AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pallavi Dey: ಕಿರುತೆರೆ ನಟಿ ಪಲ್ಲವಿ ಡೇ ನಿಧನ; ಅನುಮಾನಾಸ್ಪದ ರೀತಿಯಲ್ಲಿ ಪತ್ತೆ ಆಯ್ತು ಮೃತ ದೇಹ

Pallavi Dey Death: ಪ್ರಿಯಕರ ಶಾಗ್ನಿಕ್​ ಚರ್ಕವರ್ತಿ ಜೊತೆ ಪಲ್ಲವಿ ಡೇ ವಾಸವಾಗಿದ್ದರು. ಅವರ ಮೃತ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ಆಗಿದೆ.

Pallavi Dey: ಕಿರುತೆರೆ ನಟಿ ಪಲ್ಲವಿ ಡೇ ನಿಧನ; ಅನುಮಾನಾಸ್ಪದ ರೀತಿಯಲ್ಲಿ ಪತ್ತೆ ಆಯ್ತು ಮೃತ ದೇಹ
ಪಲ್ಲವಿ ಡೇ
TV9 Web
| Edited By: |

Updated on:May 16, 2022 | 9:49 AM

Share

ಕಿರುತೆರೆಯಲ್ಲಿ ಜನಪ್ರಿಯತೆ ಪಡೆದಿದ್ದ ನಟಿ ಪಲ್ಲವಿ ಡೇ (Pallavi Dey) ಅವರು ನಿಧನರಾಗಿದ್ದಾರೆ. ಅನುಮಾನಾಸ್ಪದ ರೀತಿಯಲ್ಲಿ ಅವರ ಸಾವು ಸಂಭವಿಸಿದೆ. ಬೆಂಗಾಲಿ ಕಿರುತೆರೆಯ ಅನೇಕ ಧಾರಾವಾಹಿಗಳಲ್ಲಿ ಅವರು ನಟಿಸುವ ಮೂಲಕ ಮನೆಮಾತಾಗಿದ್ದರು. ಅವರ ನಿಧನದ ಸುದ್ದಿ ಕೇಳಿ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಪಲ್ಲವಿ ಡೇ ಸಾವಿನ (Pallavi Dey Death) ಬಗ್ಗೆ ಕುಟುಂಬದವರು ಅನುಮಾನ ವ್ಯಕ್ತಪಡಿಸಿದ್ದಾರೆ. ಅವರ ಆಪ್ತರಿಗೆ ದಿಕ್ಕೇ ತೋಚದಂತಾಗಿದೆ. ದಕ್ಷಿಣ ಕೊಲ್ಕತ್ತಾದ ಬಾಡಿಗೆ ಮನೆಯಲ್ಲಿ ಪಲ್ಲವಿ ಡೇ ಅವರು ವಾಸವಾಗಿದ್ದರು. ಶನಿವಾರ (ಮೇ 14) ರಾತ್ರಿ ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ಆಗಿದೆ. ಪ್ರಿಯಕರ ಶಾಗ್ನಿಕ್​ ಚರ್ಕವರ್ತಿ ಜೊತೆಗೆ ಪಲ್ಲವಿ ಡೇ ವಾಸವಾಗಿದ್ದರು. ಹಾಗಾಗಿ ಅವರ ಮೇಲೆ ಈಗ ಅನುಮಾನ ಮೂಡುವಂತಾಗಿದೆ. ಪಲ್ಲವಿ ಡೇ ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾರೆ ಎಂದು ಕೆಲವರು ಶಂಕಿಸಿದ್ದಾರೆ. ಈ ಪ್ರಕರಣದ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ. ತನಿಖೆ ಪೂರ್ಣಗೊಂಡ ಬಳಿಕ ಪಲ್ಲವಿ ಡೇ ಸಾವಿಗೆ ಕಾರಣ ಏನು ಎಂಬುದು ತಿಳಿದುಬರಬೇಕಿದೆ. ಅವರ ಅಕಾಲಿಕ ಮರಣಕ್ಕೆ ಅಭಿಮಾನಿಗಳು, ಆಪ್ತರು ಸಂತಾಪ ಸೂಚಿಸುತ್ತಿದ್ದಾರೆ. ಪಲ್ಲವಿ ಡೇ ಕುಟುಂಬದಲ್ಲಿ ತೀವ್ರ ಶೋಕದ ವಾತಾವರಣ ನಿರ್ಮಾಣ ಆಗಿದೆ.

‘ಮೋನ್ ಮಾನೆ ನಾ’ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಪಲ್ಲವಿ ಡೇ ನಟಿಸಿದ್ದರು. ಅವರದ್ದು ಆತ್ಮಹತ್ಯೆ ಅಲ್ಲ ಎಂದು ಪೋಷಕರು ಆರೋಪಿಸುತ್ತಿದ್ದಾರೆ. ಪಲ್ಲವಿ ಜತೆ ವಾಸಿಸುತ್ತಿದ್ದ ಶಾಗ್ನಿಕ್​ ಚರ್ಕವರ್ತಿ ಅವರು ಸಿಗರೇಟ್​ ತರಲು ಮನೆಯಿಂದ ಹೊರಗೆ ಹೋಗಿದ್ದರು. ಅವರು ವಾಪಸ್​​ ಬರುವುದರೊಳಗೆ ಪಲ್ಲವಿ ಡೇ ನೇಣು ಬಿಗಿದುಕೊಂಡರು. ಅವರ ಶವವನ್ನು ಮೊದಲ ಬಾರಿಗೆ ನೋಡಿದ್ದು ಶಾಗ್ನಿಕ್​ ಚರ್ಕವರ್ತಿ. ಇಬ್ಬರ ನಡುವೆ ಏನಾದರೂ ಮನಸ್ತಾಪ ಇತ್ತ ಎಂಬ ಕುರಿತು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಪಲ್ಲವಿ ಡೇ ಮತ್ತು ಶಾಗ್ನಿಕ್​ ಚರ್ಕವರ್ತಿ ಸಂಬಂಧದ ಬಗ್ಗೆ ಪಲ್ಲವಿ ಪೋಷಕರು ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ‘ಅವರಿಬ್ಬರು ಜೊತೆಯಾಗಿ ವಾಸಿಸುತ್ತಿರುವುದರ ಬಗ್ಗೆ ನಮಗೆ ಒಪ್ಪಿಗೆ ಇರಲಿಲ್ಲ. ಆದರೂ ಅವರು ಪ್ರಬುದ್ಧರು ಎಂಬ ಕಾರಣಕ್ಕೆ ಒಪ್ಪಿಗೆ ನೀಡಿದ್ದೆವು. ಬೇರೆ ಮನೆಯಲ್ಲಿ ವಾಸವಾಗಿರು ಎಂದು ನಾವು ಶಾಗ್ನಿಕ್​ ಚರ್ಕವರ್ತಿಗೆ ಕೆಲವು ಬಾರಿ ಹೇಳಿದ್ದೆವು. ಇಬ್ಬರ ನಡುವೆ ಯಾವುದೇ ದೊಡ್ಡ ಸಮಸ್ಯೆ ಇರಲಿಲ್ಲ. ನಂತರ ಏನಾಯಿತೋ ಗೊತ್ತಿಲ್ಲ’ ಎಂದು ಪಲ್ಲವಿ ಡೇ ತಾಯಿ ಹೇಳಿದ್ದಾರೆ.

ಇದನ್ನೂ ಓದಿ
Image
Anekal Balaraj Death: ‘ಕರಿಯ’ ಸಿನಿಮಾ ನಿರ್ಮಾಪಕ ಆನೇಕಲ್​ ಬಾಲರಾಜ್​ ಇನ್ನಿಲ್ಲ; ಬೆಂಗಳೂರಿನಲ್ಲಿ ಅಪಘಾತದಿಂದ ನಿಧನ
Image
ಪಾರ್ವತಮ್ಮ ರಾಜ್​ಕುಮಾರ್ ಸಹೋದರಿ ಎಸ್​.ಎ. ನಾಗಮ್ಮ ನಿಧನ
Image
18ನೇ ವಯಸ್ಸಿಗೆ ಮದುವೆ, ನಿರಂತರ ಕಿರುಕುಳ; ಕಿಟಕಿ ಸರಳಿಗೆ ನೇಣು ಬಿಗಿದುಕೊಂಡು ಯುವನಟಿಯ ಆತ್ಮಹತ್ಯೆ
Image
Samanvi: ಭೀಕರ ರಸ್ತೆ ಅಪಘಾತದಲ್ಲಿ ಕಿರುತೆರೆ ನಟಿ ಅಮೃತಾ ನಾಯ್ಡು ಮಗಳು ಸಮನ್ವಿ ಸ್ಥಳದಲ್ಲೇ ನಿಧನ

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 9:43 am, Mon, 16 May 22

ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!