ಬೆಂಗಳೂರು, (ಜನವರಿ 12): ಅಡ್ಡದಾರಿಯಲ್ಲಿ ಮಗಳಿಗೆ ಕಾಲೇಜು ಸೀಟು ಪಡೆಯಲು ಹೋಗಿ ಉದ್ಯಮಿಯೊಬ್ಬ(businessman) ತಾನೇ ಕಿಡ್ನ್ಯಾಪ್ ಆಗಿರುವ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ. ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ತನ್ನ ಮಗಳಿಗೆ BBA ಸೀಟ್‌ಗಾಗಿ ಉದ್ಯಮಿ ಚೇತನ್ ಶಾ ಎನ್ನುವರು ಸಚಿನ್ ಎನ್ನುವಾತನನ್ನು ಸಂಪರ್ಕಿಸಿದ್ದರು. ಬಳಿಕ ಕಾಲೇಜಿನ ನಿಗಮಗಳ ಪ್ರಕಾರ ಉದ್ಯಮಿ ಚೇತನ್ ಶಾ ಪುತ್ರಿಗೆ ಸೀಟು ಸಿಕ್ಕಿದೆ. ಆದ್ರೆ, ಸಚಿನ್ ನಾನೇ ನಿಮ್ಮ ಮಗಳಿಗೆ ಸೀಟು ಸಿಗುವಂತೆ ಮಾಡಿದ್ದು ಎಂದು ಕಮಿಷನ್ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಆದ್ರೆ, ಚೇತನ್ ಹಣ ಕೊಡಲು ಒಪ್ಪದಿದ್ದಕ್ಕೆ ಸಚಿನ್ ತನ್ನ ಸಹಚರರೊಂದಿಗೆ ಕಿಡ್ನಾಪ್ ಮಾಡಿದ್ದಾನೆ. ಸದ್ಯ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ರಾಜಾಜಿನಗರ ಪೊಲೀಸರು ಸಚಿನ್ ಶಾ ಹಾಗೂ ಗೌರಿಶಂಕರ್ ಎಂಬವರನ್ನು ಬಂಧಿಸಿದ್ದು, ಬಂಧಿತರಿಂದ 7 ಲಕ್ಷ ರೂ. ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ಚಾಕು, ಒಂದು ಆಟೋವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರಕರಣ ಹಿನ್ನೆಲೆ
ಉದ್ಯಮಿ ಚೇತನ್ ಎಂಬುವವರು ತಮ್ಮ ಮಗಳಿಗೆ ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಬಿಬಿಎ ಸೀಟು ಕೊಡಿಸಲು ಮುಂದಾಗಿದ್ದರು. ಶಿಕ್ಷಣ ಸಂಸ್ಥೆಯ ಕೆಲ ನಿಯಮಗಳಿಂದ ಸೀಟು ಸಿಕ್ಕಿರಲಿಲ್ಲ, ಇತ್ತ ಅವಧಿ ಕೂಡ ಮೀರುತ್ತಿತ್ತು. ತನ್ನ ಮಗಳನ್ನು ಹೇಗಾದರೂ ಮಾಡಿ ಅದೇ ಕಾಲೇಜಿನಲ್ಲಿಯೇ ಸೇರಿಸಬೇಕೆಂಬ ಕಾರಣದಿಂದ ಚೇತನ್ ಅನ್ಯ ಮಾರ್ಗವನ್ನು ಆಯ್ದುಕೊಂಡಿದ್ದರು. ಆ ಸಮಯದಲ್ಲಿ ಬಂಧಿತ ಆರೋಪಿ ಸಚಿನ್ ಪರಿಚಯವಾಗಿದ್ದ. ಈ ವೇಳೆ ಸಚಿನ್ ನನಗೆ ಕಾಲೇಜಿನಲ್ಲಿ ಬಹಳ ಲಿಂಕ್ ಇದೆ, ನಿಮ್ಮ ಮಗಳಿಗೆ ಸೀಟ್ ಕೊಡಿಸುತ್ತೇನೆಂದು ಹೇಳಿದ್ದ.
ಇದನ್ನೂ ಓದಿ: ಬೆಂಗಳೂರು: ಏಳು ಜನ ಡ್ರಗ್ ಪೆಡ್ಲರ್ಗಳನ್ನ ಬಂಧಿಸಿದ ಸಿಸಿಬಿ ಪೊಲೀಸರು
ಕೆಲ ದಿನಗಳ ನಂತರ ಸಚಿನ್, ಸೀಟು ಸಿಗುತ್ತೆ ಆದರೆ ಅದಕ್ಕೆ ಏಳೆಂಟು ಲಕ್ಷ ರೂ. ಖರ್ಚಾಗುತ್ತೆ ಎಂದಿದ್ದ. ಸೀಟ್ ಸಿಗುತ್ತೆ ಎಂಬ ಕಾರಣಕ್ಕೆ ಚೇತನ್ ಸಹ ಸಮ್ಮತಿಸಿದ್ದ. ಆದರೆ ದಿನ ಕಳೆದರೂ ಸಚಿನ್ ಮುಖಾಂತರ ಕಾಲೇಜು ಸೀಟು ಮಾತ್ರ ಸಿಗಲಿಲ್ಲ. ಹೀಗಾಗಿ ಚೇತನ್ ಕೊನೆಗೆ ಕಾಲೇಜಿಗೆ ಹೋಗಿ ಸಂಸ್ಥೆಯ ನಿಯಮದ ಪ್ರಕಾರವೇ ಸೀಟು ಪಡೆದುಕೊಂಡಿದ್ದರು.
ಈ ವಿಚಾರ ತಿಳಿದ ಸಚಿನ್, ನಿನ್ನ ಮಗಳಿಗೆ ಸೀಟು ಕೊಡಿಸಿದ್ದು ನಾನು. ನನ್ನ ಕಮಿಷನ್ ಹಣ ಕೊಡು ಎಂದು ಪಟ್ಟು ಹಿಡಿದಿದ್ದಾನೆ. ಆದರೆ ಇದಕ್ಕೆ ಚೇತನ್ ಒಪ್ಪಿರಲಿಲ್ಲ. ಇದರಿಂದ ಸಿಟ್ಡಿಗೆದ್ದ ಸಚಿನ್ ,ತನ್ನ ಜಿಮ್ ಸ್ನೇಹಿತನಾಗಿದ್ದ ಗೌರಿಶಂಕರ ಜತೆ ಆಟೋದಲ್ಲಿ ಬಂದು ಬಳಿ ಚೇತನ್ ಕಾರನ್ನು ಅಡ್ಡ ಹಾಕಿ ಕಿಡ್ನಾಪ್ ಮಾಡಿದ್ದ. ಬಳಿಕ 7 ಲಕ್ಷ ರೂ. ಹಣ ತರಿಸಿಕೊಂಡು ಡಾ. ರಾಜ್ ಕುಮಾರ್ ರಸ್ತೆಯಲ್ಲಿ ಬಿಟ್ಟು ಪರಾರಿಯಾಗಿದ್ದರು.
ನಂತರ ಉದ್ಯಮಿ ಈ ಸಂಬಂಧ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಮೇರೆಗೆ ಪೊಲೀಸರು ಕಾರ್ಯಚರಣೆ ನಡೆಸಿ ಸಚಿನ್ ಹಾಗೂ ಗೌರಿಶಂಕರನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಬಂಧಿತರಿಂದ ಆ ಏಳು ಲಕ್ಷ ರೂಪಾಯಿ ಹಣವನ್ನು ವಶ ಪಡೆದುಕೊಂಡಿದ್ದಾರೆ. ಇನ್ನು ಸ್ಪರ್ಧಾತ್ಮಕ ಪರಿಕ್ಷೆಗೆ ತಯಾರಿ ನಡೆಸಿದ್ದ ಸಚಿನ್ ಬಂಧನವಾಗಿದೆ. ಈ ವಿಚಾರಗೊತ್ತಾಗುತ್ತಿದ್ದಂತೆಯೇ ಮಗನ ಐಎಎಸ್, ಐಪಿಎಸ್ ಕನಸು ಕಂಡ ಪೊಷಕರು ಶಾಕ್ ಆಗಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:20 pm, Fri, 12 January 24