AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Murder: ತನ್ನ ಉದ್ಯೋಗಿಯನ್ನು ಕೊಂದು, ಶವವನ್ನು ಬ್ಯಾಗ್​ನಲ್ಲಿ ತುಂಬಿ ಮೆಟ್ರೋ ಸ್ಟೇಷನ್​ನಲ್ಲಿ ಎಸೆದ ಉದ್ಯಮಿ!

Crime News: ಗೆಸ್ಟ್​ ಹೌಸ್​ಗೆ ತನ್ನ ಉದ್ಯೋಗಿಯನ್ನು ಕರೆಸಿಕೊಂಡ ಉದ್ಯಮಿ ಆಕೆಯನ್ನು ಕಟ್ಟಿ, ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾರೆ. ಮೃತದೇಹವನ್ನು ಟ್ರಾಲಿ ಬ್ಯಾಗ್‌ನಲ್ಲಿ ತುಂಬಿಕೊಂಡು ಟ್ಯಾಕ್ಸಿಯಲ್ಲಿ ಸರೋಜಿನಿನಗರ ಮೆಟ್ರೋ ನಿಲ್ದಾಣಕ್ಕೆ ತಂದು ಎಸೆದಿದ್ದಾರೆ.

Murder: ತನ್ನ ಉದ್ಯೋಗಿಯನ್ನು ಕೊಂದು, ಶವವನ್ನು ಬ್ಯಾಗ್​ನಲ್ಲಿ ತುಂಬಿ ಮೆಟ್ರೋ ಸ್ಟೇಷನ್​ನಲ್ಲಿ ಎಸೆದ ಉದ್ಯಮಿ!
ದೆಹಲಿಯಲ್ಲಿ ನಡೆದ ಕೊಲೆಯ ಆರೋಪಿಗಳನ್ನು ಬಂಧಿಸಿರುವ ಪೊಲೀಸರು
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Feb 02, 2022 | 6:19 PM

ನವದೆಹಲಿ: ತಮ್ಮಿಬ್ಬರ ಸೆಕ್ಸ್​ ವಿಡಿಯೋ ಇಟ್ಟುಕೊಂಡು ಬ್ಲಾಕ್​ ಮಾಡುತ್ತಿದ್ದ ತನ್ನದೇ ಅಂಗಡಿಯ ಮಹಿಳಾ ಉದ್ಯೋಗಿಯನ್ನು ದಕ್ಷಿಣ ದೆಹಲಿಯ ಸರೋಜಿನಿ ನಗರದ ಉದ್ಯಮಿಯೊಬ್ಬರು ಕೊಲೆ (Murder) ಮಾಡಿದ್ದು, ಬಳಿಕ ಆ ಹೆಣವನ್ನು ಬ್ಯಾಗ್​ನಲ್ಲಿ ತುಂಬಿ, ಮೆಟ್ರೋ ಸ್ಟೇಷನ್ ಹೊರಗೆ ಎಸೆದು ಹೋಗಿದ್ದಾರೆ. ಬಟ್ಟೆ ವ್ಯಾಪಾರಿಯಾಗಿದ್ದ 36 ವರ್ಷದ ವ್ಯಕ್ತಿ ತನ್ನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಂದಿಗೆ ಅಕ್ರಮ ಸಂಬಂಧ (Extra Marital Affair) ಇಟ್ಟುಕೊಂಡಿದ್ದರು. ಆ ಉದ್ಯಮಿಯ ಜೊತೆಗಿನ ಖಾಸಗಿ ಕ್ಷಣಗಳ ವಿಡಿಯೋವನ್ನಿಟ್ಟುಕೊಂಡ ಆ ಯುವತಿ ಹಣ ನೀಡುವಂತೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಳು. ಹೀಗಾಗಿ, ತನ್ನ ಸೋದರಳಿಯನ ಸಹಾಯ ಪಡೆದು ಆ ಉದ್ಯಮಿ (Businessman) ತನ್ನ ಸಿಬ್ಬಂದಿಯನ್ನು ಕೊಲೆ ಮಾಡಿದ್ದಾರೆ.

ತನ್ನನ್ನು ಬ್ಲಾಕ್​ಮೇಲ್ ಮಾಡುತ್ತಿದ್ದ ಉದ್ಯೋಗಿಯನ್ನು ಕೊಂದ ಆರೋಪದ ಮೇಲೆ ಬಟ್ಟೆ ವ್ಯಾಪಾರಿಯನ್ನು ಬಂಧಿಸಲಾಗಿದೆ. ಕೊಲೆಗೆ ಸಹಕರಿಸಿದ ಉದ್ಯಮಿಯ ಸೋದರಳಿಯ ಸೇರಿದಂತೆ ಇನ್ನಿಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಗೌರವ್ ಶರ್ಮಾ ತಿಳಿಸಿದ್ದಾರೆ.

ತಮ್ಮ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ 22 ವರ್ಷದ ಯುವತಿಯನ್ನು ಕೊಂದು, ಆಕೆಯ ಶವವನ್ನು ಟ್ರಾಲಿ ಬ್ಯಾಗ್‌ನಲ್ಲಿ ಇರಿಸಿದ್ದರು. ನಂತರ ದಕ್ಷಿಣ ದೆಹಲಿಯ ಜನಪ್ರಿಯ ಮಾರುಕಟ್ಟೆಯ ಸಮೀಪವಿರುವ ಸರೋಜಿನಿ ನಗರದ ಮೆಟ್ರೋ ನಿಲ್ದಾಣದ ಹೊರಗೆ ಆ ಬ್ಯಾಗ್ ಇಟ್ಟು ಪರಾರಿಯಾಗಿದ್ದರು. ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಆ ಗಾರ್ಮೆಂಟ್ಸ್​ ಮಾಲೀಕರಾಗಿದ್ದ ಇಬ್ಬರು ಮಕ್ಕಳನ್ನು ಹೊಂದಿರುವ 36 ವರ್ಷದ ಉದ್ಯಮಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಳು ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಆಕೆ ತಮ್ಮಿಬ್ಬರ ಲೈಂಗಿಕ ಕ್ರಿಯೆಯ ವೀಡಿಯೊವನ್ನು ರೆಕಾರ್ಡ್ ಮಾಡಿ, ಉದ್ಯಮಿಗೆ ಹಣ ನೀಡುವಂತೆ ಬೆದರಿಕೆ ಹಾಕಿದ್ದಳು. ಹಣ ನೀಡದಿದ್ದರೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಮಾಡುವುದಾಗಿ ಆಕೆ ಉದ್ಯಮಿಗೆ ಬೆದರಿಕೆ ಹಾಕಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ತನ್ನ ಕುಟುಂಬಕ್ಕೆ ಮತ್ತು ಹೊರಗಿನ ಸಮಾಜಕ್ಕೆ ಈ ವಿಷಯ ಗೊತ್ತಾಗಬಹುದು ಎಂಬ ಭಯದಲ್ಲಿ ಆ ಉದ್ಯಮಿ ಆಕೆಯನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು. ಅದಕ್ಕಾಗಿ ಉತ್ತರ ಪ್ರದೇಶದ ಹಳ್ಳಿಯೊಂದರಲ್ಲಿ ವಾಸಿಸುವ ತನ್ನ ಸೋದರಳಿಯನನ್ನು ಜನವರಿ 28ರಂದು ದೆಹಲಿಗೆ ಕರೆಸಿಕೊಂಡಿದ್ದರು. ಸರೋಜಿನಿ ನಗರದಿಂದ 3 ಕಿಮೀ ದೂರದಲ್ಲಿರುವ ದಕ್ಷಿಣ ದೆಹಲಿಯ ಯೂಸುಫ್ ಸರಾಯ್‌ನಲ್ಲಿರುವ ಅತಿಥಿಗೃಹದಲ್ಲಿ ಎರಡು ಕೊಠಡಿಗಳನ್ನು ಕಾಯ್ದಿರಿಸಿದ್ದರು. ನಂತರ ಅಲ್ಲಿಗೆ ಆ ಯುವತಿಯನ್ನು ಕರೆಸಿ, ಕೊಲೆ ಮಾಡಿದ್ದರು.

ಈ ಇಬ್ಬರು ವ್ಯಕ್ತಿಗಳು ದೊಡ್ಡ ಟ್ರಾಲಿ ಬ್ಯಾಗ್ ಅನ್ನು ಹೊತ್ತೊಯ್ಯುತ್ತಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಗೆಸ್ಟ್​ ಹೌಸ್​ಗೆ ಆ ಯುವತಿಯನ್ನು ಕರೆಸಿಕೊಂಡ ಅವರು ಆಕೆಯನ್ನು ಕಟ್ಟಿ, ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾರೆ. ಮೃತದೇಹವನ್ನು ಟ್ರಾಲಿ ಬ್ಯಾಗ್‌ನಲ್ಲಿ ತುಂಬಿಕೊಂಡು ಟ್ಯಾಕ್ಸಿಯಲ್ಲಿ ಸರೋಜಿನಿನಗರ ಮೆಟ್ರೋ ನಿಲ್ದಾಣಕ್ಕೆ ತಂದು ಎಸೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಹತ್ಯೆಯ ನಂತರ, ಆ ಉದ್ಯಮಿ ತನ್ನ ಉದ್ಯೋಗಿಯ ಚಪ್ಪಲಿ, ಬಟ್ಟೆ, ಪರ್ಸ್​ ಅನ್ನು ತೆಗೆದುಕೊಂಡು ಪಶ್ಚಿಮ ದೆಹಲಿಯ ಉತ್ತಮ್ ನಗರದ ಮತ್ತೊಂದು ಮೆಟ್ರೋ ನಿಲ್ದಾಣದ ಬಳಿ ಎಸೆದಿದ್ದಾನೆ. ಮೃತ ಉದ್ಯೋಗಿಯ ಮೊಬೈಲ್ ಫೋನ್ ಅನ್ನು ಆ ಉದ್ಯಮಿಯ ಸೋದರಳಿಯ ಉತ್ತರ ಪ್ರದೇಶದ ತನ್ನ ಹಳ್ಳಿಗೆ ತೆಗೆದುಕೊಂಡು ಹೋಗಿದ್ದ. ಇದೀಗ ಈ ಕೊಲೆಗೆ ಸಂಬಂಧಿಸಿದಂತೆ ಉದ್ಯಮಿ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: Shocking News: ಮಾರ್ಗ ಮಧ್ಯೆ ಶಿಫ್ಟ್ ಮುಗಿದಿದ್ದರಿಂದ ವಿಮಾನ ಹಾರಿಸೋದಿಲ್ಲ ಎಂದ ಪೈಲಟ್; ಆಮೇಲೇನಾಯ್ತು?

Success Story: ಕೇವಲ ಎರಡೂವರೆ ರೂ.ಗೆ ಇಡ್ಲಿ, 5 ರೂ.ಗೆ ದೋಸೆ ಮಾರುವ ಬೆಂಗಳೂರಿನ ಅಮ್ಮ; ವಿಡಿಯೋ ಇಲ್ಲಿದೆ

ತಮಿಳು ಕನ್ನಡದ ತಾಯಿ ಭಾಷೆ ಅಲ್ಲ: ಕಮಲ್ ಹೇಳಿಕೆಗೆ ನಾಗತಿಹಳ್ಳಿ ವಿರೋಧ
ತಮಿಳು ಕನ್ನಡದ ತಾಯಿ ಭಾಷೆ ಅಲ್ಲ: ಕಮಲ್ ಹೇಳಿಕೆಗೆ ನಾಗತಿಹಳ್ಳಿ ವಿರೋಧ
ಬೂಕರ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೊದಲ ಲೇಖಕಿ ಬಾನು ಮುಷ್ತಾಕ್
ಬೂಕರ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೊದಲ ಲೇಖಕಿ ಬಾನು ಮುಷ್ತಾಕ್
ಇತ್ತೀಚಿಗೆ ಪತಿ-ಪತ್ನಿ ನಡುವೆ ಪದೇಪದೆ ಜಗಳ ಅಗುತಿತ್ತು; ಸಂಬಂಧಿಕರ ಮಾತು
ಇತ್ತೀಚಿಗೆ ಪತಿ-ಪತ್ನಿ ನಡುವೆ ಪದೇಪದೆ ಜಗಳ ಅಗುತಿತ್ತು; ಸಂಬಂಧಿಕರ ಮಾತು
ಹೆಚ್​​ಎಎಲ್ ನೆಹರೂರವರು ಭಾರತಕ್ಕೆ ನೀಡಿರುವ ಕೊಡುಗೆ ಅಲ್ಲ: ಯದುವೀರ್
ಹೆಚ್​​ಎಎಲ್ ನೆಹರೂರವರು ಭಾರತಕ್ಕೆ ನೀಡಿರುವ ಕೊಡುಗೆ ಅಲ್ಲ: ಯದುವೀರ್
ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಘೋಷಣೆ
ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಘೋಷಣೆ
ವಿಧಾನಸಭೆ ವಿಸರ್ಜಸಿ ಚುನಾವಣೆ ಎದುರಿಸುವಂತೆ ಸರ್ಕಾರಕ್ಕೆ ಅಶ್ವಥ್ ಸವಾಲು
ವಿಧಾನಸಭೆ ವಿಸರ್ಜಸಿ ಚುನಾವಣೆ ಎದುರಿಸುವಂತೆ ಸರ್ಕಾರಕ್ಕೆ ಅಶ್ವಥ್ ಸವಾಲು
ಟೈಲರ್​ ಬಳಿ ಹೋಗಿ ಪತ್ನಿ ಬಾಯಿಗೆ ಹೊಲಿಗೆ ಹಾಕ್ತೀರಾ ಎಂದು ಕೇಳಿದ ಪತಿ
ಟೈಲರ್​ ಬಳಿ ಹೋಗಿ ಪತ್ನಿ ಬಾಯಿಗೆ ಹೊಲಿಗೆ ಹಾಕ್ತೀರಾ ಎಂದು ಕೇಳಿದ ಪತಿ
ಹೆಚ್​ಎಎಲ್ ಬೇರೆ ರಾಜ್ಯಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ಅಶೋಕ
ಹೆಚ್​ಎಎಲ್ ಬೇರೆ ರಾಜ್ಯಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ಅಶೋಕ
ಕನ್ನಡಿಗರು ಸಹನಶೀಲರು ಆದರೆ ಕಣಕಿದರೆ ಸುಮ್ಮನಿರಲ್ಲ: ನಾರಾಯಣಗೌಡ, ಕರವೇ
ಕನ್ನಡಿಗರು ಸಹನಶೀಲರು ಆದರೆ ಕಣಕಿದರೆ ಸುಮ್ಮನಿರಲ್ಲ: ನಾರಾಯಣಗೌಡ, ಕರವೇ
ನಟ ಕಮಲ್​ ಹಾಸನ್​ಗೆ ಕನ್ನಡದ ಇತಿಹಾಸ ಗೊತ್ತಿಲ್ಲ: ವ್ಯಂಗ್ಯವಾಡಿದ ಸಿಎಂ
ನಟ ಕಮಲ್​ ಹಾಸನ್​ಗೆ ಕನ್ನಡದ ಇತಿಹಾಸ ಗೊತ್ತಿಲ್ಲ: ವ್ಯಂಗ್ಯವಾಡಿದ ಸಿಎಂ