ಕೊಪ್ಪಳ: ಹುಲಗೆಮ್ಮ ದೇವಸ್ಥಾನದ ಮುಂದೆ ಮಲಗಿದ್ದ ಭಕ್ತರ ಮೇಲೆ ಗೂಡ್ಸ್ ವಾಹನ ಹರಿದಿರುವ ಘಟನೆ ಕೊಪ್ಪಳ (Koppal) ತಾಲೂಕಿನ ಹುಲಗೆಮ್ಮ ದೇವಸ್ಥಾನದ ಎದುರು ನಡೆದಿದೆ. ತಿಪ್ಪಣ್ಣ(75) ಸಾವನ್ನಪ್ಪಿದ್ದು, ಹನುಮವ್ವ, ಮಲ್ಲವ್ವ, ತುಕಾರಾಂ ಎಂಬುವರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ತಡರಾತ್ರಿ ನಡೆದಿದ್ದು, ವಾಹನ ಹರಿಸಿ ಚಾಲಕ ಪರಾರಿಯಾಗಿದ್ದಾನೆ. ಅಪಘಾತದ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ. ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುತ್ರಿ ಜೊತೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ
ಉತ್ತರ ಕನ್ನಡ: ಪುತ್ರಿ ಜೊತೆ ತಾಯಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೊನ್ನಾವರ ತಾಲೂಕಿನ ಜಲವಳ್ಳಿ ಗ್ರಾಮದಲ್ಲಿ ನಡೆದಿದೆ. ಲಲಿತಾ ಮಂಜುನಾಥ ನಾಯ್ಕ(28), ಮಾನಸ(2) ಮೃತ ದುರ್ದೈವಿಗಳು. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪುತ್ರಿ ಜತೆ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published On - 5:48 pm, Mon, 25 July 22