ತಂದೆಯನ್ನು ಕೊಲ್ಲಲು ಫೇಸ್‌ಬುಕ್ ಮೂಲಕ ಕೊಲೆಗಾರನಿಗೆ ಸುಪಾರಿ ಕೊಟ್ಟ ಮಗ

ಫೇಸ್‌ಬುಕ್ ಮೂಲಕ ಕೊಲೆಗಾರನನ್ನು ಬಾಡಿಗೆಗೆ ಪಡೆದು ಹಣಕ್ಕಾಗಿ ತನ್ನ 59 ವರ್ಷದ ತಂದೆಯನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ತಂದೆಯನ್ನು ಕೊಲ್ಲಲು ಫೇಸ್‌ಬುಕ್ ಮೂಲಕ ಕೊಲೆಗಾರನಿಗೆ ಸುಪಾರಿ ಕೊಟ್ಟ ಮಗ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Jul 25, 2022 | 2:58 PM

ಶಿವಪುರಿ: ಮಧ್ಯಪ್ರದೇಶದ ವ್ಯಕ್ತಿಯೊಬ್ಬ ಫೇಸ್‌ಬುಕ್ ಮೂಲಕ ಕೊಲೆಗಾರನನ್ನು ಬಾಡಿಗೆಗೆ ಪಡೆದು ಹಣಕ್ಕಾಗಿ ತನ್ನ 59 ವರ್ಷದ ತಂದೆಯನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರು  ತಿಳಿಸಿದ್ದಾರೆ.  ಮಧ್ಯರಾತ್ರಿ ಜಿಲ್ಲಾಯಿಂದ  75 ಕಿಮೀ ದೂರದಲ್ಲಿರುವ ಪಿಚೋರ್ ಪಟ್ಟಣದ ತನ್ನ ಮನೆಯ ಕೋಣೆಯಲ್ಲಿ ಮಲಗಿದ್ದಾಗ  ಮಹೇಶ್ ಗುಪ್ತಾ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ರಾಜೇಶ್ ಸಿಂಗ್ ಚಂದೇಲ್ ತಿಳಿಸಿದ್ದಾರೆ. . ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ,  ಬಿಹಾರ ಮೂಲದ ಆರೋಪಿ ಅಜಿತ್ ಸಿಂಗ್, ಗುಪ್ತಾ ಅವರ ಮಗ ಅಂಕಿತ್ (32) ಮತ್ತು ಆತನ  ಸ್ನೇಹಿತ ನಿತಿನ್ ಲೋಧಿ  ಎಂದು ಹೇಳಿದ್ದಾರೆ.

ಅಂಕಿತ್​ನ್ನು ವಿಚಾರಣೆ ಮಾಡಿದಾಗ ಅಂಕಿತ್​ಗೆ ಮದ್ಯದ ಚಟ,  ಜೂಜಾಟ ಮತ್ತು ಇತರ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ಕಾರಣ ಹಣ ನೀಡಲು ನಿರಾಕರಿಸಿದ್ದರಿಂದ ಅವನು ತನ್ನ ತಂದೆಯ ಮೇಲೆ ಕೋಪಗೊಂಡಿದ್ದನು ಎಂದು ಅವರು ಹೇಳಿದ್ದಾರೆ

ಅಂಕಿತ್ ಆನ್‌ಲೈನ್‌ನಲ್ಲಿ  ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ಬಿಹಾರದ ಅಜಿತ್ ಕಿಂಗ್ ಎಂಬ ಹೆಸರಿನ ಗ್ಯಾಂಗ್ ಅನ್ನು ಫೇಸ್‌ಬುಕ್ ಮೂಲಕ ಸಂಪರ್ಕಿಸಿ ತನ್ನ ತಂದೆಯನ್ನು ಅಪಹರಿಸಿ ಕೊಂದಿದ್ದಾರೆ, ಅದಕ್ಕಾಗಿ ₹ 1 ಲಕ್ಷ ನೀಡುವುದಾಗಿ ಭರವಸೆ ನೀಡಿದರು ಎಂದು ಅಧಿಕಾರಿ ತಿಳಿಸಿದ್ದಾರೆ. ಅಪರಾಧದ ಸಂಚು ರೂಪಿಸಲು ಅವನು ತನ್ನ ಸ್ನೇಹಿತ ಲೋಧಿಯ ಸಹಾಯವನ್ನೂ ಪಡೆದಿದ್ದಾನೆ.

ಇದನ್ನೂ ಓದಿ
Image
One Day Trip:ಒತ್ತಡ ಬದಿಗಿಟ್ಟು, ಬೆಂಗಳೂರಿನಿಂದ ಈ ಸ್ಥಳಗಳಿಗೆ ಒಂದು ದಿನದ ಟ್ರಿಪ್​ ಹೋಗಿ
Image
World Milk Day 2022: ಹಾಲಿನ ಸೇವನೆಯಿಂದ ನಿಮ್ಮ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳುವುದು ಹೇಗೆ ಇಲ್ಲಿದೆ ಓದಿ
Image
World No Tobacco Day 2022: ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ; ವಿಶ್ವ ಧೂಮಪಾನ ರಹಿತ ದಿನವನ್ನು ಏಕೆ ಆಚರಿಸುತ್ತಾರೆ ಇಲ್ಲಿದೆ ಓದಿ
Image
Travel: ಬೇಸಿಗೆ ರಜೆಯಲ್ಲಿ ಅಗ್ಗದ ಕುಟುಂಬ ಪ್ರವಾಸ ಮಾಡಲು ಈ ಸ್ಥಳಗಳಿಗೆ ಭೇಟಿ ನೀಡಿ..!

ಜುಲೈ 12ರಂದು ಅಂಕಿತ್ ಫೇಸ್ ಬುಕ್ ನಲ್ಲಿನ ಅಜಿತ್ ಕಿಂಗ್ ಗ್ರೂಪ್ ನ ಅಡ್ಮಿನ್ ಅಜಿತ್ ಸಿಂಗ್ ಖಾತೆಗೆ ₹ 10 ಸಾವಿರ ಜಮಾ ಮಾಡಿದ್ದಾನೆ. ಅಂಕಿತ್ ಮತ್ತು ಲೋಧಿ ನಂತರ ಝಾನ್ಸಿ ರೈಲ್ವೇ ನಿಲ್ದಾಣದಲ್ಲಿ ಸಿಂಗ್ ಅವರನ್ನು ಬರಮಾಡಿಕೊಂಡರು ಮತ್ತು ಶಿವಪುರಿ ಜಿಲ್ಲೆಯ ಲಭೇದಾ ತಿರಹಾ ಪ್ರದೇಶದಲ್ಲಿ ಅವರ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದರು.

ಸಿಂಗ್ ಈ  ಕೃತ್ಯವನ್ನು ಮಾಡಲು ಮತ್ತಷ್ಟು ಹಣವನ್ನು ಕೇಳಿದಾಗ   ಅಂಕಿತ್ ಮತ್ತು ಲೋಧಿ ಅವರು ಹಣವನ್ನು ಹೊಂದಿಸಲು ಸಾಧ್ಯವಾಗದ ಕಾರಣ ಈ ಪ್ಲಾನ್​ನ್ನು  ರದ್ದುಗೊಳಿಸಲಾಗಿದೆ ಎಂದು ಹೇಳಿದರು. ಕೊಲೆಗಾರ ಹಣ ನೀಡುವಂತೆ ಒತ್ತಾಯಿಸಿದಾಗ ಅಂಕಿತ್ ತನ್ನ ತಂದೆಯನ್ನು ಕೊಲ್ಲುವ ಯೋಜನೆಯ ಬಗ್ಗೆ ತಿಳಿಸಿದ್ದಾನೆ ಎಂದು ಎಸ್ಪಿ ತಿಳಿಸಿದ್ದಾರೆ. ಲೋಧಿ  ದೇಶ ನಿರ್ಮಿತ ಪಿಸ್ತೂಲ್ ಮತ್ತು ಕಾರ್ಟ್ರಿಡ್ಜ್‌ಗಳನ್ನು ವ್ಯವಸ್ಥೆ ಮಾಡಿದ್ದ ಎನ್ನಲಾಗಿದೆ.

ಜು.21  ರಾತ್ರಿ ಅಂಕಿತ್ ತನ್ನ ಹೆಂಡತಿ ಮತ್ತು ಮಗಳನ್ನು ನೆಲ ಅಂತಸ್ತಿನ ಮತ್ತೊಂದು ಕೋಣೆಯಲ್ಲಿ ಮಲಗಲು ಹೇಳಿದನು ಮತ್ತು ಕೊಲೆಗಾರನಿಗೆ ಬೆಳಗಿನ ಜಾವ 2 ಗಂಟೆಯ ಸುಮಾರಿಗೆ ಮನೆಗೆ ಬರುಲು ಮಹೇಶ್ ಗುಪ್ತಾ ಮಗನೇ  ಅವಕಾಶ ಮಾಡಿಕೊಟ್ಟನು. ಗನ್ ಶಬ್ದ ಕೇಳಿ ಅಂಕಿತ್ ಅವರ ಪತ್ನಿ ಎಚ್ಚರಗೊಂಡರು, ಆದರೆ ಅದು ಸಿಡಿಲು ಬಡಿದ ಶಬ್ದ ಎಂದು ಅವರು ಹೇಳಿದ್ದಾರೆ ಎನ್ನಲಾಗಿದೆ.

ಗುಪ್ತಾ ಅವರನ್ನು ಕೊಲೆ ಮಾಡಿದ ನಂತರ, ಹಂತಕನು ಮನೆಯಿಂದ ಹೊರಗೆ ಹೋದ ನಂತರ  ಅಂಕಿತ್ ಮನೆಗೆ ಒಳಗಿನಿಂದ ಬೀಗ ಹಾಕಿದನು. ಬೆಳಿಗ್ಗೆ, ಗುಪ್ತಾ ಅವರ ಮಗನೇ ಅವರನ್ನು ಕೊಂದಿರುವುದಾಗಿ  ನೆರೆಹೊರೆಯವರು ಮತ್ತು ಅಪರಿಚಿತ ವ್ಯಕ್ತಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.  ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಮತ್ತು ಪ್ರಕರಣದ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

Published On - 2:57 pm, Mon, 25 July 22

ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ