Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಫೋನ್​ಗೆ ಹಣ ಕೊಡಬೇಕಲ್ಲಾ ಎಂದು ಡೆಲಿವರಿ ಏಜೆಂಟ್​ನನ್ನೇ ಕೊಂದ ವ್ಯಕ್ತಿ

ಐಫೋನ್​ಗೆ ಹಣ ಕೊಡಬೇಕಲ್ಲಾ ಎಂದು ಡೆಲಿವರಿ ಏಜೆಂಟ್​ನನ್ನೇ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ವ್ಯಕ್ತಿ ಫ್ಲಿಪ್​ಕಾರ್ಟ್​ ಮೂಲಕ 1.5 ಲಕ್ಷ ರೂಪಾಯಿ ಬೆಲೆ ಬಾಳುವ ಐಫೋನ್​ನ್ನು ಕ್ಯಾಶ್​ ಆನ್ ಡೆಲಿವರಿಯಲ್ಲಿ ಆರ್ಡರ್ ಮಾಡಿದ್ದ, ಡೆಲಿವರಿ ಏಜೆಂಟ್​ ಅವರ ಮನೆಗೆ ಬಂದು ಐಫೋನ್ ಕೊಟ್ಟಿದ್ದಾರೆ ಆದರೆ ಆತನಿಗೆ ಹಣಕೊಡಬೇಕಲ್ಲಾ ಎಂದು ಚಿಂತಿಸಿ ಡೆಲಿವರಿ ಏಜೆಂಟ್​ನನ್ನೇ ಹತ್ಯೆ ಮಾಡಿ ಕಾಲುವೆಗೆ ಎಸೆದಿದ್ದಾನೆ.

ಐಫೋನ್​ಗೆ ಹಣ ಕೊಡಬೇಕಲ್ಲಾ ಎಂದು ಡೆಲಿವರಿ ಏಜೆಂಟ್​ನನ್ನೇ ಕೊಂದ ವ್ಯಕ್ತಿ
ಪೊಲೀಸ್
Follow us
ನಯನಾ ರಾಜೀವ್
|

Updated on: Oct 01, 2024 | 10:42 AM

ಐಫೋನ್ ಡೆಲಿವರಿ ಮಾಡಲು ಬಂದಿದ್ದ ಏಜೆಂಟ್ ಭರತ್​ ಎಂಬುವವರನ್ನು ​ಗಜಾನನ ಎಂಬಾತ ಸಹಚರರ ಜತೆ ಸೇರಿ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ರಾಜಧಾನಿ ಲಕ್ನೋನಲ್ಲಿ ನಡೆದಿದೆ. ವ್ಯಕ್ತಿ ಫ್ಲಿಪ್​ಕಾರ್ಟ್​ ಮೂಲಕ 1.5 ಲಕ್ಷ ರೂಪಾಯಿ ಬೆಲೆ ಬಾಳುವ ಐಫೋನ್​ನ್ನು ಕ್ಯಾಶ್​ ಆನ್ ಡೆಲಿವರಿಯಲ್ಲಿ ಆರ್ಡರ್ ಮಾಡಿದ್ದ, ಡೆಲಿವರಿ ಏಜೆಂಟ್​ ಅವರ ಮನೆಗೆ ಬಂದು ಐಫೋನ್ ಕೊಟ್ಟಿದ್ದಾರೆ ಆದರೆ ಆತನಿಗೆ ಹಣಕೊಡಬೇಕಲ್ಲಾ ಎಂದು ಚಿಂತಿಸಿ ಡೆಲಿವರಿ ಏಜೆಂಟ್​ನನ್ನೇ ಹತ್ಯೆ ಮಾಡಿ ಕಾಲುವೆಗೆ ಎಸೆದಿದ್ದಾನೆ.

ಸೆಪ್ಟೆಂಬರ್ 23 ರಂದು ನಿಶಾತ್‌ಗಂಜ್ ನಿವಾಸಿಯಾದ ಡೆಲಿವರಿ ಬಾಯ್ ಭರತ್ ಸಾಹು ಫೋನ್ ಡೆಲಿವರಿ ಮಾಡಲು ಅವರ ಮನೆಗೆ ಹೋಗಿದ್ದರು. ಅಲ್ಲಿ ಗಜಾನನ ಮತ್ತು ಅವನ ಸಹಚರರು ಅವರನ್ನು ಕೊಲೆ ಮಾಡಿದ್ದಾರೆ. ಸಾಹುವನ್ನು ಕತ್ತು ಹಿಸುಕಿ ಕೊಲೆ ಮಾಡಿದ ಬಳಿಕ ಮೃತದೇಹವನ್ನು ಗೋಣಿಚೀಲದಲ್ಲಿ ತುಂಬಿ ಇಂದಿರಾ ಕಾಲುವೆಗೆ ಎಸೆದಿದ್ದಾರೆ.

ಎರಡು ದಿನಗಳ ಕಾಲ ಸಾಹು ಮನೆಗೆ ಬಾರದಿದ್ದಾಗ, ಆತನ ಕುಟುಂಬದವರು ಸೆಪ್ಟೆಂಬರ್ 25 ರಂದು ಚಿನ್ಹಾಟ್ ಪೊಲೀಸ್ ಠಾಣೆಯಲ್ಲಿ ಕಾಣೆಯಾಗಿರುವ ಕುರಿತು ಪೊಲೀಸರಿಗೆ ದೂರು ನೀಡಿದ್ದರು. ಸಾಹುವಿನ ಕಾಲ್ ಡಿಟೇಲ್ಸ್ ಸ್ಕ್ಯಾನ್ ಮಾಡಿ ಆತನ ಲೊಕೇಶನ್ ಹುಡುಕಿ ಪೊಲೀಸರು ಗಜಾನನ ನಂಬರ್ ಪತ್ತೆ ಮಾಡಿ ಆತನ ಸ್ನೇಹಿತ ಆಕಾಶ್​ನನ್ನು ತಲುಪಿದ್ದಾರೆ.

ಮತ್ತಷ್ಟು ಓದಿ: ಮನೆಯಲ್ಲಿ ಪಾರ್ಟಿ ಮಾಡ್ತಿದ್ದವರ ಮೇಲೆ ಅಟ್ಯಾಕ್: ಚಾಕು, ಲಾಂಗ್​ನಿಂದ ಹಲ್ಲೆ ಮಾಡಿ ಪರಾರಿ

ವಿಚಾರಣೆ ವೇಳೆ ಆಕಾಶ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ ಎಂದು ಡಿಸಿಪಿ ಅಧಿಕಾರಿ ತಿಳಿಸಿದ್ದಾರೆ. ಹತ್ಯೆಯ ನಂತರ ಆಕಾಶ್ ಕೂಡ ಮುಂಬೈಗೆ ಪರಾರಿಯಾಗಿದ್ದ. ಆದರೆ, ಪೊಲೀಸರಿಗೆ ಇನ್ನೂ ಶವ ಪತ್ತೆಯಾಗಿಲ್ಲ. ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ತಂಡವು ಕಾಲುವೆಯಲ್ಲಿ ದೇಹವನ್ನು ಹುಡುಕುವ ಪ್ರಯತ್ನ ಮಾಡುತ್ತಿದ್ದಾರೆ.

ಇಬ್ಬರು ಆರೋಪಿಗಳಾದ ಹಿಮಾಂಶು ಕನೋಜಿಯಾ ಮತ್ತು ಆಕಾಶ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಮೂರನೇ ಆರೋಪಿ ಗಜಾನನ ಪತ್ತೆಗೆ ಮೂರು ತಂಡಗಳನ್ನು ನಿಯೋಜಿಸಲಾಗಿದೆ. ಭರತ್ ಕುಮಾರ್ ಪ್ರಜಾಪತಿ (32), ಮೂಲತಃ ಅಮೇಥಿಯ ಜಮೋ ನಿವಾಸಿಯಾಗಿದ್ದು, ಚಿನ್ಹತ್ ಪ್ರದೇಶದ ಸತ್ರಿಖ್ ರಸ್ತೆಯ ಸವಿತಾ ವಿಹಾರ್‌ನಲ್ಲಿ ಪತ್ನಿ ಅಖಿಲೇಶ್ ಕುಮಾರಿಯೊಂದಿಗೆ ವಾಸಿಸುತ್ತಿದ್ದರು. ಅವರು ಇನ್‌ಸ್ಟಾ ಕಾರ್ಡ್ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ಡೆಲಿವರಿ ಬಾಯ್ ಆಗಿದ್ದರು.

ಕೊಲೆ ಮಾಡಿ ಮೊಬೈಲ್ ಹಾಗೂ ಹಣ ದೋಚಿದ್ದಾರೆ. ಆರೋಪಿಗಳು ಭರತ್ ಅವರ ದೇಹವನ್ನು ತುಂಡು ಮಾಡಿ ನಂತರ ಕಾಲುವೆಗೆ ಎಸೆದಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಭರತ್ ಗಜಾನನ ಮನೆಯೊಳಗೆ ಹೋಗಿದ್ದು, ಹೊರಗೆ ಬಂದಿಲ್ಲ ಎಂಬುದು ಸಿಸಿಟಿವಿ ದೃಶ್ಯಾವಳಿಯಿಂದ ಸ್ಪಷ್ಟವಾಗಿದೆ.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

‘ಇಂಟರ್​ವಲ್​’ ಸಿನಿಮಾ ಗೆದ್ದಿದ್ದು ಹೇಗೆ? 25 ಡೇಸ್ ಸಂಭ್ರಮದಲ್ಲಿ ಚಿತ್ರತಂಡ
‘ಇಂಟರ್​ವಲ್​’ ಸಿನಿಮಾ ಗೆದ್ದಿದ್ದು ಹೇಗೆ? 25 ಡೇಸ್ ಸಂಭ್ರಮದಲ್ಲಿ ಚಿತ್ರತಂಡ
ಪತಿರಾನ ಓವರ್​ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದ ಪ್ರಿಯಾಂಶ್
ಪತಿರಾನ ಓವರ್​ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದ ಪ್ರಿಯಾಂಶ್
ಬಿಸಿಲ ತಾಪದಿಂದ ಅಹಮದಾಬಾದ್‌ನಲ್ಲಿ ಪ್ರಜ್ಞೆ ತಪ್ಪಿ ಬಿದ್ದ ಪಿ. ಚಿದಂಬರಂ
ಬಿಸಿಲ ತಾಪದಿಂದ ಅಹಮದಾಬಾದ್‌ನಲ್ಲಿ ಪ್ರಜ್ಞೆ ತಪ್ಪಿ ಬಿದ್ದ ಪಿ. ಚಿದಂಬರಂ
ಹಣದ ಕೊರತೆಯಿಂದ ಕಾರು ಮಾರಿದ ಅಜಯ್ ರಾವ್; ಕಣ್ಣೀರು ಹಾಕಿದ ಮಗಳು
ಹಣದ ಕೊರತೆಯಿಂದ ಕಾರು ಮಾರಿದ ಅಜಯ್ ರಾವ್; ಕಣ್ಣೀರು ಹಾಕಿದ ಮಗಳು
ಬಂಗಾಳದಲ್ಲಿ ವಕ್ಫ್ ಮಸೂದೆ ಹಿಂಪಡೆಯಲು ಒತ್ತಾಯಿಸಿ ಭುಗಿಲೆದ್ದ ಹಿಂಸಾಚಾರ
ಬಂಗಾಳದಲ್ಲಿ ವಕ್ಫ್ ಮಸೂದೆ ಹಿಂಪಡೆಯಲು ಒತ್ತಾಯಿಸಿ ಭುಗಿಲೆದ್ದ ಹಿಂಸಾಚಾರ
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಿನಿಮಾ ವಾಹನಗಳ ಪ್ರವೇಶ: ಆಕ್ರೋಶ
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಿನಿಮಾ ವಾಹನಗಳ ಪ್ರವೇಶ: ಆಕ್ರೋಶ
ಯತ್ನಾಳ್ ಅಸಲಿಗೆ ಒಬ್ಬ ನಕಲಿ ಹಿಂದೂ ಹುಲಿ: ರೇಣುಕಾಚಾರ್ಯ
ಯತ್ನಾಳ್ ಅಸಲಿಗೆ ಒಬ್ಬ ನಕಲಿ ಹಿಂದೂ ಹುಲಿ: ರೇಣುಕಾಚಾರ್ಯ
ರಹಾನೆ ಸ್ಫೋಟಕ ಬ್ಯಾಟಿಂಗ್​ಗೆ ದಂಗಾದ ಲಕ್ನೋ ಬೌಲರ್ಸ್
ರಹಾನೆ ಸ್ಫೋಟಕ ಬ್ಯಾಟಿಂಗ್​ಗೆ ದಂಗಾದ ಲಕ್ನೋ ಬೌಲರ್ಸ್
ಮೃತ್ಯುಂಜಯ ಸ್ವಾಮೀಜಿ ಯತ್ನಾಳ್​ಗೆ ಬುದ್ಧಿ ಹೇಳಲಿ: ಚಂದ್ರಶೇಖರ್ ಪೂಜಾರ್
ಮೃತ್ಯುಂಜಯ ಸ್ವಾಮೀಜಿ ಯತ್ನಾಳ್​ಗೆ ಬುದ್ಧಿ ಹೇಳಲಿ: ಚಂದ್ರಶೇಖರ್ ಪೂಜಾರ್
ಕೆಕೆಆರ್​ ಬೌಲರ್‌ಗಳ ಬೆವರಿಳಿಸಿದ ಪೂರನ್
ಕೆಕೆಆರ್​ ಬೌಲರ್‌ಗಳ ಬೆವರಿಳಿಸಿದ ಪೂರನ್