ಸಾಲಗಾರರಿಂದ ಪತಿಗೆ ಕಿರುಕುಳ, ಪತ್ನಿ ಆತ್ಮಹತ್ಯೆ
ಕೋಲಾರ: ಪತಿಗೆ ಸಾಲಗಾರರಿಂದ ಕಿರುಕುಳ ಹಿನ್ನೆಲೆ ಪತ್ನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶ್ರೀನಿವಾಸಪುರ ತಾಲೂಕಿನ ದೇವಲಪಲ್ಲಿಯಲ್ಲಿ ನಡೆದಿದೆ. ಗ್ರಾಮದ ತಿರುಮಲೇಶ್ ಎಂಬುವವರ ಪತ್ನಿ ಲಕ್ಷ್ಮೀದೇವಮ್ಮ (40) ಆತ್ಮಹತ್ಯೆಗೆ ಶರಣದ ಮಹಿಳೆ. ತಿರುಮಲೇಶ್ ಕೆಲ ವ್ಯಕ್ತಿಗಳ ಬಳಿ ಕೈಸಾಲ ಮಾಡಿಕೊಂಡಿದ್ದರು. ಸಾಲಗಾರರು ಪದೇ ಪದೇ ಮನೆಯ ಮುಂದೆ ಬಂದು ಗಲಾಟೆ ಮಾಡುತ್ತಿದ್ದರು. ಹೀಗಾಗಿ ಅವಮಾನ ಸಹಿಸದೆ ಲಕ್ಷ್ಮೀದೇವಮ್ಮ ಹಳ್ಳಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಕೋಲಾರ: ಪತಿಗೆ ಸಾಲಗಾರರಿಂದ ಕಿರುಕುಳ ಹಿನ್ನೆಲೆ ಪತ್ನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶ್ರೀನಿವಾಸಪುರ ತಾಲೂಕಿನ ದೇವಲಪಲ್ಲಿಯಲ್ಲಿ ನಡೆದಿದೆ. ಗ್ರಾಮದ ತಿರುಮಲೇಶ್ ಎಂಬುವವರ ಪತ್ನಿ ಲಕ್ಷ್ಮೀದೇವಮ್ಮ (40) ಆತ್ಮಹತ್ಯೆಗೆ ಶರಣದ ಮಹಿಳೆ.
ತಿರುಮಲೇಶ್ ಕೆಲ ವ್ಯಕ್ತಿಗಳ ಬಳಿ ಕೈಸಾಲ ಮಾಡಿಕೊಂಡಿದ್ದರು. ಸಾಲಗಾರರು ಪದೇ ಪದೇ ಮನೆಯ ಮುಂದೆ ಬಂದು ಗಲಾಟೆ ಮಾಡುತ್ತಿದ್ದರು. ಹೀಗಾಗಿ ಅವಮಾನ ಸಹಿಸದೆ ಲಕ್ಷ್ಮೀದೇವಮ್ಮ ಹಳ್ಳಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.