‘ದಿ ಕೇರಳ ಸ್ಟೋರಿ ಅಂಥ ಸಿನಿಮಾಗಳನ್ನು ಜನರು ನೋಡಬೇಕು’; ಅಚ್ಚರಿಯ ಹೇಳಿಕೆ ನೀಡಿದ ಕಮಲ್ ಹಾಸನ್

The Kerala Story Movie: ‘ನಾನು ಯಾವುದೇ ಸಿನಿಮಾ ಬ್ಯಾನ್ ಮಾಡಲು ಬಯಸಲ್ಲ. ಚಿತ್ರವನ್ನು ಮತ್ತು ಚಿತ್ರದ ಉದ್ದೇಶ ಏನು ಎಂಬುದನ್ನು ಜನರಿಗೆ ಅರ್ಥಮಾಡಿಸಲು ನಾನು ಪ್ರಯತ್ನಿಸುತ್ತೇನೆ’ ಎಂದಿದ್ದಾರೆ ಕಮಲ್ ಹಾಸನ್.  

‘ದಿ ಕೇರಳ ಸ್ಟೋರಿ ಅಂಥ ಸಿನಿಮಾಗಳನ್ನು ಜನರು ನೋಡಬೇಕು’; ಅಚ್ಚರಿಯ ಹೇಳಿಕೆ ನೀಡಿದ ಕಮಲ್ ಹಾಸನ್
ಅದಾ ಶರ್ಮಾ-ಕಮಲ್ ಹಾಸನ್
Follow us
|

Updated on: Jun 03, 2023 | 10:32 AM

ಕಮಲ್ ಹಾಸನ್ (Kamal Haasan) ಅವರು ಚಿತ್ರರಂಗದಲ್ಲಿ ನಡೆಯುವ ಅನೇಕ ಆಗುಹೋಗುಗಳ ಬಗ್ಗೆ ಮಾತನಾಡುತ್ತಾರೆ. ಇತ್ತೀಚೆಗೆ ಮಾತನಾಡಿದ್ದ ಅವರು ‘ದಿ ಕೇರಳ ಸ್ಟೋರಿ’ ಸಿನಿಮಾ (The Kerala Story Movie) ಬಗ್ಗೆ ಅಪಸ್ವರ ತೆಗೆದಿದ್ದರು. ಈ ಬಾರಿ ಅವರು ಮತ್ತೆ ಅದೇ ವಿಚಾರ ಹೇಳಿದ್ದಾರೆ. ಆದರೆ, ಹೇಳುವ ವಿಧಾನ ಬದಲಿಸಿದ್ದಾರೆ. ‘ಎಲ್ಲರೂ ದಿ ಕೇರಳ ಸ್ಟೋರಿ ಅಂಥ ಸಿನಿಮಾಗಳನ್ನು ನೋಡಬೇಕು’ ಎಂದು ಹೇಳಿದ್ದಾರೆ. ಅವರು ಈ ರೀತಿ ಹೇಳುವುದಕ್ಕೂ ಒಂದು ಕಾರಣ ಇದೆ. ಅವರು ಯಾವ ಅರ್ಥದಲ್ಲಿ ಇದನ್ನು ಹೇಳಿದ್ದಾರೆ ಎಂಬುದಕ್ಕೆ ಈ ಸ್ಟೋರಿಯಲ್ಲಿದೆ ಉತ್ತರ.

‘ಇಂಡಿಯಾ ಟುಡೇ ಕಾನ್​​ಕ್ಲೇವ್ ಸೌತ್ 2023’ನಲ್ಲಿ ಭಾಗಿ ಆಗಿ ಕಮಲ್ ಹಾಸನ್ ಮಾತನಾಡಿದ್ದಾರೆ. ‘ನಾನು ಯಾವುದೇ ಸಿನಿಮಾ ಬ್ಯಾನ್ ಮಾಡಲು ಬಯಸಲ್ಲ. ಚಿತ್ರವನ್ನು ಮತ್ತು ಚಿತ್ರದ ಉದ್ದೇಶ ಏನು ಎಂಬುದನ್ನು ಜನರಿಗೆ ಅರ್ಥಮಾಡಿಸಲು ನಾನು ಪ್ರಯತ್ನಿಸುತ್ತೇನೆ’ ಎಂದಿದ್ದಾರೆ ಕಮಲ್ ಹಾಸನ್.

‘ವಿಶ್ವರೂಪಂ ಸಿನಿಮಾ ತಮಿಳುನಾಡಿನಲ್ಲಿ ಬ್ಯಾನ್ ಆಯಿತು. ಇದನ್ನು ಏಕೆ ನಿಷೇಧಿಸಲಾಯಿತು ಎಂಬ ಬಗ್ಗೆ ಜನರಿಗೆ ಇನ್ನೂ ತಿಳಿದಿಲ್ಲ. ಆ ಬಳಿಕ ರಾಜ್ ಕಮಲ್ ಫಿಲ್ಮ್ಸ್​ ಮತ್ತು ತಮಿಳುನಾಡು ಸರ್ಕಾರದ ನಡುವೆ ಕಾನೂನಾತ್ಮಕ ಹೋರಾಟ ಆಯಿತು. ನಾವು ಪ್ರಕರಣವನ್ನು ಗೆದ್ದು ತಮಿಳುನಾಡಿನಲ್ಲಿ ಸಿನಿಮಾ ಬಿಡುಗಡೆ ಮಾಡಿದೆವು. ನಾನು ಯಾವುದೇ ಸಿನಿಮಾನ ನಿಷೇಧಿಸಬೇಕು ಎಂದು ಪ್ರತಿಪಾದಿಸುವುದಿಲ್ಲ’ ಎಂದಿದ್ದಾರೆ ಅವರು.

‘ದಿ ಕೇರಳ ಸ್ಟೋರಿ’ ಚಿತ್ರವನ್ನು ಅವರು ನೋಡುವಂತೆ ಜನರ ಬಳಿ ಕೇಳಿದ್ದಾರೆ. ‘ನಮ್ಮ ದೇಶದಲ್ಲಿ ಯಾರು ಬೇಕಾದರೂ ಮುಕ್ತವಾಗಿ ಮಾತನಾಡಬಹುದು. ದಿ ಕೇರಳ ಸ್ಟೋರಿ ಅಂಥ ಚಿತ್ರಗಳನ್ನು ಜನರು ಸತ್ಯ ಎಂದು ಭಾವಿಸಿ ಹೋಗಿ ವೀಕ್ಷಿಸಬಾರದು. ಈ ರೀತಿಯ ಚಿತ್ರಗಳನ್ನು ಜನರು ನೋಡಬೇಕು ಮತ್ತು ಆ ಬಳಿಕ ಆಲೋಚಿಸಬೇಕು’ ಎಂದಿದ್ದಾರೆ ಅವರು.

ಇದನ್ನೂ ಓದಿ: ‘ದಿ ಕೇರಳ ಸ್ಟೋರಿ ಹಿಟ್​ ಆಗಿದ್ದು ಅಪಾಯಕಾರಿ ಟ್ರೆಂಡ್​’: ವಿವಾದಿತ ಚಿತ್ರದ ಬಗ್ಗೆ ನಸೀರುದ್ದೀನ್​ ಶಾ ಟೀಕೆ

‘ದಿ ಕೇರಳ ಸ್ಟೋರಿ’ ಸಿನಿಮಾ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಕೇರಳದಲ್ಲಿ ನಡೆದಿದೆ ಎನ್ನಲಾದ ಮತಾಂತರದ ಕುರಿತು ಈ ಸಿನಿಮಾ ಇದೆ. ಆರಂಭದಲ್ಲಿ ಈ ಚಿತ್ರ 32 ಸಾವಿರ ಜನರ ಕಥೆ ಎಂದು ನಿರ್ದೇಶಕ ಸುದಿಪ್ತೋ ಸೇನ್ ಹೇಳಿದ್ದರು. ಕೇಸ್ ದಾಖಲಾದ ಬಳಿಕ ಇದನ್ನು 3 ಎಂದು ಬದಲಾಯಿಸಿದ್ದರು. ಅದಾ ಶರ್ಮಾ ಚಿತ್ರದಲ್ಲಿ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ ಇದನ್ನೂ ಓದಿ:

20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ