ದೊಡ್ಡಬಳ್ಳಾಪುರ: ಆಟೋಗೆ ದಾರಿ ಬಿಡಲಿಲ್ಲ ಎಂದು ಕೆಎಸ್​ಆರ್​ಟಿಸಿ ಬಸ್​​​ ಚಾಲಕನ ಮೇಲೆ ಹಲ್ಲೆ

ಆಟೋಗೆ ದಾರಿ ಬಿಡಲಿಲ್ಲವೆಂದು ಎಂದು ಕೆಎಸ್​ಆರ್​ಟಿಸಿ ಚಾಲಕನ ಮೇಲೆ ಹಲ್ಲೆ ಮಾಡಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಮಾಡೇಶ್ವರ ಗ್ರಾಮದ ಬಳಿ ನಡೆದಿದೆ.

Follow us
ನವೀನ್ ಕುಮಾರ್ ಟಿ
| Updated By: ವಿವೇಕ ಬಿರಾದಾರ

Updated on:Aug 02, 2023 | 11:42 AM

ದೊಡ್ಡಬಳ್ಳಾಪುರ: ಆಟೋಗೆ (Auto) ದಾರಿ ಬಿಡಲಿಲ್ಲವೆಂದು ಎಂದು ಕೆಎಸ್​ಆರ್​ಟಿಸಿ (KSRTC) ಚಾಲಕನ ಮೇಲೆ ಹಲ್ಲೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ (Bangalore Rural) ಜಿಲ್ಲೆಯ ದೊಡ್ಡಬಳ್ಳಾಪುರ (Doddaballapura) ತಾಲೂಕಿನ ಮಾಡೇಶ್ವರ ಗ್ರಾಮದ ಬಳಿ ನಡೆದಿದೆ. ಗೋವಿಂದರಾಜು, ಹನುಮಂತರಾಜು, ನರಸಿಂಹರಾಜು ಹಲ್ಲೆ ಮಾಡಿದ ಆರೋಪಿಗಳು. ಮಂಗಳವಾರ ಮಧ್ಯಹ್ನ ಕೆಎಸ್​ಆರ್​ಟಿಸಿ ಬಸ್​ ಮಾಡೇಶ್ವರದಿಂದ ದೊಡ್ಡಬಳ್ಳಾಪುರಕ್ಕೆ ಗ್ರಾಮ ಮಾರ್ಗವಾಗಿ ಹೊರಟಿತ್ತು.

ಈ ವೇಳೆ ತಮಗೆ ದಾರಿ ಬಿಡಲಿಲ್ಲವೆಂದು, ಬಸ್​​ ಅನ್ನು ಅಡ್ಡಗಟ್ಟಿ ಆಟೋದಲ್ಲಿದ್ದ ನಾಲ್ವರು ಚಾಲಕನ ಮೇಲೆ ಹಲ್ಲೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಹಲ್ಲೆ ತಡೆಯಲು ಬಂದ ನಿರ್ವಾಹಕ, ಪ್ರಯಾಣಿಕರಿಗೂ ಆರೋಪಿಗಳು ಹೊಡೆದಿದ್ದಾರೆ. ಹಲ್ಲೆಯಿಂದ ಗಾಯಗೊಂಡ ಚಾಲಕ ಪ್ರಸನ್ನ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ದೊಡ್ಡಬೆಳವಂಗಲ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಯುವಕನನ್ನು ಚಾಕುವಿನಿಂದ ಇರಿದು ಬರ್ಬರ ಕೊಲೆ

ಮದ್ಯ ಕೊಡಲ್ಲ ಎಂದಿದಕ್ಕೆ ಗ್ಯಾಂಗ್ ನಿಂದ‌ ಅಟ್ಯಾಕ್..!

ರಾಮನಗರ: ಉದ್ರಿಯಾಗಿ ಮದ್ಯ ಕೊಡಲ್ಲ ಎಂದಿದ್ದಕ್ಕೆ ಗ್ಯಾಂಗ್​ವೊಂದು ಬಾರ್ ಸಿಬ್ಬಂದಿ ಮೇಲೆ‌ ದೊಣ್ಣೆ ಬಾಟಲಿಗಳಿಂದ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಹೊಂಗನೂರು ಹೊಂಗನೂರಿನ ರಾಘವೇಂದ್ರ ಬಾರ್​ನಲ್ಲಿ ನಡೆದಿದೆ. ಗಿರಿ, ಕೀರ್ತಿ ಅಲಿಯಾಸ್ ಮಾಲುಂಡಿ, ಮನು, ಕೃಷ್ಣ , ಅಭಿ ವಿರುದ್ಧ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ರಾಜಣ್ಣ ಮತ್ತು ದೀಪು ಹಲ್ಲೆಗೊಳಗಾದ ಬಾರ್ ಕ್ಯಾಶಿಯರ್​ಗಳು.

ಮದ್ಯವನ್ನು ಉದ್ರಿಯಾಗಿ ಕೊಡಲ್ಲ ಎಂದಿದ್ದಕ್ಕೆ ಬಾಟಲಿ, ಕಲ್ಲು, ದೊಣ್ಣೆಗಳಿಂದ ಐವರು ಹಲ್ಲೆ ಮಾಡಿದ್ದು, ಸಿಬ್ಬಂದಿಯ ತಲೆ, ಭುಜಕ್ಕೆ ಗಂಭೀರ ಗಾಯಗಳಾಗಿವೆ.  ಬಚಾವ್ ಆಗಲು ಬಾರ್ ಸಿಬ್ಬಂದಿಯೂ ಪ್ರತಿದಾಳಿ ಮಾಡಿದ್ದಾರೆ. ಸದ್ಯ ರಾಜಣ್ಣ ಮತ್ತು ದೀಪು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚನ್ನಪಟ್ಟಣ ‌ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:49 am, Wed, 2 August 23