AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bagalkote News: ರಾಜ್ಯಮಟ್ಟದ ಪತ್ರಿಕೆ ಪತ್ರಕರ್ತ ಶವವಾಗಿ ಪತ್ತೆ; ನದಿಗೆ ಹಾರಿ ಆತ್ಮಹತ್ಯೆ ಶಂಕೆ

ಪೊಲೀಸ್ ಕಮಿಷನರ್​​ ಕಚೇರಿ ಗೇಟ್​ನಲ್ಲಿ ವ್ಯಕ್ತಿ ಓರ್ವ ವಿಷ ಸೇವಿಸಿರುವಂತಹ ಘಟನೆ ನಡೆದಿದೆ. ವಿಜಯಪುರ ಮೂಲದ ಸಿದ್ದರಾಮಗೌಡ ವಿಷ ಸೇವಿಸಿ ಅಸ್ವಸ್ಥ ಆದ ವ್ಯಕ್ತಿ.

Bagalkote News: ರಾಜ್ಯಮಟ್ಟದ ಪತ್ರಿಕೆ ಪತ್ರಕರ್ತ ಶವವಾಗಿ ಪತ್ತೆ; ನದಿಗೆ ಹಾರಿ ಆತ್ಮಹತ್ಯೆ ಶಂಕೆ
ಪತ್ರಿಕೆ ಸ್ಟ್ರಿಂಜರ್ ಶವವಾಗಿ ಪತ್ತೆ
TV9 Web
| Edited By: |

Updated on:Jul 25, 2022 | 3:10 PM

Share

ಬಾಗಲಕೋಟೆ: ರಾಜ್ಯಮಟ್ಟದ ಪತ್ರಿಕೆ ಪತ್ರಕರ್ತ ಶವವಾಗಿ (dead body) ಪತ್ತೆಯಾಗಿರುವಂತಹ ಘಟನೆ ಜಿಲ್ಲೆ ಬೀಳಗಿ ತಾಲ್ಲೂಕಿನ ಅನಗವಾಡಿಯಲ್ಲಿ ನಡೆದಿದೆ. ಪ್ರಭು ಲಕ್ಷಟ್ಟಿ(43) ಮೃತ ಸ್ಟ್ರಿಂಜರ್. ಜಿಲ್ಲೆಯ ಬಾದಾಮಿ ತಾಲ್ಲೂಕಿನ ಕೆರೂರು ಪಟ್ಟಣದ ಪ್ರಜಾವಾಣಿ ಸ್ಟ್ರಿಂಜರ್ ಆಗಿದ್ದು, ಮೊನ್ನೆ ರಾತ್ರಿಯಿಂದ ನಾಪತ್ತೆಯಾಗಿದ್ದರು. ನಿನ್ನೆ ಅನಗವಾಡಿ ಘಟಪ್ರಭಾ ನದಿ ಸೇತುವೆ ಮೇಲೆ ಚಪ್ಪಲಿ ಬೈಕ್ ಪತ್ತೆಯಾಗಿದ್ದು, ನದಿಗೆ ಹಾರಿದ ಶಂಕೆ ವ್ಯಕ್ತವಾಗಿತ್ತು. ಬೀಳಗಿ ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಚರಣೆಯಿಂದ ಇದೀಗ ಶವ ಪತ್ತೆಯಾಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದು, ಇತ್ತೀಚೆಗೆ ಖಿನ್ನತೆಗೆ ಒಳಗಾಗಿದ್ದರೆಂಬ ಮಾಹಿತಿ ಕೂಡ ಇದೆ.

ಇದನ್ನೂ ಓದಿ; ತಂದೆಯನ್ನು ಕೊಲ್ಲಲು ಫೇಸ್‌ಬುಕ್ ಮೂಲಕ ಕೊಲೆಗಾರನಿಗೆ ಸುಪಾರಿ ಕೊಟ್ಟ ಮಗ

ಕಮಿಷನರ್​​ ಕಚೇರಿ ಎದುರು ವಿಷ ಸೇವಿಸಿ ಅಸ್ವಸ್ಥ ಆದ ವ್ಯಕ್ತಿ

ಬೆಂಗಳೂರು: ಪೊಲೀಸ್ ಕಮಿಷನರ್​​ ಕಚೇರಿ ಗೇಟ್​ನಲ್ಲಿ ವ್ಯಕ್ತಿ ಓರ್ವ ವಿಷ ಸೇವಿಸಿರುವಂತಹ ಘಟನೆ ನಡೆದಿದೆ. ವಿಜಯಪುರ ಮೂಲದ ಸಿದ್ದರಾಮಗೌಡ ವಿಷ ಸೇವಿಸಿ ಅಸ್ವಸ್ಥ ಆದ ವ್ಯಕ್ತಿ. ಬೆಂಗಳೂರಿನ ಅಮೃತಹಳ್ಳಿ ಠಾಣೆ ಪೊಲೀಸರು ನನಗೆ ನ್ಯಾಯ ನೀಡಿಲ್ಲ. ಮಗಳ ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ಅನ್ಯಾಯವಾಗಿದೆ. ಪೊಲೀಸರು ಹಣ, ಚಿನ್ನಾಭರಣ ಪಡೆದು ಮೋಸ ಮಾಡಿದ್ದಾರೆ ಎಂದು ಪೊಲೀಸ್ ಆಯುಕ್ತರ ಕಚೇರಿ ಹಿಂದಿನ ಗೇಟ್​ನಲ್ಲಿ ವಿಷಸೇವಿಸಿ ಸಿದ್ದರಾಮಗೌಡ ಅಸ್ವಸ್ಥರಾಗಿ ಬಿದಿದ್ದ. ಕೂಡಲೇ ಬೌರಿಂಗ್ ಆಸ್ಪತ್ರೆಗೆ ಪೊಲೀಸ್ ಸಿಬ್ಬಂದಿ ರವಾನಿಸಿದರು.

ತಲ್ವಾರ್‌ನಿಂದ ಕೇಕ್ ಕತ್ತರಿಸಿ ಸ್ನೇಹಿತರು ಜನ್ಮದಿನ ಆಚರಣೆ

ಬೆಳಗಾವಿ: ತಲ್ವಾರ್‌ನಿಂದ ಕೇಕ್ ಕತ್ತರಿಸಿ ಸ್ನೇಹಿತರು ಜನ್ಮದಿನ ಆಚರಿಸಿಕೊಂಡಿರುವಂತಹ ಘಟನೆ ಜಿಲ್ಲೆಯ ಮೂಡಲಗಿ ತಾಲೂಕಿನ ಸಂಗನಕೇರಿ ಗ್ರಾಮದಲ್ಲಿ ನಡೆದಿದೆ. ಜುಲೈ 23 ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸಂಗನಕೇರಿ ಗ್ರಾಮದ ಮಲ್ಲಿಕ್ ನದಾಫ್, ಅಶೋಕ ಗಾಡಿವಡ್ಡರರಿಂದ ಜನ್ಮದಿನಾಚರಣೆ ಮಾಡಲಾಗಿದೆ. ಸಾರ್ವಜನಿಕವಾಗಿ ತಲ್ವಾರ್‌ನಿಂದ ಕೇಕ್ ಕಟ್ ಮಾಡಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದರು. ತಲ್ವಾರ್‌ನಿಂದ ಕೇಕ್ ಕತ್ತರಿಸುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಕೂಡ ಆಗಿದೆ. ತಲ್ವಾರ್​ನಿಂದ ಕೇಕ್ ಕಟ್ ಮಾಡಿದವರ ಮೇಲೆ ಘಟಪ್ರಭಾ ಪೊಲೀಸರು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ.

ಇದನ್ನೂ ಓದಿ: Students Missing: ರಾಯಚೂರು; ಒಂದೇ ಕಾಲೇಜಿನ ನಾಲ್ವರು ವಿದ್ಯಾರ್ಥಿನಿಯರು ನಾಪತ್ತೆ

ನೀರಿನ ತೊಟ್ಟಿಗೆ ಬಿದ್ದು ಒಂದೂವರೆ ವರ್ಷದ ಬಾಲಕಿ ಸಾವು

ಚಿತ್ರದುರ್ಗ: ನೀರಿನ ತೊಟ್ಟಿಗೆ ಬಿದ್ದು ಒಂದೂವರೆ ವರ್ಷದ ಬಾಲಕಿ ಸಾವನ್ನಪ್ಪಿರುವಂತಹ ಘಟನೆ ಚಳ್ಳಕೆರೆ ತಾಲೂಕಿನ ಚಿತ್ರನಾಯಕನಹಳ್ಳಿಯಲ್ಲಿ ನಡೆದಿದೆ. ತನು ಸಾವನ್ನಪ್ಪಿರುವ ಬಾಲಕಿ. ಮನೆ ಬಳಿ ಆಟವಾಡುತ್ತಿದ್ದ ವೇಳೆ ಘಟನೆ ನಡೆದಿದೆ. ಚಳ್ಳಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ನಿಂತಿದ್ದ ಲಾರಿಗೆ ಬೈಕ್​ ಡಿಕ್ಕಿ: ಬೈಕ್ ಸವಾರ ಸಾವು

ಬಾಗಲಕೋಟೆ: ನಿಂತಿದ್ದ ಲಾರಿಗೆ ಹಿಂಬದಿಯಿಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ಆನದಿನ್ನಿ ಕ್ರಾಸ್ ಬಳಿ ತಡರಾತ್ರಿ ನಡೆದಿದೆ. ಶ್ರೀಕಾಂತ ಕುಂಚನೂರು (45) ಮೃತ ಬೈಕ್ ಸವಾರ. ಬೀಳಗಿ ತಾಲ್ಲೂಕಿನ ಅನಗವಾಡಿ ಗ್ರಾಮದ ನಿವಾಸಿ.

Published On - 3:03 pm, Mon, 25 July 22

ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?