ಬೆಂಗಳೂರು: ಪತಿ ಅಗಲಿಕೆ ನೋವಿನಿಂದ ಮನನೊಂದು ಪತ್ನಿಯೂ ನೇಣಿಗೆ ಶರಣಾಗಿರುವಂತಹ (suicide) ಘಟನೆ ನಗರದ ಓ ಫಾರಂ ಬಳಿಯ ರಾಮಯ್ಯ ಲೇಔಟ್ನಲ್ಲಿ ನಡೆದಿದೆ. ಸೌಂದರ್ಯ (24) ನೇಣಿಗೆ ಶರಣಾದ ಯುವತಿ. ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾಳೆ. ಒಂದೂವರೆ ತಿಂಗಳ ಹಿಂದೆ ಸೌಂದರ್ಯ ಪತಿ ಧನಂಜಯ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಮಾಗಡಿ ರಸ್ತೆಯ ಕಚೇರಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಟೆಂಡರ್ ಕೊಡಿಸುವುದಾಗಿ 10 ಲಕ್ಷ ಹಣ ಪಡೆದು ವಂಚಿಸಿದ್ದರು. ಹಣ ಕಳೆದುಕೊಂಡು ಖಿನ್ನತೆಗೊಳಗಾಗಿದ್ದ ಧನಂಜಯ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಪತಿ ಆತ್ಮಹತ್ಯೆ ನಂತರ ಸೌಂದರ್ಯ ತವರುಮನೆ ಸೇರಿಸಿದ್ದಳು. ದಂಪತಿಗೆ ಒಂದೂವರೆ ವರ್ಷದ ಗಂಡು ಮಗುವಿದೆ. ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಅಕ್ರಮ ವಲಸಿಗರಿಂದ ಕಾಫಿತೋಟದ ಮಾಲೀಕನ ಮೇಲೆ ಹಲ್ಲೆ
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಹ್ಯಾರೀಸ್ ಎಸ್ಟೇಟ್‍ನಲ್ಲಿ ಅಕ್ರಮ ವಲಸಿಗರು ಕಾಫಿತೋಟದ ಮಾಲೀಕನ ಮೇಲೆ ಹಲ್ಲೆಗೆ ಯತ್ನಿಸಿರುವ ಆರೋಪ ಕೇಳಿ ಬಂದಿದೆ. ಅಡ್ವಾನ್ಸ್ ಪಡೆದು, ಕೆಲಸ ಮಾಡಿಲ್ಲ ಎಂದು ಪ್ರಶ್ನಿಸಿದ್ದಕ್ಕೆ ಹಲ್ಲೆಗೆ ಯತ್ನಿಸಿದ್ದಾರೆ ಎನ್ನಲಾಗುತ್ತಿದೆ. ಅಸ್ಸಾಂ ಕಾರ್ಮಿಕರು ಮಚ್ಚು, ದೊಣ್ಣೆಗಳಿಂದ ಹಲ್ಲೆಗೆ ಯತ್ನಿಸಿದ್ದಾರೆ.
ಇದನ್ನೂ ಓದಿ: ಮೈಸೂರು: ಅರೆ ಬೆತ್ತಲೆ ಫೋಟೋ ಕಳಿಸಿ ಯುವಕರನ್ನು ಬುಟ್ಟಿಗೆ ಬೀಳಿಸಿ ಹಣ ಪೀಕುತ್ತಿದ್ದ ಖತರ್ನಾಕ್ ಮಹಿಳೆ ಅರೆಸ್ಟ್
ತೋಟದ ಮಾಲೀಕರು ಎಚ್ಚರದಿಂದ ಇರಿ. ಸಾವಿರಾರು ಅಕ್ರಮ ಬಾಂಗ್ಲಿಗರು ಅಸ್ಸಾಮಿಗರ ಸೋಗಿನಲ್ಲಿ ಕಾಫಿನಾಡಲ್ಲಿದ್ದಾರೆ ಎಂದು ಹಲ್ಲೆಗೊಳಗಾದ ತೋಟದ ಮಾಲೀಕ ಮಹಮದ್ ಅಜ್ಗರ್ ತಿಳಿಸಿದ್ದು ಘಟನೆ ಸಂಬಂಧ ಬಣಕಲ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಬೆಂಗಳೂರು: ಅನ್ನ ಹಾಕಿದ ಕಂಪನಿಗೆ ಕನ್ನ ಹಾಕಿದ ಭೂಪ
ಬೆಂಗಳೂರು: ಕೆಲಸ ಮಾಡುತ್ತಿದ್ದ ಕಂಪನಿಯಲ್ಲೇ ಒಳ್ಳೆಯವನಂತೆ ನಟಿಸಿ ಕಳ್ಳತನ ಮಾಡಿದ ನೌಕರ ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ವಿನಯ್ ಎಂಬಾತ ಓಗೋ (VOGO Bike) ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ. ಬೈಕ್ನ ಜಿಪಿಎಸ್ ಸಿಸ್ಟಂ ಸೇರಿ ಕಂಪನಿ ವ್ಯವಸ್ಥೆ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡಿದ್ದ ಈತ 8 ತಿಂಗಳ ಹಿಂದೆ ಕೆಲಸ ಬಿಟ್ಟು ಮನೆಯಲ್ಲೇ ನೆಲೆಸಿದ್ದನು. ಇದೇ ವೇಳೆ ಐಷಾರಾಮಿ ಜೀವನಕ್ಕಾಗಿ ತನಗೆ ಅನ್ನ ಕೊಟ್ಟ ಕಂಪನಿಯ ಮೇಲೆ ಕಣ್ಣು ಹಾಕಿದ್ದಾನೆ.
ಇದನ್ನೂ ಓದಿ: ಬೆಂಗಳೂರು: ಮನೆಗೆಲಸದವನನ್ನು ಬರ್ಬರವಾಗಿ ಕೊಲೆಗೈದು ಮನೆ ಲೂಟಿ
ಓಗೋ ಕಂಪನಿಯ ಆಕ್ಟಿವಾಗಳನ್ನು ಕಳ್ಳತನ ಮಾಡಲು ತುಮಕೂರಿನ ಗೆಳೆಯ ನಂದನ್ ಸಂಪರ್ಕಿಸಿದ್ದಾನೆ. ಅದರಂತೆ ಇಬ್ಬರು ಜೊತೆಗೂಡಿ ಪ್ಲಾನ್ ರೂಪಿಸಿ ಓಗೋ ಕಂಪನಿ ಪಾರ್ಕಿಂಗ್ ಸ್ಥಳಗಳನ್ನ ಗುರುತಿಸಿ ಬೈಕ್ನಲ್ಲಿದ್ದ ಜಿಪಿಎಸ್ ಸಿಸ್ಟಮ್ ಡಿಸ್ ಕನೆಕ್ಟ್ ಮಾಡುತ್ತಿದ್ದರು.
ಕೆರೆಯಲ್ಲಿ ಮುಳುಗಿ ತಾಯಿ, ಇಬ್ಬರು ಮಕ್ಕಳು ಸಾವು
ಚಿತ್ರದುರ್ಗ: ಕೆರೆಯಲ್ಲಿ ಮುಳುಗಿ (drown) ತಾಯಿ ಮತ್ತು ಇಬ್ಬರು ಮಕ್ಕಳು ಸಾವನ್ನಪ್ಪಿರುವಂತಹ (death) ಘಟನೆ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಗ್ರಾಮದಲ್ಲಿ ನಡೆದಿದೆ. ದುರ್ಗಮ್ಮ(25), ಮಗ ಅಜ್ಜಯ್ಯ(6), ಪುತ್ರಿ ಸೇವಂತಿ(4) ಮೃತರು. ಚಳ್ಳಕೆರೆ ತಾಲೂಕಿನ ಹಿರೇಹಳ್ಳಿಯ ನಿವಾಸಿಗಳು. ಬೋಸೇದೇವರಹಟ್ಟಿ ಜಾತ್ರೆಗೆಂದು ಸಂಬಂಧಿಕರ ಮನೆಗೆ ಪತಿ ಮಹಾಂತೇಶ ಕರೆತಂದಿದ್ದರು. ಈ ವೇಳೆ ಗಂಗಾ ಪೂಜೆಗೆಂದು ನಾಯಕನಹಟ್ಟಿ ಹಿರೇಕೆರೆಗೆ ಮಹಾಂತೇಶ ಕರೆದುಕೊಂಡು ಹೋಗಿದ್ದಾರೆ. ಪತ್ನಿ ಮತ್ತು ಮಕ್ಕಳನ್ನು ಕೆರೆ ನೀರಿಗೆ ತಳ್ಳಿ ಪತಿಯೇ ಕೊಂದಿರುವ ಶಂಕೆ ವ್ಯಕ್ತವಾಗಿದೆ. ಪತಿ ಮಹಾಂತೇಶನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಹಿರೇಕೆರೆಯಲ್ಲಿ ಶವಗಳಿಗಾಗಿ ಅಗ್ನಿಶಾಮಕ ದಳ ಶೋಧ ಆರಂಭಿಸಿದೆ. ನಾಯಕನಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:28 pm, Sun, 18 December 22