TV9 Exclusive: Drug ಕಿಂಗ್ಪಿನ್ ಅನಿಕಾ D ಯಾರು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್!
ಬೆಂಗಳೂರು: ಸಿಲಿಕಾನ ಸಿಟಿ ಮತ್ತು ಕನ್ನಡ ಚಿತ್ರರಂಗವೇ ಬೆಚ್ಚಿಬೀಳುವಂಥ ನಶೆ ನಂಟಿನ ಬಗ್ಗೆ ಸ್ಫೋಟಕ ಮಾಹಿತಿ ಹೊರಬೀಳುತ್ತಿದ್ದಂತೆ ನಗರಕ್ಕೆ ಡ್ರಗ್ಸ್ ಸರಬರಾಜು ಮಾಡುತ್ತಿದದ್ದು ಅನಿಕಾ D ಎಂಬ ಮಹಿಳಾ ಕಿಂಗ್ಪಿನ್ ಅನ್ನುವ ಮಾಹಿತಿಯನ್ನು ಕೇಂದ್ರದ NCB ತನಿಖಾ ಸಂಸ್ಥೆಯು ನೀಡಿತ್ತು. ಆದರೆ, ಆಕೆಯನ್ನು ಬಂಧಿಸಿದ NCB ಅಧಿಕಾರಿಗಳು ಅನಿಕಾಳ ಬಗ್ಗೆ ಇದನ್ನು ಹೊರತುಪಡಿಸಿ ಹೆಚ್ಚಿನ ಮಾಹಿತಿ ನೀಡಿರಲಿಲ್ಲ. ಇದೀಗ, ಈ ಮಹಿಳಾ ಡ್ರಗ್ ಕಿಂಗ್ಪಿನ್ನ ಹಿನ್ನೆಲೆ ಮತ್ತು ಅವಳ ಕಾರ್ಯಾಚರಣೆಯ ಬಗ್ಗೆ ಎಕ್ಸ್ಕ್ಲೂಸಿವ್ ಮಾಹಿತಿ ಟಿವಿ 9ಗೆ […]
ಬೆಂಗಳೂರು: ಸಿಲಿಕಾನ ಸಿಟಿ ಮತ್ತು ಕನ್ನಡ ಚಿತ್ರರಂಗವೇ ಬೆಚ್ಚಿಬೀಳುವಂಥ ನಶೆ ನಂಟಿನ ಬಗ್ಗೆ ಸ್ಫೋಟಕ ಮಾಹಿತಿ ಹೊರಬೀಳುತ್ತಿದ್ದಂತೆ ನಗರಕ್ಕೆ ಡ್ರಗ್ಸ್ ಸರಬರಾಜು ಮಾಡುತ್ತಿದದ್ದು ಅನಿಕಾ D ಎಂಬ ಮಹಿಳಾ ಕಿಂಗ್ಪಿನ್ ಅನ್ನುವ ಮಾಹಿತಿಯನ್ನು ಕೇಂದ್ರದ NCB ತನಿಖಾ ಸಂಸ್ಥೆಯು ನೀಡಿತ್ತು. ಆದರೆ, ಆಕೆಯನ್ನು ಬಂಧಿಸಿದ NCB ಅಧಿಕಾರಿಗಳು ಅನಿಕಾಳ ಬಗ್ಗೆ ಇದನ್ನು ಹೊರತುಪಡಿಸಿ ಹೆಚ್ಚಿನ ಮಾಹಿತಿ ನೀಡಿರಲಿಲ್ಲ. ಇದೀಗ, ಈ ಮಹಿಳಾ ಡ್ರಗ್ ಕಿಂಗ್ಪಿನ್ನ ಹಿನ್ನೆಲೆ ಮತ್ತು ಅವಳ ಕಾರ್ಯಾಚರಣೆಯ ಬಗ್ಗೆ ಎಕ್ಸ್ಕ್ಲೂಸಿವ್ ಮಾಹಿತಿ ಟಿವಿ 9ಗೆ ಲಭ್ಯವಾಗಿದೆ. NCBಯಿಂದ ಮೂವರು ಡ್ರಗ್ ಪೆಡ್ಲರ್ಗಳ ಬಂಧನವಾದ ಬಳಿಕ ಪ್ರಕರಣದ ಕಿಂಗ್ಪಿನ್ ಅನಿಕಾ D ತನ್ನ ಹಿನ್ನಲೆ ಬಗ್ಗೆ ಮಾಹಿತಿ ಹೊರಹಾಕಿದ್ದಾಳೆ. ಅಂದ ಹಾಗೆ, ಅನಿಕಾಳಿಗೆ ಇದೆ ಮೂರು ಹೆಸರುಗಳು. ಅವುಗಳು ಅನಿಕಾ D ಅಲಿಯಾಸ್ ಅನಿ ಅಲಿಯಾಸ್ ಡಿ ಮನಿ. ನೋಡೋಕೆ ಡುಮ್ಮಿಯಾಗಿದ್ರು ಅನಿಕಾಳಿಗೆ ಕೇವಲ 24 ವರ್ಷ ವಯಸ್ಸು.
ಹೊಟೇಲ್ ಮ್ಯಾನೆಜ್‌ಮೆಂಟ್ ವ್ಯಾಸಂಗಕ್ಕೆ ತಿಲಾಂಜಲಿ ಮೂಲತಃ ತಮಿಳುನಾಡಿನವಳಾದ ಅನಿಕಾ ಸೇಲಂನ ಯೆರ್ಕಾಡ್ ನಗರದ ನಿವಾಸಿ. ಈಕೆಯ ತಂದೆಗೆ ಮೂವರು ಮಕ್ಕಳಿದ್ದು ಅನಿಕಾಳಿಗೆ ಓರ್ವ ತಂಗಿ ಮತ್ತು ತಮ್ಮ ಇದ್ದಾರಂತೆ. ಯೆರ್ಕಾಡ್ನ ಶೆವ್ರಾಯ್ಸ್ ಕಾಲೇಜ್ನಲ್ಲಿ ಹೊಟೇಲ್ ಮ್ಯಾನೆಜ್‌ಮೆಂಟ್ ವ್ಯಾಸಂಗ ಮಾಡುತ್ತಿದ್ದ ಅನಿಕಾ ತನ್ನ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದಳು. ನಂತರ, ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ದು ನಗರದ ದೊಡ್ಡಗುಬ್ಬಿಯಲ್ಲಿ ಐಶ್ವರ್ಯ ನಿಲಯದಲ್ಲಿ ವಾಸವಾಗಿದ್ದಳು.
ಡ್ರಗ್ ದಂಧೆಯಲ್ಲಿ ಅನಿಕಾ ಆಗುತ್ತಿದ್ದಳು ‘Bmoney’ ಅಂದ ಹಾಗೆ, ಅನಿಕಾಳ ಡ್ರಗ್ ದಂಧೆಯ ಕೋಡ್ ನೇಮ್ ಬಿಮನಿ. ಇದೇ ಇವಳ ನಂಬರ್ನ ಐಡಿ ನೇಮ್. ಇವಳ ಸೋಷಿಯಲ್ ಮೀಡಿಯಾ ಅಕೌಂಟ್ ನೇಮ್ ಸಹ Bmoney ಅಂತೆ. ಎರಡು ಸೋಷಿಯಲ್ ಮೀಡಿಯಾ ಆ್ಯಪ್ಗಳ ಬಳಕೆ ಮಾಡಿಕೊಂಡು ವ್ಯವಹಾರ ನಡೆಸುತ್ತಿದ್ದ ಅನಿಕಾ WhatsApp ಮತ್ತು ಟೆಲಿಗ್ರಾಮ್ ಆ್ಯಪ್ಗಳಮೂಲಕವೇ ಗಿರಾಕಿಗಳನ್ನ ಕಾಂಟ್ಯಾಕ್ಟ್ ಮಾಡ್ತಿದ್ದಳು.
ಅಷ್ಟೇ ಅಲ್ಲ, ಇವಳು ಮಾರಾಟ ಮಾಡ್ತಿದ್ದ MDMA ಮತ್ತು LSDಗೂ ಪ್ರತೇಕ ಕೋಡ್ ನೇಮ್ ಇಟ್ಟಿದ್ದಳು. ಪಿಂಕ್ ಬಣ್ಣದ MDMAಗೆ ರೆಡ್ ಬುಲ್ ಅಂತಾ ಕರಿತಿದ್ದಳು ಹಾಗೂ LSD ಗೆ ಲವ್ ಡೋಸ್ ಅಂತಾ ಹೆಸರಿಟ್ಟು ಮಾರಾಟ ಮಾಡ್ತಿದ್ದಳಂತೆ. ವಿದ್ಯಾರ್ಥಿಗಳು, ಸ್ಯಾಂಡಲ್ವುಡ್ ನಟ-ನಟಿಯರು ಮತ್ತು ಮ್ಯೂಸಿಕ್ ಡೈರೆಕ್ಟರ್ಗಳಿಗೆ ಅನಿಕಾ ಮಾದಕ ವಸ್ತುಗಳನ್ನು ಸಪ್ಲೇ ಮಾಡುತ್ತಿದ್ದರೂ ಇವಳು ಯಾರನ್ನೂ ನೇರವಾಗಿ ಭೇಟಿಯಾಗದೆ ವ್ಯವಹಾರ ನಡೆಸುತ್ತಿದ್ದಳಂತೆ.
ಅನಿಕಾಳಿಗೆ ಅನೂಪ್ ಮತ್ತು ರವಿಚಂದ್ರನ್ ಸಾಥ್ ಮಹಿಳಾ ಡ್ರಗ್ ಕಿಂಗ್ಪಿನ್ಗೆ ತನ್ನ ಕಾರ್ಯಾಚರಣೆಯಲ್ಲಿ ಸಾಥ್ ನೀಡಿದ್ದು ಕೊಚ್ಚಿ ಮೂಲದ ಅನೂಪ್ ಮತ್ತು ಚೆನ್ನೈ ನಿವಾಸಿ ರಿಜೇಶ್ ವಿ ರವಿಚಂದ್ರನ್. ಇವರಿಬ್ಬರೂ ಆಕೆಯಿಂದ ಡ್ರಗ್ಸ್ ಪಡೆದು ಕೋರಿಯರ್ನಲ್ಲಿ ಕಳುಹಿಸುತ್ತಿದ್ದರು. ಅಂದ ಹಾಗೆ, ಇದು ಯಾರಿಗೂ ಗೊತ್ತಾಗಬಾರದೆಂದು ಸಾಫ್ಟ್ ಟಾಯ್ಸ್ (ಬಟ್ಟೆಯ ಬೊಂಬೆಗಳು) ಗಳಲ್ಲಿ ಮಾದಕ ವಸ್ತುಗಳನ್ನ ಅಡಗಿಸಿ ನೇರವಾಗಿ ಪಾರ್ಟಿಗಳಿಗೆ ಮತ್ತು ಕೆಲವರ ಪೋಸ್ಟ್ ಬಾಕ್ಸ್ಗಳಿಗೆ ಕಳುಹಿಸುತ್ತಿದ್ದರು.
ಕಿಂಗ್ಪಿನ್ ಅನಿಕಾಳಿಗೆ ಡ್ರಗ್ ಸಪ್ಲೇ ಆಗ್ತಿದ್ದು ಇವರಿಂದಲೇ ಈ ಪ್ರಕರಣದಲ್ಲಿ ನೈಜಿರೀಯಾ ವಿದೇಶಿ ಪ್ರಜೆಗಳ ಕೈವಾಡ ಸಹ ಕನ್ಫರ್ಮ್ ಆಗಿದೆ. ಬೆಂಗಳೂರನ್ನೇ ಈಗಾಗಲೇ ಮಾದಕ ಅಡ್ಡೆ ಮಾಡಿಕೊಂಡಿರುವ ನೈಜೀರಿಯಾ ದೇಶದ ಕೆಲ ನಿವಾಸಿಗಳೂ ಅನಕಾಳಿಗೆ ನೆರವಾಗುತ್ತಿದ್ದರು. ನಗರದ ಹೊರಮಾವು ಏರಿಯಾದಲ್ಲಿ ವಾಸವಿದ್ದ ನೈಜೀರಿಯಾ ದೇಶದ ಪ್ರಜೆಯಾಗಿದ್ದ ಡ್ರಗ್ ಪೆಡ್ಲರ್ TAM TAMನಿಂದ ಖರೀದಿ ಮಾಡ್ತಿದ್ದಳು.
ಇತ್ತಿಚೆಗೆ 250 MDMA ಮಾತ್ರೆಗಳನ್ನ ಖರೀದಿ ಮಾಡಿದ್ದ ಅನಿಕಾ ಒಂದು ಮಾತ್ರೆಗೆ 550 ರೂಪಾಯಿ ಕೊಟ್ಟು ಖರೀದಿ ಮಾಡಿದ್ದಾಗಿ ಹೇಳಿಕೆ ನೀಡಿದ್ದಾಳೆ. ಅಲ್ಲದೇ ಈ ಬಗ್ಗೆ TAM TAM ಬಳಿ ಚಾಟ್ ಮಾಡಿರುವ ಎವಿಡೆನ್ಸ್ ಸಹ NCB ಸೀಜ್ ಮಾಡಿದೆ. ಜೊತೆಗೆ, TAM TAM ಡಾರ್ಕ್ ವೆಬ್ ಮೂಲಕ ವಿದೇಶದಿಂದ ಬೆಂಗಳೂರಿಗೆ ಡ್ರಗ್ಸ್ ತರಿಸಿಕೊಳ್ತಿದ್ದ ಅಂತಾ ಅನಿಕಾ ಹೇಳಿಕೆ ನೀಡಿದ್ದಾಳೆ.
ಅನಿಕಾ ಡ್ರಗ್ ದಂಧೆಗೆ ಇಳಿಯೋಕೆ ಸ್ಫೂರ್ತಿಯೇ ಈತ ಬೆಂಗಳೂರಿಗೆ ಬಂದ ಅನಿಕಾ ಖಾಸಗಿ ಕಂಪನಿಯಲ್ಲಿ ಕೆಲಸ ಹುಡುಕಿಕೊಂಡಿದ್ದಳಂತೆ. ಅಲ್ಲೇ, ಅವಳಿಗೆ ಆ್ಯಂಡಿ ಜುಂಬೋ ಎಂಬಾತನ ಪರಿಚಯ ಬೆಳೆಯಿತು. ನೈಜಿರೀಯಾ ಮೂಲದ ಆ್ಯಂಡಿ ಜೊತೆ ಸ್ನೇಹ ಬೆಳಸಿದ ಅನಿಕಾಳಿಗೆ ಆತನ ಮೇಲೆ ಪ್ರೇಮಾಂಕುರವಾಯಿತು. ಬಳಿಕ ಇಬ್ಬರು ಮದುವೆ ಸಹ ಆದರು. ಌಂಡಿ ವಿದೇಶದಿಂದ ಬಟ್ಟೆಯ ಎಕ್ಸ್ಪೋರ್ಟ್ ಬ್ಯುಸಿನೆಸ್ ನಡೆಸುತ್ತಿದ್ದ. ಅನಿಕಾ ಗಂಡ ಇದೀಗ ನಶೆಯ ಮತ್ತಿನಲ್ಲಿ ಸ್ಥಳೀಯ ಪೊಲೀಸರ ಮೇಲೆ ಹಲ್ಲೆ ಮಾಡಿ ಜೈಲು ಸೇರಿದ್ದಾನೆ.
ಈ ನಡುವೆ ಅನಿಕಾಗೆ ಅಮೀನಮ್ ಖಾನ್ ಮೊಹಮ್ಮದ್ ಎಂಬಾತನ ಪರಿಚಯ ಬೆಳೆದು ಅವನ ಮೂಲಕ ಡ್ರಗ್ ದಂಧೆಗೆ ಇಳಿದಳು. ಸದ್ಯ ಅನಿಕಾ ಜೊತೆ ನಗರದ ವಿವಿಧ ಮೂಲೆಯ 18 ಮಂದಿ ಪೆಡ್ಲರ್ಗಳ ಲಿಂಕ್ ಇದೆ. ಜೊತೆಗೆ, ಇವಳ ಶಿಷ್ಯರಾಗಿ ರಿಜೇಶ್ ಪಿ ರವಿಚಂದ್ರನ್ ಮತ್ತು ಅನೂಪ್ ಕೆಲಸ ಮಾಡುತ್ತಿದ್ದು ಇನ್ನೂ ಓರ್ವ ಪೆಡ್ಲರ್ ಡುಗಯ್ ಡುಂಜೋ ಜೊತೆಗಿದ್ದಾನೆ. ಸದ್ಯ ಆತ ತಲೆ ಮರೆಸಿಕೊಂಡಿದ್ದಾನೆ.
ಪಾರ್ಟಿ ಮುಗಿಸಿ ಹೊರಬಂದವಳು ಸೀದಾ NCB ವಶಕ್ಕೆ ಇನ್ನೂ ಅನಿಕಾನ ಆಗಸ್ಟ್ 21 ರ ಸಂಜೆ NCB ವಶಕ್ಕೆ ಪಡೆದಿದೆ. ಪಾರ್ಟಿ ಮುಗಿಸಿ ಸಾದಹಳ್ಳಿ ಗೇಟ್ ಬಳಿ ನಿಂತಿದ್ದ ಅನಿಕಾ Zoom ಕಾರ್ ಕಚೇರಿಯ ಬಳಿ ಸ್ನೇಹಿತೆಗೆ ಕಾಯ್ತಾಯಿದ್ದಳಂತೆ. ಈ ವೇಳೆ ಎಂಟ್ರಿ ಕೊಟ್ಟ NCB ತಂಡವು ಆಕೆಯನ್ನು ಅವಳ ಮನೆಗೆ ಕರೆದೊಯ್ದು ಸರ್ಚ್ ಮಾಡಿದ್ರು. ಜೊತೆಗೆ, ಮನೆಯಲ್ಲಿ ಇದ್ದ MDMA ಮಾತ್ರೆಗಳ ಸೀಜ್ ಮಾಡಿದರು. ಸದ್ಯ ಇವಳ ವಿರುದ್ದ NDPS Act ಸೆಕ್ಷನ್ 22,27(a), 28,29 ಮತ್ತು R/W ಸೆಕ್ಷನ್ 8 ರ ಅಡಿಯಲ್ಲಿ ಕೇಸ್ ದಾಖಲಾಗಿದ್ದು ವಿಚಾರಣೆ ನಡೆಯುತ್ತಿದೆ.
Published On - 1:12 pm, Mon, 31 August 20