ತನ್ನ ಪ್ರೀತಿಗೆ ಅಡ್ಡಿಯಾದ ಅಂತ ಪ್ರಿಯಕರನ ಜೊತೆಗೂಡಿ ಭಾವನನ್ನೆ ಕೊಲ್ಲಿಸಿದ ನಾದಿನಿ 

| Updated By: ಸಾಧು ಶ್ರೀನಾಥ್​

Updated on: Jan 11, 2024 | 12:10 PM

ಪೊಲೀಸರು ತಾಂತ್ರಿಕ ಸಾಕ್ಷ್ಯದ ಸಹಾಯದಿಂದ ಎಲ್ಲ ಆರೋಪಿಗಳನ್ನ ಹೆಡೆಮುರಿ ಕಟ್ಟಿದ್ದಾರೆ. ತನ್ನ ಪ್ರೀತಿಗೆ ಅಡ್ಡಿಯಾದ ಅಂತ ಭಾವನನ್ನೆ ಕೊಲ್ಲಿಸಿ ನಾದಿನಿ ಜೈಲು ಪಾಲಾದ್ರೆ, ಇತ್ತ ನಾದಿನಿಯ ಮೇಲೆ ಕಣ್ಣು ಹಾಕಿದ್ದ ಅಂಬರಾಯ ತನ್ನ ಕುಟುಂಬವನ್ನು ಅನಾಥ ಮಾಡಿ ಮಸಣ ಸೇರಿದ್ದಾನೆ. ಮನೆಯಲ್ಲಿ ಹಿರಿಯರಿಗೆ ಹೇಳಿ ಬಗೆಹರಿಸಬಹುದಾದ ಸಮಸ್ಯೆ ಒಂದು ಕುಟುಂಬವನ್ನೆ ತಲ್ಲಣಗೊಳಿಸಿದೆ

ತನ್ನ ಪ್ರೀತಿಗೆ ಅಡ್ಡಿಯಾದ ಅಂತ ಪ್ರಿಯಕರನ ಜೊತೆಗೂಡಿ ಭಾವನನ್ನೆ ಕೊಲ್ಲಿಸಿದ ನಾದಿನಿ 
ಪ್ರೀತಿಗೆ ಅಡ್ಡಿಯಾದ ಅಂತ ಲವರ್​​​ ಜೊತೆಗೂಡಿ ಭಾವನನ್ನೆ ಕೊಲ್ಲಿಸಿದ ನಾದಿನಿ 
Follow us on

ಆವತ್ತು ನಿರ್ಜನ ಪ್ರದೇಶದಲ್ಲಿ ವ್ಯಕಿಯೋರ್ವನ ಶವ ಪತ್ತೆಯಾಗಿತ್ತು. ಕೂಲಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದ ಅಂಬರಾಯ ಎಂಬಾತನನ್ನು ಅದ್ಯಾರೋ ಬರ್ಬರ ಹತ್ಯೆ ಮಾಡಿದ್ದರು. ಆ ಹತ್ಯೆ ಕೇಸ್ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಪತ್ನಿಯ ತಂಗಿಯೇ ತನ್ನ ಪ್ರಿಯಕರನ ಜೊತೆ ಸೇರಿಕೊಂಡು ಮರ್ಡರ್ ಮಾಡಿಸಿದ್ದಾಳೆ. ಹಾಗಿದ್ರೆ ಕೊಲೆಗೆ ಕಾರಣ ಏನು ಅಂತೀರಾ? ಮುಂದೆ ಓದಿ. ಹೌದು. ಕಲಬುರಗಿ ಜಿಲ್ಲೆ ಕಮಲಾಪುರ ತಾಲೂಕಿನ ಓಕಳಿ ರಸ್ತೆಯ, ನಿರ್ಜನ ಪ್ರದೇಶದಲ್ಲಿ ವ್ಯಕ್ತಿಯೋರ್ವನ ಶವ ಸಿಕ್ಕಿದ್ದ ಕೇಸ್ ಗೆ ಮೆಗಾ ಟ್ವಿಸ್ಟ್ ಸಿಕ್ಕಿದೆ. ಕೇಸ್ ಬೆನ್ನತ್ತಿದ ಪೊಲೀಸರಿಗೆ ಶಾಕ್ ಅಗಿದೆ. ಯಾಕೆಂದ್ರೆ ಅಲ್ಲಿ ಕೊಲೆಗಾರರು ಬೇರ್ಯಾರು ಅಲ್ಲ, ಭೀಕರವಾಗಿ ಹತ್ಯೆಯಾಗಿರೋ ಅಂಬರಾಯ ಪಟ್ಟೆದಾರ್ ನ ಪತ್ನಿಯ ತಂಗಿಯೇ ಕೊಲೆಯ ಸೂತ್ರಧಾರಿ ಎನ್ನೋ ಬೆಚ್ಚಿ ಬಿಳಿಸೋ ಅಂಶ ಬೆಳಕಿಗೆ ಬಂದಿದೆ.

ತನ್ನ ಪ್ರೀತಿಗೆ ಅಡ್ಡಿಯಾಗಿದ್ದು, ಮತ್ತು ತನ್ನೊಂದಿಗೆ ಸಹಕರಿಸು ಅಂತ ಭಾವನಾದ ಅಂಬರಾಯ ಪ್ರತಿನಿತ್ಯ ಪೀಡಿಸುತ್ತಿದ್ದನಂತೆ. ಇದ್ರಿಂದ ಬೇಸತ್ತ ನಾದಿನಿ ಅಂಬಿಕಾ ತನ್ನ ಪ್ರಿಯಕರನಿಗೆ ವಿಷಯ ತಿಳಿಸಿದ್ದಳಂತೆ. ಅದಕ್ಕೊಂದು ಪರಿಹಾರ ಹುಡುಕು, ಇಲ್ಲದಿದ್ದರೇ ಆತ ನನ್ನನ್ನು ಸುಮ್ಮನ್ನೆ ಬಿಡೋದಿಲ್ಲ ಅಂದಿದ್ದಳು. ಅದರಂತಯೇ ಆವತ್ತು ಪ್ರಿಯಕರನೊಂದಿಗೆ ಸೇರಿ ಭಾವನನ್ನೆ ಹತ್ಯೆ ಮಾಡಿಸಿದ್ದಾಳೆ ಕಿರಾತಕಿ ಅಂಬಿಕಾ @ ಅಲಿಯಾಸ್ ರಾಧಿಕಾ.

ಯಸ್ ಆವತ್ತು ಭಾವನ ಶವ ಸಿಗುತ್ತಿದ್ದಂತೆ ಇಡೀ ಕುಟುಂಬ ಶೋಕ ಸಾಗರದಲ್ಲಿತ್ತು. ಅಷ್ಟೆ ಏಕೆ ಈ ಅಂಬಿಕಾ ಕೂಡಾ ತನಗೇನು ಗೊತ್ತೆ ಇಲ್ಲ ಎನ್ನುವಂತೆ ನಾಟಕ ಮಾಡಿದ್ದಳು. ಆದ್ರೆ ಪೊಲೀಸರ ತನಿಖೆ ವೇಳೆ ಬೆಚ್ಚಿ ಬಿಳಿಸೋ ಅಂಶ ಬಯಲಿಗೆ ಬಂದಿದ್ದು, ಖುದ್ದು ನಾದಿನಿಯೇ ಕೊಲೆಯ ಸೂತ್ರಧಾರಿ ಮತ್ತು ಆಕೆಯೇ ತನ್ನ ಪ್ರಿಯಕರನಿಗೆ ಹೇಳಿ ಕೊಲೆ ಮಾಡಿಸಿದ್ದಾಳೆ ಎನ್ನೋದು ಬೆಳಕಿಗೆ ಬಂದಿದೆ. ಸದ್ಯ ಕೊಲೆಗಾರ್ತಿ ಅಂಬಿಕಾ ಸೇರಿದಂತೆ ಏಳು ಜನ ಆರೋಪಿಗಳನ್ನ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ

ಇನ್ನು ಕೊಲೆಯಾದ ಅಂಬರಾಯ ಪಟ್ಟೆದಾರ್ ಮೂಲತಃ ಜೇವರ್ಗಿ ತಾಲೂಕಿನ ಕೂಡಿ ಗ್ರಾಮದ ನಿವಾಸಿ. ಆದ್ರೆ ಕಲಬುರಗಿ ನಗರದಲ್ಲಿ ಸೆಂಟ್ರಿಂಗ್ ಕೆಲಸ ಮಾಡಿಕೊಂಡು ಪತ್ನಿಯೊಂದಿಗೆ ವಾಸವಿದ್ದ. ಈ ಮಧ್ಯೆ 15 ದಿನಗಳ ಹಿಂದೆ ಪತ್ನಿಯ ತವರು ಮನೆ ಕಮಲಾಪುರ ತಾಲೂಕಿನ ಬೆಳಕೋಟಾ ಗ್ರಾಮದಕ್ಕೆ ಬಂದಿದ್ದ. ಪತ್ನಿಯ ಮನೆಯಲ್ಲೆ ವಾಸವಿದ್ದ. ಆವತ್ತು ಕೆಲಸಕ್ಕೆ ಹೋಗಿ ಬರ್ತಿನಿ ಅಂತ ಹೋಗಿದ್ದ ನಾಲ್ಕು ದಿನ ಆದ್ರೂ ಪತ್ತೆಯಾಗಿರಲಿಲ್ಲ.

Also Read: ಚಪಲಕ್ಕೆ ಬಿದ್ದವಳಿಂದ ಗಂಡನ ಕೊಲೆ: ಬೇತಮಂಗಲ, ವೈಟ್​ಫೀಲ್ಡ್​, ಕೋಗಿಲಹಳ್ಳಿ, ಚಿಂತಾಮಣಿ ಸುತ್ತು ಬಳಸಿ ನಡೆದಿದ್ದ ಕೊಲೆ ಕೇಸ್ ಬಹಿರಂಗ

ಬಳಿಕ ನಿರ್ಜನ ಪ್ರದೇಶದಲ್ಲಿ ಶವವಾಗಿ ಬಿದ್ದಿದ್ದ. ತಕ್ಷಣವೇ ಸ್ಥಳೀಯರು ಶವ ನೀಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಕಮಲಾಪುರ ಪೊಲೀಸರು ಕೊಲೆ ಪ್ರಕರಣವನ್ನ ಭೇದಿಸಿದ್ದು, ನಾದಿನಿಯೇ ಕೊಲೆಗೆ ಮುಖ್ಯ ಕಾರಣ ಎನ್ನೋದು ಬಯಲಾಗಿದೆ. ಅಲ್ಲದೇ ಪ್ರಿಯಕರ ರಾಜು ಬರುಡ, ಸೇರಿದಂತೆ ಒಟ್ಟು ಏಳು ಜ‌ನ ಆರೋಪಿಗಳನ್ನ ಬಂಧಿಸಿದ್ದು, ಪ್ರೇಯಸಿ ಹೇಳಿದಂತೆ ಕೊಲೆ ಮಾಡಿದ್ದಾಗಿ, ಆವತ್ತು ಆತನನ್ನ ಪ್ಲಾನ್ ಮಾಡಿ ಗ್ರಾಮದ ಬಳಿ ನಿರ್ಜನ ಪ್ರದೇಶಕ್ಕೆ ಪಾರ್ಟಿ ಮಾಡೋಣ ಅಂತ ಕರೆದುಕೊಂಡು ಬಂದು ಕೊಲೆ ಮಾಡಿದ್ದಾರೆ.

ಬಳಿಕ ಯಾರಿಗೂ ಅನುಮಾನ ಬರಬಾರದು ಅಂತಾ ಆತನ ಬೈಕ್ ಮೊಬೈಲ್ ಎಲ್ಲವನ್ನೂ ತೆಗೆದುಕೊಂಡು ಹೋಗಿದ್ದರು. ಆದ್ರೆ ಪೊಲೀಸರು ತಾಂತ್ರಿಕ ಸಾಕ್ಷ್ಯದ ಸಹಾಯದಿಂದ ಎಲ್ಲ ಆರೋಪಿಗಳನ್ನ ಹೆಡೆಮುರಿ ಕಟ್ಟಿದ್ದಾರೆ. ತನ್ನ ಪ್ರೀತಿಗೆ ಅಡ್ಡಿಯಾದ ಅಂತ ಭಾವನನ್ನೆ ಕೊಲ್ಲಿಸಿ ನಾದಿನಿ ಜೈಲು ಪಾಲಾದ್ರೆ, ಇತ್ತ ನಾದಿನಿಯ ಮೇಲೆ ಕಣ್ಣು ಹಾಕಿದ್ದ ಅಂಬರಾಯ ತನ್ನ ಕುಟುಂಬವನ್ನು ಅನಾಥ ಮಾಡಿ ಮಸಣ ಸೇರಿದ್ದಾನೆ. ಅದೇನೆ ಇರಲಿ ಮನೆಯಲ್ಲಿ ಹಿರಿಯರಿಗೆ ಹೇಳಿ ಬಗೆಹರಿಸಬಹುದಾದ ಸಮಸ್ಯೆ ಒಂದು ಕುಟುಂಬವನ್ನೆ ತಲ್ಲಣಗೊಳಿಸಿದ್ದು ನಿಜಕ್ಕೂ ದುರಂತವೇ ಸರಿ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.