ತುಮಕೂರು, ಜನವರಿ 06: ಕಾರು ಡಿಕ್ಕಿಯಾಗಿ (collision) ಬೈಕ್ನಲ್ಲಿ ತೆರಳುತ್ತಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ತುರುವೇಕೆರೆ ತಾಲೂಕಿನ ಜೋಡಗಟ್ಟೆ ಗ್ರಾಮದ ಬಳಿ ಸಂಭವಿಸಿದ ಭೀಕರ ಅಪಘಾತ ಸಂಭವಿಸಿದೆ. ತಿಪಟೂರು ಮೂಲದ 21 ವರ್ಷದ ಅನಿಲ್ ಕುಮಾರ್, ನರಸಿಂಹ ಮೂರ್ತಿ (21) ಹಾಗೂ ಕಾವ್ಯಾ (19) ಮೃತರು. ಆದಿಚುಂಚನಗಿರಿ ಮಠಕ್ಕೆ ಹೋಗಿ ವಾಪಸಾಗುವಾಗ ಘಟನೆ ನಡೆದಿದೆ. ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಮೃತದೇಹಗಳು ಆದಿಚುಂಚನಗಿರಿ ಆಸ್ಪತ್ರೆಯ ಶವಗಾರಕ್ಕೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ತುರುವೇಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ತುಮಕೂರಲ್ಲಿ ರೌಡಿಶೀಟರ್ ಮನೋಜ್ ಅಲಿಯಾಸ್ ಮಂಡೇಲಾ ಕಾಲಿಗೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ತುಮಕೂರು ತಾಲೂಕಿನ ಒಕ್ಕೋಡಿ ಬಳಿ ಘಟನೆ ನಡೆದಿದೆ. ಬೆಳಗ್ಗೆ ಬಂಡೆ ನಾಗನ ಮೇಲೆ ಕೊಲೆಗೆ ಯತ್ನಿಸಿದ್ದ ರೌಡಿ, ತಪ್ಪಿಸಿಕೊಂಡು ಜೀವ ಉಳಿಕೊಂಡಿದ್ದ ಬಂಡೆನಾಗ. ಕೊಲೆ ಯತ್ನದ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದ. ತುಮಕೂರು ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಇದನ್ನೂ ಓದಿ: 2 ಸರ್ಕಾರಿ ಬಸ್‌ಗಳ ಮಧ್ಯೆ ಡಿಕ್ಕಿ: ಇಬ್ಬರು ಸಾವು, 10ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ
ಪೊಲೀಸರು ಮನೋಜ್ಗಾಗಿ ಹುಡುಕಾಟ ನಡೆಸಿದ್ದರು. ಒಕ್ಕೋಡಿಯಲ್ಲಿ ತಲೆ ಮರೆಸಿಕೊಂಡಿರುವುದಾಗಿ ಮಾಹಿತಿ ಹಿನ್ನೆಲೆ ಮನೋಜ್ ಬಂಧನಕ್ಕೆ ತೆರಳಿದ್ದ ವೇಳೆ ಹೆಡ್ ಕಾನ್ಸ್ಟೇಬಲ್ ಮೇಲೆ ರೌಡಿ ಮಚ್ಚು ಬೀಸಿದ್ದಾನೆ. ಆತ್ಮರಕ್ಷಣೆಗಾಗಿ ತುಮಕೂರು ಸಿಪಿಐ ದಿನೇಶ್ ಕುಮಾರ್ರಿಂದ ಪೈರಿಂಗ್ ಮಾಡಲಾಗಿದೆ. ಮನೋಜ್‌ಗೆ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಧಾರವಾಡ: ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದವರನ್ನ ಆಸ್ಪತ್ರೆಗೆ ದಾಖಲಿಸಿ ಸಚಿವ ಸಂತೋಷ್ ಲಾಡ್ ಮಾನವೀಯತೆ ಮೆರೆದಿದ್ದಾರೆ. ನಗರದ ಹೊರವಲಯದ ಕೆಲಗೇರಿ ರೈಲ್ವೆ ಕ್ರಾಸಿಂಗ್ ಬಳಿ ಸರಣಿ ಬೈಕ್ ಅಪಘಾತ ಸಂಭವಿಸಿ ನಾಲ್ವರು ಗಾಯಗೊಂಡಿದ್ದರು. ಇದೇ ವೇಳೆ ಅಳ್ನಾವರದಿಂದ ಧಾರವಾಡದತ್ತ ಬರುತ್ತಿದ್ದಾಗ ಗಾಯಾಳುಗಳನ್ನ ಆಸ್ಪತ್ರೆಗೆ ಸಾಗಿಸಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:57 pm, Sat, 6 January 24