ಉತ್ತರ ಪ್ರದೇಶ: 15 ಅಡಿ ಸುರಂಗ ಅಗೆದು ಚಿನ್ನದಂಗಡಿ ಕಳ್ಳತನಕ್ಕೆ ಯತ್ನಿಸಿದ ಕಳ್ಳರು; ದೇವರ ವಿಗ್ರಹ ನೋಡಿ ಕ್ಷಮಿಸಿ ಎಂದು ಚೀಟಿ ಬರೆದಿಟ್ಟು ಪರಾರಿ
ಗುರುವಾರ ಅಂಗಡಿ ತೆರೆದಾಗ ಶ್ರೀಕೃಷ್ಣನ ವಿಗ್ರಹ ಗೋಡೆಗೆ ಎದುರಾಗಿತ್ತು. ದೇವರು ನಮ್ಮನ್ನು ನೋಡುತ್ತಿದ್ದಾನೆ ಎಂದು ಅವರು ಕಳ್ಳತನ ಮಾಡಿಲ್ಲ, ಅವರು ದೇವರ ವಿಗ್ರಹವನ್ನು ತಿರುಗಿಸಿಟ್ಟು ಹೋಗಿದ್ದಾರೆ ಎಂದು ಕುಮಾರ್ ಹೇಳಿದ್ದಾರೆ.
ಮೀರತ್: ಉತ್ತರ ಪ್ರದೇಶದ (Uttar pradesh) ಮೀರತ್‌ನಲ್ಲಿ ಆಭರಣ ಅಂಗಡಿಯೊಂದಕ್ಕೆ ನುಗ್ಗಲು ಕಳ್ಳರ ಗುಂಪೊಂದು ಚರಂಡಿಯಿಂದ 15 ಅಡಿ ಉದ್ದದ ಸುರಂಗವನ್ನು ಅಗೆದಿದ್ದು ಒಳಗೆ, ವಾಲ್ಟ್ ಒಡೆಯಲು ವಿಫಲವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕಳ್ಳರು ಹೊರಡುವ ಮೊದಲು ಅಂಗಡಿ ಮಾಲೀಕರಿಗೆ ಕ್ಷಮೆಯಾಚನೆಯ ಟಿಪ್ಪಣಿಯನ್ನು ಬರೆದಿದ್ದಾರೆ. “ನಮ್ಮನ್ನು ಕ್ಷಮಿಸಿ,” ಎಂದು ಚುನ್ನು, ಮುನ್ನು ಎಂದು ಅದರಲ್ಲಿ ಬರೆದಿದ್ದಾರೆ. ಮೀರತ್‌ನ ರಿಥಾನಿ ಪ್ರದೇಶದಲ್ಲಿ ಆಭರಣ ಮಳಿಗೆಯ ಮಾಲೀಕ ದೀಪಕ್ ಕುಮಾರ್ ಗುರುವಾರ ಬೆಳಗ್ಗೆ ಅಂಗಡಿ ತೆರೆದಾಗ ಕಳ್ಳತನಕ್ಕೆ ಯತ್ನಿಸಿರುವುದು ಬೆಳಕಿಗೆ ಬಂದಿದೆ. ಕಳ್ಳರು ಗ್ಯಾಸ್ ಕಟ್ಟರ್ ತಂದಿದ್ದರೂ ಅದು ವಾಲ್ಟ್ ಒಡೆಯಲು ಸಾಕಾಗಲಿಲ್ಲ.
“ಅವರು ಬುಧವಾರ ರಾತ್ರಿ ಅಂಗಡಿಗೆ ನುಗ್ಗಿದ್ದರು. ಗ್ಯಾಸ್ ಕಟ್ಟರ್ ಬಳಸಿ ವಾಲ್ಟ್ ಅನ್ನು ಒಡೆಯಲು ಪ್ರಯತ್ನಿಸಿ ಆದರೆ ವಿಫಲರಾದರು” ಎಂದು ಕುಮಾರ್ ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಗುರುವಾರ ಅಂಗಡಿ ತೆರೆದಾಗ ಶ್ರೀಕೃಷ್ಣನ ವಿಗ್ರಹ ಗೋಡೆಗೆ ಎದುರಾಗಿತ್ತು. ದೇವರು ನಮ್ಮನ್ನು ನೋಡುತ್ತಿದ್ದಾನೆ ಎಂದು ಅವರು ಕಳ್ಳತನ ಮಾಡಿಲ್ಲ, ಅವರು ದೇವರ ವಿಗ್ರಹವನ್ನು ತಿರುಗಿಸಿಟ್ಟು ಹೋಗಿದ್ದಾರೆ ಎಂದು ಕುಮಾರ್ ಹೇಳಿದ್ದಾರೆ. ಅವರು ಸಿಸಿಟಿವಿ ಕ್ಯಾಮೆರಾಗಳ ಬಗ್ಗೆ ಜಾಗರೂಕರಾಗಿದ್ದು ವಿಡಿಯೊ ರೆಕಾರ್ಡಿಂಗ್ ಸಂಗ್ರಹಿಸಿದ ಹಾರ್ಡ್ ಡಿಸ್ಕ್ ಅನ್ನು ತೆಗೆದುಕೊಂಡು ಹೋಗಿದ್ದಾರೆ.
ಇದನ್ನೂ ಓದಿ: ಅಖಿಲೇಶ್ ಯಾದವ್ ಬೆಂಗಾವಲು ವಾಹನ ಅಪಘಾತ; ಹಲವರಿಗೆ ಗಾಯ
ಪೊಲೀಸ್ ತಂಡಗಳು ಪ್ರದೇಶದಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿವೆ. “ಸುರಂಗವನ್ನು ಅಗೆದು ಹಲವು ದಿನಗಳು ಕಳೆದಿರಬೇಕು ಮತ್ತು ಸಿಸಿಟಿವಿ ದೃಶ್ಯಗಳಲ್ಲಿ ಕಂಡುಬರುವ ಪ್ರದೇಶದಲ್ಲಿನ ಜನರ ಚಲನವಲನವನ್ನು ಪತ್ತೆಹಚ್ಚುವ ಮೂಲಕ ನಾವು ಕಳ್ಳರನ್ನು ಗುರುತಿಸಲು ಪ್ರಯತ್ನಿಸುತ್ತಿದ್ದೇವೆ” ಎಂದು ಬ್ರಹ್ಮಪುರಿ ವಲಯದ ವೃತ್ತ ಅಧಿಕಾರಿ ಸುಚಿತಾ ಸಿಂಗ್ ಹೇಳಿದ್ದಾರೆ.
ಮತ್ತಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ