ಬೆಂಗಳೂರು, ಜನವರಿ 10: ಕೃತಕ ಬುದ್ಧಿಮತ್ತೆ (AI) ಕಂಪನಿಯೊಂದರ ಸಿಇಒ, ತಮ್ಮ ಮಗ ಚಿನ್ಮಯ್ (4 ವರ್ಷ) ಯನ್ನು ಹತ್ಯೆ ಮಾಡಿದ್ದ ಘಟನೆಗೆ ಸಂಬಂಧಿಸಿದಂತೆ ಕೆಲವು ಆಘಾತಕಾರಿ ಮಾಹಿತಿಯನ್ನು ಸಿಇಒ ಸುಚನಾ (39 ವರ್ಷ) ಬಾಯಿ ಬಿಟ್ಟಿದ್ದಾರೆ. ‘ನಾನು ನಿದ್ರೆಯಿಂದ ಎದ್ದೇಳುವ ಮುಂಚೆನೇ ಮಗು ಮೃತಪಟ್ಟಿತ್ತು’ ಎಂದು ಗೋವಾ ಪೊಲೀಸರ ವಿಚಾರಣೆ ವೇಳೆ ತಿಳಿಸಿದ್ದಾರೆ. ಆ ಮೂಲಕ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಇನ್ನು ಇದಕ್ಕೆ ಪುಷ್ಟಿ ಎನ್ನುವಂತೆ ಮಗು ಮೃತಪಟ್ಟ ಕೊಠಡಿಯಲ್ಲಿ ಕೆಮ್ಮಿನ ಔಷಧಿಯ ಬಾಟಲ್ಗಳು ಸಿಕ್ಕಿದ್ದು, ಮಗು ಸಾವನ್ನಪ್ಪುವ ಮೊದಲು ಕೆಮ್ಮಿನ ಔಷಧಿ ಹೆವಿ ಡೋಸ್ ನೀಡಿರುವುದರ ಕುರಿತಾಗಿ ಪರಿಶೀಲಿಸುತ್ತಿದ್ದೇವೆ ಎಂದು ಅಧಿಕಾರಿಗಳು ಹೇಳಿರುವುದಾಗಿ ವರದಿಯಾಗಿದೆ.
ಆರೋಪಿ ಸುಚನಾ ಮಗುವನ್ನು ನಾನೆ ಕೊಲೆ ಮಾಡಿದ್ದೇನೆ ಎಂದು ತಪ್ಪು ಒಪ್ಪಿಕೊಂಡಿದ್ದಾಳೆ. ತಂದೆ ವೆಂಕಟರಮಣ ಪ್ರತಿ ಭಾನುವಾರ ವಿಡಿಯೋ ಕಾಲ್ ಅಥವಾ ನೇರವಾಗಿ ಮಗನೊಂದಿಗೆ ಮಾತನಾಡಬಹುದು ಎಂದು ನ್ಯಾಯಾಲಯ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ಜನವರಿ 7 ರವಿವಾರ ರಂದು ವೆಂಕಟರಮಣ ಮಗುವಿನೊಂದಿಗೆ ಮಾತನಾಡಲು ಪತ್ನಿ ಸೂಚನಾಗೆ ವಿಡಿಯೋ ಕರೆ ಮಾಡುತ್ತಾರೆ. ಆಗ ಸುಚನಾ ಮಗು ಮಲಗಿಕೊಂಡಿದೆ ಎಂದು ಹೇಳಿದ್ದಾಳೆ. ಸರಿ ಅಂತ ವೆಂಕಟರಮಣ ಸ್ವಲ್ಪ ಹೊತ್ತು ಬಿಟ್ಟು ಮತ್ತೆ ಪತ್ನಿ ಸುಚನಾಗೆ ವಿಡಿಯೋ ಕರೆ ಮಾಡುತ್ತಾರೆ. ಹೀಗೆ ವೆಂಕಟರಮಣ ಪದೇ ಪದೇ ಕರೆ ಮಾಡುತ್ತಾರೆ.
ಆದರೆ ಪತಿ ವೆಂಕಟರಮಣರೊಂದಿಗೆ ಮಗ ಚಿನ್ಮಯ್ ಮಾತನಾಡುವುದು ಸುಚನಾಗೆ ಇಷ್ಟವಿರಲಿಲ್ಲ. ಕೆಲ ಸಮಯದ ಬಳಿಕ ಮಗು ಎಚ್ಚರವಿದ್ದಾಗಲೇ ವೆಂಕಟರಮಣ ಮತ್ತೆ ವಿಡಿಯೋ ಕಾಲ್ ಮಾಡುತ್ತಾರೆ. ಆಗ ಸುಚನಾ ಮಗ ಚಿನ್ಮಯ್ಗೆ ಮಲುಗಳು ಹೇಳುತ್ತಾಳೆ. ಆದರೆ ಚಿನ್ಮಯ್ ಮಲಗಿರಲಿಲ್ಲ. ಆಗ ಸುಚನಾ ಕಾಲ್ ರಿಸಿವ್ ಮಾಡುತ್ತಾಳೆ. ಆಗ ಆರೋಪಿ ಸುಚನಾ ಮಗು ಮಲಗಿಕೊಂಡಿದೆ ಎಂದು ಮತ್ತೆ ವೆಂಕಟರಮಣ ಅವರಿಗೆ ಹೇಳುತ್ತಾಳೆ. ಆದರೆ ಇತ್ತ ಮಗನ ಶಬ್ಧ ಕೇಳಿಸುತ್ತದೆ.
ಇದನ್ನೂ ಓದಿ: ಪತಿ ಮೇಲಿನ ಕೋಪಕ್ಕೆ ತನ್ನ ಮಗನನ್ನು ಕೊಂದ ಉದ್ಯಮಿ ಸುಚನಾ ಸೇಠ್ ಯಾರು?
ಕೂಡಲೆ ಆರೋಪಿ ಸುಚನಾ, ಪುತ್ರ ಚಿನ್ಮಯ್ ಶಬ್ಧ ಪತಿ ವೆಂಕರಮಣ ಅವರಿಗೆ ಕೇಳಬಾರದೆಂದು ದಿಂಬನ್ನು ಮಗುವಿನ ಮುಖಕ್ಕೆ ಅದುಮುತ್ತಾಳೆ. ಇದರಿಂದ ಉಸಿರು ಗಟ್ಟಿ ಚಿನ್ಮಯ್ ಮೃತಪಡುತ್ತಾನೆ. ಕೊಲೆ ಮಾಡಬೇಕು ಎಂಬುವ ಉದ್ದೇಶದಿಂದ ಮಗನನ್ನು ಹತ್ಯೆ ಮಾಡಿಲ್ಲ ಎಂದು ಸುಚನಾ ಪೊಲೀಸರ ಮುಂದೆ ಹೇಳಿದ್ದಾಳೆ.
ಇನ್ನು ಮಗ ಚಿನ್ಮಯ್ ಮೃತಪಟ್ಟ ಬಳಿಕ ಸುಚನಾ ಕೈ ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸುತ್ತಾಳೆ. ಅದೇನು ತಿಳಿಯಿತು ಏನೋ ಕೂಡಲೇ ಬೆಂಗಳೂರಿಗೆ ಹೋಗಲು ನಿರ್ಧರಿಸುತ್ತಾಳೆ. ಬೆಂಗಳೂರಿಗೆ ಹೋಗಿ ಏನಾದರು ಮಾಡುವ ಅಂತ ಯೋಚನೆ ಮಾಡಿದ್ದ ಸೂಚನಾ, ಹೋಟೇಲ್ ಸಿಬ್ಬಂದಿ ಕಡೆಯಿಂದ ಟ್ಯಾಕ್ಸಿ ಬುಕ್ ಮಾಡಿಸಿಕೊಂಡಿದ್ದಾಳೆ. ಬಳಿಕ ಮೃತ ಮಗ ಚಿನ್ಮಯ್ ಶವವನ್ನು ಬ್ಯಾಗ್ನಲ್ಲಿ ಇಟ್ಟುಕೊಂಡು ಗೋವಾದಿಂದ ಬೆಂಗಳೂರಿಗೆ ಬರುತ್ತಿದ್ದಾಗ ಚಿತ್ರದುರ್ಗದಲ್ಲಿ ಬಂಧಿತಳಾಗುತ್ತಾಳೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:30 pm, Wed, 10 January 24