ಬಾಲ್ಯ ಸ್ನೇಹಿತರಿಂದಲೇ ಸಾಲು ಸಾಲು ಕಳ್ಳತನ; ಆರೋಪಿಗಳನ್ನ ಬಂಧಿಸಿದ ಯಲಹಂಕ ಉಪನಗರ ಪೊಲೀಸರು, ಹುಬ್ಬಳ್ಳಿ  ಕೊಲೆ ಪ್ರಕರಣ; ಪ್ರಿಯತಮನ ಜೊತೆ ಸೇರಿ ತಮ್ಮನನ್ನೇ ಕೊಲೆಗೈದ ಅಕ್ಕ

| Updated By: ವಿವೇಕ ಬಿರಾದಾರ

Updated on: May 16, 2022 | 11:01 AM

ಬಾಲ್ಯದಿಂದಲೇ ಸಾಲು ಸಾಲು ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಯಲಹಂಕ ಉಪನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಾಲ್ಯ ಸ್ನೇಹಿತರಿಂದಲೇ ಸಾಲು ಸಾಲು ಕಳ್ಳತನ; ಆರೋಪಿಗಳನ್ನ ಬಂಧಿಸಿದ ಯಲಹಂಕ ಉಪನಗರ ಪೊಲೀಸರು, ಹುಬ್ಬಳ್ಳಿ  ಕೊಲೆ ಪ್ರಕರಣ; ಪ್ರಿಯತಮನ ಜೊತೆ ಸೇರಿ ತಮ್ಮನನ್ನೇ ಕೊಲೆಗೈದ ಅಕ್ಕ
ಸಾಂಕೇತಿಕ ಚಿತ್ರ
Follow us on

ಬೆಂಗಳೂರು: ಬಾಲ್ಯದಿಂದಲೇ ಸಾಲು ಸಾಲು ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಯಲಹಂಕ (Yalahanka) ಉಪನಗರ ಠಾಣೆ ಪೊಲೀಸರು (Police) ಬಂಧಿಸಿದ್ದಾರೆ. ದರ್ಶನ್(21), ದಿನೇಶ್(23), ಜಾರ್ಜ್(20) ಬಂಧಿತ ಆರೋಪಿಗಳಾಗಿದ್ದು, ಬಂಧಿತರಿಂದ 1.5 ಲಕ್ಷ ರೂ. ಮೌಲ್ಯದ 9 ಮೊಬೈಲ್​ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಹಿಂದೆ 2019ರಲ್ಲಿ ಬೈಕ್ ಕಳ್ಳತನ ಪ್ರಕರಣದಲ್ಲಿ ಮೂವರು ಆರೋಪಿಗಳು ಜೈಲು ಸೇರಿದ್ದರು.

ಆರೋಪಿಗಳು ಬಾಲ್ಯ ಸ್ನೇಹಿತರಾಗಿದ್ದು, ಬಾಲ್ಯದಲ್ಲೇ ಸಣ್ಣ ಪುಟ್ಟ ಕಳ್ಳತನ ಮಾಡುತ್ತಿದ್ದರು. ಬೆಳಿತಾ ಬೆಳಿತಾ ದರೋಡೆಕೊರರಾದರು. ಆರೋಪಿ ದರ್ಶನ್ ತಂದೆ ತಾಯಿ, ದರ್ಶನ್ ಬಾಲ್ಯದಲ್ಲಿದ್ದಾಗಲೇ ಮೃತಪಟ್ಟಿದ್ದರು. ದಿನೇಶ್, ಜಾರ್ಜ್ ಜೊತೆ ಸೇರಿ ಮೊದಲಿಗೆ ಸಣ್ಣಪುಟ್ಟ ಕಳ್ಳತನ ಮಾಡುತ್ತಿದ್ದನು. ನಂತರ ಖರ್ತನಾಕ್ ಕಳ್ಳರು ಬೈಕ್ ಕದಿಯೋಕೆ ಶುರು ಮಾಡಿದರು. 2019 ರಲ್ಲಿ ಬೈಕ್ ಕಳ್ಳತನ ಮಾಡಿ ಜೈಲು ಸೇರಿದ್ದರು. ಆರೋಪಿಗಳು ಜೈಲಿನಿಂದ ಹೊರ ಬಂದ ಮೇಲೂ ತಮ್ಮ ಚಾಳಿ ಬಿಡದೆ ಮೊಬೈಲ್ ಕಳ್ಳತನಕ್ಕೆ ಇಳಿದಿದ್ದರು.

ಹುಬ್ಬಳ್ಳಿ  ಕೊಲೆ ಪ್ರಕರಣ; ಪ್ರಿಯತಮನ ಜೊತೆ ಸೇರಿ ತಮ್ಮನನ್ನೇ ಕೊಲೆಗೈದ ಅಕ್ಕ

ಇದನ್ನೂ ಓದಿ
ಮತ್ತೆ ಹೋರಾಟಕ್ಕೆ ಇಳಿದ ಆಶಾ ಕಾರ್ಯಕರ್ತೆಯರು! ಬೆಂಗಳೂರಿನಲ್ಲಿ ನಾಳೆ ಬೃಹತ್ ಪ್ರತಿಭಟನೆ
ಮಂಗಳೂರಿನಲ್ಲಿ ನವೀಕರಣಕ್ಕಾಗಿ ದರ್ಗಾ ಕೆಡವಿದಾಗ ದೇವಸ್ಥಾನದ ಮಾದರಿ ಪತ್ತೆ ವಿಚಾರ; ಅಷ್ಟಮಂಗಲ ಪ್ರಶ್ನೆ ಮೊರೆ ಹೋದ ಹಿಂದೂ ಸಂಘಟನೆ
PM Modi: ಬುದ್ಧ ಪೂರ್ಣಿಮೆ ಹಿನ್ನೆಲೆ; ಇಂದು ನೇಪಾಳಕ್ಕೆ ಪ್ರಧಾನಿ ನರೇಂದ್ರ ಮೋದಿ
Pallavi Dey: ಕಿರುತೆರೆ ನಟಿ ಪಲ್ಲವಿ ಡೇ ನಿಧನ; ಅನುಮಾನಾಸ್ಪದ ರೀತಿಯಲ್ಲಿ ಪತ್ತೆ ಆಯ್ತು ಮೃತ ದೇಹ

ಹುಬ್ಬಳ್ಳಿ: ಮೇ 14ರಂದು ಹುಬ್ಬಳ್ಳಿ (Hubli) ತಾಲೂಕಿನ ಅದರಗುಂಚಿ ಗ್ರಾಮದಲ್ಲಿ ಶಂಭುಲಿಂಗ ಕಮಡೊಳ್ಳಿ(35) ವ್ಯಕ್ತಿಯ ಕೊಲೆಯಾಗಿತ್ತು. ಪ್ರಕರಣದ ಜಾಡು ಭೇದಿಸಿದ ಹುಬ್ಬಳ್ಳಿಯ ಗ್ರಾಮೀಣ ಠಾಣೆಯ ಪೊಲೀಸರು (Police) ಸ್ಪೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. ಪ್ರಿಯತಮನ ಜೊತೆ ಸೇರಿ ಅಕ್ಕ ತಮ್ಮನನ್ನೇ ಕೊಲೆಗೈದ್ದಿದ್ದಾಳೆ. ಅನೈತಿಕ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದಾನೆಂದು ಒಡಹುಟ್ಟಿದ ತಮ್ಮನ್ನು ಅಕ್ಕ ಕೊಲೆ ಮಾಡಿದ್ದಾಳೆ. ಅಕ್ಕ ಬಸಮ್ಮ ನರಸಣ್ಣವರ ಮತ್ತು ಪ್ರಿಯಕರ ಚನ್ನಪ್ಪ ಮರೆಪ್ಪಗೌಡ ವಿರುದ್ಧ ಕೊಲೆ ಆರೋಪದಡಿ ಪ್ರಕರಣ ದಾಖಲಾಗಿದೆ.

ಕಳೆದ ಐದಾರು ವರ್ಷಗಳಿಂದ ಇಬ್ಬರ ನಡುವೆ ಅನೈತಿಕ ಸಂಬಂಧವಿತ್ತು. ಇವರ ಅನೈತಿಕ ಸಂಬಂಧಕ್ಕೆ ತಮ್ಮ ಅಡ್ಡಿಯಾಗುತ್ತಿದ್ದಾನೆಂದು ಅಕ್ಕ ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿದ್ದಳು. ತಮ್ಮನನ್ನು ಕೊಲೆಗೈದು ತಮ್ಮನ ಶವದ ಎದುರು ಅಕ್ಕ ಕುಳಿತು ಕಣ್ಣಿರು ಹಾಕಿ ನಾಟಕವಾಡಿದ್ದಳು. ಹತ್ಯೆಯಾದ ಶಂಭುಲಿಂಗ ಕಮಡೊಳ್ಳಿ ಮತ್ತು ಆರಪಿ ಚನ್ನಪ್ಪ ಮರೆಪ್ಪಗೌಡ ಸ್ನೇಹಿತರಾಗಿದ್ದರು. ಶಂಭುಲಿಂಗ ಕಮಡೊಳ್ಳಿಗೆ ಮದ್ಯ ಕುಡಿಸಿ ಚನ್ನಪ್ಪ ಕೊಲೆಮಾಡಿ ಪರಾರಿಯಾಗಿದ್ದನು.

Published On - 11:01 am, Mon, 16 May 22