ಲಂಡನ್ ರೇಲ್ವೇ ಸ್ಟೇಶನ್ನಲ್ಲಿ 14-ವರ್ಷದ ಬಾಲಕ ಜರ್ಮೇನ್ನನ್ನು ಇರಿದು ಕೊಂದಿದ್ದು ತಾನೇ ಎಂದು 17-ವರ್ಷದ ಹುಡುಗ ಒಪ್ಪಿಕೊಂಡ!
ಬಾಲಾಪರಾಧಿ ಮತ್ತು 14-ವರ್ಷದ ಜರ್ಮೇನ್ ಕೂಲ್ಸ್ ನಡುವೆ ರೇಲ್ವೇ ಸ್ಟೇಶನಲ್ಲಿ ಯಾವುದೋ ಕಾರಣಕ್ಕೆ ಜಗಳ ಶುರುವಾಗಿದೆ. ಸಿಟ್ಟಿನ ಭರದಲ್ಲಿ ಅಪರಾಧಿಯು ತನ್ನಲ್ಲಿದ್ದ ಚಾಕುವನ್ನು ಹೊರತೆಗೆದು ಜರ್ಮೇನ್ ನನ್ನು ಮನಬಂದಂತೆ ತಿವಿದಿದ್ದಾನೆ.
ಲಂಡನ್: ಇದನ್ನು ಒಟಿಟಿ ಪ್ಲಾಟ್ ಫಾರ್ಮ್ ಗಳಲ್ಲಿ ನೈಜ್ಯತೆ ನೆಪದಲ್ಲಿ ಬಿತ್ತರಗೊಳ್ಳುವ ಹಸಿ ಕಾಮದ ಜೊತೆ ಹಿಂಸಾತ್ಮಕ ದೃಶ್ಯಗಳ ಪ್ರಭಾವ ಅಂತ ಹೇಳಿದರೆ ತಪ್ಪಾಗಲಾರದು. ಹದಿಹರೆಯದ ಮಕಳಲ್ಲೂ ಪೋಷಕರು ಹೌಹಾರುವಂಥ ಹಿಂಸಾಪ್ರವತ್ತಿ ಬೆಳೆಯುತ್ತಿರುವುದುದು ಆಘಾತಕಾರಿ ಸಂಗತಿ. ಈ ಪ್ರವೃತ್ತಿ ಬಹುತೇಕ ರಾಷ್ಟ್ರಗಳ ಮಕ್ಕಳಲ್ಲಿ ಕಾಣುತ್ತಿದೆ. ನವೆಂಬರ್ 18, 2021 ರಂದು ಲಂಡನ್ (London) ನಗರದ ದಕ್ಷಿಣ ಭಾಗಕ್ಕಿರುವ ಪಶ್ಚಿಮ ಕ್ರಾಯ್ಡನ್ (West Croydon) ರೇಲ್ವೇ ಸ್ಟೇಶನ್ ನಲ್ಲಿ ಒಬ್ಬ 14-ವರ್ಷದ ಬಾಲಕ ಭೀಕರವಾದ ಚಾಕು ಇರಿತಕ್ಕೊಳಗಾಗಿ (stabbing) ಸಾವನ್ನಪ್ಪಿದ್ದ. ಅಂದಹಾಗೆ ಅವನ ಮೇಲೆ ಹಲ್ಲೆ ನಡೆಸಿ ಕೊಂದವನು 17-ವರ್ಷದ ಹುಡುಗ! ಕುತೂಹಲಕಾರಿ ಸಂಗತಿಯೆಂದರೆ ಬಾಪಾಪರಾಧಿ ಕೊಲೆ ಮಾಡಿದ್ದನ್ನು ಅಂಗೀಕರಿಸಿದ್ದಾನೆ. ಕಾನೂನಾತ್ಮಕ ಕಾರಣಗಳ ಹಿನ್ನೆಲೆಯಲ್ಲಿ ಕೊಲೆ ಮಾಡಿದ ಹುಡುಗನ ಹೆಸರು ಉಲ್ಲೇಖಿಸಲಾಗದು.
ಸಣ್ಣ ಜಗಳಕ್ಕೆ ಕೊಲೆ
ಬಾಲಾಪರಾಧಿ ಮತ್ತು 14-ವರ್ಷದ ಜರ್ಮೇನ್ ಕೂಲ್ಸ್ ನಡುವೆ ರೇಲ್ವೇ ಸ್ಟೇಶನಲ್ಲಿ ಯಾವುದೋ ಕಾರಣಕ್ಕೆ ಜಗಳ ಶುರುವಾಗಿದೆ. ಸಿಟ್ಟಿನ ಭರದಲ್ಲಿ ಅಪರಾಧಿಯು ತನ್ನಲ್ಲಿದ್ದ ಚಾಕುವನ್ನು ಹೊರತೆಗೆದು ಜರ್ಮೇನ್ ನನ್ನು ಮನಬಂದಂತೆ ತಿವಿದಿದ್ದಾನೆ. ಅವನನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಬದುಕುಳಿಯಲಿಲ್ಲ.
ಪ್ರಕರಣದ ವಿಚಾರಣೆ ಕಳೆದ ವಾರ ಕೊನೆಗೊಂಡಿದ್ದು ಹಂತಕ ತನ್ನ ಅಪರಾಧವನ್ನು ಅಂಗೀಕರಿಸಿದ್ದಾನೆ. ಈ ಹಿಂದಿನ ವಿಚಾರಣೆಯಲ್ಲಿ ಅವನು ತನ್ನಲ್ಲಿ ಚೂರಿ ಇದ್ದ ಸಂಗತಿಯನ್ನು ಮಾತ್ರ ಅಂಗೀಕರಿಸಿದ್ದ. ವಿಚಾರಣೆ ನಡೆಯುತ್ತಿದ್ದಾಗ ಜರ್ಮೇನ್ ಪೋಷಕರು ಮತ್ತು ಕುಟುಂಬದ ಇತರ ಸದಸ್ಯರು ಓಲ್ಡ್ ಬೇಲಿಯಲ್ಲಿರುವ ಕೋರ್ಟ್ ನಲ್ಲಿ ಹಾಜರಿದ್ದರು. ಫೆಬ್ರುವರಿ 24 ರಂದು ಶಿಕ್ಷೆಯ ಪ್ರಮಾಣ ಪ್ರಕಟಿಸಬೇಕೆಂದು ಪ್ರಾಸಿಕ್ಯೂಟರ್ ಕೆರೋಲೀನ್ ಕಾರ್ಬೆರಿ ಕೆಸಿ ಸಲಹೆ ನೀಡಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ ಕ್ಷಿಪ್ರವಾಗಿ ಕೊನೆಗೊಂಡ ವಿಚಾರಣೆಯ ಸಂದರ್ಭದಲ್ಲಿ ಘಟನೆಗೆ ಸಂಬಂಧಿಸಿದ ಸತ್ಯಸಂಗತಿಗಳನ್ನು ಬಯಲು ಮಾಡಲಿಲ್ಲ.
ಆಘಾತದಲ್ಲಿ ಜರ್ಮೇನ್ ಕುಟುಂಬ
ಲಂಡನ್ ಮೆಟ್ರೋಪಾಲಿಟನ್ ಪೊಲೀಸ್, ಜರ್ಮೇನ್ ಕೊಲೆಯಿಂದ ಅವನ ಕುಟುಂಬ ತತ್ತರಿಸಿದೆ ಎಂದು ಈ ಹಿಂದೆ ಮಾಧ್ಯಮಗಳಿಗೆ ಬ್ರೀಫ್ ಮಾಡುವಾಗ ಹೇಳಿತ್ತು.
2021 ರಲ್ಲಿ ಅಂದರೆ ಕೊಲೆ ನಡೆದ ಬಳಿಕ ಮಾತಾಡಿದ್ದ ಸ್ಪೆಷಲ್ ಕ್ರೈಮ್ ಬ್ರ್ಯಾಂಚ್ ನ ಚೀಫ್ ಡಿಟೆಕ್ಟಿವ್ ಇನ್ಸ್ಪೆಕ್ಟರ್ ರಿಚರ್ಡ್ ವ್ಯಾಂಡರ್ ಬರ್ಗ್, ‘ಜರ್ಮೇನ್ ಕೊಲೆಯಿಂದ ಅವನ ಫ್ಯಾಮಿಲಿ ತೀವ್ರ ಆಘಾತಕ್ಕೊಳಗಾಗಿದೆ, ಅವನ ಹತ್ಯೆಗೆ ಕಾರಣನಾದ ವ್ಯಕ್ತಿಯನ್ನು ನಾವು ಆದಷ್ಟು ಬೇಗ ಪತ್ತೆ ಹಚ್ಚಬೇಕಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಿಮಗೆ ಯಾವುದೇ ಸ್ವರೂಪದ ಮಾಹಿತಿ ಲಭ್ಯವಾದರೆ, ದಯವಿಟ್ಟು ನಮ್ಮಇಲಾಖೆಗೆ, ಸಿಬ್ಬಂದಿಗೆ ತಿಳಿಸಿರಿ, ನಿಮ್ಮ ಮಾಹಿತಿ ಮತ್ತು ಹೆಸರನ್ನು ಗೌಪ್ಯವಾಗಿಡಲಾಗುವುದು,’ ಎಂದು ಹೇಳಿದ್ದರು.
’ಕುಟುಂಬದ ಮುಖ್ಯಸ್ಥನಂತಿದ್ದ!’
ಜರ್ಮೇನ್ ತಾಯಿ ಲೊರೇನ್ ಡುಡೆಕ್ ಮೈಲಂಡನ್ ವೆಬ್ ಸೈಟ್ ನೊಂದಿಗೆ ಮಾತಾಡುವಾಗ, ‘ಜರ್ಮೇನ್ ಕೇವಲ 14-ವರ್ಷ-ವಯಸ್ಸಿನವನಾಗಿದ್ದರೂ, ನಮ್ಮ ಕುಟುಂಬದ ಮುಖ್ಯಸ್ಥನಂತಿದ್ದ. ಅದಾಗಲೇ ಅವನಲ್ಲಿ ಅಗಾಧ ಪ್ರಬುದ್ಧತೆ ಬಂದುಬಿಟ್ಟಿತ್ತು. ಯಾವಾಗಲೂ ಮುಗುಳ್ನಗುತ್ತಿರುತ್ತಿದ್ದ, ಯಾರಿಗೂ ತೊಂದರೆ ಕೊಟ್ಟವನಲ್ಲ,’ ಎಂದು ಹೇಳಿದ್ದರು.
ಜರ್ಮೇನ್ ಪ್ರಕರಣ 2021 ರಲ್ಲಿ ಲಂಡನಲ್ಲಿ ನಡೆದ 27 ನೇ ಇರಿತ ಪ್ರಕರಣವಾಗಿತ್ತು. 2017 ರ ನಂತರ ಈ ವರ್ಷದಲ್ಲೇ ಅತಿಹೆಚ್ಚು ಅಂಥ ಪ್ರಕರಣಗಳು ವರದಿಯಾಗಿದ್ದವು, ಮತ್ತು ಅವುಗಳಿಗೆ ಬಲಿಯಾದ ಅತ್ಯಂತ ಕಿರಿಯ ವ್ಯಕ್ತಿಯೆಂದರೆ ಜರ್ಮೇನ್. ಅದೇ ವರ್ಷ ಲಂಡನ್ ನಗರದಲ್ಲಿ ಚಾಕು ಅಥವಾ ಗನ್ ಮೂಲಕ ಸಂಭವಿಸಿದ ಹಿಂಸಾಕೃತ್ಯಗಳಲ್ಲಿ ಒಟ್ಟು 30 ಹದಿಹರೆಯದ ಬಾಲಕರು ಬಲಿಯಾಗಿದ್ದರು.
ಮತ್ತಷ್ಟು ಕ್ರೈಮ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ