ಮೈಸೂರು: ಗಂಡನ ಅನೈತಿಕ ಸಂಬಂಧ ಪ್ರಶ್ನೆ ಮಾಡಿ ಮಸಣ ಸೇರಿದಳಾ ಪತ್ನಿ? ಮಹಿಳೆಯ ಪೋಷಕರು ಹೇಳುವುದೇನು?

ಕಳೆದ ಆರು ವರ್ಷಗಳ ಹಿಂದೆ ಸಾಲ ಸೋಲ ಮಾಡಿ ಮಗಳನ್ನ ಅದ್ದೂರಿಯಾಗಿ ಮದುವೆ ಮಾಡಿಕೊಟ್ಟಿದ್ದರು. ಆದ್ರೆ, ಅಳಿಯ ಮಾತ್ರ ಇತ್ತ ಮದುವೆಯಾಗಿದ್ದ ಮುದ್ದಾದ ಹೆಂಡತಿ ಬಿಟ್ಟು ಮತ್ತೊಬ್ಬಳ ಜೊತೆ ಲವ್ವಿ ಡವ್ವಿ ಶುರುಮಾಡಿಕೊಂಡಿದ್ದ.‌ ಇದೀಗ ಗಂಡನ ಅನೈತಿಕ ಸಂಬಂಧ ಪ್ರಶ್ನೆ ಮಾಡಿದ ಆಕೆ‌ಯೇ ಮಸಣ ಸೇರಿದ್ದಾಳೆ.

ಮೈಸೂರು: ಗಂಡನ ಅನೈತಿಕ ಸಂಬಂಧ ಪ್ರಶ್ನೆ ಮಾಡಿ ಮಸಣ ಸೇರಿದಳಾ ಪತ್ನಿ? ಮಹಿಳೆಯ ಪೋಷಕರು ಹೇಳುವುದೇನು?
ಮೃತ ಮಹಿಳೆ
Follow us
ದಿಲೀಪ್​, ಚೌಡಹಳ್ಳಿ
| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 08, 2023 | 7:57 AM

ಮೈಸೂರು, ಆ.8: ಜಿಲ್ಲೆಯ ಟಿ ನರಸೀಪುರ(T Narasipura) ತಾಲೂಕಿನ ಕುಳ್ಳನಕೊಪ್ಪಲು ನಿವಾಸಿಯಾದ ಮನುರಾಣಿ ಎಂಬ ಮಹಿಳೆಯನ್ನ, ಕಳೆದ ಐದಾರು ವರ್ಷಗಳ ಹಿಂದೆ ಪಕ್ಕದ ಹನುಮನಹಾಳು ಗ್ರಾಮದ ಮಂಜು ಎಂಬಾತನಿಗೆ ಮದುವೆ ಮಾಡಿಕೊಟ್ಟಿದ್ದರು. ಮಂಜು ಕೇಳಿದಷ್ಟು ವರದಕ್ಷಿಣೆ ಕೊಟ್ಟು ಅದ್ದೂರಿಯಾಗಿಯುವ ಮದುವೆ ಮಾಡಿದ್ದಾರೆ. ಊರಲ್ಲಿ ವ್ಯವಸಾಯ ಮಾಡಿಕೊಂಡು‌ ಮಗಳನ್ನ ಸಾಕುತ್ತಾನೆ ಎಂದು ಕೊಂಡಿದ್ದ ಮನುರಾಣಿ ಕುಟುಂಬಕ್ಕೆ‌ ಒಂದೆರಡು ವರ್ಷದಲ್ಲೆ ಮಂಜುವಿನ ನಿಜ ಬಣ್ಣ ಬಯಲಾಗಿದೆ.

ಹೌದು, ಮಂಜು ಅದೇ ಗ್ರಾಮದ ವಿವಾಹಿತ ಮಹಿಳೆ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದನಂತೆ. ಈ ವಿಚಾರವಾಗಿ ಮನುರಾಣಿ ಮೊದಲಿಗೆ ಗಂಡನನ್ನ ಪ್ರಶ್ನೆ ಮಾಡಿದ್ದಾಳೆ. ಆದ್ರೆ, ಯಾವುದೇ ಪ್ರಯೋಜನವಾಗಿಲ್ಲ. ಈ ವಿಚಾರವನ್ನ ಕುಟುಂಬಸ್ಥರ ಮುಂದೆಯು ಹೇಳಿಕೊಂಡಿದ್ದಾಳೆ. ಈ ವೇಳೆ ಗ್ರಾಮಸ್ಥರ ಜೊತೆ ಸೇರಿ ರಾಜೀ ಪಂಚಾಯತಿ ಮಾಡಿದ್ದಾರಂತೆ. ಆದ್ರೆ, ಇಷ್ಟೆಲ್ಲ ಆದರೂ ಮಂಜು ಮಾತ್ರ ತನ್ನ ಚಾಳಿ ಮುಂದುವರೆಸಿದ್ದಾನೆ. ಇದರಿಂದ ಗಂಡನ ಅಕ್ರಮ ಸಂಬಂಧಕ್ಕೆ ಬೇಸತ್ತ ಮಗಳು ಆತ್ಮಹತ್ಯೆ ದಾರಿ ಹಿಡಿದ್ದಾಳೆ. ಆದ್ರೆ, ಇದು ಆತ್ಮಹತ್ಯೆ ಅಲ್ಲ, ಗಂಡನೆ ವಿಷ ಕುಡಿಸಿ ಸಾಯಿಸಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಇದನ್ನೂ ಓದಿ:ಖುಷ್​​ ಖುಷಿಯಾಗಿದ್ದ ನವದಂಪತಿ ಬೆಳ್ಳಂಬೆಳಗ್ಗೆ ಜೋಡಿಯಾಗಿಯೇ ಶವವಾದರು: ನವದಂಪತಿಯದ್ದು ಕೊಲೆಯೋ, ಆತ್ಮಹತ್ಯೆಯೋ?

ಇನ್ನು ಇದಷ್ಟೇ ಅಲ್ಲ, ಪತ್ನಿ ಅಕ್ರಮ ಸಂಬಂಧ ಕುರಿತು ಪ್ರಶ್ನೆ ಮಾಡಿದ ಮೇಲೆ, ವರದಕ್ಷಿಣಿ ಕೇಳುವುದಕ್ಕೆ ಶುರು ಮಾಡಿದ್ದನಂತೆ. ಹಸು ಸಾಕಬೇಕು, ವ್ಯವಸಾಯಕ್ಕೆ ಬೇಕು ಎಂದು, ಆಗಾಗ ಹಣ ಕೇಳೋಕೆ ಶುರುಮಾಡಿದ್ದ ಮಂಜುವಿಗೆ, ಮಗಳು ಚೆನ್ನಾಗಿರಲಿ ಎಂದು ಕುಟುಂಬಸ್ಥರ ಹತ್ತಿರ ಫೋಷಕರು ಸಾಲ ಸೋಲ ಮಾಡಿ ಹಣವನ್ನು ಕೊಟ್ಟಿದ್ದರಂತೆ. ಆದ್ರೆ, ಇದೀಗ ಮಗಳನ್ನೆ ಕೊಂದಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸುತ್ತಿದ್ದಾರೆ. ಗಿಣಿಯಂತೆ ಸಾಕಿದ್ದ ಮಗಳನ್ನ, ಮದುವೆ ಮಾಡಿ ಗಿಡುಗನಿಗೆ ಕೊಟ್ಟಂತೆ ಆಯಿತು ಎಂದು ಪೋಷಕರು ಅಳಲು ತೋಡಿಕೊಳ್ಳುತ್ತಿದ್ದಾರೆ.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ