ಕ್ಯಾಲಿಪೋರ್ನಿಯ ಡಬ್ಲಿನ್ ಜೈಲೊಂದರ ವಾರ್ಡನ್ ಮಹಿಳಾ ಕೈದಿಗಳನ್ನು ಲೈಂಗಿಕವಾಗಿ ಬಳಸಿಕೊಂಡು ಅವರ ಬೆತ್ತಲೆ ಚಿತ್ರ ತೆಗೆದ ಆರೋಪ ಎದುರಿಸುತ್ತಿದ್ದಾನೆ!
ಗಾರ್ಸಿಯ ಡಿಸೆಂಬರ್ 2019 ಮತ್ತು ಜುಲೈ 2021 ರ ನಡುವೆ ಮೂವರು ಮಹಿಳಾ ಕೈದಿಗಳನ್ನು ತನ್ನ ಕಾಮತೃಷೆ ತೀರಿಸಿಕೊಳ್ಳಲು ಬಳಸಿಕೊಂಡಿರುವನೆಂದು ಹೇಳಲಾಗಿದೆಯಾದರೂ 6 ಮಹಿಳೆಯರು ತಮ್ಮನ್ನು ಬೆತ್ತಲೆಗೊಳಿಸಿ ಫೋಟೋ ತೆಗೆದಿರುವನೆಂದು ಕೋರ್ಟ್ ನಲ್ಲಿ ಸಾಕ್ಷ್ಯ ನುಡಿಯಲಿದ್ದಾರಂತೆ.
ಅಮೆರಿಕದ ಜೈಲುಗಳಲ್ಲೂ ಹೀಗೆ ನಡೆಯುತ್ತದೆ ಎಂದರೆ ನೀವು ಪ್ರಾಯಶಃ ನಂಬಲಾರಿರಿ! ಕ್ಯಾಲಿಪೋರ್ನಿಯ ಡಬ್ಲಿನ್ (Dublin) ನಗರದಲ್ಲಿರುವ ಜೈಲಿನ ವಾರ್ಡನೊಬ್ಬ ತನ್ನ ಸುಪರ್ದಿಯಲ್ಲಿದ್ದ ಮಹಿಳಾ ಕೈದಿಗಳನ್ನು ಲೈಂಗಿಕವಾಗಿ ಬಳಿಸಿಕೊಂಡು ಅವರ ಬೆತ್ತಲೆ ಚಿತ್ರಗಳನ್ನು ಇಟ್ಟುಕೊಂಡಿದ್ದು ಬೆಳಕಿಗೆ ಬಂದಿದೆ. 55-ವರ್ಷ-ವಯಸ್ಸಿನ ರೇ ಜೆ ಗಾರ್ಸಿಯಾ (Ray J Garcia) ಹೆಸರಿನ ಈ ಲಂಪಟ ಜೈಲು ಅಧಿಕಾರಿಯ ವಿರುದ್ಧ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಮತ್ತು ಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಿದೆ. ವರದಿಗಳ ಪ್ರಕಾರ ಮೂವರು ಮಹಿಳಾ ಕೈದಿಗಳು ಇವನ ಕಾಮ ಪಿಪಾಸೆಗೆ ಬಲಿಯಾಗಿದ್ದಾರೆ. ಮಹಿಳಾ ಕೈದಿಗಳನ್ನು (women inmates) ಆದಷ್ಟು ಬೇಗ ಜೇಲಿನಿಂದ ಬಿಡಿಸುವ ಆಶ್ವಾಸನೆ ನೀಡಿ ಇಲ್ಲವೇ ಕಡಿಮೆ ಭದ್ರತೆಯುಳ್ಳ ಬಂಧಿಖಾನೆಗಳಿಗೆ ವರ್ಗಾಯಿಸುವುದಾಗಿ ಪುಸಲಾಯಿಸುವುದರ ಜೊತೆಗೆ ಅವರ ಸೌಂದರ್ಯ ಹಾಗೂ ಮೈಮಾಟವನ್ನು ಗುಣಗಾನ ಮಾಡುತ್ತ ಗಾರ್ಸಿಯ ಬುಟ್ಟಿಗೆ ಹಾಕಿಕೊಳ್ಳುತ್ತಿದ್ದ ಎಂದು ವರದಿಯಾಗಿದೆ.
ತನ್ನ ಅಮಿಷಗಳಿಗೆ ಮಹಿಳೆಯರು ಈಡಾದ ಬಳಿಕ ಗಾರ್ಸಿಯ ಅರೆಬೆತ್ತಲೆ ಮತ್ತು ಬೆತ್ತಲೆಯಾಗಿ ಕೆಮೆರಾಗೆ ಪೋಸ್ ನೀಡುವಂತೆ ಹೆದರಿಸುತ್ತಿದ್ದನಂತೆ. ಅವನ ವಿರುದ್ಧ 7 ಲೈಂಗಿಕ ಆರೋಪಗಳನ್ನು ವಿಧಿಸಲಾಗಿದೆ. ಅವನು ಯಾವುದೇ ಮುಚ್ಚುಮರೆಯಿಲ್ಲದೆ ಹೀನ ಕೃತ್ಯಗಳಲ್ಲಿ ತೊಡಗಿತ್ತಿದ್ದುದ್ದರಿಂದಲೇ ಅವನ ಸುಪರ್ದಿಯಲ್ಲಿದ್ದ ಜೇಲನ್ನು ಬೇರೆ ಕೈದಿಗಳು ‘ರೇಪ್ ಕ್ಲಬ್’ ಎಂದು ಕರೆಯುತ್ತಿದ್ದರು.
ಕನಿಷ್ಟ 15-ವರ್ಷ ಸೆರೆವಾಸ
ತನ್ನ ವಿರುದ್ಧ ಮಾಡಿರುವ ಎಲ್ಲ ಆರೋಪಗಳನ್ನು ಗಾರ್ಸಿಯ ಅಲ್ಲಗಳೆದಿದ್ದಾನೆ, ಆದರೆ ಅರೋಪಗಳು ಸಾಬೀತಾದರೆ ಅವನು ಕನಿಷ್ಟ 15-ವರ್ಷ ಸೆರೆವಾಸಕ್ಕೊಳಗಾಗುತ್ತಾನೆ. ಕಳೆದ ವರ್ಷ ಗಾರ್ಸಿಯನ ಸರ್ಕಾರಿ ಫೋನಲ್ಲಿ ಹೆಂಗಸರ ಫೋಟೋಗಳನ್ನು ಎಫ್ ಬಿ ಐ ಅಧಿಕಾರಿಗಳು ಪತ್ತೆ ಮಾಡಿದ ಬಳಿಕ 2021 ರಲ್ಲಿ ಸೇವೆಯಿಂದ ನಿವೃತ್ತನಾದ.
ಗಾರ್ಸಿಯನಂತೆ ಡಬ್ಲಿನ್ ನಗರದ ಜೈಲುಗಳಲ್ಲಿ ಲೈಂಗಿಕ ಅಪರಾಧಗಳನ್ನು ಎಸಗಿದವರು ಇನ್ನೂ 4 ಜನರಿದ್ದು ಎಲ್ಲರಿಗಿಂತ ಮೊದಲು ಇವನ ವಿಚಾರಣೆ ಆರಂಭವಾಗಿದೆ. ಜೈಲುಗಳಲ್ಲಿ ಮಹಿಳಾ ಕೈದಿಗಳ ಮೇಲೆ ದಶಕಗಳಿಂದ ಲೈಂಗಿಕ ಶೋಷಣೆ ನಡೆಯುತ್ತಿರುವ ಸಂಗತಿ ಫೆಬ್ರುವರಿಯಲ್ಲಿ ಬೆಳಕಿಗೆ ಬಂದಿತ್ತು.
ಆಘಾತಕಾರಿ ವಿಷಯ ಬಯಲುಗೊಂಡ ನಂತರ ಎಚ್ಚೆತ್ತುಕೊಂಡ ಯುಎಸ್ ಸರ್ಕಾರ ಮತ್ತು ಅಲ್ಲಿನ ಫೆಡರಲ್ ಬ್ಯೂರೋ ಅಫ್ ಪ್ರಿಸನ್ಸ್ ಜೈಲುಗಳಲ್ಲಿನ ಕೆಟ್ಟ ವ್ಯವಸ್ಥೆಯನ್ನು ಸರಿಪಡಿಸುವ ನಿರ್ಧಾರಕ್ಕೆ ಬಂದಿದ್ದವು.
6 ಮಹಿಳೆಯರು ಸಾಕ್ಷ್ಯ ನುಡಿಯಲಿದ್ದಾರೆ!
ಗಾರ್ಸಿಯ ಡಿಸೆಂಬರ್ 2019 ಮತ್ತು ಜುಲೈ 2021 ರ ನಡುವೆ ಮೂವರು ಮಹಿಳಾ ಕೈದಿಗಳನ್ನು ತನ್ನ ಕಾಮತೃಷೆ ತೀರಿಸಿಕೊಳ್ಳಲು ಬಳಸಿಕೊಂಡಿರುವನೆಂದು ಹೇಳಲಾಗಿದೆಯಾದರೂ 6 ಮಹಿಳೆಯರು ತಮ್ಮನ್ನು ಬೆತ್ತಲೆಗೊಳಿಸಿ ಫೋಟೋ ತೆಗೆದಿರುವನೆಂದು ಕೋರ್ಟ್ ನಲ್ಲಿ ಸಾಕ್ಷ್ಯ ನುಡಿಯಲಿದ್ದಾರಂತೆ. ಯುಎಸ್ ಡಿಸ್ಟ್ರಿಕ್ಟ್ ಜಡ್ಜ್ ವೋನ್ನೆ ಗೊನ್ಜಾಲೆಜ್ ರೋಜರ್ಸ್ ಮೂವರು ಹೆಚ್ಚುವರಿ ಆರೋಪಿಗಳನ್ನು ಕೋರ್ಟ್ನಲ್ಲಿ ಹಾಜರುಪಡಿಸುವಂತೆ ವಕೀಲರಿಗೆ ಸೂಚನೆ ನೀಡಿದ್ದಾರೆ.
ಸೋಮವಾರದಂದು ಒಬ್ಬ ಸಂತ್ರಸ್ತೆ ಕೋರ್ಟ್ ನಲ್ಲಿ ತನ್ನ ಹೇಳಿಕೆಯನ್ನು ದಾಖಲಿಸಿದ್ದಾಳೆ. ಗಾರ್ಸಿಯ ಜೊತೆ ಮೊದಲಬಾರಿಗೆ ಸೆಕ್ಸ್ ನಲ್ಲಿ ಪಾಲ್ಗೊಂಡ ಬಳಿಕ ಅವನ ಬಗ್ಗೆ ತನ್ನಲ್ಲಿ ರೊಮ್ಯಾಂಟಿಕ್ ಭಾವನೆಗಳು ಮೂಡಿದವು ಎಂದು ಆಕೆ ಹೇಳಿದ್ದು, ಲೈಂಗಿಕ ಕ್ರೀಡೆಗಾಗಿ ಅವನು ಜೈಲಿಗೆ ಭೇಟಿ ನೀಡಲು ಬರುವರಿಗೆ ನಿರ್ಮಿಸಲಾಗಿದ್ದ ಟಾಯ್ಲೆಟ್ ಗೆ ಕರೆದೊಯ್ಯುತ್ತಿದ್ದ ಎಂದು ಹೇಳಿದ್ದಾಳೆ.
ಎಲ್ಲೆಲ್ಲಿ ಸಿಸಿಟಿವಿ ಕೆಮೆರಾಗಳಿವೆ ಅಂತ ಗಾರ್ಸಿಯಗೆ ಗೊತ್ತಿತ್ತು
ವಿಸಿಟರ್ಸ್ ಕೋಣೆಯನ್ನು ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದ ಈ ಮಹಿಳೆ, ಗಾರ್ಸಿಯ ಜೈಲಿನ ಯಾವ್ಯಾವ ಭಾಗದಲ್ಲಿ, ಮೂಲೆಯಲ್ಲಿ ಸಿಸಿಟಿವಿ ಕೆಮೆರಾಳಿವೆ ಅಂತ ಚೆನ್ನಾಗಿ ಅರಿತಿದ್ದ ಎಂದು ಹೇಳಿದ್ದಾಳೆ. ‘ಅವನಿಗೆ ನನ್ನ ಬಗ್ಗೆ ಕಾಳಜಿ ಇದೆ ಮತ್ತು ನನ್ನನ್ನು ಪ್ರೀತಿಸುತ್ತಾನೆ ಎಂದು ಭಾವಿಸಿದ್ದೆ,’ ಎಂದು ಅವಳು ಗದ್ಗದಿತ ಸ್ವರದಲ್ಲಿ ಹೇಳಿದ್ದಾಳೆ.
‘ಆರಂಭದಲ್ಲಿ ಅವನು ಅನುನಯಿಸುವ ಧ್ವನಿಯಲ್ಲಿ ಮಾತಾಡುತ್ತಿದ್ದ, ನಂತರ ಅವನ ಭಾಷೆ ಅಶ್ಲೀಲಗೊಳ್ಳುತ್ತಿತ್ತು ಮತ್ತು ಬೆತ್ತಲೆಯಾಗಿ ಪೋಸ್ ನೀಡುವಂತೆ ಪೀಡಿಸುತ್ತಿದ್ದ,’ ಎಂದು ಆಕೆ ಹೇಳಿದ್ದಾಳೆ. ‘ಅವನು ಮೊದಲಬಾರಿ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡಾಗ ಆಘಾತಕ್ಕೊಳಗಾಗಿದ್ದೆ. ಏನು ನಡೆಯುತ್ತಿದೆ ಅಂತ ಗೊತ್ತಾಗುವ ಮೊದಲೇ ಅವನು ನನ್ನ ದೇಹವನ್ನು ಆಕ್ರಮಿಸಿಕೊಂಡು ಬಿಟ್ಟಿದ್ದ. ಅವನಿಗೆ ನನ್ನ ಬಗ್ಗೆ ಕಾಳಜಿ ಮತ್ತು ಪ್ರೀತಿಯಿದೆ ಅಂತ ಭಾವಿಸಿ ಅವನನ್ನು ಸಂತೋಷಪಡಿಸಲು ಮುಂದಾಗುತ್ತಿದ್ದೆ,’ ಎಂದು ಆಕೆ ಹೇಳಿದ್ದಾಳೆ. ಜೈಲಿನ ಇನ್ನೊಂದು ಕೋಣೆ ಮತ್ತು ಬೇರೆ ಕೈದಿಗಳು ಹತ್ತಿರದಲ್ಲೇ ಇದ್ದರೂ ಗೋದಾಮಿನಲ್ಲಿ ಅವನು ನನ್ನನ್ನು ಬಳಸಿಕೊಂಡ,’ ಎಂದು ಆಕೆ ಹೇಳಿದ್ದಾಳೆ.
ಸಿಸಿಟಿವಿ ಫುಟೇಜ್ ಗಳಲ್ಲಿ ಪುರಾವೆ ಇಲ್ಲ
ಆದರೆ ಗಾರ್ಸಿಯ ಲೈಂಗಿಕ ಅಪರಾಧ ನಡೆಸಿರುವುದಕ್ಕೆ ಸಿಸಿಟಿವಿ ಫುಟೇಜ್ ಗಳಲ್ಲಿ ಪುರಾವೆ ಇಲ್ಲ ಎಂದು ಸರ್ಕಾರಿ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಗಾರ್ಸಿಯಾನ ಲಾಯರ್ ಜೇಮ್ಸ್ ರೈಲಿ, ‘ಮಹಿಳಾ ಕೈದಿ ಮಾಡಿರುವ ಯಾವುದೇ ಅರೋಪಕ್ಕೆ ಸಿಸಿಟಿವಿಯಲ್ಲಿ ಸಾಕ್ಷ್ಯವಿಲ್ಲ,’ ಎಂದು ಹೇಳಿದ್ದಾರೆ.
ಒಬ್ಬ ಮಹಿಳೆ ಜೈಲು ಅವರಣದಲ್ಲಿ ಅರೆಬೆತ್ತಲೆಯಾಗಿ ತಿರುಗಾಡುತ್ತಾ ನಿಯಮವನ್ನು ಉಲ್ಲಂಘಿಸುತ್ತಿದ್ದರಿಂದ ಅವಳ ಪೋಟೋವನ್ನು ಮಾತ್ರ ಗಾರ್ಸಿಯ ತೆಗೆದಿದ್ದಾನೆ ಎಂದು ವಕೀಲರು ವಾದಿಸಿದ್ದಾರೆ.
ವಿಚಾರಣೆ ಜಾರಿಯಲ್ಲಿದೆ.
ಇನ್ನಷ್ಟು ಕ್ರೈಮ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ