AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪವನ್ ಕಲ್ಯಾಣ್ ಅಭಿಮಾನಿಗಳ ಮೇಲೆ ಹರಿಹಾಯ್ದ ಮಾಜಿ ಪತ್ನಿ ರೇಣು ದೇಸಾಯಿ

ಪವನ್ ಕಲ್ಯಾಣ್ ಮಾಜಿ ಪತ್ನಿ ರೇಣು ದೇಸಾಯಿ, ಪವನ್ ಅಭಿಮಾನಿಗಳ ವಿರುದ್ಧ ಕೆಂಡಕಾರಿದ್ದಾರೆ. 11 ವರ್ಷಗಳಿಂದ ಈ ಹಿಂಸೆ ಅನುಭವಿಸುತ್ತಿದ್ದೇನೆ ಎಂದಿದ್ದಾರೆ.

ಪವನ್ ಕಲ್ಯಾಣ್ ಅಭಿಮಾನಿಗಳ ಮೇಲೆ ಹರಿಹಾಯ್ದ ಮಾಜಿ ಪತ್ನಿ ರೇಣು ದೇಸಾಯಿ
ಪವನ್-ರೇಣು
ಮಂಜುನಾಥ ಸಿ.
|

Updated on: Apr 09, 2023 | 6:04 PM

Share

ತೆಲುಗು ಚಿತ್ರರಂಗದಲ್ಲಿ (Tollywood) ಭಾರಿ ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ನಟ ಪವನ್ ಕಲ್ಯಾಣ್ (Pawan Kalyan). ತಮ್ಮ ಅಭಿಮಾನಿಗಳನ್ನು ಜನಸೈನಿಕರೆಂದು ಕರೆಯುತ್ತಾರೆ ಪವನ್ ಕಲ್ಯಾಣ್. ಎದುರಾಳಿಗಳನ್ನು ನೇರಾ-ನೇರಾ ಯುದ್ಧಕ್ಕೆ ಕರೆಯುವ, ವೇದಿಕೆ ಮೇಲೆ ನಿಂತು ವಿರೋಧಿಗಳಿಗೆ ಚಪ್ಪಲಿ ತೋರಿಸುವ ಪವನ್ ಕಲ್ಯಾಣ್​ರ ರೀತಿಯೇ ಅವರ ಅಭಿಮಾನಿಗಳು ಸಹ ತುಸು ಹೆಚ್ಚೇ ಅಗ್ರೆಸಿವ್. ಪವನ್ ಕಲ್ಯಾಣ್ ವಿರುದ್ಧ ಮಾತನಾಡಿದರೆಂದು ಆಂಧ್ರದ ಆಡಳಿತ ಪಕ್ಷದ ಸದಸ್ಯರ ವಿರುದ್ಧ ಕೆಟ್ಟ ಕೊಳಕ ಭಾಷೆ ಪ್ರಯೋಗಿಸಿದ್ದರು ಸಾಮಾಜಿಕ ಜಾಲತಾಣದಲ್ಲಿ, ಸಿಎಂ ಜಗನ್​ಗೆ ಬೆದರಿಕೆ ಸಹ ಹಾಕಿದ್ದರು. ಆದರೆ ಇವರಿಗೆ ಹೆದರುವುರಲ್ಲ ಪವನ್ ಕಲ್ಯಾಣ್​ರ ಮಾಜಿ ಪತ್ನಿ ರೇಣು ದೇಸಾಯಿ (Renu Desai).

ಪವನ್ ಕಲ್ಯಾಣ್, ರೇಣು ದೇಸಾಯಿಯ ಪುತ್ರ ಅಖಿರಾ ಹುಟ್ಟುಹಬ್ಬದ ದಿನದಂದು ಪವನ್ ಕಲ್ಯಾಣ್ ಅಭಿಮಾನಿಗಳು ಹಲವರು ರೇಣು ದೇಸಾಯಿಯವರಿಗೆ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಕಳುಹಿಸಿ ಅಖಿರಾ ಚಿತ್ರ ಶೇರ್ ಮಾಡಿಕೊಳ್ಳುವಂತೆ ಕೇಳಿದ್ದಾರೆ. ಆದರೆ ಇದಕ್ಕೆ ನಿರಾಕರಿಸಿರುವ ಇಂದು ಒಂದು ದಿನವಾದರೂ ನನ್ನನ್ನು ನೆಮ್ಮದಿಯಾಗಿ ಇರಲು ಬಿಡಿ, ಇನ್​ಸ್ಟಾಗ್ರಾಂ ಖಾತೆಗೆ ಬಂದು ತೊಂದರೆ ಕೊಡಬೇಡಿ ಎಂದು ಮನವಿ ಮಾಡಿದ್ದಾರೆ. ಅದು ಮಾತ್ರವೇ ಅಲ್ಲದೆ, ಅಖಿರಾ ಪವನ್ ಕಲ್ಯಾಣ್ ಮಗನಲ್ಲ ಆತ ನನ್ನ ಮಗ ನಾನು ಆತನ ತಾಯಿ ಎಂದು ಹೇಳಿದ್ದಾರೆ.

ರೇಣು ದೇಸಾಯಿಯ ಈ ಉತ್ತರಕ್ಕೆ ಕೆರಳಿದ ಪವನ್ ಕಲ್ಯಾಣ್​ರ ಕೆಲವು ಅಭಿಮಾನಿಗಳು ರೇಣು ದೇಸಾಯಿಗೆ ಕೆಟ್ಟದಾಗಿ ಕಮೆಂಟ್ ಹಾಕಲು ಆರಂಭಿಸಿದ್ದಾರೆ. ಇವಳನ್ನು ಬಿಟ್ಟು ಪವನ್ ಕಲ್ಯಾಣ್ ಒಳ್ಳೆಯದು ಮಾಡಿದರು. ಇವಳು 2024ರ ಪರೀಕ್ಷೆಗೆ ಏನೋ ಡ್ರಾಮಾ ಮಾಡಲು ಪ್ರಾರಂಭ ಮಾಡಿದ್ದಾಳೆ, ಅಖಿರಾಗೆ ಪವನ್ ಕಲ್ಯಾಣ್ ಬಯೋಲಜಿಕಲ್ ತಂದೆಯೇ ತಾನೆ ಎಂಬಿತ್ಯಾದಿ ಕಮೆಂಟ್ ಮಾಡಿದ್ದಾರೆ. ಇದರಿಂದ ಕೆರಳಿರುವ ರೇಣು ದೇಸಾಯಿ, ನೀವು ಒಂದು ಒಳ್ಳೆಯ ಕುಟುಂಬದವರಾಗಿದ್ದರೆ ಹೀಗೆಲ್ಲ ಕಮೆಂಟ್ ಮಾಡುತ್ತಿರಲಿಲ್ಲ. ನಿಮ್ಮ ತಾಯಿಯನ್ನು ಒಮ್ಮೆ ಕೇಳಿ ನೋಡಿ ನೀವು ಮಾಡುತ್ತಿರುವುದು ಸರಿಯಾ ಎಂದು ಎಂದು ರೇಣು ದೇಸಾಯಿ ಕೇಳಿದ್ದಾರೆ.

ಯಾರ ಮಗ ಎಂದು ಕೇಳಿದರೆ ಅಪ್ಪನ ಹೆಸರನ್ನೇ ಹೇಳುತ್ತಾರೆ ಅದು ನಮ್ಮ ಸಂಪ್ರದಾಯ ಎಂದು ವಾದ ಮುಂದಿಟ್ಟ ವ್ಯಕ್ತಿಯೊಬ್ಬನಿಗೆ ಖಡಕ್ ಉತ್ತರ ನೀಡಿರುವ ರೇಣು ದೇಸಾಯಿ ಹಾಗಿದ್ದರೆ ತಲತಲಾಂರಗಳಿಂದಲೂ ನೀವು ಮಹಿಳೆಯನ್ನು ಅವಮಾನಿಸುತ್ತಲೇ ಬಂದಿದ್ದೀರಿ ಎಂದಹಾಗಾಯ್ತು. ಭಾರತೀಯ ಸಂಸ್ಕೃತಿಯಲ್ಲಿ ತಾಯಿಗೆ ಮೊದಲ ಪ್ರಾಶಸ್ತ್ಯ ನಿನ್ನ ತಾಯಿಯನ್ನೋ ಚಿಕ್ಕಮ್ಮ-ದೊಡ್ಡಮ್ಮನನ್ನೋ ಹೋಗಿ ಕೇಳು ಎಂದು ಬುದ್ಧಿವಾದ ಹೇಳಿದ್ದಾರೆ. ಅಲ್ಲದೆ, ಕಳೆದ 11 ವರ್ಷಗಳಿಂದಲೂ ನಾನು ಈ ಕಷ್ಟವನ್ನು ಅನುಭವಿಸುತ್ತಲೇ ಇದ್ದೀನಿ. ಯಾರೋ ಮಾಡಿದ ತಪ್ಪಿಗೆ ನನ್ನನ್ನು ಹೊಣೆ ಮಾಡಿಕೊಂಡೇ ಬರಲಾಗುತ್ತಿದೆ ಎಂದಿದ್ದಾರೆ ರೇಣು ದೇಸಾಯಿ.

ಇದನ್ನೂ ಓದಿ: ಪವನ್ ಕಲ್ಯಾಣ್​ ಚಿತ್ರಕ್ಕೆ ಆರ್​. ಚಂದ್ರು ನಿರ್ದೇಶನ? ‘ಕಬ್ಜ’ ನೋಡಿ ಮೆಚ್ಚಿಕೊಂಡ ಪವರ್​ಸ್ಟಾರ್

ಪವನ್ ಕಲ್ಯಾಣ್ 1997 ರಲ್ಲಿ ನಂದಿನಿ ಎಂಬುವರನ್ನು ವಿವಾಹವಾದರು. ಆದರೆ 2001 ರಲ್ಲಿ ನಟಿ ರೇಣು ದೇಸಾಯಿ ಜೊತೆ ಲಿವಿನ್ ರಿಲೇಶನ್​ಶಿಪ್​ನಲ್ಲಿದ್ದರು. ಆಗ ನಂದಿನಿ, ಪವನ್ ಕಲ್ಯಾಣ್ ವಿರುದ್ಧ ಕೇಸು ದಾಖಲಿಸಿದರು. ಬರೋಬ್ಬರಿ ಐದು ಕೋಟಿ ಜೀವನಾಂಶ ನೀಡಿ ಪವನ್ ಕಲ್ಯಾಣ್ ವಿಚ್ಛೇದನ ಪಡೆದುಕೊಂಡರು. ಬಳಿಕ ರೇಣು ದೇಸಾಯಿಯನ್ನು ವಿವಾಹವಾದ ಪವನ್ ಕಲ್ಯಾಣ್, ಬಳಿಕ 2011 ರಲ್ಲಿ ತೀನ್ ಮಾರ್ ಶೂಟಿಂಗ್ ವೇಳೆ ರಷ್ಯಾ ಪ್ರಜೆಯೊಬ್ಬಾಕೆಯನ್ನು ಭೇಟಿಯಾಗಿ ಆಕೆಯನ್ನು ಪ್ರೀತಿಸಲು ಆರಂಭಿಸಿದರು. 2012 ರಲ್ಲಿ ರೇಣು ದೇಸಾಯಿಗೆ ವಿಚ್ಛೇದನ ನೀಡಿ 2013 ರಲ್ಲಿ ರಷ್ಯಾ ಪ್ರಜೆಯನ್ನು ಪವನ್ ವಿವಾಹವಾದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್