AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Jiah Khan Case: ಜಿಯಾ ಖಾನ್​ ಸಾವಿನ ಪ್ರಕರಣ; 10 ವರ್ಷದ ಬಳಿಕ ಬರ್ತಿದೆ ತೀರ್ಪು; ಏನಾಗಲಿದೆ ಪ್ರಿಯಕರನ ಭವಿಷ್ಯ?

Jiah Khan Death Case Verdict: ಪೊಲೀಸರಿಗೆ ಜಿಯಾ ಖಾನ್​ ಮನೆಯಲ್ಲಿ ಡೆತ್​ ನೋಟ್​ ಪತ್ತೆ ಆಗಿತ್ತು. ಪ್ರಿಯಕರ ಸೂರಜ್​ ಪಾಂಚೋಲಿ ಹೆಸರು ಅದರಲ್ಲಿ ಪ್ರಸ್ತಾಪ ಆಗಿತ್ತು. ಈ ಕೇಸ್​ನ ವಿಚಾರಣೆ ಈಗ ಅಂತ್ಯವಾಗಿದೆ.

Jiah Khan Case: ಜಿಯಾ ಖಾನ್​ ಸಾವಿನ ಪ್ರಕರಣ; 10 ವರ್ಷದ ಬಳಿಕ ಬರ್ತಿದೆ ತೀರ್ಪು; ಏನಾಗಲಿದೆ ಪ್ರಿಯಕರನ ಭವಿಷ್ಯ?
ಜಿಯಾ ಖಾನ್
ಮದನ್​ ಕುಮಾರ್​
|

Updated on: Apr 22, 2023 | 7:15 AM

Share

2013ರ ಜೂನ್​ 3ರಂದು ನಟಿ ಜಿಯಾ ಖಾನ್​ (Jiah Khan) ನಿಧನದ ಸುದ್ದಿ ಕೇಳಿ ಅಭಿಮಾನಿಗಳಿಗೆ ಶಾಕ್​ ಆಗಿತ್ತು. ಬಾಲಿವುಡ್​ನಲ್ಲಿ ಮಿಂಚಬೇಕು ಎಂದು ಕನಸು ಕಂಡಿದ್ದ ಸುಂದರಿ ಏಕಾಏಕಿ ಸಾವಿಗೀಡಾಗಿದ್ದು ಇಡೀ ಚಿತ್ರರಂಗಕ್ಕೆ ನೋವು ತಂದಿತ್ತು. ಜುಹೂ ಅಪಾರ್ಟ್​ಮೆಂಟ್​ನಲ್ಲಿ ಜಿಯಾ ಖಾನ್​ ಅವರ ಮೃತದೇಹ ಪತ್ತೆ ಆಗಿತ್ತು. ಆದರೆ ಅದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದರ ಬಗ್ಗೆ ಸುದೀರ್ಘ ತನಿಖೆ ನಡೆದಿದೆ. ಘಟನೆ ನಡೆದು ಬರೋಬ್ಬರಿ 10 ವರ್ಷಗಳು ಕಳೆದಿವೆ. ಈಗ ಸಿಬಿಐ (CBI) ವಿಶೇಷ ನ್ಯಾಯಾಲಯವು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ನೀಡುತ್ತಿದೆ. ಗುರುವಾರ (ಏಪ್ರಿಲ್​ 20) ಜಿಯಾ ಖಾನ್​ ಸಾವಿನ ಪ್ರಕರಣಕ್ಕೆ ಸಂಬಂಧಿಸಿದ ಅಂತಿಮ ವಿಚಾರಣೆ ನಡೆದಿದ್ದು, ನ್ಯಾಯಾಲಯವು ತೀರ್ಪು ಕಾಯ್ದಿರಿಸಿದೆ. ಏಪ್ರಿಲ್​ 28ರಂದು ತೀರ್ಪು ಪ್ರಕಟಿಸುವ ಸಾಧ್ಯತೆ ಇದೆ. ಈ ಪ್ರಕರಣದಲ್ಲಿ ಪ್ರಮುಖ ಆರೋಪಿ ಆಗಿರುವ ಸೂರಜ್​ ಪಾಂಚೋಲಿ (Sooraj Pancholi) ಭವಿಷ್ಯ ಏನಾಗಲಿದೆ ಎಂಬ ಕೌತುಕ ಮೂಡಿದೆ.

ಜಿಯಾ ಖಾನ್​ ಅವರು ಆಗತಾನೇ ಚಿತ್ರರಂಗದಲ್ಲಿ ಗುರುತಿಸಿಕೊಳ್ಳಲು ಆರಂಭಿಸಿದ್ದರು. ‘ನಿಶಬ್ದ್​’ ಚಿತ್ರದಲ್ಲಿನ ನಟನೆಗೆ ಅವರಿಗೆ ಫಿಲ್ಮ್​ಫೇರ್​ ಪ್ರಶಸ್ತಿ ಸಿಕ್ಕಿತ್ತು. ‘ಘಜಿನಿ’, ‘ಹೌಸ್​ಫುಲ್​’ ಸಿನಿಮಾಗಳಲ್ಲೂ ನಟಿಸಿ ಅವರು ಗಮನ ಸೆಳೆದಿದ್ದರು. ಚಿತ್ರರಂಗದಲ್ಲಿ ಬಾಳಿ ಬದುಕಬೇಕಾಗಿದ್ದ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆ ಆಗಿದ್ದು ಕುಟುಂಬಕ್ಕೆ ಮತ್ತು ಅಭಿಮಾನಿಗಳಿಗೆ ತೀವ್ರ ಆಘಾತ ಉಂಟು ಮಾಡಿತ್ತು.

ಇದನ್ನೂ ಓದಿ: ನಟಿಯ ಸಾವಿನ ಕೇಸ್: ಪ್ರಕರಣದ ಮರುವಿಚಾರಣೆಗೆ ಕೋರ್ಟ್ ನಕಾರ  

ಜಿಯಾ ಖಾನ್​ ಅವರದ್ದು ಆತ್ಮಹತ್ಯೆ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂತು. ಆದರೆ ಅವರ ಕುಟುಂಬದವರು ಈ ವಾದವನ್ನು ಒಪ್ಪಲಿಲ್ಲ. ನಟ ಸೂರಜ್​ ಪಾಂಚೋಲಿ ಜೊತೆಗೆ ಜಿಯಾ ಖಾನ್​ ಅವರಿಗೆ ಪ್ರೀತಿ ಚಿಗುರಿತ್ತು. ಆದರೆ ಈ ರಿಲೇಶನ್​ಶಿಪ್​ನಲ್ಲಿ ಜಿಯಾ ಖಾನ್​ ತೀವ್ರ ನೋವು ಅನುಭವಿಸಿದ್ದರು ಹಾಗೂ ಅವರ ಸಾವಿಗೆ ಸೂರಜ್​ ಪಾಂಚೋಲಿ ಕಾರಣ ಎಂಬುದು ಜಿಯಾ ಖಾನ್​ ತಾಯಿಯ ವಾದ.

ಇದನ್ನೂ ಓದಿ: ಸಾಯುವುದಕ್ಕೂ ಮೊದಲು ಎರಡು ಗಂಟೆಗಳ ಕಾಲ ತಮ್ಮ ಹೆಸರನ್ನೇ ಗೂಗಲ್​ ಮಾಡಿದ್ದ ಸುಶಾಂತ್​?

ಪೊಲೀಸರಿಗೆ ಜಿಯಾ ಖಾನ್​ ಮನೆಯಲ್ಲಿ ಡೆತ್​ ನೋಟ್​ ಕೂಡ ಪತ್ತೆ ಆಗಿತ್ತು. ಸೂರಜ್​ ಪಾಂಚೋಲಿ ಜೊತೆಗಿನ ಸಂಬಂಧದಿಂದ ತಾವು ಅನುಭವಿಸಿದ ಕಷ್ಟಗಳನ್ನು ಅವರು ಡೆತ್​ ನೋಟ್​ನಲ್ಲಿ ಎಳೆಎಳೆಯಾಗಿ ವಿವರಿಸಿದ್ದರು. ಒಂದುವೇಳೆ ಈ ಪ್ರಕರಣದಲ್ಲಿ ಸೂರಜ್​ ಪಾಂಚೋಲಿ ತಪ್ಪಿತಸ್ಥ ಎಂದು ಸಾಬೀತಾದರೆ ಕಠಿಣ ಶಿಕ್ಷೆ ಆಗುವ ಸಾಧ್ಯತೆ ಇದೆ. ಜಿಯಾ ಖಾನ್​ ಸಾವಿಗೆ ಸೂಕ್ತ ನ್ಯಾಯ ಸಿಗಬೇಕು, ಅಪರಾಧಿಗಳಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಅಭಿಮಾನಿಗಳು ಮತ್ತು ಕುಟುಂಬದವರು ಬಯಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್