AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮಿರ್ಜಾಪುರ್ ಸೀಸನ್ 3’ ಕಲಾವಿದರ ಸಂಭಾವನೆ ಬಗ್ಗೆ ಇಲ್ಲಿದೆ ವಿವರ  

ನಟಿ ರಸಿಕಾ ದುಗ್ಗಲ್ ಈ ಸರಣಿಯಲ್ಲಿ ಬೀನಾ ತ್ರಿಪಾಠಿ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಸರಣಿಯ ಪ್ರತಿ ಸಂಚಿಕೆಗೆ ನಟಿ 2 ಲಕ್ಷ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಅಂದರೆ 10 ಸಂಚಿಕೆಗಳಿಗೆ ನಟಿ 20 ಲಕ್ಷ ಸಂಭಾವನೆ ಪಡೆದಿದ್ದಾರೆ.

‘ಮಿರ್ಜಾಪುರ್ ಸೀಸನ್ 3’ ಕಲಾವಿದರ ಸಂಭಾವನೆ ಬಗ್ಗೆ ಇಲ್ಲಿದೆ ವಿವರ  
ಮಿರ್ಜಾಪುರ್
 ಶ್ರೀಲಕ್ಷ್ಮೀ ಎಚ್
| Edited By: |

Updated on:Jul 08, 2024 | 11:35 AM

Share

‘ಮಿರ್ಜಾಪುರ ಸೀಸನ್ 3′ ಜುಲೈ 5ರಂದು ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಿದೆ. ‘ಮಿರ್ಜಾಪುರ’ ಸರಣಿಯ ಮೊದಲ ಎರಡು ಸೀಸನ್‌ಗಳನ್ನು ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ. ಇದೀಗ ಸರಣಿಯ ಮೂರನೇ ಸೀಸನ್‌ಗೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೆಲವರು ಕಾಲೀನ್ ಭಯ್ಯಾ ಅವರನ್ನು ಶ್ಲಾಘಿಸುತ್ತಿದ್ದರೆ, ಇತರರು ಮುನ್ನಾ ಭೈಯಾ ಅವರನ್ನು ತುಂಬಾ ಮಿಸ್ ಮಾಡಿಕೊಂಡಿದ್ದಾರೆ. ಮುನ್ನಾ ಇಲ್ಲ ಎನ್ನುವ ಕಾರಣಕ್ಕೆ ಅನೇಕರು ಈ ಸರಣಿಯನ್ನು ಇಷ್ಟಪಡಲಿಲ್ಲ. ಮೂರನೇ ಸೀಸನ್​ನಲ್ಲಿ, ಕೆಲವು ರಹಸ್ಯಗಳನ್ನು ಬಹಿರಂಗಪಡಿಸಲಾಗಿದೆ. ಈ ಮಧ್ಯೆ ಕಲಾವಿದರ ಸಂಭಾವನೆ ವಿಚಾರ ರಿವೀಲ್ ಆಗಿದೆ.

‘ಮಿರ್ಜಾಪುರ ಸೀಸನ್ 2′ ಕೊನೆಯಲ್ಲಿ ಮುನ್ನಾ ಮೇಲೆ ಗುಂಡಿನ ದಾಳಿ ನಡೆದಿತ್ತು. ಮೂರನೇ ಸೀಸನ್ ಆರಂಭದಲ್ಲಿ ಮುನ್ನಾ ನಿಧನರಾದರು ಎಂದು ತೋರಿಸಲಾಗಿದೆ. ಮುನ್ನಾ ಅವರ ನಿಧನವಾರ್ತೆ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಕಾಲೀನ್ ಭಯ್ಯಾ ಫುಲ್ ಸೀಸನ್​ನಲ್ಲಿ ಶೋಪೀಸ್ ರೀತಿ ಆಗಿದ್ದಾರೆ ಎನ್ನುತ್ತಾರೆ ಪ್ರೇಕ್ಷಕರು. ಈ ಬಗ್ಗೆಯೂ ಚರ್ಚೆಯಾಗಿದೆ. ಸದ್ಯ ಸಂಭಾವನೆ ವಿಚಾರ ಚರ್ಚೆ ಆಗುತ್ತಿದೆ.

ನಟಿ ರಸಿಕಾ ದುಗ್ಗಲ್ ಈ ಸರಣಿಯಲ್ಲಿ ಬೀನಾ ತ್ರಿಪಾಠಿ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಸರಣಿಯ ಪ್ರತಿ ಸಂಚಿಕೆಗೆ ನಟಿ 2 ಲಕ್ಷ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಅಂದರೆ 10 ಸಂಚಿಕೆಗಳಿಗೆ ನಟಿ 20 ಲಕ್ಷ ಸಂಭಾವನೆ ಪಡೆದಿದ್ದಾರೆ.

ಧಾರಾವಾಹಿಯಲ್ಲಿ ಗುಡ್ಡು ಪಂಡಿತ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟ ಅಲಿ ಫಜಲ್ ಪ್ರತಿ ಸಂಚಿಕೆಗೆ 12 ಲಕ್ಷ ರೂಪಾಯಿ ಪಡೆದಿದ್ದಾರೆ. 10 ಎಪಿಸೋಡ್‌ಗಳಿಗೆ 1.20 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಈ ಸರಣಿಯಲ್ಲಿ ನಟ ಜಿತೇಂದ್ರ ಕುಮಾರ್ ಅತಿಥಿ ನಟನಾಗಿ ಕಾಣಿಸಿಕೊಂಡಿದ್ದಾರೆ. ‘ಪಂಚಾಯತ್ 2′ ನ ಒಂದು ಸಂಚಿಕೆಗೆ ನಟ 4 ಲಕ್ಷ ರೂಪಾಯಿಗಳನ್ನು ಸಂಭಾವನೆಯಾಗಿ ತೆಗೆದುಕೊಂಡಿದ್ದಾರೆ. ಹಾಗಾಗಿ ಅವರು ಮೂರನೇ ಸೀಸನ್‌ಗಾಗಿ ತಮ್ಮ ಶುಲ್ಕವನ್ನು ಹೆಚ್ಚಿಸಿದ್ದಾರೆ ಎಂದು ವರದಿಯಾಗಿದೆ.

ಮಾಧ್ಯಮ ವರದಿಗಳ ಪ್ರಕಾರ ‘ಮಿರ್ಜಾಪುರ 2′ ಚಿತ್ರಕ್ಕಾಗಿ ನಟ ಪಂಕಜ್ ತ್ರಿಪಾಠಿ 2 ರಿಂದ 10 ಕೋಟಿ ಸಂಭಾವನೆ ಪಡೆದಿದ್ದಾರೆ. ಈ ಸಮಯದಲ್ಲಿ, ಅವರ ಸಂಭಾವನೆಯಲ್ಲಿ ಹೆಚ್ಚಳದ ಬಗ್ಗೆಯೂ ಮಾಹಿತಿ ಇದೆ. ಆದರೆ ಪಂಕಜ್ ಪಡೆದ ಸಂಭಾವನೆ ಎಷ್ಟು ಎಂಬ ಮಾಹಿತಿ ಹೊರಬಿದ್ದಿಲ್ಲ. ನಟಿ ಶ್ವೇತಾ ತ್ರಿಪಾಠಿ ಒಂದು ಸಂಚಿಕೆಗೆ 2.20 ಲಕ್ಷ ಸಂಭಾವನೆ ಪಡೆದಿದ್ದಾರೆ. ಅಂದರೆ ಶ್ವೇತಾ 10 ಸಂಚಿಕೆಗಳಿಗೆ 22 ಲಕ್ಷ ರೂಪಾಯಿ ಪಡೆದಿದ್ದಾರೆ.

ಇದನ್ನೂ ಓದಿ: ಅಮೇಜಾನ್ ಪ್ರೈಮ್​ನಲ್ಲಿ ಪ್ರಸಾರ ಆರಂಭಿಸಿದ ‘ಮಿರ್ಜಾಪುರ್ 3’; ಹೇಗಿದೆ ಹೊಸ ಸೀಸನ್?

ಮುನ್ನಾ ಭಯ್ಯಾ ಇಲ್ಲದೆ ಇರುವುದು ಫ್ಯಾನ್ಸ್​ಗೆ ಸಾಕಷ್ಟು ಬೇಸರ ಮೂಡಿಸಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 6:30 am, Sun, 7 July 24

ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ