ಕಾರಿನಡಿ ಸಿಲುಕಿ ಯುವತಿ ಸಾವನ್ನಪ್ಪಿದ ಪ್ರಕರಣದ ಕುರಿತು ಆರೋಪಿಗಳು ಕೆಲವು ವಿಚಾರಗಳನ್ನು ಬಾಯ್ಬಿಟ್ಟಿದ್ದಾರೆ. ಕಾರು ಯುವತಿ ಸ್ಕೂಟಿಗೆ ಡಿಕ್ಕಿ ಹೊಡೆದ ಬಳಿಕ ಆಕೆಯ ದೇಹ ಕಾರಿಗೆ ಸಿಲುಕಿಕೊಂಡಿತ್ತು, ಕಾರಿನಿಂದ ದೇಹವನ್ನು ಬೇರ್ಪಡಿಸಲು ಕಾರನ್ನು ವೇಗವಾಗಿ ಚಲಾಯಿಸಿದ್ದಲ್ಲದೆ ಆಗಾಗ ಯು ಟರ್ನ್ ತೆಗೆದುಕೊಳ್ಳುತ್ತಿದ್ದೆವು ಎಂದು ಹೇಳಿದ್ದಾರೆ.
ಈ ಮೊದಲು ತಾವು ಕುದಿದ್ದೆವು ಅಪಘಾತವಾಗಿರುವ ಕುರಿತು ತಮಗೆ ಗೊತ್ತೇ ಆಗಲಿಲ್ಲ ಎಂದು ಹೇಳಿದ್ದರು, ಆದರೆ ಈಗ ಅಪಘಾತ ನಡೆದಿದ್ದು ಗೊತ್ತಿತ್ತು, ದೇಹ ಕಾರಿಗೆ ಸಿಲುಕಿದ್ದರಿಂದ ಭಯದಿಂದಲೇ ಕಾರು ಚಲಾಯಿಸುತ್ತಿದ್ದೆವು, ಆಗಾಗ ಯು ಟರ್ನ್ ತೆಗೆದುಕೊಳ್ಳುತ್ತಿದ್ದೆವು ಎಂದು ಹೇಳಿದ್ದಾರೆ.
ಆರೋಪಿಗಳು ತಪ್ಪೆಸಗಿರುವುದಾಗಿ ಬಾಯ್ಬಿಟ್ಟಿದ್ದಾರೆ. ಆಕೆ ಕಾರಿನಡಿ ಸಿಲುಕಿದ್ದು ಮೊದಲು ತಮಗೆ ಗೊತ್ತಿರಲಿಲ್ಲ. ಭಯದಲ್ಲಿ ಕಾರು ಓಡಿಸಿಕೊಂಡು 13 ಕಿಮೀ ದೂರ ಹೋದ ಬಳಿಕ ಪರಿಶೀಲಿದಾಗ ದೇಹ ಸಿಲುಕಿದ್ದು ನೋಡಿದೆವು ಎಂದಿದ್ದಾರೆ. ಪೊಲೀಸ್ ಎಫ್ಐಆರ್ನಲ್ಲಿ ಈ ಹೇಳಿಕೆ ದಾಖಲಿಸಿದ್ದರು.
ಮತ್ತಷ್ಟು ಓದಿ: ದೆಹಲಿಯ ಯುವತಿಯನ್ನು ರಸ್ತೆಯಲ್ಲಿ ಎಳೆದುಕೊಂಡು ಹೋದ ಕಾರು; ಸಿಸಿಟಿವಿಯಲ್ಲಿ ಸಂಪೂರ್ಣ ಘಟನೆ ದಾಖಲು
20 ವರ್ಷದ ಅಂಜಲಿ ಸಿಂಗ್ ತನ್ನ ಸ್ಕೂಟರ್‌ನಲ್ಲಿ ಸ್ನೇಹಿತನೊಂದಿಗೆ ಮನೆಗೆ ಹಿಂದಿರುಗುತ್ತಿದ್ದಾಗ ರಾತ್ರಿ 2 ಗಂಟೆಯ ಸಮಯದಲ್ಲಿ ಕಾರು ಡಿಕ್ಕಿ ಹೊಡೆದಿದೆ. ಆಕೆಯ ಕಾಲು ಕಾರಿನ ಮುಂಭಾಗದ ಚಕ್ರಕ್ಕೆ ಸಿಕ್ಕಿಹಾಕಿಕೊಂಡಿತು, ಮತ್ತು ಆಕೆಯ ದೇಹವನ್ನು ಕಾರು ಎಳೆದೊಯ್ದಿತ್ತು. ಆಕೆಯ ಸ್ನೇಹಿತ ಇನ್ನೊಂದು ಬದಿಯಲ್ಲಿ ಬಿದ್ದು ಸಣ್ಣಪುಟ್ಟ ಗಾಯಗಳಾಗಿತ್ತು.
ಮೃತದೇಹದೊಂದಿಗೆ ಸಿಕ್ಕಿಕೊಂಡರೆ ಜೈಲು ಗ್ಯಾರಂಟಿ ಎನ್ನುವ ಭಯದಲ್ಲಿ ಕಾರಿನಿಂದ ದೇಹವನ್ನು ಬೇರ್ಪಡಿಸುವ ಯೋಚನೆ ಮಾಡಿ, ಕಾರು ಚಲಿಸುತ್ತಿದ್ದಂತೆಯೇ ವೇಗವಾಗಿ ಕಾರನ್ನು ಯು ಟರ್ನ್ ತೆಗೆದುಕೊಂಡು ಮೃತದೇಹವನ್ನು ಕಾರಿನಿಂದ ಬೇರ್ಪಡಿಸುವ ಸಾಹಸ ಮಾಡಿದ್ದರು. ಕಾರು ಚಲಾಯಿಸುತ್ತಿದ್ದ ಅಮಿತ್ ಖನ್ನಾ ಅವರ ಬಳಿ ಡ್ರೈವಿಂಗ್ ಲೈಸೆನ್ಸ್ ಇಲ್ಲದಿರುವುದರಿಂದ ಅವರು ಮತ್ತಷ್ಟು ಭಯಪಟ್ಟಿದ್ದರು.
ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:05 am, Mon, 9 January 23