Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾವಣಗೆರೆ: ಕಳವಾಗಿರುವ ಮೊಬೈಲ್​ ಪತ್ತೆಹಚ್ಚುವುದು ಹೇಗೆ? ನಿಮ್ಮ ಮೊಬೈಲ್ ಮಿಸ್ ಆಗಿದ್ದರೆ ಈ ಆ್ಯಪ್​ ಮೂಲಕ ನೋಂದಾಯಿಸಿ

ದಾವಣಗೆರೆ ಜಿಲ್ಲೆಯಲ್ಲಿ ಕಳವಾಗಿದ್ದ ಅಥವಾ ಕಳೆದುಹೋಗಿದ್ದ ಸುಮಾರು 25 ಲಕ್ಷ ಮೌಲ್ಯದ 880 ಮೊಬೈಲ್​ಗಳನ್ನು ಪೊಲೀಸರು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗಾದರೆ, ಕಳವಾಗಿರುವ ಅಥವಾ ಮಿಸ್ ಆಗಿರುವ ಮೊಬೈಲ್​ಗಳನ್ನು ಪತ್ತೆಹಚ್ಚುವುದು ಹೇಗೆ? ಆ ಆ್ಯಪ್ ಯಾವುದು? ನಿಮ್ಮ ಮೊಬೈಲ್ ಕಳೆದುಹೋಗಿದ್ದರೆ ಕೂಡಲೇ ಈ ಆ್ಯಪ್ ಮೂಲಕ ನೋಂದಾಯಿಸಿಕೊಳ್ಳಿ.

ದಾವಣಗೆರೆ: ಕಳವಾಗಿರುವ ಮೊಬೈಲ್​ ಪತ್ತೆಹಚ್ಚುವುದು ಹೇಗೆ? ನಿಮ್ಮ ಮೊಬೈಲ್ ಮಿಸ್ ಆಗಿದ್ದರೆ ಈ ಆ್ಯಪ್​ ಮೂಲಕ ನೋಂದಾಯಿಸಿ
ಕಳವಾಗಿರುವ ಅಥವಾ ಕಳೆದು ಹೋಗಿದ್ದ ಮೊಬೈಲ್​ಗಳನ್ನು ದಾವಣಗೆರೆ ಎಸ್​ಪಿ ಉಮಾ ಪ್ರಶಾಂತ ಅವರು ಮಾಲೀಕರಿಗೆ ಹಿಂದಿರುಗಿಸಿದರು
Follow us
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Updated By: Rakesh Nayak Manchi

Updated on: Jan 06, 2024 | 7:19 PM

ದಾವಣಗರೆ, ಜ.6: ಜಿಲ್ಲೆಯಲ್ಲಿ (Davanagere) ಕಳವಾಗಿದ್ದ ಅಥವಾ ಕಳೆದುಹೋಗಿದ್ದ ಸುಮಾರು 25 ಲಕ್ಷ ಮೌಲ್ಯದ 880 ಮೊಬೈಲ್​ಗಳನ್ನು ಪೊಲೀಸರು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಪತ್ತೆಹಚ್ಚಿದ ಮೊಬೈಲ್​ಗಳನ್ನು ಪೊಲೀಸರು ಸಂಬಂಧಪಟ್ಟವರಿಗೆ ಹಿಂದಿರುಗಿಸಿದ್ದಾರೆ. ಹಾಗಾದರೆ, ಕಳವಾಗಿರುವ ಅಥವಾ ಮಿಸ್ ಆಗಿರುವ ಮೊಬೈಲ್​ಗಳನ್ನು ಪತ್ತೆಹಚ್ಚುವುದು ಹೇಗೆ? ಆ ಆ್ಯಪ್ ಯಾವುದು? ನಿಮ್ಮ ಮೊಬೈಲ್ ಕಳೆದುಹೋಗಿದ್ದರೆ ಕೂಡಲೇ ಈ ಆ್ಯಪ್ ಮೂಲಕ ನೋಂದಾಯಿಸಿಕೊಳ್ಳಿ.

ಪೊಲೀಸ್ ಇಲಾಖೆಯ CEIR ಪೋರ್ಟಲ್​ನಲ್ಲಿ ಮೊಬೈಲ್ ಕಳೆದುಕೊಂಡವರು ಮಾಹಿತಿ ದಾಖಲಿಸಿದರೆ ಕಳೆದುಕೊಂಡ ಮೊಬೈಲ್ ಪತ್ತೆ ಮಾಡಲು ಅನುಕೂಲ ಆಗುತ್ತದೆ. ಈ ಬಗ್ಗೆ ಸಾರ್ವಜನಿಕರು ಗಮನ ಹರಿಸಬೇಕು ಎಂದು ಎಸ್​ಪಿ ಉಮಾ ಪ್ರಶಾಂತ ಹೇಳಿದರು.

ಕಳುವಾದ ಅಥವಾ ಕಳೆದು ಹೋದು ಮೊಬೈಲ್​ ಫೋನ್​ಗಳನ್ನು CEIR PORTAL ನಲ್ಲಿ ಮೊಬೈಲ್ ವಾರಸುದಾರರ ವಿವರಗಳನ್ನು ನಮೂದು ಮಾಡಿ ಮೊಬೈಲ್ IMEI ನಂಬರ್ ಅನ್ನು ಬ್ಲಾಕ್​ ಮಾಡಬೇಕು. ನಂತರ ಆ ಮೊಬೈಲ್​ನಲ್ಲಿ ಬೇರೊಂದು ಸಿಮ್ ಹಾಕಿದ ಕೂಡಲೇ ಪೋರ್ಟಲ್​ನಲ್ಲಿ ಲಕೇಶ್ ಸಹಿತ ಮೆಸೇಜ್ ಬರುತ್ತದೆ. ಈ ಮೂಲಕ ಕಳವಾದ ಅಥವಾ ಕಳೆದು ಹೋಗಿರುವ ಮೊಬೈಲ್​ಗಳನ್ನು ಪತ್ತೆಹಚ್ಚಲಾಗುತ್ತದೆ.

ಇದನ್ನೂ ಓದಿ; ದಾವಣಗೆರೆ: ಕಪ್ಪು ಬಣ್ಣಕ್ಕೆ ತಿರುಗಿದ ಸೂಳೆಕೆರೆ ನೀರು?; ಸಂತೇಬೆನ್ನೂರು ಗ್ರಾಮಸ್ಥರ ಆಕ್ರೋಶ

2023 ರಲ್ಲಿ ದಾವಣಗೆರೆ ಜಿಲ್ಲಾ ವ್ಯಾಪ್ತಿಯಲ್ಲಿ ಕಳುವಾದ ಅಥವಾ ಕಳೆದು ಹೋದ ಮೊಬೈಲ್​ಗಳ ವಿವರಗಳನ್ನು ಮಾಲೀಕರು ಈ ಪೋರ್ಟಲ್​ನಲ್ಲಿ ನೋಂದಾಯಿಸಿ ಮೊಬೈಲ್ ಐಎಂಇಐ ನಂಬರ್ ಮೂಲಕ ಒಟ್ಟು 3880 ಮೊಬೈಲ್​ಗಳನ್ನು ಬ್ಲಾಕ್ ಮಾಡಲಾಗಿದೆ. ಈ ಪೈಕಿ 880 ಮೊಬೈಲ್​ಗಳನ್ನು ಪತ್ತೆಹಚ್ಚಿ ಸಂಬಂಧಪಟ್ಟವರಿಗೆ ಹಿಂದಿರುಗಿಸಲಾಗಿದೆ.

ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಎಸ್​ಪಿ ಉಮಾ ಅವರು ಪೊಲೀಸರು ಪತ್ತೆಹಚ್ಚಿರುವ ಮೊಬೈಲ್​ಗಳನ್ನು ಸಂಬಂಧಪಟ್ಟವರಿಗೆ ಹಿಂದಿರುಗಿಸಿರು. ಈ ವೇಳೆ ಸಾರ್ವಜನಿಕರಿಗೆ ಕಳುವಾದ ಅಥವಾ ಕಳೆದು ಹೋದ ಮೊಬೈಲ್ ಫೋನ್​ಗಳನ್ನು ಕೆಎಸ್​ಪಿ ಮೊಬೈಲ್ ಆ್ಯಪ್ ಮೂಲಕ e-lostನಲ್ಲಿ ದೂರು ದಾಖಲಿಸಿ, ದೂರಿನ ಪ್ರತಿಯನ್ನು ಡೌನ್​ಲೋಡ್ ಮಾಡಿಕೊಂಡು CEIR web portal (https://www.ceir.gov.in) ಗೆ ಭೇಟಿ ನೀಡಿ ಕೆಎಸ್​ಪಿ ಮೊಬೈಲ್ ಆ್ಯಪ್​ ಮೂಲಕ ಡೌನ್​ಲೋಡ್ ಮಾಡಿಕೊಂಡ ದೂರಿನ ಪ್ರತಿ, ಆಧಾರ್ ಅಥವಾ ಇತರೆ ಗುರುತಿನ ಚೀಟಿ ಅಪ್​ಲೋಡ್ ಮಾಡಿ ಮೊಬೈಲ್ ಬ್ಲಾಕ್ ಮಾಡುವ ವಿಧಾನವನ್ನು ತಿಳಿಸಲಾಯಿತು.

ಸಾರ್ವಜನಿಕರು ತಮ್ಮ ಮೊಬೈಲ್ ಕಳುವಾಗಿದ್ದಲ್ಲಿ ಅಥವಾ ಸುಲಿಗೆಯಾಗಿದ್ದಲ್ಲಿ ಅಥವಾ ಕಳೆದು ಹೋಗಿದ್ದಲ್ಲಿ ಕೂಡಲೇ CEIR ವೆಬ್​ ಪೋರ್ಟಲ್ ಮೂಲಕ ನೋಂದಾಯಿಸಿ ಹಾಗೂ ಇದರ ಸದುಪಯೋಗ ಮಾಡಿಕೊಳ್ಳುವಂತೆ ಪೊಲೀಸರು ಮನವಿ ಮಾಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕಮೆಂಟೇಟರ್ ಜಾನಿ ನಿಜವಾದ ಹೆಸರೇನು? ಈ ಹೆಸರು ಬಂದಿದ್ದು ಹೇಗೆ?
ಕಮೆಂಟೇಟರ್ ಜಾನಿ ನಿಜವಾದ ಹೆಸರೇನು? ಈ ಹೆಸರು ಬಂದಿದ್ದು ಹೇಗೆ?
ಆಣೆ ಪ್ರಮಾಣ ಮಾಡುವುದು ಯಾಕೆ? ಆಣೆ ತಪ್ಪಿದರೆ ಏನಾಗುತ್ತದೆ ನೋಡಿ
ಆಣೆ ಪ್ರಮಾಣ ಮಾಡುವುದು ಯಾಕೆ? ಆಣೆ ತಪ್ಪಿದರೆ ಏನಾಗುತ್ತದೆ ನೋಡಿ
ರವಿ ಮೀನ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ ಇಲ್ಲಿದೆ
ರವಿ ಮೀನ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ ಇಲ್ಲಿದೆ
‘ಕಾವೇರಿ ಆರತಿ’: ಜಲ ರಕ್ಷಣೆ ಬಗ್ಗೆ ಡಿಕೆ ಶಿವಕುಮಾರ್​​ ಪ್ರತಿಜ್ಞಾವಿಧಿ
‘ಕಾವೇರಿ ಆರತಿ’: ಜಲ ರಕ್ಷಣೆ ಬಗ್ಗೆ ಡಿಕೆ ಶಿವಕುಮಾರ್​​ ಪ್ರತಿಜ್ಞಾವಿಧಿ
ಟಿವಿ9 ಎಕ್ಸ್​ಪೋನಲ್ಲಿ ರಾಶಿಕಾ ಶೆಟ್ಟಿ ಸುತ್ತಾಟ, ನಟಿಗೆ ಇಷ್ಟವಾಗಿದ್ದೇನು?
ಟಿವಿ9 ಎಕ್ಸ್​ಪೋನಲ್ಲಿ ರಾಶಿಕಾ ಶೆಟ್ಟಿ ಸುತ್ತಾಟ, ನಟಿಗೆ ಇಷ್ಟವಾಗಿದ್ದೇನು?
ಸ್ಪೀಕರ್ ವರ್ತನೆ ಸರಿಯಾ ತಪ್ಪಾ ಅಂತ ಜನ ತೀರ್ಮಾನಿಸುತ್ತಾರೆ: ಯುಟಿ ಖಾದರ್
ಸ್ಪೀಕರ್ ವರ್ತನೆ ಸರಿಯಾ ತಪ್ಪಾ ಅಂತ ಜನ ತೀರ್ಮಾನಿಸುತ್ತಾರೆ: ಯುಟಿ ಖಾದರ್
ಸರ್ಕಾರದ ಕ್ರಮವನ್ನು ಹೈಕೋರ್ಟ್​​ನಲ್ಲಿ ಪ್ರಶ್ನಿಸುತ್ತೇವೆ: ಬಸನಗೌಡ ಯತ್ನಾಳ್
ಸರ್ಕಾರದ ಕ್ರಮವನ್ನು ಹೈಕೋರ್ಟ್​​ನಲ್ಲಿ ಪ್ರಶ್ನಿಸುತ್ತೇವೆ: ಬಸನಗೌಡ ಯತ್ನಾಳ್
ನಿರ್ದೇಶಕ ಎಟಿ ರಘು ನಿಧನದ ಸುದ್ದಿ ಕೇಳಿ ಆಘಾತ ಆಯಿತು: ದೊಡ್ಡಣ್ಣ
ನಿರ್ದೇಶಕ ಎಟಿ ರಘು ನಿಧನದ ಸುದ್ದಿ ಕೇಳಿ ಆಘಾತ ಆಯಿತು: ದೊಡ್ಡಣ್ಣ
ಸದನದ ಗೌರವ ಕಾಪಾಡಲು ನಾವು ಹೋರಾಟ ಮಾಡಿದ್ದು: ಅಶೋಕ
ಸದನದ ಗೌರವ ಕಾಪಾಡಲು ನಾವು ಹೋರಾಟ ಮಾಡಿದ್ದು: ಅಶೋಕ
ಸಸ್ಪೆಂಡ್ ಮಾಡುವ ಪ್ರಸ್ತಾವನೆ ಮಂಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಪಾಟೀಲ್
ಸಸ್ಪೆಂಡ್ ಮಾಡುವ ಪ್ರಸ್ತಾವನೆ ಮಂಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಪಾಟೀಲ್