AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅತ್ಯಾಚಾರ ದೃಶ್ಯದ ಬಳಿಕ ನಾನು ವಾಂತಿ ಮಾಡಿದೆ’; ಭಯಾನಕ ಅನುಭವ ಬಿಚ್ಚಿಟ್ಟ ನಟಿ ದಿಯಾ ಮಿರ್ಜಾ

ದಿಯಾ ಮಿರ್ಜಾ ಅವರು ತಮ್ಮ 'ಕಾಫಿರ್' ಚಿತ್ರದ ಶೂಟ್ ಬಗ್ಗೆ ಮಾತನಾಡಿದ್ದಾರೆ. ಈ ಚಿತ್ರದ ಅತ್ಯಾಚಾರದ ದೃಶ್ಯದ ಚಿತ್ರೀಕರಣದ ನಂತರ ವಾಂತಿ ಮಾಡಿದ್ದಾರೆಂದು ಬಹಿರಂಗಪಡಿಸಿದ್ದಾರೆ. ಈ ದೃಶ್ಯದ ಚಿತ್ರೀಕರಣ ಅವರಿಗೆ ಅತ್ಯಂತ ಕಷ್ಟಕರವಾಗಿತ್ತು ಎಂದು ವಿವರಿಸಿದ್ದಾರೆ. ಚಿತ್ರವು ಪಾಕಿಸ್ತಾನದ ಮಹಿಳೆಯೊಬ್ಬಳ ಕಥೆಯನ್ನು ಹೇಳುತ್ತದೆ.

‘ಅತ್ಯಾಚಾರ ದೃಶ್ಯದ ಬಳಿಕ ನಾನು ವಾಂತಿ ಮಾಡಿದೆ’; ಭಯಾನಕ ಅನುಭವ ಬಿಚ್ಚಿಟ್ಟ ನಟಿ ದಿಯಾ ಮಿರ್ಜಾ
ದಿಯಾ ಮಿರ್ಜಾ
ರಾಜೇಶ್ ದುಗ್ಗುಮನೆ
|

Updated on:Apr 17, 2025 | 8:43 AM

Share

ಲೈಂಗಿಜ ದೌರ್ಜನ್ಯಕ್ಕೆ ಒಳಗಾಗುವುದು, ಕಿಸ್ಸಿಂಗ್ ದೃಶ್ಯ, ಅತ್ಯಾಚಾರದ ದೃಶ್ಯಗಳನ್ನು ಮಾಡುವಾಗ ಎಲ್ಲಾ ನಟಿಯರಿಗೂ ಅದು ಕಂಫರ್ಟ್ ಎನಿಸೋದಿಲ್ಲ. ಕೆಲವು ನಟಿಯರು ಈ ವೇಳೆ ಮುಜುಗರ ಅನುಭವಿಸುತ್ತಾರೆ. ನಟಿ ದಿಯಾ ಮಿರ್ಜಾ (Dia Mirza) ಅವರಿಗೂ ಹಾಗೆಯೇ ಆಗಿದೆ. ಅತ್ಯಾಚಾರ ದೃಶ್ಯದ ಬಳಿಕ ಅವರಿಗೆ ವಾಂತಿ ಆಗಿತ್ತು. ಈ ಬಗ್ಗೆ ಸಂದರ್ಶನ ಒಂದರಲ್ಲಿ ಅವರು ಹೇಳಿಕೊಂಡಿದ್ದರೆ.  ವೆಬ್ ಸೀರಿಸ್ ಒಂದು ರೀ ಎಡಿಟಿಂಗ್ ಆಗಿ ಸಿನಿಮಾ ರೂಪದಲ್ಲಿ ಬರುತ್ತಿದೆ. ಈ ಚಿತ್ರದ ಶೂಟ್ ವೇಳೆ ನಡೆದ ಘಟನೆ ಇದಾಗಿತ್ತು.

2019ರಲ್ಲಿ ‘ಕಾಫಿರ್’ ಹೆಸರಿನ ವೆಬ್ ಸೀರಿಸ್ ಬಂದಿತ್ತು. ಈ ಸರಣಿಯನ್ನು ಸೋನಂ ನಾಯರ್ ಅವರು ನಿರ್ದೇಶನ ಮಾಡಿದ್ದರು. ಈ ಸರಣಿ ಈಗ ಸಾಕಷ್ಟು ಎಡಿಟಿಂಗ್ ಬಳಿಕ ಸಿನಿಮಾ ರೂಪದಲ್ಲಿ ಹೊರ ಬರುತ್ತಿದೆ. ಪಾಕಿಸ್ತಾನದ ಮಹಿಳೆ ಕೈನಾಜ್ ಅಖ್ತರ್ (ದಿಯಾ ಮಿರ್ಜಾ) ಭಾರತದಲ್ಲಿ ಬಂದು ಸಿಲುಕುತ್ತಾಳೆ. ಆಕೆಯ ಮೇಲೆ ಭಯೋತ್ಪಾದನೆಯ ಆರೋಪ ಬರುತ್ತದೆ. ನಿಜಕ್ಕೂ ಆಕೆ ಭಯೋತ್ಪಾದಕಿಯಾ? ಅವಳ ಮೇಲೆ ಈ ಆರೋಪ ಬಂದಿದ್ದು ಹೇಗೆ ಎಂಬುದನ್ನು ಸಿನಿಮಾ ವಿವರಿಸುತ್ತದೆ. ಆಕೆಯ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯದ ಬಗ್ಗೆಯೂ ಸಿನಿಮಾದಲ್ಲಿ ಹೇಳಲಾಗಿದೆ.

‘ಅತ್ಯಾಚಾರದ ದೃಶ್ಯ ಮಾಡುವಾಗ ಸಾಕಷ್ಟು ಕಷ್ಟ ಆಯಿತು. ಆ ದೃಶ್ಯ ಶೂಟ್ ಮಾಡಿದ ಬಳಿಕ ನಾನು ನಡುಗುತ್ತಿದ್ದೆ. ಈ ದೃಶ್ಯದ ಶೂಟ್ ಬಳಿಕ ನನಗೆ ವಾಂತಿ ಆಯಿತು. ಈ ಸಂದರ್ಭದಲ್ಲಿ ನಾವು ಭಾವನಾತ್ಮಕವಾಗಿ ಹಾಗೂ ದೈಹಿಕವಾಗಿ ಗಟ್ಟಿ ಇರಬೇಕು. ನೀವು ನಿಮ್ಮ ಇಡೀ ದೇಹವನ್ನು ಆ ಕ್ಷಣದ ಸತ್ಯಕ್ಕೆ ತೆಗೆದುಕೊಂಡು ಹೋದಾಗ ನೀವು ಅದನ್ನು ಅನುಭವಿಸುತ್ತೀರಿ’ ಎಂದಿದ್ದಾರೆ ದಿಯಾ ಮಿರ್ಜಾ.

ಇದನ್ನೂ ಓದಿ
Image
ಸತತ ಸೋಲು, ಸಂಭಾವನೆಯಲ್ಲಿ ಇಳಿಕೆ; ಆದರೂ ನೂರಾರು ಕೋಟಿ ಒಡೆಯ ವಿಕ್ರಮ್
Image
ತ್ರಿವಿಕ್ರಂ ಹಾಗೂ ಭವ್ಯಾ ಗೌಡ ಸಂಬಂಧ ಈಗ ಹೇಗಿದೆ? ಇಲ್ಲಿದೆ ಉತ್ತರ  
Image
ಪೀರಿಯಡ್ಸ್ ಬಗ್ಗೆ ಓಪನ್​ ಆಗಿ ಮಾತನಾಡೋದು ನಮಗೆ ಈಗಲೂ ನಾಚಿಕೆಯ ವಿಷಯ; ಸಮಂತಾ
Image
ಚಿತ್ರರಂಗದಲ್ಲಿ ಅತ್ಯಂತ ಕೆಟ್ಟ ದಾಖಲೆ ಬರೆದ ಪವನ್ ಕಲ್ಯಾಣ್

ಅತ್ಯಾಚಾರದ ದೃಶ್ಯವನ್ನು ಮಾಡುವಾಗ ದಿಯಾ ಮಿರ್ಜಾಗೆ ಕಷ್ಟ ಆಗಲು ಕಾರಣ ಆಗಿದ್ದು ಅವರು ನಟನೆಯಲ್ಲಿ ಮುಳುಗಿ ಹೋಗಿದ್ದು. ತಮ್ಮೆ ಮೇಲೆ ಅತ್ಯಾಚಾರ ಆಗುತ್ತಿದೆ ಎಂಬ ರೀತಿಯ ಭಾವನೆ ಅವರಿಗೆ ಕಾಡಿತು. ಇದರಿಂದ ಅವರ ಮನಸ್ಸಿಗೆ ಘಾಸಿ ಆಯಿತು. ಆದರೆ, ನಟನೆಗೆ ಸಂಪೂರ್ಣ ನ್ಯಾಯ ಒದಗಿಸಿದ ಭಾವನೆ ಅವರಲ್ಲಿ ಇದೆ.

ಇದನ್ನೂ ಓದಿ: ಗಂಡನ ಮಾಜಿ ಪತ್ನಿಯ ಪುತ್ರಿ ಸಮೈರಾಗೆ ಪ್ರೀತಿಯ ಬರ್ತ್​ಡೇ ವಿಶ್​ ಮಾಡಿದ ನಟಿ ದಿಯಾ ಮಿರ್ಜಾ

ಅಂದಹಾಗೆ, ‘ಕಾಫಿರ್’ ಸರಣಿ ಜೀ5ನಲ್ಲಿ ವೀಕ್ಷಣೆಗೆ ಲಭ್ಯವಿದೆ. ಈಗ ಸಿನಿಮಾ ಕೂಡ ಅಲ್ಲಿಯೇ ರಿಲೀಸ್ ಆಗಲಿದೆ. ಇದು ನೈಜ ಘಟನೆಗಳಿಂದ ಸ್ಫೂರ್ತಿ ಪಡೆದು ಮಾಡಿದ ಸಿನಿಮಾ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:41 am, Thu, 17 April 25

ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್