ಆನೇಕಲ್, (ಫೆಬ್ರವರಿ 23): ಪಕ್ಕದ ಮನೆಯಲ್ಲಿದ್ದು ನಿರಂತರ ಕಾಟ ಕೊಡುತ್ತಿದ್ದ ಮಾಜಿ ಪ್ರಿಯಕರನ ಕಾಟ (harassment) ತಾಳಲಾರದೆ, ನಿಶ್ಚಿತಾರ್ಥವಾಗಿದ್ದ (Engagement) ಯುವತಿಯೊಬ್ಬಳು ಆತ್ಮಹತ್ಯೆ (Self Harm) ಮಾಡಿಕೊಂಡ ಘಟನೆ ನಡೆದಿದೆ. ಬೆಂಗಳೂರು (Bengaluru) ಹೊರವಲಯದ ಜಿಗಣಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ಚಂದ್ರಕಲಾ (19) ಆತ್ಮಹತ್ಯೆಗೆ ಶರಣಾದ ಯುವತಿ. ಜಿಗಣಿ ಸಮೀಪದ ನಂಜಾಪುರದಲ್ಲಿ ಮೊನ್ನೆ ಆತ್ಮಹತ್ಯೆ ಮಾಡಿಕೊಂಡಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಚಂದ್ರಕಲಾ ಪಕ್ಕದ ಮನೆಯ ಅರುಣ್ ಕುಮಾರ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಬಳಿಕ ಚಂದ್ರಕಲಾ ಮದುವೆ ಪ್ರಸ್ತಾಪ ಮಾಡಿದ್ದಾಳೆ. ಇಲ್ಲ ಅಕ್ಕನ ಮದುವೆ ಬಳಿಕ ಮದುವೆ ಮಾಡಿಕೊಳ್ಳುವುದಾಗಿ ಅರುಣ್ ಕುಮಾರ್ ಹೇಳಿದ್ದ. ಆದ್ರೆ, ಅಕ್ಕನ ಮದುವೆ ಆಗುತ್ತಿದ್ದಂತೆ ಅರುಣ್ ವರಸೆ ಬದಲಿಸಿದ್ದಾನೆ. ಆದರೂ ಸಹ ಚಂದ್ರಕಲಾ, ಮದುವೆ ವಿಚಾರವಾಗಿ ಮಾತುಕತೆಗೆ ಎಂದು ತನ್ನ ತಾಯಿಯನ್ನು ಅರುಣ್ ಮನೆಗೆ ಕಳುಹಿಸಿದ್ದಾಳೆ. ಆದ್ರೆ, ಅರುಣ್ ಮನೆಯವರು ಚಂದ್ರಕಲಾ ತಾಯಿಗೆ ಬೈದು ಅವಮಾನ ಮಾಡಿ ಕಳುಹಿಸಿದ್ದಾರೆ. ಇದರಿಂದ ಅರುಣ್ ಪ್ರೀತಿಯ ನಾಟಕವಾಡಿರುವುದು ಚಂದ್ರಕಲಾಗೆ ಗೊತ್ತಾಗಿ, ಅವನಿಗೆ ಬುದ್ಧಿ ಕಲಿಸಬೇಕೆಂದು ತೀರ್ಮಾನಿಸಿದ್ದಳು.
ಅರುಣ್ ಜೈಲಿಗೆ ಹೋಗಿ ಬಂದವನಾಗಿದ್ದು, ಹುಡುಗನ ವ್ಯಕ್ತಿತ್ವ ಸರಿ ಇಲ್ಲ. ಆತನನ್ನು ಮದುವೆಯಾಗಬೇಡ. ಆತನನ್ನು ಮರೆತುಬಿಡು ಎಂದಯ ಕುಟುಂಬಸ್ಥರು ಮನವೊಲಿಸಿ ಆಕೆಗೆ ಪರಿಚಿತರ ಹುಡುಗನೊಬ್ಬನ ಜೊತೆ ಎಂಗೇಜ್‌ಮೆಂಟ್ ಮಾಡಿಸಿದ್ದರು. ಆದ್ರೆ, ಅರುಣ್ ಬೇರೆಯವನನ್ನು ಮದುವೆಯಾದರೆ ನಿನ್ನನ್ನು ಕೊಲ್ಲುವುದಾಗಿ ಚಂದ್ರಕಲಾಗೆ ಬೆದರಿಕೆ ಹಾಕುವುದು. ಕಿರುಕುಳ ನೀಡುತ್ತಿದ್ದ. ಅಲ್ಲದೇ ನಿಶ್ಚಿತಾರ್ಥವಾಗಿದ್ದ ಯುವಕನಿಗೆ ಅರುಣ್ ದಮ್ಕಿ ಹಾಕಿದ್ದ. ನನ್ನ ಹುಡುಗಿ ಬಿಟ್ಟು ಬಿಡು ಇಲ್ಲದಿದ್ದರೆ ಕೊಲ್ಲುವುದಾಗಿ ಎಚ್ಚರಿಕೆ ನೀಡಿದ್ದ.
ಇದರಿಂದ ಮನನೊಂದಿದ್ದ ಚಂದ್ರಕಲಾ ಮೂರು ದಿನಗಳ ಹಿಂದೆ ದೊಡ್ಡಮ್ಮನ ಮನೆಗೆ ಹೋಗಿ ಅಲ್ಲಿ ಕೋಣೆಯಲ್ಲಿ ನೇಣಿ ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪ್ರಿಯಕರ ಆರುಣ್ ಕಿರುಕುಳದಿಂದ ಬೇಸತ್ತು ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗಾಗಿ ಆರೋಪಿ ಆರುಣ್ಗೆ ತಕ್ಕ ಶಿಕ್ಷೆಯಾಗಬೇಕು ಎಂದು ಪೋಷಕರ ಒತ್ತಾಯಿಸಿದ್ದಾರೆ. ಇನ್ನು ಮಗಳ ಸಾವಿಗೆ ಆತನೇ ಕಾರಣವೆಂದು ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಆದ್ರೆ, ಘಟನೆಯ ನಂತರ ಅರುಣ್ ಕುಮಾರ್ ತಲೆ ಮರೆಸಿಕೊಂಡಿದ್ದಾನೆ. ಈ ಬಗ್ಗೆ ಜಿಗಣಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇನ್ನಷ್ಟು ಕ್ರೈಂ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ