Crime News: ಪಬ್​ಜಿ ಆಡಲು ಹುಟ್ಟುಹಬ್ಬಕ್ಕೆ ಹೊಸ ಮೊಬೈಲ್ ಕೊಡಿಸಲಿಲ್ಲವೆಂದು ಯುವತಿ ಆತ್ಮಹತ್ಯೆ

ಪಿಯುಸಿ ಓದುತ್ತಿದ್ದ 18 ವರ್ಷದ ವಿದ್ಯಾರ್ಥಿನಿ ಫೆ. 13ರಂದು ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಳು. ಈ ಸಂದರ್ಭದಲ್ಲಿ ತನಗೆ ಪಬ್​ಜಿ ಆಟವಾಡಲು ಮೊಬೈಲ್ ಫೋನ್ ಬೇಕೆಂದು ತನ್ನ ಪೋಷಕರನ್ನು ಒತ್ತಾಯಿಸಿದ್ದಳು.

Crime News: ಪಬ್​ಜಿ ಆಡಲು ಹುಟ್ಟುಹಬ್ಬಕ್ಕೆ ಹೊಸ ಮೊಬೈಲ್ ಕೊಡಿಸಲಿಲ್ಲವೆಂದು ಯುವತಿ ಆತ್ಮಹತ್ಯೆ
ಸಾಂದರ್ಭಿಕ ಚಿತ್ರ
Updated By: ಸುಷ್ಮಾ ಚಕ್ರೆ

Updated on: Feb 19, 2022 | 8:29 PM

ಜೈಪುರ: ತನ್ನ ಹುಟ್ಟುಹಬ್ಬಕ್ಕೆ ಮೊಬೈಲ್ ಕೊಡಿಸಲಿಲ್ಲ ಎಂಬ ಕಾರಣಕ್ಕೆ 18 ವರ್ಷದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ವಿಚಿತ್ರ ಘಟನೆ ಜೈಪುರದಲ್ಲಿ ನಡೆದಿದೆ. ಶುಕ್ರವಾರ ಜೈಪುರದ ಸೋಡಾಲಾ ಪ್ರದೇಶದಲ್ಲಿ 18 ವರ್ಷದ ಯುವತಿಯೊಬ್ಬಳು PUBG ಆಡಲು ತನ್ನ ಹುಟ್ಟುಹಬ್ಬದಂದು ಹೊಸ ಮೊಬೈಲ್ ಫೋನ್ ಕೊಡಿಸಬೇಕೆಂದು ಕೇಳಿದ್ದಳು. ಆದರೆ, ಮನೆಯವರು ಆಕೆಗೆ ಮೊಬೈಲ್ ತಂದುಕೊಡದ ಕಾರಣದಿಂದ ಆಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ANI ವರದಿ ಪ್ರಕಾರ, ಪಿಯುಸಿ ಓದುತ್ತಿದ್ದ 18 ವರ್ಷದ ವಿದ್ಯಾರ್ಥಿನಿ ಫೆಬ್ರವರಿ 13ರಂದು ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಳು. ಈ ಸಂದರ್ಭದಲ್ಲಿ ತನಗೆ ಪಬ್​ಜಿ ಆಟವಾಡಲು ಮೊಬೈಲ್ ಫೋನ್ ಬೇಕೆಂದು ತನ್ನ ಪೋಷಕರನ್ನು ಒತ್ತಾಯಿಸಿದ್ದಳು. ಆದರೆ, ದ್ವಿತೀಯ ಪಿಯುಸಿ ತರಗತಿ ಪರೀಕ್ಷೆಗಳು ಮುಗಿದ ನಂತರ ಹೊಸ ಫೋನ್ ಖರೀದಿಸುವುದಾಗಿ ಆಕೆಯ ತಂದೆ ಆಕೆಗೆ ಭರವಸೆ ನೀಡಿದ್ದರು.

ಇದರಿಂದ ತೀವ್ರವಾಗಿ ಅಸಮಾಧಾನಗೊಂಡ ಆ ಯುವತಿ ತನ್ನ ಜೀವನವನ್ನು ಕೊನೆಗೊಳಿಸಲು ನಿರ್ಧರಿಸಿ, ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಜೈಪುರ ಪೊಲೀಸ್ ಅಧೀಕ್ಷಕ ರಾಜ್ ಕುಮಾರ್ ಗುಪ್ತಾ ತಿಳಿಸಿದ್ದಾರೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: Murder: ಪ್ರೀತಿಸಲು ನಿರಾಕರಿಸಿದ್ದಕ್ಕೆ ಹಾಡಹಗಲೇ ಯುವತಿಯ ಕುತ್ತಿಗೆ ಸೀಳಿದ ಪಾಗಲ್ ಪ್ರೇಮಿ

Murder: ತನ್ನ ಉದ್ಯೋಗಿಯನ್ನು ಕೊಂದು, ಶವವನ್ನು ಬ್ಯಾಗ್​ನಲ್ಲಿ ತುಂಬಿ ಮೆಟ್ರೋ ಸ್ಟೇಷನ್​ನಲ್ಲಿ ಎಸೆದ ಉದ್ಯಮಿ!