ಉತ್ತರ ಪ್ರದೇಶ: ವಿವಾದಿತ ಜಮೀನಿನಲ್ಲಿ ಹಸುವನ್ನು ಕಟ್ಟಿದ್ದಕ್ಕೆ ವೃದ್ಧರೊಬ್ಬರ ಹತ್ಯೆ

ವಿವಾದಿತ ಜಮೀನಿನಲ್ಲಿ ಹಸುವನ್ನು ಕಟ್ಟಿದ್ದಕ್ಕಾಗಿ ಕೆಲವು ಮಂದಿ ಹಲ್ಲೆ ನಡೆಸಿದ್ದರಿಂದ ವೃದ್ಧರೊಬ್ಬರು ಮೃತಪಟ್ಟಿದ್ದು, ಅವರ ಮಗ ಗಾಯಗೊಂಡಿದ್ದಾರೆ.

ಉತ್ತರ ಪ್ರದೇಶ: ವಿವಾದಿತ ಜಮೀನಿನಲ್ಲಿ ಹಸುವನ್ನು ಕಟ್ಟಿದ್ದಕ್ಕೆ ವೃದ್ಧರೊಬ್ಬರ ಹತ್ಯೆ
ಹಸು-ಸಾಂದರ್ಭಿಕ ಚಿತ್ರ

Updated on: Aug 07, 2023 | 12:30 PM

ವಿವಾದಿತ ಜಮೀನಿನಲ್ಲಿ ಹಸುವನ್ನು ಕಟ್ಟಿದ್ದಕ್ಕಾಗಿ ಕೆಲವು ಮಂದಿ ಹಲ್ಲೆ ನಡೆಸಿದ್ದರಿಂದ ವೃದ್ಧರೊಬ್ಬರು ಮೃತಪಟ್ಟಿದ್ದು, ಅವರ ಮಗ ಗಾಯಗೊಂಡಿದ್ದಾರೆ. ಉತ್ತರ ಪ್ರದೇಶದ ಕುರೇಭಾರ್ ಪ್ರದೇಶದ ಸಾಧೋಭಾರಿ ಗ್ರಾಮದಲ್ಲಿ ಭಾನುವಾರ ರಾತ್ರಿ ಈ ಘಟನೆ ನಡೆದಿದೆ.
ಮಗ್ಗು ರಾಮ್ ತನ್ನ ಹಸುವನ್ನು ವಿವಾದಿತ ಜಮೀನಿನಲ್ಲಿ ಕಟ್ಟಿಹಾಕಿದ್ದ, ಈ ವಿಚಾರವಾಗಿ ಜಗಳವಾಗಿತ್ತು, ಕೆಲವು ಮಂದಿ ದೊಣ್ಣೆಯಿಂದ ಹಲ್ಲ ನಡೆಸಿದ್ದಾರೆ.

ಮಗ್ಗು ರಾಮ್ ಅವರ ಮಗ ವಿಜಯ್ ಅವರನ್ನು ಉಳಿಸಲು ಮಧ್ಯಪ್ರವೇಶಿಸಿದರು ಆದರೆ ಅವರನ್ನೂ ಥಳಿಸಲಾಗಿದೆ ಎಂದು ಅವರು ಹೇಳಿದರು, ಪೊಲೀಸರು ಇಬ್ಬರನ್ನು ತಕ್ಷಣವೇ ಆಸ್ಪತ್ರೆಗೆ ಸೇರಿಸಲಾಯಿತು, ಅಲ್ಲಿ ಮಗ್ಗು ರಾಮ್ ಮೃತಪಟ್ಟಿದ್ದಾರೆ.

ಮತ್ತಷ್ಟು ಓದಿ: ಕಳ್ಳತನದ ಆರೋಪ, ಇಬ್ಬರು ಬಾಲಕರಿಗೆ ಮೂತ್ರ ಕುಡಿಸಿ, ಗುಪ್ತಾಂಗಕ್ಕೆ ಮೆಣಸಿನ ಪುಡಿ ಹಾಕಿ ಚಿತ್ರಹಿಂಸೆ

ಈ ಸಂಬಂಧ ಜವಾಹರಲಾಲ್, ರಾಜವತಿ ಮತ್ತು ವಿಶ್ವನಾಥ್ ಅವರನ್ನು ಬಂಧಿಸಲಾಗಿದೆ ಎಂದು ಎಸ್‌ಎಚ್‌ಒ ಕುರೇಭಾರ್, ಪ್ರವೀಣ್ ಕುಮಾರ್ ಯಾದವ್ ತಿಳಿಸಿದ್ದಾರೆ. ವಿವರವಾದ ತನಿಖೆ ನಡೆಯುತ್ತಿದೆ.

 

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ