ಬೆಂಗಳೂರು: ಒನ್ ವೇ(OneWay)ನಲ್ಲಿ ಬಂದ ಬೈಕ್ಗೆ ಟಿಪ್ಪರ್ ಡಿಕ್ಕಿಯಾಗಿ(Accident) ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಪುಲಿಕೇಶಿ ನಗರ(Pulikeshi Nagar) ಸಂಚಾರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬೈಕ್ನಲ್ಲಿದ್ದ ಯೂಸುಫ್(19), ಫರಜ್(19) ಮೃತ ರ್ದುದೈವಿಗಳು. ಈ ಇಬ್ಬರು ಮೃತ ಯುವಕರು ಹೊರರಾಜ್ಯದ ನಿವಾಸಿಗಳಾಗಿದ್ದು, ಹೋಟೆಲ್ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಮಧ್ಯರಾತ್ರಿ 2 ಗಂಟೆಯಲ್ಲಿ ಸ್ಕೂಟರ್ನಲ್ಲಿ ಬರುತ್ತಿದ್ದಾಗ ಸಂಚಾರಿ ನಿಯಮ ಉಲ್ಲಂಘಿಸಿ ಟಿಪ್ಪರ್ ಚಾಲಕ ಒನ್ ವೇನಲ್ಲಿ ಬಂದಿದ್ದಾನೆ. ಈ ವೇಳೆ ಅಪಘಾತ ಸಂಭವಿಸಿದೆ. ಇನ್ನು ಟಿಪ್ಪರ್ ಲಾರಿ ಚಾಲಕ ಸುನೀಲ್ ಎಂಬುವವನನ್ನ ಸಂಚಾರಿ ಪೊಲೀಸರ ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು: ಜೂನ್.14 ರಂದು 5 ಲಕ್ಷ ಕದ್ದು ಓಡುತ್ತಿದ್ದ ಕಳ್ಳನನ್ನ ಚೇಸ್ ಮಾಡಿ ಹಿಡಿದಿದ್ದ ಸಿಬ್ಬಂದಿಗೆ ಬೆಂಗಳೂರು ನಗರ ಕಮಿಷನರ್ಯಿಂದ ಸನ್ಮಾನ ಮಾಡಲಾಗಿದೆ. ಬೆಂಗಳೂರು 4 ನೇ ಘಟಕದ ಚಾಲಕ ಮಂಜುನಾಥ್ ಕಳ್ಳನನ್ನು ಹಿಡಿದಿದ್ದರು. ಸಿಬ್ಬಂದಿಯ ಸಾಹಸ, ಶೌರ್ಯಕ್ಕೆ ಮೆಚ್ಚಿ ಪೋಲೀಸ್ ಇಲಾಖೆಯಿಂದ ಬಹುಮಾನ ಮತ್ತು ಪ್ರಶಂಸೆ ಪತ್ರವನ್ನ ನಗರ ಪೊಲೀಸ್ ಆಯುಕ್ತ ದಯಾನಂದ್ ವಿತರಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ: ಅಂತರಾಷ್ಟ್ರೀಯ ಕಂಪನಿಯ ಗೋಡಾನ್‌ನಲ್ಲಿ ಕಳ್ಳತನ ಮಾಡಿದ್ದ ಐವರು ಕುಖ್ಯಾತ ಅಂತರ್‌ರಾಜ್ಯ ಕಳ್ಳರನ್ನ ನೆಲಮಂಗಲದ ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಇನ್ನುಳಿದ ಇಬ್ಬರಿಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ. ಉತ್ತರ ಪ್ರದೇಶ ಮೂಲದವರಾದ ಪ್ರವೀಣ್ ಪಟೇಲ್, ಸಂದೀಪ್, ರಾಜನ್ ರಾಯ್, ನಿರ್ಭಯ ಕುಮಾರ್ ಪಟೇಲ್, ಆಕಾಶ್ ಪಟೇಲ್ ಬಂಧಿತ ಆರೋಪಿಗಳು. ಇವರು ಫೆಬ್ರವರಿ 20ರಂದು ಪ್ಯಾನಾಸೋನಿಕ್ ಗೋಡಾನ್‌ನಲ್ಲಿ 69 ಲಕ್ಷದ ಸಾಮಾಗ್ರಿಗಳನ್ನು ಕಳ್ಳತನ ಮಾಡಿದ್ದರು.
ಇನ್ನು ಅಷ್ಟೇ ಅಲ್ಲದೆ ಬೆಂಗಳೂರು ಉತ್ತರ ತಾಲೂಕಿನ ಅವ್ವೇರಹಳ್ಳಿ, ಹೆಗ್ಗಡದೇವನಪುರ,ಗ್ರಾಮದಲ್ಲಿರುವ ಗೋಡಾನ್‌ಗಳಲ್ಲಿ ಮಾರ್ಚ್ 27ರಂದು 1 ಕೋಟಿ ಮೌಲ್ಯದ ಸಾಮಾಗ್ರಿಗಳ ಕಳ್ಳತನ ಮಾಡಿದ್ದರು. ಇದೀಗ ಸಿಸಿಟಿವಿ, ಮೊಬೈಲ್ ಟವರ್ ಲೊಕೇಶನ್ ಮೂಲಕ ಆರೋಪಿಗಳನ್ನು ಪತ್ತೆ ಮಾಡಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ. ಬಂಧಿತರಿಂದ 75ಲಕ್ಷ ಮೌಲ್ಯದ ಕ್ಯಾಮೆರಾ, ಲ್ಯಾಪ್‌ಟಾಪ್ ಹಾಗೂ ಇತರೆ ಎಲೆಕ್ಟ್ರಾನಿಕ್ ಉಪಕರಣಗಳ ವಶಕ್ಕೆ ಪಡೆಯಲಾಗಿದೆ.
ಬೆಂಗಳೂರು: ಲ್ಯಾಪ್‌ಟಾಪ್ ಕಳ್ಳತನ ಮಾಡುತ್ತಿದ್ದ ಮೂವರು ಕಳ್ಳರನ್ನ ಮೈಕೋ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ನಗರ ಪೊಲೀಸ್ ಆಯಕ್ತ ದಯಾನಂದ್ ಮಾತನಾಡಿ ‘ಆಗ್ನೇಯ ವಿಭಾಗ ಪೊಲೀಸರು ಒಳ್ಳೆ ಕೆಲಸ ಮಾಡಿದ್ದಾರೆ. ಈಗಾಗಲೇ ಲ್ಯಾಪ್‌ಟಾಪ್ ಕಳ್ಳತನ ಮಾಡ್ತಿದ್ದ ಮೂವರನ್ನು ಬಂಧಿಸಿದ್ದು, ಬೇರೆ ಬೇರೆ ಕಂಪನಿಯ 33 ಲ್ಯಾಪ್ಟ್ಯಾಪ್ 40 ಫೋನ್ ವಶಕ್ಕೆ ಪಡೆದಿದ್ದಾರೆ. ಈ ಕುರಿತು ಎಂಟು ಪೊಲೀಸ್ ಠಾಣೆಯಲ್ಲಿ ಕೇಸ್ಗಳು ದಾಖಲಾಗಿದ್ದವು.
ಇದನ್ನೂ ಓದಿ:Odisha Accident: ಒಡಿಶಾದಲ್ಲಿ ಭೀಕರ ಅಪಘಾತ, 10 ಮಂದಿ ಸಾವು, ಹಲವರಿಗೆ ಗಂಭೀರ ಗಾಯ
ಇನ್ನು ಇಂತಹುದೇ ಮತ್ತೊಂದು ಪ್ರಕರಣದಲ್ಲಿ ಮೊಬೈಲ್ ಫೋನ್ ಕಳ್ಳತನ ಮಾಡುತ್ತಿದ್ದ ತಮಿಳುನಾಡು ಮೂಲದ ಆರೋಪಿಗಳು ಅರೆಸ್ಟ್ ಆಗಿದ್ದಾರೆ. ಪೇಂಟಿಂಗ್ ಕೆಲಸ ಮಾಡಿಕೊಂಡಿದ್ದು, ರೂಂ, ಮನೆ ಕೇಳುವ ನೆಪದಲ್ಲಿ ಹೋಗಿ ಕಳ್ಳತನ ಮಾಡುತ್ತಿದ್ದರು. ಕರ್ನಾಟಕ ಮಾತ್ರವಲ್ಲದೇ ಗುಜರಾತ್ ಮತ್ತು ಕೇರಳ ಸೇರಿ ಬೇರೆ ಬೇರೆ ರಾಜ್ಯದಲ್ಲಿಯೂ ಈ ಕುರಿತು ಪ್ರಕರಣಗಳಿವೆ. ಈ ಹಿನ್ನಲೆ ಮಡಿವಾಳ ಪೊಲೀಸರು ಮೊಬೈಲ್ ಫೋನ್ ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 120 ಫೋನ್ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇನ್ನಷ್ಟು ಅಪಘಾತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:50 pm, Tue, 27 June 23