AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುರಷನ ಜತೆ ರಾತ್ರಿ ಲಾಡ್ಜ್​ಗೆ ಬಂದಿದ್ದ ಮಹಿಳೆ ಬೆಳಗ್ಗೆ ಶವವಾಗಿ ಪತ್ತೆ!

ಇಬ್ಬರು ನಿನ್ನೆ(ಸೆ.29) ರಾತ್ರಿ ಖುಷಿ-ಖುಷಿಯಾಗಿ ಲಾಡ್ಜ್ ವೊಂದಕ್ಕೆ ಹೋಗಿದ್ದರು. ರಾತ್ರಿಯಿಡಿ ಅವರಿಬ್ಬರು ರೂಮ್ ನಲ್ಲಿ ಅದೇನ್ ಮಾಡಿದ್ರೂ ಏನೋ ಬೆಳಗಾಗುತ್ತಿದ್ದಂತೆ ಪುರುಷ ಮಾತ್ರ ಲಾಡ್ಜ್ ನಿಂದ ಹೊರಗೆ ಹೋಗಿದ್ದ. ಆದ್ರೆ ಆತನ ಜೊತೆ ಬಂದಿದ್ದ ಮಹಿಳೆ ವಾಪಸ್ ಹೋಗಿಲ್ಲ. ಇದರಿಂದ ಅನುಮಾನಗೊಂಡ ಲಾಡ್ಜ್ ಸಿಬ್ಬಂದಿ ಹೋಗಿ ನೋಡಿದ್ರೆ ಲಾಡ್ಜ್ ರೂಮಿನಲ್ಲಿ ಮಹಿಳೆ ಶವವಾಗಿ ಪತ್ತೆಯಾಗಿದೆ. ಇದೀಗ ಮಹಿಳೆಯ ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿದೆ.

ಪುರಷನ ಜತೆ ರಾತ್ರಿ ಲಾಡ್ಜ್​ಗೆ ಬಂದಿದ್ದ ಮಹಿಳೆ ಬೆಳಗ್ಗೆ ಶವವಾಗಿ ಪತ್ತೆ!
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Edited By: |

Updated on: Sep 30, 2024 | 11:28 PM

Share

ಚಿಕ್ಕಬಳ್ಳಾಪುರ, (ಸೆಪ್ಟೆಂಬರ್ 30); ನಗರದ ಎಂ.ಜಿ.ರಸ್ತೆಯಲ್ಲಿರುವ ಕಾವೇರಿ ಖಾಸಗಿ ಲಾಡ್ಜ್​​ನಲ್ಲಿ ಮಹಿಳೆ ಮೃತದೇಹ ಪತ್ತೆಯಾಗಿದೆ. ನಿನ್ನೆ(ಸೆಪ್ಟೆಂಬರ್ 29) ರಾತ್ರಿ ಬಂದ ಜೋಡಿಯೊಂದು, ರೂಮ್ ಮಾಡಿಕೊಂಡು ರಾತ್ರಿಯಿಡಿ ತಂಗಿದ್ದಾರೆ. ಆದ್ರೆ ಬೆಳಿಗ್ಗೆ ಲಾಡ್ಜ್ ನಿಂದ ಪುರುಷ ಮಾತ್ರ ಆಚೆ ಹೋಗಿದ್ದು, ಮಹಿಳೆ ಆಚೆ ಬಂದಿಲ್ಲ. ಇದರಿಂದ ಅನುಮಾನಗೊಂಡ ಲಾಡ್ಜ್ ಸಿಬ್ಬಂದಿ, ಹೋಗಿ ನೋಡಿದ್ರೆ ರೂಮಿನಲ್ಲಿ ಮಹಿಳೆ ಶವವಾಗಿ ಪತ್ತೆಯಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಚಿಕ್ಕಬಳ್ಳಾಪುರ ಎಸ್ಪಿ ಕುಶಾಲ್ ಚೌಕ್ಸಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದ್ರೆ, ಮೃತ ಮಹಿಳೆಯ ಗುರುತು ಪತ್ತೆಯಾಗಿಲ್ಲ.

ಇನ್ನು ಮಹಿಳೆಯ ಜೊತೆ ಬಂದಿದ್ದವ ಚಿಕ್ಕಬಳ್ಳಾಪುರ ತಾಲೂಕು ಮೂಲದ ನರಸಿಂಹಮೂರ್ತಿ ಎನ್ನಲಾಗಿದೆ. ಲಾಡ್ಜ್ ಸಿಬ್ಬಂದಿ ರೂಮ್ ಬುಕ್ ಮಾಡುವಾಗ ಯಾವುದೆ ದಾಖಲೆ ಪಡೆದಿಲ್ಲ, ಹೆಸರು ವಿಳಾಸ ಪಡೆದುಕೊಂಡಿಲ್ಲ, ಇದರಿಂದ ಪೊಲೀಸರು ಅನುಮಾನಸ್ಪದ ಸಾವು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.

– ಮಹಿಳೆಯ ಜೊತೆ ಬಂದಿದ್ದ ವ್ಯಕ್ತಿಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು. ಸ್ಪಷ್ಟತೆಯಿಲ್ಲ. ಇದರಿಂದ ಪೊಲೀಸರು ಮೊಬೈಲ್ ತಂತ್ರಜ್ಞಾನ ಬಳಸಿ ಆರೋಪಿಯ ಪತ್ತೆಯಾರ್ಯ ನಡೆಸಿದ್ದಾರೆ. ಆದ್ರೆ ಮಹಿಳೆಯ ಕೊಲೆ ಮಾಡಲಾಗಿದಿಯಾ ಇಲ್ಲಾ ಏಕಾಂತದಲ್ಲಿ ತೊಡಗಿದ್ದಾಗ ಹೃದಯಾಘಾತವಾಗಿದಿಯಾ ತನಿಖೆಯಿಂದ ಗೊತ್ತಾಗಬೇಕಿದೆ. ಆದ್ರೆ ಲಾಡ್ಜ್ ಸಿಬ್ಬಂದಿ ದಾಖಲೆ ವಿಳಾಸ ಪಡೆದುಕೊಳ್ಳದೆ ಅದು ಹೇಗೆ ರೂಮ್ ನೀಡಿದ್ದಾರೆ ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.