ಉತ್ತರ ಪ್ರದೇಶದಲ್ಲಿ ಅತ್ಯಾಚಾರ ಆರೋಪಿಯ ಬೆತ್ತಲೆ ಮೆರವಣಿಗೆ, ಎತ್ತಿನ ಗಾಡಿಗೆ ಕಟ್ಟಿ ಹಲ್ಲೆ

ಉತ್ತರ ಪ್ರದೇಶದ ಬಹ್ರೈಚ್​​​ನಲ್ಲಿ ಅತ್ಯಾಚಾರ ಆರೋಪಿಗೆ ಊರಿನವರೇ ಸೇರಿ ಬುದ್ಧಿ ಕಲಿಸಿದ್ದಾರೆ. 22 ವರ್ಷದ ಯುವಕನ ದೇಹವನ್ನು ಬೆತ್ತಲೆಯಾಗಿಸಿ ಎತ್ತಿನ ಗಾಡಿಗೆ ಕಟ್ಟಿ ಹಾಕಲಾಗಿದೆ. ಹಲವಾರು ಪುರುಷರು ಮತ್ತು ಮಹಿಳೆಯರು ಛೂ ಬಿಟ್ಟಿರುವುದನ್ನು ಮತ್ತು ಇತರರು ಥಳಿಸಲು ಹೇಳುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಈ ವಿಡಿಯೋ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಉತ್ತರ ಪ್ರದೇಶದಲ್ಲಿ ಅತ್ಯಾಚಾರ ಆರೋಪಿಯ ಬೆತ್ತಲೆ ಮೆರವಣಿಗೆ, ಎತ್ತಿನ ಗಾಡಿಗೆ ಕಟ್ಟಿ ಹಲ್ಲೆ
Arrest

Updated on: Apr 18, 2025 | 3:56 PM

ಬಹ್ರೈಚ್, ಏಪ್ರಿಲ್ 18: ಉತ್ತರ ಪ್ರದೇಶದ ಬಹ್ರೈಚ್​​ನ (Bahraich) ವಿಶೇಷ್‌ಗಂಜ್ ಪ್ರದೇಶದಲ್ಲಿ ಅತ್ಯಾಚಾರ ನಡೆಸಿದ ಆರೋಪಿಯನ್ನು ಎತ್ತಿನ ಗಾಡಿಗೆ ಕಟ್ಟಿ, ಸ್ಥಳೀಯರು ಆತನ ಮೇಲೆ ಹಲ್ಲೆ ಮಾಡಿ ಬೆತ್ತಲೆಯಾಗಿ ಮೆರವಣಿಗೆ ಮಾಡಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡಿದ ನಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ವಿಡಿಯೋದಲ್ಲಿ 22 ವರ್ಷದ ಯುವಕನ ದೇಹವನ್ನು ಬೆತ್ತಲೆಯಾಗಿಸಿ, ಎತ್ತಿನ ಗಾಡಿಗೆ ಕಟ್ಟಿ ಹಾಕಲಾಗಿದೆ. ಕೆಲವರು ನಾಯಿಯನ್ನು ಅವನ ಮೇಲೆ ದಾಳಿ ಮಾಡಲು ಪ್ರಚೋದಿಸುತ್ತಿರುವುದನ್ನು ಕೂಡ ವಿಡಿಯೋದಲ್ಲಿ ನೋಡಬಹುದು.

ಗುರುವಾರ ಈ ವೀಡಿಯೊ ವೈರಲ್ ಆದ ನಂತರ ಆತನ ಕುಟುಂಬವು ಸ್ಥಳೀಯ ಪೊಲೀಸರಿಗೆ ದೂರು ನೀಡಿತು. “ಮಹಿಳೆಯೊಬ್ಬರ ಲಿಖಿತ ದೂರಿನ ಆಧಾರದ ಮೇಲೆ, ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್‌ಗಳ ಅಡಿಯಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಹಲ್ಲೆ ಮತ್ತು ಹಾನಿಗಾಗಿ ಎಫ್‌ಐಆರ್ ದಾಖಲಿಸಲಾಗಿದೆ” ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ರಮೇಶ್ ಪಾಂಡೆ ತಿಳಿಸಿದ್ದಾರೆ.

ಇದನ್ನೂ ಓದಿ: ಮಂಗಳೂರಿನಲ್ಲಿ ಯುವತಿ ಮೇಲೆ ಸಮೂಹಿಕ ಅತ್ಯಾಚಾರ: 24 ಗಂಟೆಗಳಲ್ಲಿ ಮೂವರ ಬಂಧನ

ಇದನ್ನೂ ಓದಿ
ಬಸ್‌ ತಡೆದು ನಡು ರಸ್ತೆಯಲ್ಲಿ ಪಾನಮತ್ತ ಮಹಿಳೆಯ ಕಿರಿಕ್; ವಿಡಿಯೋ ವೈರಲ್‌
ಛತ್ತೀಸ್​ಗಢ ಮಾಜಿ ಸಿಎಂ ಭೂಪೇಶ್ ಬಘೇಲ್ ಮನೆ ಸೇರಿ ಹಲವೆಡೆ ಇಡಿ ದಾಳಿ
ಮೊಬೈಲ್​ನಲ್ಲಿ ಮಾತನಾಡುತ್ತಾ ಬಾವಿಗೆ ಬಿದ್ದು ವಿದ್ಯಾರ್ಥಿ ಸಾವು
ಮದುವೆ ಮನೆಗಳಲ್ಲಿ ಇನ್ಮುಂದೆ ನೀರಿನ ಪ್ಲಾಸ್ಟಿಕ್ ಬಾಟಲಿ ಬಳಕೆ ಮಾಡುವಂತಿಲ್ಲ

ಏಪ್ರಿಲ್ 3ರಂದು ಹಳ್ಳಿಯ ಬಳಿ ತನ್ನ ಸೋದರ ಮಾವನನ್ನು ಹಗ್ಗದಿಂದ ಕಟ್ಟಿ ಥಳಿಸಲಾಯಿತು ಎಂದು ದೂರುದಾರರು ಆರೋಪಿಸಿದ್ದಾರೆ ಎಂದು ರಮೇಶ್ ಪಾಂಡೆ ಹೇಳಿದ್ದಾರೆ.

“ಈ ಘಟನೆಯಲ್ಲಿ ಎರಡು ವಿಭಿನ್ನ ಸಮುದಾಯಗಳ ವ್ಯಕ್ತಿಗಳು ಭಾಗಿಯಾಗಿದ್ದರೂ, ಕೋಮು ಉದ್ವಿಗ್ನತೆಗೆ ಯಾವುದೇ ಪುರಾವೆಗಳಿಲ್ಲ. “ಆದರೂ, ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮದಲ್ಲಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ” ಎಂದು ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ: ಪಿಲಿಭಿತ್ ಅಭಯಾರಣ್ಯದಲ್ಲಿ ಹೆಬ್ಬಾವನ್ನು ತಿಂದ ಹುಲಿ; ವಿಡಿಯೋ ವೈರಲ್

“ಹಲ್ಲೆಗೆ ಸಂಬಂಧಿಸಿದಂತೆ ಈಗ ಪ್ರತ್ಯೇಕ ಪ್ರಕರಣ ದಾಖಲಾಗಿದ್ದು, ಅತ್ಯಾಚಾರ ಪ್ರಕರಣ ಮತ್ತು ಗುಂಪು ಹಿಂಸಾಚಾರದ ಎರಡು ವಿಷಯದಲ್ಲೂ ತನಿಖೆ ನಡೆಯುತ್ತಿದೆ” ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ