AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿ: ಲಿವ್ ಇನ್ ಸಂಗಾತಿಯನ್ನು ಕತ್ತು ಹಿಸುಕಿ ಕೊಂದು ಮನೆಯಿಂದ 12 ಕಿಮೀ ದೂರದಲ್ಲಿ ಶವ ಬಿಸಾಡಿದ ವ್ಯಕ್ತಿಗಾಗಿ ಪೊಲೀಸ್ ಶೋಧ

ಇವರಿಬ್ಬರು ನಾಲ್ಕು ವರ್ಷಗಳ ಹಿಂದೆ ಓಡಿ ಹೋಗಿ ಸಂಸಾರ ಶುರು ಮಾಡಿದ್ದರು. ಆಕೆ ಮದುವೆಯಾಗುವಂತೆ ಒತ್ತಾಯಿಸುತ್ತಿದ್ದಳು ಎಂದು ಪೊಲೀಸರು ಹೇಳಿದ್ದಾರೆ. ಏಪ್ರಿಲ್ 12 ರಂದು ಇಬ್ಬರೂ ಈ ವಿಷಯದ ಬಗ್ಗೆ ಜಗಳವಾಡಿದ್ದು, ರೋಹಿನಾಳ ಸಂಗಾತಿ ಆಕೆ ಕತ್ತು ಹಿಸುಕಿ ಕೊಂದಿದ್ದಾನೆ

ದೆಹಲಿ: ಲಿವ್ ಇನ್ ಸಂಗಾತಿಯನ್ನು ಕತ್ತು ಹಿಸುಕಿ ಕೊಂದು ಮನೆಯಿಂದ 12 ಕಿಮೀ ದೂರದಲ್ಲಿ ಶವ ಬಿಸಾಡಿದ ವ್ಯಕ್ತಿಗಾಗಿ ಪೊಲೀಸ್ ಶೋಧ
ಸಾಂದರ್ಭಿಕ ಚಿತ್ರ
ರಶ್ಮಿ ಕಲ್ಲಕಟ್ಟ
|

Updated on:Apr 21, 2023 | 8:48 PM

Share

ದೆಹಲಿ: ಈಶಾನ್ಯ ದೆಹಲಿಯಲ್ಲಿ (Delhi) 25 ವರ್ಷದ ಮಹಿಳೆಯನ್ನು ಆಕೆಯ ಲಿವ್-ಇನ್ ಸಂಗಾತಿ (live-in partner) ಕತ್ತು ಹಿಸುಕಿ ಕೊಲೆ ಮಾಡಿದ್ದು (Murder case) ಮೃತದೇಹವನ್ನು ಮನೆಯಿಂದ 12 ಕಿಮೀ ದೂರದಲ್ಲಿ ಎಸೆದಿರುವ ಪ್ರಕರಣ ವರದಿಯಾಗಿದೆ.ಏಪ್ರಿಲ್ 12 ರಂದು, ಮನೆಯ ಹೊರಗೆ ಶವ ಪತ್ತೆಯಾದ ಬಗ್ಗೆ ತಡರಾತ್ರಿ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಮಹಿಳೆಯ ದೇಹದಲ್ಲಿ ಯಾವುದೇ ಗಾಯದ ಗುರುತುಗಳು ಕಂಡುಬಂದಿಲ್ಲ, ನಂತರ ಅದನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿದ್ದು ಅಲ್ಲಿ ವೈದ್ಯರು ಸಾವಿನ ಕಾರಣ ಪತ್ತೆ ಹಚ್ಚಿದ್ದಾರೆ ಎಂಎಂದು ಉಪ ಪೊಲೀಸ್ ಆಯುಕ್ತ ಜಾಯ್ ಟಿರ್ಕಿ ಹೇಳಿರುವುದಾದಿ ಎನ್​​ಡಿಟಿವಿ ವರದಿ ಮಾಡಿದೆ. ರೋಹಿನಾ ಎಂದು ಗುರುತಿಸಲಾದ ಮಹಿಳೆ ತನ್ನ ಸಂಗಾತಿ ವಿನೀತ್ ಜೊತೆ ವಾಸಿಸುತ್ತಿದ್ದಳು. ಇವರಿಬ್ಬರು ನಾಲ್ಕು ವರ್ಷಗಳ ಹಿಂದೆ ಓಡಿ ಹೋಗಿ ಸಂಸಾರ ಶುರು ಮಾಡಿದ್ದರು. ಆಕೆ ಮದುವೆಯಾಗುವಂತೆ ಒತ್ತಾಯಿಸುತ್ತಿದ್ದಳು ಎಂದು ಪೊಲೀಸರು ಹೇಳಿದ್ದಾರೆ. ಏಪ್ರಿಲ್ 12 ರಂದು ಇಬ್ಬರೂ ಈ ವಿಷಯದ ಬಗ್ಗೆ ಜಗಳವಾಡಿದ್ದು, ರೋಹಿನಾಳ ಸಂಗಾತಿ ಆಕೆ ಕತ್ತು ಹಿಸುಕಿ ಕೊಂದಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.

ಸಂಜೆ ವಿನೀತ್ ಶವವನ್ನು ಎಸೆಯಲು ತನ್ನ ಸ್ನೇಹಿತನಿಗೆ ಕರೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ತನಿಖೆಗಾಗಿ 50 ಕ್ಕೂ ಹೆಚ್ಚು ಪೊಲೀಸರ ತಂಡವನ್ನು ರಚಿಸಲಾಗಿದೆ.

ಸಮೀಪದ ಪ್ರದೇಶದಲ್ಲಿನ ಸಿಸಿಟಿವಿ ದೃಶ್ಯಗಳನ್ನ ಸ್ಕ್ಯಾನ್ ಮಾಡಲಾಗಿದ್ದು, ಅಲ್ಲಿ ಇಬ್ಬರು ಪುರುಷರು ಬೈಕ್‌ನಲ್ಲಿ ಮಹಿಳೆಯ ಶವದೊಂದಿಗೆ ಕಾಣಿಸಿಕೊಂಡಿದ್ದಾರೆ. ಪೊಲೀಸರು ಕನಿಷ್ಠ 12 ರಿಂದ 13 ಕಿಮೀ ದೂರದಲ್ಲಿರುವ ಸಿಸಿಟಿವಿ ದೃಶ್ಯಗಳ ಮೂಲಕ ಅವರ ಬೈಕ್ ಅನ್ನು ಪತ್ತೆಹಚ್ಚಿದ್ದಾರೆ. ವೀಡಿಯೊದಲ್ಲಿ, ಒಬ್ಬ ವ್ಯಕ್ತಿ ಶವವನ್ನು ತನ್ನ ಭುಜದ ಮೇಲೆ ಹೊತ್ತುಕೊಂಡು ಹೋಗುತ್ತಿರುವುದು ಕಾಣಿಸಿದೆ.ಆತನ ಹಿಂದೆಯೇ ಮಹಿಳೆಯೊಬ್ಬಳು ಹೆಜ್ಜೆ ಹಾಕುತ್ತಿರುವುದು ಕೂಡಾ ಕಾಣಿಸಿದೆ.

ಆರೋಪಿಯ ಸಹೋದರಿ ಪಾರುಲ್ ಆಕೆಯ ಸ್ಕಾರ್ಫ್‌ನಿಂದ ಶವವನ್ನು ಮರೆಮಾಚಲು ಇಬ್ಬರಿಗೆ ಸಹಾಯ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳ ಬಂಧನಕ್ಕೆ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಏಪ್ರಿಲ್ 20 ರಂದು ಪಾರುಲ್ ತನ್ನ ಇಬ್ಬರು ಮಕ್ಕಳೊಂದಿಗೆ ತಾನು ವಾಸಿಸುತ್ತಿದ್ದ ಮನೆಯನ್ನು ಖಾಲಿ ಮಾಡಿದ್ದಾಳೆ. ಸಿಸಿಟಿವಿ ವಿಡಿಯೊಗಳ ಮೂಲಕ ತನಿಖಾ ತಂಡ ಆಕೆಯ ಚಲನವಲನವನ್ನು ಪತ್ತೆಹಚ್ಚಿದೆ. ಮಹಿಳೆ ಕುದುರೆ ಗಾಡಿಯನ್ನು ಬಾಡಿಗೆಗೆ ಪಡೆದಿದ್ದಳು, ಇದು ಲೋನಿ ಗಡಿಯ ಬಳಿ ಪತ್ತೆಯಾಗಿದೆ. ಇದು ಪೂರ್ವ ದೆಹಲಿಯಲ್ಲಿ ಅವಳನ್ನು ಬಂಧಿಸಲು ಪೊಲೀಸರಿಗೆ ಸಹಾಯ ಮಾಡಿತು.

ಇದನ್ನೂ ಓದಿ: Tarikere: ಮರಕ್ಕೆ ಕಾರು ಡಿಕ್ಕಿ, ದಂಪತಿ ಸ್ಥಳದಲ್ಲೇ ಸಾವು: ಮಕ್ಕಳಿಬ್ಬರಿಗೆ ಗಾಯ

ಈ ಕೃತ್ಯದಲ್ಲಿ ಪಾರೂಲ್ ಸಹಭಾಗಿಯಾಗರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ವಿನೀತ್ ಮತ್ತು ಆತನ ಸ್ನೇಹಿತನನ್ನು ಬಂಧಿಸಲು ಶೋಧ ನಡೆಯುತ್ತಿದೆ.

ಪೊಲೀಸರ ಪ್ರಕಾರ, ವಿನೀತ್ ಮತ್ತು ಅವನ ತಂದೆ 2019 ರಲ್ಲಿ ಉತ್ತರ ಪ್ರದೇಶದ ಬಾಗ್‌ಪತ್‌ನಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದರು. ಆರೋಪಿ ಕಳೆದ ವರ್ಷ ನವೆಂಬರ್‌ನಿಂದ ಜಾಮೀನಿನ ಮೇಲೆ ಹೊರಗಿದ್ದ.

ಮತ್ತಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:48 pm, Fri, 21 April 23

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ