AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chikkamagaluru News: ಎಸ್ಟೇಟ್​ನಲ್ಲಿ ಮಹಿಳೆಯ ಬರ್ಬರ ಹತ್ಯೆ, ಕಾಫಿ ತೋಟದಲ್ಲಿ ಸುಟ್ಟು ಹಾಕಿದ್ದ ವ್ಯಕ್ತಿಯ ಬಂಧನ

ಎಸ್ಟೇಟ್​ನಲ್ಲಿ ಕಾರ್ಮಿಕ ಮಹಿಳೆ ಕೊಂದು ಸುಟ್ಟುಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ಯೆ ನಡೆದು‌ 7 ದಿನಗಳ ಬಳಿಕ‌ ಮಹಿಳೆ ಕೊಲೆ ರಹಸ್ಯ ಬಯಲಾಗಿದ್ದು, 18 ದಿನಗಳ ಬಳಿಕ ಮಹಿಳೆ ಗುರುತು ಪತ್ತೆಯಾಗಿದೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

Chikkamagaluru News: ಎಸ್ಟೇಟ್​ನಲ್ಲಿ ಮಹಿಳೆಯ ಬರ್ಬರ  ಹತ್ಯೆ, ಕಾಫಿ ತೋಟದಲ್ಲಿ ಸುಟ್ಟು ಹಾಕಿದ್ದ ವ್ಯಕ್ತಿಯ ಬಂಧನ
ಮುತ್ತಮ್ಮ (75) ಹತ್ಯೆಯಾದ ಮಹಿಳೆ.
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Edited By: |

Updated on:Jun 30, 2023 | 4:42 PM

Share

ಚಿಕ್ಕಮಗಳೂರು: ಎಸ್ಟೇಟ್​ನಲ್ಲಿ ಕಾರ್ಮಿಕ ಮಹಿಳೆ (Woman) ಕೊಂದು (murder) ಸುಟ್ಟುಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ಯೆ ನಡೆದು‌ 7 ದಿನಗಳ ಬಳಿಕ‌ ಮಹಿಳೆ ಕೊಲೆ ರಹಸ್ಯ ಬಯಲಾಗಿದ್ದು, 18 ದಿನಗಳ ಬಳಿಕ ಕಾರ್ಮಿಕ ಮಹಿಳೆ ಗುರುತು ಪತ್ತೆಯಾಗಿದೆ. ಶಿವಮೊಗ್ಗ ಜಿಲ್ಲೆಯ ಗುಡ್ರುಕೊಪ್ಪ ಗ್ರಾಮದ ಮುತ್ತಮ್ಮ(75) ಕೊಲೆಯಾದ ಮಹಿಳೆ. ಜೂ. 12ರಂದು ಮುತ್ತಮ್ಮನನ್ನು ಚಿಕ್ಕಮಗಳೂರು ತಾಲೂಕಿನ ಸಿದ್ದಾಪುರ ಬಳಿಯಿರುವ ಸುಪ್ರೀಂ ಎಸ್ಟೇಟ್​ನಲ್ಲಿ ಹತ್ಯೆ ಮಾಡಲಾಗಿತ್ತು. ಮದ್ಯ ಸೇವಿಸುವ ವಿಚಾರಕ್ಕೆ ಮುತ್ತಮ್ಮನನ್ನು ಹತ್ಯೆಗೈದಿದ್ದ ನಾಗರಾಜ್​ನನ್ನು ಸದ್ಯ ಪೊಲೀಸರು ಬಂಧಿಸಿದ್ದಾರೆ. ಮಲ್ಲಂದೂರು ಪೊಲೀಸ್ ಠಾಣೆಯಲ್ಲಿ ಹತ್ಯೆ ಪ್ರಕರಣ ದಾಖಲಾಗಿತ್ತು.

ಮಹಿಳೆ ಗುರುತು ಪತ್ತೆಗಾಗಿ 4 ವಿಶೇಷ ತಂಡ ರಚನೆ

ಮನೆಯವರ ಜೊತೆ ಜಗಳವಾಡಿಕೊಂಡು ಮನೆ ಬಿಟ್ಟುಬಂದಿದ್ದ ಮುತ್ತಮ್ಮ. ನಾಪತ್ತೆಯಾಗಿದ್ದ ಮುತ್ತಮ್ಮ ಪತ್ತೆಗಾಗಿ ಪೊಲೀಸರು ಇಡೀ ರಾಜ್ಯ ಸುತ್ತಿದ್ದರು. ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ‌‌ ನಾಪತ್ತೆ ಕೇಸ್ ದಾಖಲಾಗಿತ್ತು. ವಿಳಾಸ ನೀಡದೇ ತೋಟದ ಕೆಲಸಕ್ಕೆ ವೃದ್ಧೆ ಮುತ್ತಮ್ಮ ಸೇರಿಕೊಂಡಿದ್ದರು. ಹಾಗಾಗಿ ಮಹಿಳೆ ಗುರುತು ಪತ್ತೆಗಾಗಿ 4 ವಿಶೇಷ ತಂಡ ರಚನೆ ಮಾಡಲಾಗಿತ್ತು. ಕೊನೆಗೆ ವೋಟರ್ ಐಡಿ ಮೂಲಕ ಮಹಿಳೆ ಗುರುತು ಪತ್ತೆ ಹಚ್ಚಲಾಯಿತು.

ಇದನ್ನೂ ಓದಿ: Bengaluru News: ಜ್ಯುವೆಲ್ಲರಿ ಶಾಪ್​ನಲ್ಲಿ ಆಕ್ಸಿಜನ್ ಸಿಲಿಂಡರ್ ಸ್ಫೋಟ: ಓರ್ವ ಸಾವು

ಮಧ್ಯ ಕುಡಿಯುವ ವಿಚಾರಕ್ಕೆ ಮುತ್ತಮ್ಮ ಮತ್ತು ಎಸ್ಟೇಟ್ ಮನೆಯಲ್ಲಿ ಕಾರ್ಮಿಕನಾಗಿದ್ದ ನಾಗರಾಜ್ ನಾಯ್ಕ್ ನಡುವೆ ಜೂನ್ 12 ರಂದು ಗಲಾಟೆ ನಡೆದು ಕಲ್ಲಿನಿಂದ ಮುತ್ತಮ್ಮ ಅವರ ತಲೆಗೆ ಹೊಡೆದು ಹತ್ಯೆ ಮಾಡಿದ್ದ. ಹತ್ಯೆ ಮಾಡಿದ ಸ್ಥಳದಿಂದ ಮೂರು ಕಿಮೀ ದೂರದ ಕಾಫಿ ತೋಟದ ನಿರ್ಜನ ಪ್ರದೇಶದಲ್ಲಿ ಮುತ್ತಮ್ಮ ಮೃತ ದೇಹವನ್ನ ಯಾರಿಗೂ ತಿಳಿಯದಂತೆ ಸುಟ್ಟು ಹಾಕಿದ್ದ.

18 ದಿನಗಳ ಬಳಿಕ ಮಹಿಳೆಯ ಗುರುತು ಪತ್ತೆ

ಹತ್ಯೆ ನಡೆದು 7 ದಿನದ ನಂತರ ಕೊಲೆಯಾಗಿರುವ ಬಗ್ಗೆ ಮಲ್ಲಂದೂರು ಠಾಣೆಯ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಮುತ್ತಮ್ಮ ಮೃತ ದೇಹ ಸಂಪೂರ್ಣ ಸುಟ್ಟು ಹೋಗಿದ್ದ ಕಾರಣ ಹತ್ಯೆಯಾದ ಮಹಿಳೆಯ ಗುರುತು ಪತ್ತೆ ಸವಾಲಾಗಿತ್ತು. ವೋಟರ್ ಐಡಿ ಸಹಾಯದ ಮೂಲಕ ಹತ್ಯೆಯಾಗಿ 18 ದಿನಗಳ ಬಳಿಕ ಮಹಿಳೆಯ ಗುರುತು ಪತ್ತೆಯಾಗಿದೆ.

ಇದನ್ನೂ ಓದಿ: ಬೆಂಗಳೂರಿಗೆ ಬಂದಿದ್ದ ವ್ಯಕ್ತಿಯನ್ನ ಅಪಹರಿಸಿ ಹಣ ದೋಚಿದ್ದ ಪ್ರಕರಣ; ಐವರಲ್ಲಿ ಇಬ್ಬರ ಬಂಧನ

ಚಿಕ್ಕಮಗಳೂರಿನ ಪೊಲೀಸರಿಗೆ ಟೆಂಕ್ಷನ್‌ ನೀಡಿದ್ದ ಪ್ರಕರಣ ಹತ್ಯೆಯಾದ ಕಾರ್ಮಿಕ ಮಹಿಳೆಯ ಗುರುತು ಪತ್ತೆಯಾಗಿದೆ. ಮನೆಯ ಸದಸ್ಯರೊಂದಿಗೆ ಜಗಳವಾಗಿ ಮನೆ ಬಿಟ್ಟು ಕಾಫಿ ತೋಟದ ಕೆಲಸಕ್ಕೆ‌‌‌ ಸೇರಿದ್ದ ಮಹಿಳೆ, ಮದ್ಯ ಕುಡಿಯುವ ವಿಚಾರದ ಗಲಾಟೆಯಲ್ಲಿ ಕಾರ್ಮಿಕನಿಂದ ಹತ್ಯೆಯಾಗಿ ಕಾಫಿ ತೋಟದ ನಿರ್ಜನ ಪ್ರದೇಶದಲ್ಲಿ ಸುಟ್ಟು ಹೋಗಿದ್ದು ದುರಂತವೇ ಸರಿ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:42 pm, Fri, 30 June 23