ಯುವತಿಗೆ ಚುಡಾಯಿಸಿದ್ದನ್ನು ಪ್ರಶ್ನಿಸಿದ ವ್ಯಕ್ತಿ ಮೇಲೆ ಹಲ್ಲೆ; ಅಂಗಡಿಯಲ್ಲಿದ್ದ ಕಂಪ್ಯೂಟರ್ ಧ್ವಂಸಗೊಳಿಸಿ 40 ಸಾವಿರ ದೋಚಿ ಪರಾರಿ
ಪಾಂಡವಪುರ ಬಸ್ ನಿಲ್ದಾಣದ ಬಳಿಯಿರುವ ಅಂಗಡಿಗೆ ಬಂದಿದ್ದ ಯುವತಿಗೆ ಚುಡಾಯಿಸಿದ ಯುವಕನನ್ನು ಪ್ರಶ್ನಿಸಿದ ವ್ಯಕ್ತಿಯ ಮೇಲೆ ಪುಂಡರು ಹಲ್ಲೆ ನಡೆಸಿದ ಘಟನೆ ನಡೆದಿದೆ. ಗಾಯಗೊಂಡ ಪ್ರಾವಿಷನ್ ಸ್ಟೋರ್ ಮಾಲೀಕ ಚಂದ್ರಶೇಖರ್ನನ್ನು ಆಸ್ಙತ್ರೆಗೆ ಸೇರಿಸಲಾಗಿದೆ.
ಮಂಡ್ಯ, ಆ.5: ಜಿಲ್ಲೆಯ ಪಾಂಡವಪುರ(Pandavapura) ಬಸ್ ನಿಲ್ದಾಣದಲ್ಲಿ ಯುವತಿಗೆ ಚುಡಾಯಿಸಿದ್ದನ್ನು ಪ್ರಶ್ನಿಸಿದ ವ್ಯಕ್ತಿಯ ಮೇಲೆ ಪುಂಡರು ಹಲ್ಲೆ ನಡೆಸಿದ ಘಟನೆ ನಡೆದಿದೆ. ಪ್ರಾವಿಷನ್ ಸ್ಟೋರ್ ಮಾಲೀಕ ಚಂದ್ರಶೇಖರ್ ಹಲ್ಲೆಗೊಳಗಾದ ವ್ಯಕ್ತಿ. ಹಿರೇಮರಳಿ ಗ್ರಾಮದ ರಕ್ಷಿತ್ ಮತ್ತು ಆತನ ಗ್ಯಾಂಗ್ ಸೇರಿ ಈ ಕೃತ್ಯ ಮಾಡಿದ ಆರೋಪ ಕೇಳಿಬಂದಿದ್ದು, ಪಾಂಡವಪುರ ಪೊಲೀಸ್ ಠಾಣೆಯಲ್ಲಿ ರಕ್ಷಿತ್, ಬೋರಾಶೆಟ್ಟಿ, ವಿನಯ್ ಕುಮಾರ್ ಸೇರಿ ಹಲವರ ವಿರುದ್ಧ ಪ್ರಕರಣ ದಾಖಲಾಗಿದೆ. ಇನ್ನು ಗಾಯಗೊಂಡಿರುವ ಅಂಗಡಿ ಮಾಲೀಕ ಚಂದ್ರಶೇಖರ್ಗೆ ಪಾಂಡವಪುರ ತಾಲೂಕು ಆಸ್ಪತ್ರೆಲಿ ಚಿಕಿತ್ಸೆ ನೀಡಲಾಗುತ್ತಿದೆ.
ಅಂಗಡಿಗೆ ಬಂದಿದ್ದ ಯುವತಿಯನ್ನು ಚುಡಾಯಿಸುತ್ತಿದ್ದ ರಕ್ಷಿತ್
ಯುವತಿಯೊಬ್ಬಳು ಪ್ರಾವಿಷನ್ ಸ್ಟೋರ್ಗೆ ಆಗಮಿಸಿ ಸಾಮಗ್ರಿ ಖರೀದಿಸುತ್ತಿದ್ದಳು. ಈ ವೇಳೆ ಯುವತಿಯನ್ನ ಆರೋಪಿ ರಕ್ಷಿತ್ ರೇಗಿಸಿದ್ದಾನೆ. ಇದನ್ನು ಅಂಗಡಿಯಲ್ಲಿದ್ದ ಮಾಲೀಕ ಚಂದ್ರಶೇಖರ್ ಪ್ರಶ್ನೆ ಮಾಡಿದ್ದಾನೆ. ಈ ರೀತಿ ಹುಡುಗಿಯನ್ನು ರೇಗಿಸಬೇಡ. ಇಲ್ಲಿಂದ ದೂರ ಹೋಗು ಎಂದು ಬುದ್ದಿವಾದ ಹೇಳಿದ್ದಾನೆ. ಈ ವೇಳೆ ಪೋನ್ ಮಾಡಿ ತನ್ನ ಕೆಲವು ಸ್ನೇಹಿತರನ್ನ ಕರೆಸಿಕೊಂಡ ರಕ್ಷಿತ್. ನನಗೆ ಬುದ್ದಿ ಹೇಳುತ್ತಿಯಾ ಎಂದು ಸ್ನೇಹಿತರ ಜೊತೆಗೆ ಸೇರಿ ಚಂದ್ರಶೇಖರ್ ಮೇಲೆ ಹಲ್ಲೆ ಮಾಡಿ, ಅಂಗಡಿಯಲ್ಲಿದ್ದ ಕಂಪ್ಯೂಟರ್ ಧ್ವಂಸಗೊಳಿಸಿ, 40 ಸಾವಿರ ರೂಪಾಯಿ ದೋಚಿ ಪರಾರಿಯಾಗಿದ್ದಾನೆ.
ಬಣಕಲ್ ಪಟ್ಟಣದಲ್ಲಿ ಅಂಗಡಿಗಳ ಸರಣಿ ಕಳ್ಳತನ
ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಪಟ್ಟಣದಲ್ಲಿ ಅಂಗಡಿಗಳ ಸರಣಿ ಕಳ್ಳತನವಾಗಿದೆ. ಹೌದು, ಒಂದೇ ರಾತ್ರಿಯಲ್ಲಿ ಶೆಟರ್ ಮುರಿದು 3 ಮೊಬೈಲ್ ಅಂಗಡಿ, 2 ಬಟ್ಟೆ ಅಂಗಡಿಗಳು ಸೇರಿ ಲಕ್ಷಾಂತರ ಮೌಲ್ಯದ ಮೊಬೈಲ್, ಬಟ್ಟೆ ಕಳ್ಳತನವಾದ ಘಟನೆ ನಡೆದಿದೆ. ಈ ಕುರಿತು ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರಿಗೆ ಪೊಲೀಸರು ಬಲೆ ಬಿಸಿದ್ದಾರೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ