಣ್ ಇಂದಿ ದೂರಾಗಿ ಇಬ್ಬರು ಮಕ್ಕಳನ್ನು ತಾವೇ ನೋಡಿಕೊಳ್ಳುತ್ತಾ ಅವರಿಗೆ ಶಿಕ್ಷಣ ನೀಡಿ ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸುತ್ತಿದ್ದಾರೆ. ಆದರೆ ಈ ಪವನ್ ಕಲ್ಯಾಣ್ ಅಭಿಮಾನಿಗಳು ಆಕೆಯನ್ನು ಕೆಟ್ಟದಾಗಿ ಟ್ರೋಲ್ ಮಾಡುತ್ತಾರೆ, ನೀನು ನಮ್ಮ ಅತ್ತಿಗೆ ನೀನು ಮತ್ತೊಂದು ಮದುವೆ ಆಗಬಾರದು, ಅಣ್ಣನ ಅನುಯಾಯಿಯಾಗಿರಬೇಕು ಎಂದೆಲ್ಲ ಬೊಗಳುತ್ತಾರೆ ಎಂದು ಕಟುವಾಗಿಯೇ ನುಡಿದಿದ್ದಾರೆ.

ಪವನ್ ಕಲ್ಯಾಣ್​ಗಾಗಿ ಆಕೆ ದೊಡ್ಡ ತ್ಯಾಗ ಮಾಡಿದ್ದಾರೆ. ಪವನ್ ಕಲ್ಯಾಣ್ ಮೊದಲ ಪತ್ನಿಗೆ ವಿಚ್ಛೇದನ ನೀಡುವ ಮೊದಲೇ ರೇಣು ದೇಸಾಯಿ ಜೊತೆ ಸಹಜೀವನ ನಡೆಸಿದ್ದರು ಒಂದು ಮಗುವನ್ನೂ ಪಡೆದಿದ್ದರು. ಆಗ ಆಕೆಯ ಮನಸ್ಥಿತಿ ಏನಾಗಿರಬಹುದು ಊಹಿಸಿದ್ದೀರ? ಒಂದೊಮ್ಮೆ ಇವನಿಗೆ ವಿಚ್ಛೇದನ ಸಿಗದಿದ್ದರೆ, ಒಂದೊಮ್ಮೆ ಮಗುವಾದ ಮೇಲೆ ಇವನು ನನ್ನ ಬಿಟ್ಟುಬಿಟ್ಟರೆ ಗತಿಯೇನು ಎಂಬೆಲ್ಲ ಯೋಚನೆಗಳ ನಡುವೆಯೂ ಆಕೆ ಪವನ್ ಅನ್ನು ನಂಬಿದಳು. ಒಂದೊಮ್ಮೆ ಆಕೆ, ಪವನ್ ನನಗೆ ಸುಳ್ಳು ಹೇಳಿ ನನ್ನೊಂದಿಗೆ ಸಂಬಂಧ ಬೆಳೆಸಿದ್ದಾರೆಂದೊ ಅಥವಾ ಸಹಜೀವನಕ್ಕೆ ನನ್ನ ಒಪ್ಪಿಗೆ ಇರಲಿಲ್ಲವೆಂದೋ ರೇಣು ದೇಸಾಯಿ ಆಗ ಹೇಳಿದ್ದರೆ ಪವನ್ ಕಲ್ಯಾಣ್ ಅಂದೇ ಜೈಲು ಸೇರಬೇಕಿತ್ತು ಎಂದಿದ್ದಾರೆ ಕೃಷ್ಣ ಕುಮಾರ್.

ಮುಂದುವರೆದು, ಪವನ್ ಕಲ್ಯಾಣ್ ಮೂರು-ಮೂರು ಮದುವೆಗಳನ್ನು ಆಗಬಹುದು ಆದರೆ ರೇಣು ದೇಸಾಯಿ ಮಾತ್ರ ಮದುವೆ ಆಗಬಾರದು ಸಂತೋಶವಾಗಿರಬಾರದು. ತನಗಾದ ಅನ್ಯಾಯ ಹೇಳಿಕೊಳ್ಳಬಾರದು ಇದೆಲ್ಲಿಯ ನ್ಯಾಯ. ರೇಣು ದೇಸಾಯಿಯನ್ನು ಪ್ರಶ್ನೆ ಮಾಡುವ ಅಭಿಮಾನಿಗಳು, ಪವನ್ ಕಲ್ಯಾಣ್ ಅನ್ನು ನೀನೆಕೆ ಕಟ್ಟಿಕೊಂಡ ಪತ್ನಿಯನ್ನು ನಡುನೀರಲ್ಲಿ ಕೈಬಿಟ್ಟೆ ಎಂದು ಯಾಕೆ ಪ್ರಶ್ನೆ ಮಾಡುವುದಿಲ್ಲ ಎಂದು ಕೃಷ್ಣ ಕುಮಾರಿ ಪ್ರಶ್ನಿಸಿದ್ದಾರೆ.

ಅದೇ ವಿಡಿಯೋದಲ್ಲಿ ಸಮಂತಾ ವಿರುದ್ಧ ನಡೆದ ಟ್ರೋಲಿಂಗ್​ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿರುವ ಹೋರಾಟಗಾರ್ತಿ, ಸಮಾಜವು ಎಲ್ಲ ಜವಾಬ್ದಾರಿ, ಸಂಸ್ಕಾರ, ಪಾವಿತ್ರ್ಯತೆಗಳನ್ನು ಮಹಿಳೆಯಿಂದಲೇ ನಿರೀಕ್ಷೆ ಮಾಡುತ್ತದೆ. ಆದರೆ ಪುರುಷನನ್ನು ಏನೋಂದರ ಬಗ್ಗೆಯೂ ಪ್ರಶ್ನೆ ಮಾಡುವುದಿಲ್ಲ ಎಂದಿದ್ದಾರೆ.

ಪವನ್ ಕಲ್ಯಾಣ್​ಗೆ ಒಟ್ಟು ಮೂವರು ಪತ್ನಿಯರು. ಮೊದಲನೇ ಪತ್ನಿ ನಂದಿನಿಗೆ ವಿಚ್ಛೇದನ ನೀಡುವ ಮೊದಲೇ ನಟಿ ರೇಣು ದೇಸಾಯಿ ಜೊತೆ ಲಿವಿನ್ ರಿಲೇಶನ್​ಶಿಪ್​ನಲ್ಲಿದ್ದ ಪವನ್ ಅವರಿಂದ ಇಬ್ಬರು ಮಕ್ಕಳನ್ನು ಪಡೆದಿದ್ದಾರೆ. ಮೊದಲ ಪತ್ನಿಗೆ ವಿಚ್ಛೇದನ ನೀಡಿ ಬಳಿಕ ರೇಣು ದೇಸಾಯಿಯನ್ನು ವಿವಾಹವಾಗಿ ಆ ಬಳಿಕ ಅವರಿಗೂ ವಿಚ್ಛೇದನ ನೀಡಿ ಕೆಲವು ವರ್ಷಗಳ ಹಿಂದೆ ರಷ್ಯನ್ ಮಹಿಳೆಯೊಬ್ಬರನ್ನು ವಿವಾಹವಾಗಿ ಅವರಿಂದಲೂ ಮಗುವೊಂದನ್ನು ಪಡೆದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:55 pm, Fri, 14 April 23

ಗಂಡನ ಗೆಳೆಯನೊಂದಿಗೆ ಪ್ರೇಮ ಸಲ್ಲಾಪ: ಮದ್ವೆ ಆಸೆ ತೋರಿಸಿ ಕೈಕೊಟ್ಟ ಪ್ರಿಯಕರ!
ಗಂಡನ ಗೆಳೆಯನೊಂದಿಗೆ ಪ್ರೇಮ ಸಲ್ಲಾಪ: ಮದ್ವೆ ಆಸೆ ತೋರಿಸಿ ಕೈಕೊಟ್ಟ ಪ್ರಿಯಕರ!
ಭಾಷೆಯಿಂದ ನಾವು, ನಮ್ಮಿಂದ ಭಾಷೆ ಅಲ್ಲ: ಗೋಲ್ಡನ್ ಸ್ಟಾರ್ ಗಣೇಶ್
ಭಾಷೆಯಿಂದ ನಾವು, ನಮ್ಮಿಂದ ಭಾಷೆ ಅಲ್ಲ: ಗೋಲ್ಡನ್ ಸ್ಟಾರ್ ಗಣೇಶ್
ಉತ್ತರಾಖಂಡದಲ್ಲಿ ಪ್ರವಾಹ, ಭೂಕುಸಿತದಿಂದ ರಸ್ತೆಗಳೇ ಮಾಯ!
ಉತ್ತರಾಖಂಡದಲ್ಲಿ ಪ್ರವಾಹ, ಭೂಕುಸಿತದಿಂದ ರಸ್ತೆಗಳೇ ಮಾಯ!
ಎಲ್ಲರ ಅಪೇಕ್ಷೆಯಂತೆ ಬಿಜೆಪಿಯಲ್ಲಿ ಖಂಡಿತ ಬದಲಾವಣೆಗಳು ಆಗಲಿವೆ: ಈಶ್ವರಪ್ಪ
ಎಲ್ಲರ ಅಪೇಕ್ಷೆಯಂತೆ ಬಿಜೆಪಿಯಲ್ಲಿ ಖಂಡಿತ ಬದಲಾವಣೆಗಳು ಆಗಲಿವೆ: ಈಶ್ವರಪ್ಪ
ಸುರ್ಜೇವಾಲಾ ನನಗೆ ಬಾಯ್ಮುಚ್ಚಿಕೊಂಡಿರುವಂತೆ ಹೇಳಿದ್ದಾರೆ: ಮಧು ಬಂಗಾರಪ್ಪ
ಸುರ್ಜೇವಾಲಾ ನನಗೆ ಬಾಯ್ಮುಚ್ಚಿಕೊಂಡಿರುವಂತೆ ಹೇಳಿದ್ದಾರೆ: ಮಧು ಬಂಗಾರಪ್ಪ
ಯಾವಾಗಲೂ ಕುಮಾರ್ ಬಂಗಾರಪ್ಪ ಮನೆಯಲ್ಲಿ ಸಭೆ ನಡೆಸುತ್ತಿದ್ದ ರೆಬೆಲ್​ಗಳು
ಯಾವಾಗಲೂ ಕುಮಾರ್ ಬಂಗಾರಪ್ಪ ಮನೆಯಲ್ಲಿ ಸಭೆ ನಡೆಸುತ್ತಿದ್ದ ರೆಬೆಲ್​ಗಳು
ನೀರಿಗಿಳಿಯಬಾರದೆಂಬ ಸೂಚನೆಯಿದ್ದರೂ ಉಲ್ಲಂಘಿಸುತ್ತಿರುವ ಪ್ರವಾಸಿಗರು
ನೀರಿಗಿಳಿಯಬಾರದೆಂಬ ಸೂಚನೆಯಿದ್ದರೂ ಉಲ್ಲಂಘಿಸುತ್ತಿರುವ ಪ್ರವಾಸಿಗರು
ಸಿಎಂ, ಡಿಸಿಎಂ ಆದಿಯಾಗಿ ಎಲ್ಲರೂ ಫೋನ್ ರಿಸೀವ್ ಮಾಡುತ್ತಾರೆ: ಲಕ್ಷ್ಮಣ ಸವದಿ
ಸಿಎಂ, ಡಿಸಿಎಂ ಆದಿಯಾಗಿ ಎಲ್ಲರೂ ಫೋನ್ ರಿಸೀವ್ ಮಾಡುತ್ತಾರೆ: ಲಕ್ಷ್ಮಣ ಸವದಿ
ಕವಡೆ ಶಾಸ್ತ್ರವೇ ನಿಜವಾದರೆ ಕಾಂಗ್ರೆಸ್ ನಾಯಕರು ಆಗೇನು ಹೇಳುತ್ತಾರೆ? ಅಶೋಕ
ಕವಡೆ ಶಾಸ್ತ್ರವೇ ನಿಜವಾದರೆ ಕಾಂಗ್ರೆಸ್ ನಾಯಕರು ಆಗೇನು ಹೇಳುತ್ತಾರೆ? ಅಶೋಕ
ಗಣ್ಯರಿಗೆ ಖಾಸಗಿ ಆಸ್ಪತ್ರೆಗಳೇ ಯಾಕೆ? ಸರ್ಕಾರೀ ಆಸ್ಪತ್ರೆ ಯಾಕೆ ಬೇಡ?
ಗಣ್ಯರಿಗೆ ಖಾಸಗಿ ಆಸ್ಪತ್ರೆಗಳೇ ಯಾಕೆ? ಸರ್ಕಾರೀ ಆಸ್ಪತ್ರೆ ಯಾಕೆ ಬೇಡ?