ಶಾಲಾ ಮಕ್ಕಳಿಗೆ ಲೈಂಗಿಕ ಕಿರುಕುಳ: ಮುಖ್ಯ‌‌ ಶಿಕ್ಷಕನ ಕಾಮಚೇಷ್ಟೆಗೆ ಬೆಂಗಾವಲಾಗಿದ್ದ ಕ್ಲರ್ಕ್ ಅಂದರ್

| Updated By: ಗಂಗಾಧರ​ ಬ. ಸಾಬೋಜಿ

Updated on: Jan 30, 2024 | 10:36 PM

ಶಾಲಾ ಮಕ್ಕಳಿಗೆ ಮುಖ್ಯ ಶಿಕ್ಷಕನಿಂದ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಮುಖ್ಯ ಶಿಕ್ಷಕನ ಕೃತ್ಯಕ್ಕೆ ಬೆಂಗಾವಲಾಗಿದ್ದ ಕ್ಲರ್ಕ್ ನನ್ನು ಪೊಲೀಸರು ಬಂಧಿಸಿದ್ದಾರೆ. ಜಿಲ್ಲೆಯ ಗುರುಮಠಕಲ್‌ ಪೊಲೀಸರಿಂದ ಫ್ರಾನ್ಸಿಸ್ ಬಂಧಿಸಲಾಗಿದೆ. ಹನುಮೇಗೌಡ ಹೇಳಿಕೆ ಆಧರಿಸಿ ಕ್ಲರ್ಕ್ ಫ್ರಾನ್ಸಿಸ್​ನನ್ನು ಪೊಲೀಸರು ಬಂಧಿಸಿದ್ದಾರೆ. 

ಶಾಲಾ ಮಕ್ಕಳಿಗೆ ಲೈಂಗಿಕ ಕಿರುಕುಳ: ಮುಖ್ಯ‌‌ ಶಿಕ್ಷಕನ ಕಾಮಚೇಷ್ಟೆಗೆ ಬೆಂಗಾವಲಾಗಿದ್ದ ಕ್ಲರ್ಕ್ ಅಂದರ್
ಬಂಧಿತ ಕ್ಲರ್ಕ್ ಫ್ರಾನ್ಸಿಸ್
Follow us on

ಯಾದಗಿರಿ, ಜನವರಿ 30: ಶಾಲಾ ಮಕ್ಕಳಿಗೆ ಮುಖ್ಯ ಶಿಕ್ಷಕನಿಂದ ಲೈಂಗಿಕ ಕಿರುಕುಳ (harassment) ಪ್ರಕರಣದಲ್ಲಿ ಮುಖ್ಯ ಶಿಕ್ಷಕನ ಕೃತ್ಯಕ್ಕೆ ಬೆಂಗಾವಲಾಗಿದ್ದ ಕ್ಲರ್ಕ್ ನನ್ನು ಪೊಲೀಸರು ಬಂಧಿಸಿದ್ದಾರೆ. ಜಿಲ್ಲೆಯ ಗುರುಮಠಕಲ್‌ ಪೊಲೀಸರಿಂದ ಫ್ರಾನ್ಸಿಸ್ ಬಂಧಿಸಲಾಗಿದೆ. ಗುರುಮಠಕಲ್‌ ಠಾಣೆಯಲ್ಲಿ ಮುಖ್ಯ ಶಿಕ್ಷಕ ಹನುಮೇಗೌಡ ವಿರುದ್ಧ ದಾಖಲಾಗಿದ್ದ ಪೋಕ್ಸೋ ಕೇಸ್ ದಾಖಲಾಗಿತ್ತು. ಸುರಪುರ DySP ಜಾವೇದ್ ನೇತೃತ್ವದ ತನಿಖಾ ತಂಡ‌ದಿಂದ ವಿಚಾರಣೆ ಮಾಡಿದ್ದು, ಈ ವೇಳೆ ಮುಖ್ಯ ಶಿಕ್ಷಕ ಹನುಮೇಗೌಡ ಯಾದಗಿರಿಯ ಶಾಲೆಯೊಂದರ ಕ್ಲರ್ಕ್ ಹೆಸರು ಬಾಯ್ಬಿಟ್ಟಿದ್ದಾರೆ. ಹನುಮೇಗೌಡ ಹೇಳಿಕೆ ಆಧರಿಸಿ ಕ್ಲರ್ಕ್ ಫ್ರಾನ್ಸಿಸ್​ನನ್ನು ಪೊಲೀಸರು ಬಂಧಿಸಿದ್ದಾರೆ.

ಉಪನ್ಯಾಸಕನಿಂದ ಅಸಭ್ಯ ವರ್ತನೆ ಆರೋಪ: ತರಗತಿ ಬಹಿಷ್ಕರಿಸಿ ವಿದ್ಯಾರ್ಥಿಗಳ ಹೋರಾಟ

ಶಿವಮೊಗ್ಗ: ನಗರದ ಸಹ್ಯಾದ್ರಿ ವಿಜ್ಞಾನ ಕಾಲೇಜು ವಿದ್ಯಾರ್ಥಿಗಳು ಅಕ್ಷರಶಃ ಗರಂ ಆಗಿದ್ದರು. ವಿಜ್ಞಾನ ಕಾಲೇಜು ಮುಂಭಾಗ ಮುಖ್ಯ ರಸ್ತೆಗಿಳಿದು ಹೋರಾಟ ನಡೆಸಿದ್ದರು. ಶಂಕರಾನಂದ ಎಂಬ ಫಿಸಿಕ್ಸ್ ಉಪನ್ಯಾಸಕರೊಬ್ಬರು ಕಾಲೇಜಿನಲ್ಲಿ ಅಸಭ್ಯ ವರ್ತನೆ ತೋರಿದ್ದಾರೆಂದು ಆರೋಪಿಸಿದ್ದರು. ನೂರಾರು ಸಂಖ್ಯೆಯಲ್ಲಿ ಸೇರಿದ ವಿದ್ಯಾರ್ಥಿಗಳು, ತರಗತಿ ಬಹಿಷ್ಕಾರ ಮಾಡಿ ಪ್ರತಿಭಟನೆ ನಡೆಸಿದ್ದರು.

ಇದನ್ನೂ ಓದಿ: ವರ್ಕ್​ ಫ್ರಮ್​​ ಹೋಮ್ ಮೂಲಕ ಹೆಚ್ಚು ಹಣ ಗಳಿಸಬಹುದೆಂದು ಆಸೆ ತೋರಿಸಿ 158 ಕೋಟಿ ರೂ. ವಂಚಿಸಿದ್ದ ಆರೋಪಿಗಳು ಅರೆಸ್ಟ್​

ಫಿಸಿಕ್ಸ್ ವಿಭಾಗದ ಲೆಕ್ಚರ್​ರಿಂದ ಅಸಭ್ಯ ವರ್ತನೆ ಅತಿರೇಕವಾಗಿದೆ ಎಂದು ಆರೋಪಿಸಿದ್ದು, ಉಪನ್ಯಾಸಕ ಶಂಕರಾನಂದ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದರು.

ಕಾಲೇಜು ಮುಂಭಾಗ ಆಕ್ರೋಶಗೊಂಡ ವಿದ್ಯಾರ್ಥಿಗಳು, ಬೀದಿಗಿಳಿದು ಪ್ರತಿಭಟಿಸುತ್ತಿದ್ದರೆ, ಇತ್ತ ವಿದ್ಯಾರ್ಥಿಗಳೊಂದಿಗೆ ಅಸಭ್ಯ ವರ್ತನೆ ತೋರಿದ ಅತಿಥಿ ಉಪನ್ಯಾಸಕ ಶಂಕರಾನಂದ ವಿರುದ್ಧ ದೂರು ದಾಖಲಾಗಿದೆ. ನಗರದ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಾಂಶುಪಾಲ ಡಾ.ರಾಜೇಶ್ವರಿ ದೂರು ದಾಖಲಿಸಿದ್ದಾರೆ. ವಿದ್ಯಾರ್ಥಿಗಳಿಂದ ಪ್ರತಿಭಟನೆ ವ್ಯಕ್ತವಾದ ಹಿನ್ನೆಲೆಯಲ್ಲಿ, ಮೈ ಮುಟ್ಟುವ ಮೂಲಕ, ಮೇಸೇಜ್ ಕಳಿಸುವ ಮೂಲಕ ಕಿರುಕುಳ ನೀಡುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿ, ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಇದನ್ನೂ ಓದಿ: ತುಮಕೂರು: ಕುಡಿದ ಅಮಲಿನಲ್ಲಿ 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ, ಸ್ಥಳೀಯರಿಂದ ಬಾಲಕಿಯ ರಕ್ಷಣೆ

ವಿದ್ಯಾರ್ಥಿನಿಯರ ಜೊಗೆ ಅಸಭ್ಯವಾಗಿ ವರ್ತನೆ ಮಾಡುತ್ತಿದ್ದ ಉಪನ್ಯಾಸಕರ ವಿರುದ್ಧ ಕ್ರಮಕ್ಕೆ ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದರು. ಅತಿಥಿ ಉಪನ್ಯಾಸಕರ ವಿರುದ್ದ ಎಫ್​ಐಆರ್ ದಾಖಲು ಆಗುತ್ತಿದ್ದಂತೆ ಇತ್ತ ಜಿಲ್ಲಾ ಉಸ್ತುವಾರಿ ಸಚಿವರು ಆತನನ್ನು ಅಮಾನತ್ತು ಮಾಡಬೇಕೆಂದು ಆದೇಶಿಸಿದ್ದಾರೆ. ಅತಿಥಿ ಉಪನ್ಯಾಸಕ ಆಗಿರುವುದರಿಂದ ಸಹ್ಯಾದ್ರಿ ವಿಜ್ಷಾನ ಕಾಲೇಜ್​ನ ಆಡಳಿತ ಮಂಡಳಿಯು ಆತನನ್ನು ಕೆಲಸದಿಂದ ತೆಗೆದು ಹಾಕಿತ್ತು.

ಈ ರೀತಿ ಘಟನೆಗಳು ನಡೆಯಬಾರದು. ವಿದ್ಯಾರ್ಥಿಗಳ ಜೊತೆ ಅನುಚಿತವಾಗಿ ನಡೆದುಕೊಂಡಿದ್ದ ಉಪನ್ಯಾಸಕ ವಿರುದ್ದ ಕ್ರಮ ತೆಗೆದುಕೊಳ್ಳುತ್ತೇವೆಂದು ಸಚಿವ ಮಧು ಬಂಗಾರಪ್ಪ ಭರವಸೆ ಕೊಟ್ಟಿದ್ದರು. ಅದರಂತೆ ಕಾಲೇಜ್ ಆಡಳಿತ ಮಂಡಳಿಯು ಆತನನ್ನು ಕೆಲಸದಿಂದ ಕಿತ್ತು ಹಾಕಿತ್ತು.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.